ಕನ್ಯಾ ರಾಶಿ ಮುಂದೇನು?

0

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ ಅದೃಷ್ಟ ಕೈ ಹಿಡಿಯುವ ಹತ್ತಿರ ದಿನಗಳ ಬಗ್ಗೆ ತಿಳಿದುಕೊಳ್ಳೋಣ . ಇಷ್ಟು ದಿನ ಶನಿ ಗ್ರಹದ ಬೆಂಬಲ ಹೆಚ್ಚಾಗಿತ್ತು .ಇನ್ನು ಮುಂದೆ ಗುರುಬಲವು ಜೊತೆಯಾಗುವುದರಿಂದ ನಿಮಗೆ ಒಳ್ಳೆಯ ಪ್ರಾಪ್ತಿಯನ್ನು ಪಡೆಯಬಹುದು . ಜೀವನದಲ್ಲಿ ಅದ್ಭುತ ಘಟನೆಗಳು ನಡೆಯುವ ಸಮಯವಿದೆ. ಕೈ ತಪ್ಪಿ ಹೋಗಿರುವ ಆಸ್ತಿಗಳೆಲ್ಲವೂ ಕೈ ಸೇರುವ ಸಾಧ್ಯತೆ ಇದೆ . ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಡೆತಡೆ ಇರುವವರಿಗೆ ಒಳ್ಳೆಯ ಸಮಯವಿದೆ .

ಏಕೆಂದರೆ ಗುರುವು ದಾರಿ ಮಾಡಿಕೊಡುತ್ತಾನೆ. ಮನೆಯಲ್ಲಿ ನೆಮ್ಮದಿ ಮತ್ತು ಸಂತೋಷ ಗಳಿಸುವ ಕಾಲ ತುಂಬಾ ಹತ್ತಿರವಿದೆ. ಒಟ್ಟಾರೆ ಹೇಳುವುದಾದರೆ ನಿಮಗೆ ರಾಜಯೋಗವು ಕಾಯುತ್ತಲಿರುತ್ತದೆ .ಯಾವಾಗ ಈ ಶುಭ ಸಮಾಚಾರಗಳನ್ನು ಕೇಳುತ್ತೀರಾ, ಎಲ್ಲಿಯವರೆಗೂ ಈ ಅದೃಷ್ಟಗಳು ನಿಮ್ಮ ಕೈ ಹಿಡಿಯುವುದರಿಂದ ಇನ್ನು ಎಂತೆಂತಹ ಫಲಗಳನ್ನು ನಿರೀಕ್ಷಿಸುವಿರೋ ಅದನ್ನು ತಿಳಿದುಕೊಳ್ಳೋಣ. ಮೇ 1 2024 ತುಂಬಾ ಮುಖ್ಯವಾದ ದಿನ . ಏಕೆಂದರೆ

ಈ ದಿನದಂದು ನಿಮ್ಮ ಬಾಳಿನ ಭಾಗ್ಯದ ಬಾಗಿಲು ತೆಗೆಯುವುದು ಈ ದಿನದಿಂದಲೇ. ಗುರುವು ಮೇಷದಿಂದ ವೃಷಭ ರಾಶಿಗೆ ಪರಿವರ್ತನೆಯಾಗಿ ಮುಂದಿನ ಒಂದು ವರ್ಷವೂ ಅಲ್ಲೇ ಇರುತ್ತಾನೆ . ಇದು ಇಲ್ಲಿಂದ ನಿಮಗೆ 9ನೇ ಮನೆ ಆಗುತ್ತದೆ, ಇದನ್ನು ನಾವು ಭಾಗ್ಯಸ್ಥಾನ ಎಂದು ಕರೆಯುತ್ತೇವೆ. ಯಾವ ಯಾವ ರೀತಿಯ ಫಲಗಳು ನಿಮಗೆ ಸಿಗಲಿದೆ ಎಂದು ತಿಳಿದುಕೊಳ್ಳೋಣ. ಮೊದಲನೆಯದಾಗಿ ಹಣಕಾಸಿನ ಅಭಿವೃದ್ಧಿಯ ಬಗ್ಗೆ ತಿಳಿದುಕೊಳ್ಳೋಣ. ಏಕೆಂದರೆ ದೇವತೆಗಳ ಕೋಶ್ಯಾಧ್ಯಕ್ಷ ಎಂದೇ ಕರೆಸಿಕೊಳ್ಳುವ ಗುರು ಒಳ್ಳೆಯ ಸ್ಥಾನದಲ್ಲಿದ್ದಾಗ ಮೊದಲು ನೀಡುವುದು ಹಣವನ್ನೆ,

