ಕಳಸದ ಕಾಯಿ ಒಡೆದರೆ / ಕೆಟ್ಟಿದ್ದರೆ ಸಂಕಷ್ಟ ಎದುರಾಗುತ್ತಾ

ಕಳಸದ ಕಾಯಿ ಒಡೆದರೆ / ಕೆಟ್ಟಿದ್ದರೆ ಸಂಕಷ್ಟ ಎದುರಾಗುತ್ತಾ… ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ / ಕೊಳೆತರೆ ಅದು ಕೆಟ್ಟದಾಗುವ ಸೂಚನೆ’ ನಾ…??? ಕಳಸದಲ್ಲಿ ಈ ಸೂಚನೆ ಕಂಡರೆ ಎಚ್ಚರ ಕಳಸವು ಮನೆಯ ಏಳಿಗೆಯ ಸಂಕೇತ…. ಕಳಸವು ಶಕುನವನ್ನು ಸೂಚಿಸುತ್ತದೆ….

ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ…?
ಪ್ರತಿಯೊಬ್ಬ ಮಹಿಳೆಯೂ ತಪ್ಪದೇ ತಿಳಿದುಕೊಳ್ಳಬೇಕಾದ ಮಾಹಿತಿ ಇದು. ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.

ತಮ್ಮ ತಮ್ಮ ಮನೆದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಸಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ರೀತಿ ಕಳಸವು ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿಯೇ ಮನೆಯಲ್ಲಿ ನೆಲೆಸಿದ್ದಾಳೆ ಎನ್ನುತ್ತಾರೆ ಶಾಸ್ತ್ರ ಪಂಡಿತರು. ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಈ ಕಳಸವು ಇಡೀ ಮನೆಯ ಏಳಿಗೆಯ ಸಂಕೇತ ಆಗಿರುತ್ತದೆ.

ಕಳಸ ಪ್ರತಿಷ್ಠಾಪನೆ ಮಾಡುವುದಕ್ಕೆ ಕಟ್ಟುನಿಟ್ಟಾದ ವಿಧಿ ವಿಧಾನಗಳು ಇದ್ದು ಆ ಪ್ರಕಾರವಾಗಿ ನಡೆದುಕೊಂಡಾಗ ಮಾತ್ರ ಆ ಮನೆಗೆ ಶ್ರೇಯಸ್ಸು ಲಭಿಸುತ್ತದೆ. ಕಳಸ ಪ್ರತಿಷ್ಠಾಪನೆ ಮಾಡಿದ ಮೇಲೆ ಅದನ್ನು ವಾರಕ್ಕೊಮ್ಮೆ ಅವರ ಅನುಕೂಲತೆ ಅಂತೆ ಬದಲಾಯಿಸುತ್ತಾರೆ. ಈ ರೀತಿ ಕಳಸಕ್ಕೆ ಇಡುವ ಪ್ರತಿಯೊಂದು ವಸ್ತುವು ಕೂಡ ಪವಿತ್ರವಾಗಿದೆಯೇ ಎಂದು ನೋಡಿ ಮಡಿಯಿಂದ ಅದನ್ನು ಇಡಲಾಗುತ್ತದೆ.

ಕಳಸಕ್ಕೆ ಇಡುವ ನೀರಿನಿಂದ ಹಿಡಿದು ಬಳಸುವ ಎಲೆಯ ತನಕವೂ ಕೂಡ ಅದು ಒಡೆದಿರಬಾರದು ನೀರು ಮಡಿಯಾಗಿರಬೇಕು, ಶುದ್ಧವಾಗಿರಬೇಕು ಎಂದೆಲ್ಲಾ ಮುಂಜಾಗ್ರತೆಯನ್ನು ತೆಗೆದುಕೊಳ್ಳಲಾಗುತ್ತದೆ. ಈ ರೀತಿ ಎಷ್ಟು ಅಚ್ಚುಕಟ್ಟಾಗಿ ಹಾಗೂ ಭಯ ಭಕ್ತಿಗಳಿಂದ ಪೂಜಿಸುತ್ತೇವೋ ಅಷ್ಟೇ ಪ್ರಕಾರವಾಗಿ ಆಶೀರ್ವಾದ ನಮಗೆ ಸಿದ್ಧಿಯಾಗುತ್ತದೆ. ಜೊತೆಗೆ ಮನೆಯಲ್ಲಿರುವ ಕಳಸವೇ ಶಕುನಗಳನ್ನು ಹೇಳುತ್ತದೆ

