ನಾವು ಈ ಲೇಖನದಲ್ಲಿ ಕಡಿಮೆ ಬಟ್ಟೆ ಧರಿಸುವ ಹೆಣ್ಣು ಮಕ್ಕಳಿಗೆ ತಂದೆಯ ಸಲಹೆಗಳು ಏನು ಎಂಬುದನ್ನು ತಿಳಿಯೋಣ . ಮಗಳಿಗೆ ಅವಳ ತಂದೆ ಐಫೋನ್ ಉಡುಗೊರೆಯಾಗಿ ನೀಡಿದರು.. ಮರುದಿನ ತಂದೆ ಮಗಳನ್ನು ಕೇಳಿದರು. ಮಗಳೆ ಐಫೋನ್ ಪಡೆದ ನಂತರ ಎಲ್ಲಕ್ಕಿಂತ ಮೊದಲು ನೀನು ಏನು ಮಾಡಿದೆ?
ಮಗಳು : – ನಾನು ಸ್ಕ್ರಾಚ್ ಕಾರ್ಡ್ ಮತ್ತು ಕವರ್ ಆರ್ಡರ್ ಮಾಡಿದೆ..! ತಂದೆ : – ನಿನಗೆ ಆರ್ಡರ್ ಮಾಡಲು ಯಾರು ಹೇಳಿದ್ದು? ಮಗಳು : – ಇಲ್ಲ ಯಾರೂ ಕೂಡ ಇಲ್ಲ. ತಂದೆ : – ನೀನು ಐಫೋನ್ ತಯಾರಕರನ್ನು ಅವಮಾನಿಸಿದ್ದೀಯಾ ಎಂದು ಅನಿಸುವುದಿಲ್ಲವೇ ?
ಮಗಳು : – ಇಲ್ಲ ಅಪ್ಪ ಅವರೆ ಕವರ್ ಮತ್ತು ಸ್ಕ್ರಾಚ್ ಕಾರ್ಡ್ ಅನ್ನು ಉಪಯೋಗ ಮಾಡುವ ಸಲಹೆ ನೀಡಿದ್ದಾರೆ. ತಂದೆ: – ಹಾಗಾದರೆ ಐಫೋನ್ ಕೆಟ್ಟದಾಗಿ ಕಾಣುತ್ತಿದೆ ಎಂದು ಅರ್ಥ . ಅದಕ್ಕೆ ನೀನು ಕವರ್ ಆರ್ಡರ್ ಮಾಡಿದ್ದೀಯಾ ಅಲ್ವಾ?
ಮಗಳು :- ಇಲ್ಲ , ಅಪ್ಪ ಅದು ಬೇಗ ಹಾಳಾಗಬಾರದು, ಅದಕ್ಕೆ ಕವರ್ ಆರ್ಡರ್ ಮಾಡಿದ್ದೇನೆ…. ತಂದೆ :- ಕವರ್ ಹಾಕಿದ ಮೇಲೆ ಅದರ ಸೌಂದರ್ಯ ಕಡಿಮೆಯಾಗಿದೆಯೇ? ಮಗಳು : – ಇಲ್ಲ , ಅಪ್ಪ ಕವರ್ ಹಚ್ಚಿದ ಮೇಲೆ ಐಫೋನ್ ಇನ್ನೂ ಹೆಚ್ಚು ಸುಂದರವಾಗಿ ಕಾಣುತ್ತಿದೆ…
ತಂದೆ: – ಮಗಳನ್ನು ಪ್ರೀತಿಯಿಂದ ನೋಡುತ್ತಾ ಹೇಳಿದರು… ಮಗಳೇ ಈ ಐಫೋನ್ಗಿಂತ ಅಮೂಲ್ಯ ನೀನು, ಹೆಣ್ಣು ಮಕ್ಕಳೂ ಕೂಡ ಈ ಐಫೋನ್ ತರಹನೇ …
ಅಂಗಾಂಗಗಳನ್ನು ಬಟ್ಟೆಯಿಂದ ಮುಚ್ಚಿಕೊಂಡರೆ ಸೌಂದರ್ಯ ಕಡಿಮೆ ಆಗುವುದಿಲ್ಲ. ಬದಲಿಗೆ ಇನ್ನಷ್ಟು ಹೆಚ್ಚುತ್ತದೆ…. ಬಟ್ಟೆಗಳಿಗೆ ಜೀವ ಇರುವುದಿಲ್ಲ . ಆದರೆ ಅದನ್ನು ಧರಿಸುವವರಿಗೆ ಇರುತ್ತದೆ ..
ಸೌಂದರ್ಯದ ನಿಜವಾದ ಅರ್ಥ ನಾವು ಧರಿಸುವ ಬಟ್ಟೆಗಳಲ್ಲಿ ಇರುವುದಿಲ್ಲ . ನಮ್ಮ ಚಾರಿತ್ರ್ಯ, ನಾವು ಆಡುವ ಪ್ರತಿ ಮಾತಲ್ಲಿ, ನಮ್ಮ ವ್ಯಕ್ತಿತ್ವದಲ್ಲಿ ನಮ್ಮ ಸ್ವಭಾವದಲ್ಲಿ ಮತ್ತು ಎಲ್ಲಕಿಂತ ಮುಖ್ಯವಾಗಿ ನಮ್ಮ ಗುಣದಲ್ಲಿ ಇರುತ್ತದೆ….
ಅಪ್ಪನ ಈ ಮಾತಿಗೆ ಮಗಳ ಹತ್ತಿರ ಯಾವುದೇ ಉತ್ತರವಿರಲಿಲ್ಲ!!