ಬಹಳಷ್ಟೂ ಜನರಿಗೆ ಹಲವಾರು ಮೂಲಗಳಿಂದ ಹಣ ಲಭಿಸುವ ಸೂಚನೆಗಳು ಕಾಣಿಸುತ್ತಿದೆ. ಭಾಗ್ಯೋದಯವಾಗುತ್ತದೆ. ಎಂದರೆ ನೀವು ಅಂದುಕೊಂಡ ಕೆಲಸದಲ್ಲಿ ಪ್ರಗತಿಯನ್ನು ಸಾಧಿಸುತ್ತೀರಾ, ಹಾಗೆ ವೈಯಕ್ತಿಕ ಕಾರಣಗಳಿಂದ ಹಣಕಾಸಿನ ಲಾಭ ಬರುವುದು ನಿಂತು ಹೋಗಿದ್ದರೆ ,ಮೇ ಒಂದು 2024 ರ ನಂತರ ಈ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು . ನಿಂತು ಹೋಗಿದ್ದ ದುಡ್ಡು ಬರಬಹುದು. ಬಹಳಷ್ಟು ಜನ ದುಂದು ವೆಚ್ಚ ಬದಲು ಉಳಿಸುವ ಗುಣಗಳನ್ನು ಬೆಳಸಿಕೊಳ್ಳುತ್ತೀರಾ .

ಕಂಡಿದ್ದೆಲ್ಲ ತಗೊಬೇಕು. ಎಲ್ಲ ಬೇಕು ಅಂತ ಖರೀದಿ ಮಾಡಿಕೊಳ್ಳುವ ಬುದ್ಧಿ ಸ್ವಲ್ಪ ಕಮ್ಮಿ ಆಗುತ್ತದೆ. ಅವಶ್ಯಕತೆ ಇದ್ದಷ್ಟೆ ಖರೀದಿ ಮಾಡುತ್ತೀರ. ಮತ್ತು ಮುಂದಾಲೋಚನೆ ಮಾಡುತ್ತೀರಾ. ಗುರು ಇಂತಹ ಬುದ್ಧಿ ನಿಮಗೆ ಕೊಡುವುದರಿಂದ ಹಣದ ವಿಚಾರದಲ್ಲಿ ಸಂಬಂಧಗಳ ವಿಚಾರದಲ್ಲಾಗಲಿ ಯೋಚನೆ ಮಾಡಿ ಮುಂದುವರಿಯುವ ಹಾಗೆ ಆಗುತ್ತದೆ. 2024 ರ ಮೇ ತನಕ ಗುರು ನಿಮ್ಮ ಅಷ್ಟಮ ಸ್ಥಾನದಲ್ಲಿ ಇರುತ್ತಾನೆ. ಬಹಳಷ್ಟು ಜನಕ್ಕೆ ಬೆಂಕಿ ಅಥವಾ ಅಪಘಾತ ಇದರಿಂದ ನಷ್ಟ ಆಗಿರುವ ಸಾಧ್ಯತೆ ಇರುತ್ತದೆ ,

ಕೆಲವರಿಗೆ ಆಗದೆ ಇರಬಹುದು. ಮತ್ತೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ಹಾಗೆ ಬಂದಷ್ಟು ತೊಡಕು ತಾಪತ್ರೆಗಳು ಬಂದಿರುತ್ತದೆ. ಗುರು ನವಮ ಸ್ಥಾನಕ್ಕೆ ಹೋದಾಗ ಪರಿಹಾರವಾಗುತ್ತದೆ. ಯಾರದ್ದಾದರೂ ವಿಶ್ವಾಸ ಕಳೆದುಕೊಂಡಿದ್ದರೆ ಅಥವಾ ಅವರು ಹೇಳಿದ ಕೆಲಸ ಮಾಡದೆ ಬೇಜಾರು ಮಾಡಿದ್ರೆ ಅವೆಲ್ಲ ಕೂಡ ಪರಿಹಾರವಾಗುತ್ತದೆ. ಮತ್ತೆ ಭಾಗ್ಯಸ್ಥಾನ ಅದರರ್ಥ ನಿಮ್ಮಲ್ಲಿ ತುಂಬಾ ಜನರಿಗೆ ಅದೃಷ್ಟ ಗುರುಗಳ ವಿಚಾರದಲ್ಲಿ ನಿಮಗೆ ಪಾಠ ಹೇಳಿಕೊಟ್ಟ ಗುರುಗಳಾಗಿರಬಹುದು ಅಥವಾ ತಾಯಿಯೇ ಮೊದಲ ಗುರು