ಎನ್ನುವುದನ್ನು ನಾವು ನಂಬಲೇಬೇಕು. ಏಕೆಂದರೆ ಕಳಸದ ಕಾಯಿಯನ್ನು ನೋಡಿಯೇ ಅದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಮನೆಗಳಲ್ಲಿ ಕಳಸದ ಕಾಯಿಯನ್ನು ಇಟ್ಟಾಗ ಕೆಲವೊಮ್ಮೆ ಅದು ಮೊಳಕೆ ಬಂದಿರುತ್ತದೆ. ಈ ರೀತಿ ಆದಾಗ ಅಥವಾ ಅದರಲ್ಲಿ ಬಿರುಕು ಮೂಡಿದಾಗ ಜನರು ಗೊಂದಲಕ್ಕೆ ಒಳಾಗುತ್ತಾರೆ. ಅದು ಶುಭ ಸೂಚಕವೋ ಅಥವಾ ಅಶುಭವೋ ಎನ್ನುವುದನ್ನು ತಿಳಿದುಕೊಳ್ಳದೆ ಒದ್ದಾಡುತ್ತಾರೆ.

ಅದಕ್ಕಾಗಿ ಈ ವಿಡಿಯೋದಲ್ಲಿ ಅದರ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮನೆಯಲ್ಲಿ ಕಳಸಕ್ಕೆ ಇಟ್ಟಿರುವ ಕಾಯಿ ಮೊಳಕೆ ಹೊಡೆದರೆ ನೀವು ಭಯ ಪಡಬೇಕಿಲ್ಲ ಅದರ ಬಗ್ಗೆ ಯಾವುದೇ ಆತಂಕವೂ ಬೇಕಿಲ್ಲ ಏಕೆಂದರೆ ಅದು ಮನೆ ಅಭಿವೃದ್ಧಿಯ ಸಂಕೇತವಾಗಿರುತ್ತದೆ. ಕಳಸದ ಕಾಯಿ ಮೊಳಕೆ ಹೊಡೆದಂತೆ ಮನೆಯಲ್ಲಿ ಸುಖ,

ಶಾಂತಿ, ನೆಮ್ಮದಿ, ಆಯಸ್ಸು, ಆರೋಗ್ಯವು ಕೂಡ ಸಮೃದ್ಧಿಯಾಗುತ್ತದೆ ಎನ್ನುವುದರ ಸಂಕೇತ ಅದಾಗಿರುತ್ತದೆ. ಇದನ್ನು ತೆಗೆದ ನಂತರ ಆ ಕಾಯಿಯನ್ನು ನಿಮ್ಮ ಮನೆ ಹಿತ್ತಲಲ್ಲಿ ಅಥವಾ ಜಮೀನಿನಲ್ಲಿ ನೆಟ್ಟು ಬೆಳೆಸಲು ಪ್ರಯತ್ನಿಸಬೇಕು. ಸಾಧ್ಯವಾಗದೆ ಇದ್ದವರು ಯಾವುದಾದರೂ ದೇವಸ್ಥಾನಕ್ಕಾದರೂ ಕೊಡಬಹುದು. ಇನ್ನೂ ಒಂದು ವೇಳೆ ಕಾಯಿ ಬಿರುಕು ಬಿಟ್ಟಿದ್ದರೆ ಆಗಲು ಸಹ ಆತಂಕ ಪಡುವ ಅಗತ್ಯ ಇಲ್ಲ.

ಏಕೆಂದರೆ ಮನೆಯ ವಾತಾವರಣದ ಕಾರಣ ಅದು ಆ ರೀತಿ ಆಗಿರುತ್ತದೆ. ಬೇರೆ ದಿನಗಳಲ್ಲಿ ತೆಂಗಿನಕಾಯಿಯನ್ನು ಬದಲಾಯಿಸಲು ತೆಗೆದಾಗ ತೆಗೆದ ಆ ತೆಂಗಿನಕಾಯಿಂದ ಸಿಹಿ ಪದಾರ್ಥಗಳನ್ನು ಮಾಡಿ ಮನೆ ಮಂದಿಗೆಲ್ಲ ಬಡಿಸಿದರೆ ಒಳ್ಳೆಯದು. ಸ್ನೇಹಿತರೆ, ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡೋದನ್ನ ಮರಿಬೇಡಿ ಹಾಗೂ ಮತ್ತಷ್ಟು ವಿಡಿಯೋಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ. ಥ್ಯಾಂಕ್ ಯು ಸೋ ಮಚ್

Leave a Comment