ಆ ತಾಯಿಗೆ ನೀವು ತಿರುಗಿ ಬೀಳುವ ಪ್ರಸಂಗ ಬಂದಿದ್ದರೆ ಅಥವಾ ಅವರಿಗೆ ಬೇಜಾರು ಮಾಡಿದ್ದರೆ ಅವರ ಜೊತೆ ಮನಸ್ತಾಪ ಆಗಿದ್ದರೆ ಅದು ಸರಿಹೋಗುವ ಲಕ್ಷಣ ಇದೆ. ಅವರ ಪ್ರೀತಿಯನ್ನ ಗಳಿಸೋ ಅದೃಷ್ಟ ನಿಮ್ಮದಾಗಬಹುದು .ಇನ್ನು ಗುರುವಿನ ಪೂರ್ಣದೃಷ್ಟಿ ನಿಮ್ಮ ಮೇಲೆ ಇರುವುದರಿಂದ ಕೆಲಸದ ವಿಚಾರದಲ್ಲಿ ಏನಾದರೂ ಅಡೆ ತಡೆ ಇದ್ದರೆ ಮಕ್ಕಳ ವಿಚಾರವಾಗಿ ನೆಮ್ಮದಿ ಇಲ್ಲದಿದ್ದರೆ ಇನ್ನು ಒಂದಷ್ಟು ಒಳ್ಳೆಯ ಘಟನೆಗಳು ಆಗಿ ತಕ್ಷಣ ನಡೆದು ಎಲ್ಲ ತಲೆ ಬಿಸಿ ದೂರ ಓಡಬಹುದು.

ಹಾಗೆ ಹೂಡಿಕೆ ವಿಚಾರದಲ್ಲೂ ಅಷ್ಟೇ ಅದೃಷ್ಟ ನಿಮ್ಮ ಪರವಾಗಿರುತ್ತದೆ. ಶೇರು ಮಾರ್ಕೆಟ್ ನಲ್ಲಿ ಅಥವಾ ನೀವು ಮಾಡುವ ಉದ್ಯೋಗದಲ್ಲಿ ಕೂಡ ಅದೃಷ್ಟ ಕೈ ಹಿಡಿಯುವ ಸಮಯ ಇದು ಅಂತ ಹೇಳಬಹುದು .ಮತ್ತೆ ಒಳ್ಳೆ ಕೆಲಸ ಸಿಗುವುದು ಅಥವಾ ವರ್ಗಾವಣೆ , ಬಡ್ತಿ ಇಂಥ ವಿಚಾರದಲ್ಲೂ ಅದೃಷ್ಟ ನಿಮ್ಮ ಪರವಾಗಿರುತದೆ. ಹಾಗಂತ ನಿಮ್ಮ ಪ್ರಯತ್ನ ಇರಬೇಕು. ಬಹಳಷ್ಟು ಜನರ ವಿಚಾರದಲ್ಲಿ ಗುರುಕೃಪೆ, ನಿಮ್ಮ ಜಾತಕ ಬಲ ಕೂಡ ಮುಖ್ಯವಾಗುತ್ತದೆ. ಇನ್ನು ಯಾವ ವಿಚಾರದಲ್ಲಿ ಗುರುಕೃಪ ಇರುತ್ತೆ, ಗುರು ಬಲದ ಶಕ್ತಿ ಎಷ್ಟು ಇದೆ ಎಂದು ತಿಳಿದುಕೊಳ್ಳೋಣ. ಯಾರಾದರೂ ಅರ್ಧಕ್ಕೆ ಕೆಲಸ ನಿಂತಿದ್ದರೆ ,

ಹೊಸ ವ್ಯವಹಾರಕ್ಕೆ ಕೈ ಹಾಕಲು ನೋಡುತ್ತಿದ್ದರೆ ,ಇನ್ನು ಗೊತ್ತಿಲ್ಲದ ಹೊಸ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದರೆ, ಗುರುವಿನಿಂದ ಪ್ರೇರಣೆ ದೊರೆಯುತ್ತದೆ. ಗುರುವಿನ ಸ್ಥಾನದಲ್ಲಿ ನಿಂತು ಯಾರಾದರೂ ಮಾರ್ಗದರ್ಶನ ಕೊಡಲು ಯಾರಾದರೂ ಇರುತ್ತಾರೆ. ಗುರುಗಳೇ ಬರಬೇಕೆಂದಿಲ್ಲ, ಸ್ನೇಹಿತರು ಸಂಬಂಧಿಕರು, ಒಂದು ದಾರಿ ತೋರಿಸುತ್ತಾರೆ, ಮಾತಿನ ಮೂಲಕ ಪ್ರೇರಣೆ ಕೊಡುವ ಕಾಲವಿದು. ಬಹಳಷ್ಟು ಜನ ಯೋಚನೆ ಮಾಡದೆ ಏಕಾಏಕಿ ಯಾವುದೇ ಕೆಲಸವನ್ನು ಮಾಡುವುದಿಲ್ಲ .

ಕನ್ಯಾ ರಾಶಿಯಲ್ಲಿ ಇದೊಂದು ವಿಚಾರವನ್ನು ನಾವು ಮೆಚ್ಚಲೇಬೇಕು. ಏಕೆಂದರೆ ಕನ್ಯಾ ರಾಶಿಯ ಅಧಿಪತಿ ಬುಧ ಬುದ್ಧಿವಂತಿಕೆಯನ್ನು ಕೊಡುತ್ತಾನೆ. ಹಾಗೆ ಯೋಚನೆ ಹಾಗೂ ಒಂದು ವಿಷಯದ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳದೆ ಯಾವುದೇ ಕೆಲಸವನ್ನು ಮಾಡಲು ಮುಂದಾಗುವುದಿಲ್ಲ .ಹಾಗೆ ಈ ರಾಶಿಯವರನ್ನು ನಂಬಿಸಲು ತುಂಬಾ ಕಷ್ಟವಾಗುತ್ತದೆ . ಗುರು ಒಳ್ಳೆಯ ಸ್ಥಾನದಲ್ಲಿ ಇರುವುದರಿಂದ ನಿಮ್ಮನ್ನು ಯಾಮಾರಿಸಲು ತುಂಬಾ ಕಷ್ಟವಾಗುತ್ತದೆ.

ಸಕಾರಾತ್ಮಕ ಮತ್ತು ನಕಾರಾತ್ಮಕ ಆಲೋಚನೆಗಳನ್ನು ಮಾಡುವುದರಲ್ಲಿ ನಿಮಗೆ ಒಳ್ಳೆಯ ಲಾಭಗಳು ಸಿಗುತ್ತವೆ .ಬಹಳಷ್ಟು ಜನ ದೂರದ ಊರಿಗೆ ಪ್ರಯಾಣ ಮಾಡಬಹುದು ಮತ್ತು ಮಕ್ಕಳ ಓದಿನ ವಿಚಾರದಲ್ಲಿ ವಿದೇಶಕ್ಕೆ ಹೋಗಬಹುದು .ದೀರ್ಘ ಪ್ರಯಾಣವನ್ನು ಬೆಳೆಸಬಹುದು . ಮೇ 1 2024 ರಿಂದ ಮೇ 14 2025 ಗುರುವ ವೃಷಭದಲ್ಲಿ ಇರುವುದರಿಂದ ಇಂತಹ ಹೆಚ್ಚಿನ ಘಟನೆಗಳು ನಡೆಯುವ ಸಾಧ್ಯತೆ ಇದೆ. ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರವಾದಂತಹ ವಾತಾವರಣಗಳು ನಡೆಯುತ್ತದೆ .

ಉನ್ನತವಾದ ವ್ಯಾಸಂಗವನ್ನು ಮಾಡಲು ಅವಕಾಶ ಕೂಡಿ ಬರುತ್ತದೆ .ಹಣಕಾಸಿನ ಕೊರತೆ ಇದ್ದರೆ ಅದು ನಿವಾರಣೆಯಾಗುತ್ತದೆ. ವಿದ್ಯಾರ್ಥಿ ವೇತನವು ದೊರಕುತ್ತದೆ . ಕೌಟುಂಬಿಕ ವಿಚಾರಕ್ಕೆ ಬಂದರೆ ತಂದೆಯ ಜೊತೆ ಮನಸ್ತಾಪವಿದ್ದರೆ ಅದು ಬಗೆಹರಿಯುತ್ತದೆ. ಸಂಬಂಧವು ಸುಧಾರಿಸುತ್ತದೆ .ಅವರ ಜೊತೆ ಹೆಚ್ಚಿನ ಕಾಲವನ್ನು ಸಹ ಕಳೆಯುತ್ತೀರಾ . ಗುರು ಪರಿವರ್ತನೆ ಯಾಗುವ ಸ್ಥಾನ ನವಮ ಸ್ಥಾನಕ್ಕೆ ಪಿತೃ ಸ್ಥಾನ ಎಂದು ಕರೆಯುತ್ತಾರೆ. ತಂದೆ ಮತ್ತು ತಂದೆ

ಸಮಾನವಾಗಿರುವ ಹಿರಿಯ ವ್ಯಕ್ತಿಗಳಂತೆ ಒಳ್ಳೆಯ ಭಾಂದತ್ವ ಬೆಳೆಯುತ್ತದೆ .ಹಿರಿಯರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತೀರ .ಮತ್ತು ನಿಮ್ಮ ಆರೋಗ್ಯದಲ್ಲಿ ಏರುಪೇರುಗಳಾಗಿದ್ದರೆ ಇವೆಲ್ಲವೂ ಶಮನವಾಗುತ್ತದೆ .ಕೀಲು ನೋವು ತೊಡೆ ನೋವು ಇಂತಹ ಸಮಸ್ಯೆಗಳೆಲ್ಲವೂ ಶಮನವಾಗುತ್ತದೆ. 9ನೇ ಸ್ಥಾನವನ್ನು ಧರ್ಮ ಸ್ಥಾನ ಎಂದು ಕರೆಯುತ್ತೇವೆ. ಬಹಳಷ್ಟು ಜನ ದೇವರ ಮೇಲೆ ಭಕ್ತಿ ಮತ್ತು ಭಾವವನ್ನು ಬೆಳೆಸಿಕೊಳ್ಳುತ್ತಾರೆ. ಬಹಳಷ್ಟು ಜನರಿಗೆ ತೀರ್ಥ ಕ್ಷೇತ್ರಗಳ ಭೇಟಿಯ ಅವಕಾಶವೂ ಸಹ ಬರಬಹುದು.

ಹಿರಿಯರ ಮತ್ತು ಗುರುಗಳ ಮಾತನ್ನು ಪಾಲಿಸುತ್ತಾರೆ . ಪಾಠ ಪ್ರವಚನ ಗುರು ಉಪದೇಶವನ್ನು ಪಡೆದುಕೊಳ್ಳುವುದರಲ್ಲಿ ಈ ರಾಶಿಯವರು ಮುಂದೆ ಇರುತ್ತಾರೆ. ಅರಿವು ಮತ್ತು ತಿಳುವಳಿಕೆ ಇವರಲ್ಲಿ ಮೂಡುತ್ತದೆ. ತಾವು ಹೇಳಿದ್ದೆ ಸರಿ ಎಂಬ ಮನಸ್ಥಿತಿಯಲ್ಲಿ ಬದಲಾವಣೆಯನ್ನು ತಂದು ಕೊಡುವಂತಹ ಮನಸ್ಥಿತಿಯನ್ನು ಗುರು ಕೊಡುತ್ತಾನೆ .ಮತ್ತು ಧ್ಯಾನ ಪ್ರಾಣಾಯಾಮ ಇಂತಹ ಅಭ್ಯಾಸಗಳನ್ನು ಹೊಸದಾಗಿ ಬೆಳೆಸಿಕೊಳ್ಳುವಂಥ ಪ್ರವೃತ್ತಿಯಲ್ಲಿ ಮುಂದಾಗುತ್ತಾರೆ ಮೇ 1 2024 ರಿಂದ ಮೇ 14 2025 ರವರೆಗೆ ಗುರುವು ತುಂಬಾ ಬಲಾಡ್ಯನಾಗಿರುತ್ತಾನೆ. ನಿಮಗೆ ಯಶಸ್ಸನ್ನು ತಂದುಕೊಡುತ್ತಾನೆ.

Leave A Reply

Your email address will not be published.