ಕಟಕ ರಾಶಿ ಕೇತು ಪರಿವರ್ತನೆ ಫಲ

0

ಕಟಕ ರಾಶಿಯವರಿಗೆ ಕೇತು ಪರಿವರ್ತನೆಯ ಫಲ ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಆಗುತ್ತಿದೆ ಅದರ ಜೊತೆಗೆ ಅಕ್ಟೋಬರ್ 30ಕ್ಕೆ ಕೇತು ಪರಿವರ್ತನೆಯೂ ಸಹ ಆಗುತ್ತಿದೆ ಕೇತು ಪರಿವರ್ತನೆಯು ನಿಮಗೆ ಲಾಭವನ್ನು ಕೊಡುವ ಜೊತೆಗೆ ಅದನ್ನು ಉಳಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಕೊಡುತ್ತಾನೆ ಬಹಳಷ್ಟು ಜನ ಕೌಟುಂಬಿಕ ಜೀವನದಲ್ಲಿ ಖುಷಿಯಾಗಿರುವಂತೆ ಆಗುತ್ತದೆ

ಬಿರುವಿಸಿನಲ್ಲಿ ತುಂತುರು ಮಳೆ ಬಂದರೆ ಯಾವ ರೀತಿ ಖುಷಿಯಾಗುತ್ತದೆಯೋ ಅದೇ ರೀತಿ ಒಳ್ಳೊಳ್ಳೆ ಘಟನೆ ಯಾಗುವ ಸಾಧ್ಯತೆ ಇದೆ ಹಾಗೇ ನಿಮ್ಮ ರಾಶ್ಯಾಧಿಪತಿ ಚಂದ್ರ ಕೇತುವಿನ ಶತ್ರುವಾಗಿರುವುದರಿಂದ ನೀವು ಅನುಸರಿಸಬೇಕಾದ ಪರಿಹಾರದ ಬಗ್ಗೆ ಕೊನೆಯಲ್ಲಿ ತಿಳಿಸಿಕೊಡುತ್ತೇನೆ ಅದನ್ನು ತಪ್ಪದೇ ನೋಡಿ ತಿಳಿದುಕೊಳ್ಳಿ ರಾಹು ಕೇತು ಎನ್ನುವವರು

ಒಂದೇ ದೇಹದಿಂದ ಎರಡು ಭಾಗವಾದರೂ ರಾಹು ಗಿರುವಷ್ಟು ಕ್ರೂರ ದೃಷ್ಟಿ ಕೇತುವಿಗೆ ಇಲ್ಲ ಎನ್ನುತ್ತಾರೆ ಜ್ಯೋತಿಷ್ಯದಲ್ಲಿ ಕೇತು ಹೆಚ್ಚಿನ ಸಲಾ ಶುಭಫಲವನ್ನೇ ಕೊಡುತ್ತಾನೆ ಈ ವರ್ಷ ಅಕ್ಟೋಬರ್ 31 ಆಗುತ್ತಿರುವ ಕೇತು ಪರಿವರ್ತನೆ ಕನ್ಯಾ ರಾಶಿಯಲ್ಲಿ ಆಗುತ್ತಿದೆ ಅದು ನಿಮ್ಮಿಂದ ತೃತೀಯ ಸ್ಥಾನ ತೃತೀಯ ಅಥವಾ ಮೂರನೇ ಸ್ಥಾನವನ್ನು ಬ್ರಾತೃ ಸ್ಥಾನ ಎನ್ನುತ್ತೇವೆ

ನಿಮ್ಮ ಅಣ್ಣ ತಮ್ಮ ಅಕ್ಕ ತಂಗಿ ಇವರಿಗೆ ಸಂಬಂಧಪಟ್ಟಂತೆ ಒಂದು ಒಳ್ಳೆಯ ಸುದ್ದಿಯನ್ನು ಕೇಳಬಹುದು ಯಾವ ರೀತಿಯಲ್ಲಿ ಹೇಳುವುದಾದರೆ ನಿಮ್ಮ ಸಂಬಂಧ ಹಾಳಾಗಿದ್ದರೆ ಆಸ್ತಿ ವಿಚಾರದಲ್ಲಿ ಏನಾದರೂ ಜಗಳವಾಗಿದ್ದರೆ ಸಣ್ಣ ಪುಟ್ಟ ಮನಸ್ತಾಪವಿದ್ದರೆ ಇಂಥದ್ದೆಲ್ಲ ಅಕ್ಟೋಬರ್ 30ರ ಹಿಂದಿನ ಸಮಯದಲ್ಲಿ ಆಗಿರುತ್ತದೆ ನಿಮ್ಮ ಜೀವನದಲ್ಲಿ ಹೀಗೆಲ್ಲ ಆಗಿದೆಯಾ? ಹಾಗಾಗಿದ್ದರೆ

ಹೆಚ್ಚಿನ ಜನ ಮನಶಾಂತಿಯನ್ನು ಕಳೆದುಕೊಂಡಿರುತ್ತಾರೆ ಅಂತದ್ದೇನಾದರೂ ಇದ್ದರೆ ಅದರ ಬಗ್ಗೆ ಗೊತ್ತಾಗಿ ಸಮಸ್ತ ಸರಿಯಾಗುವ ಸಾಧ್ಯತೆ ಇದೆ ಮತ್ತೆ ಏನೇ ತೊಂದರೆ ಬಂದರೆ ದಿಟ್ಟತನದಿಂದ ನಿಲ್ಲುವ ಶಕ್ತಿ ಕೇತುಕೊಡುತ್ತಾನೆ ಹೆಚ್ಚಿನ ಜನ ಸಾಹಸ ಮಾಡಿ ಗೆಲುವ ಸಾಧ್ಯತೆಯೂ ಇದೆ ಇಲ್ಲವಾದರೆ ತಮ್ಮ ಪ್ರಾಮಾಣಿಕತನವನ್ನು ಬಿಡದೆ ನೇರವಾದ ಹಾದಿಯಲ್ಲಿ ತಮ್ಮ ಕೆಲಸ ಮಾಡುವ ಸಾಧ್ಯತೆ ಇದೆ

ಹೆಚ್ಚಿನ ಸಂದರ್ಭದಲ್ಲಿ ಊಹಾಪೋಹಗಳಿಗೆ ಬೆಲೆ ಕೊಟ್ಟಿರಬಹುದು ಅಥವಾ ಮುಂದೇನು ಕೊಡಬಹುದು ಅಥವಾ ನಿಮ್ಮ ಸುತ್ತ ಇರುವವರ ಮೇಲೆ ಅನುಮಾನ ಪಡುವ ಸಾಧ್ಯತೆಯೂ ಇದೆ ಏಕೆಂದರೆ ಇನ್ನೊಂದು ಇಂಪಾರ್ಟೆಂಟ್ ಗ್ರಹ ಶನಿದೇವ ನಿಮ್ಮ ಅಷ್ಟಮ ಸ್ಥಾನದಲ್ಲಿದೆ ಆದ್ದರಿಂದ ಇಂತಹ ತೊಂದರೆ ಬಂದರು ಆಶ್ಚರ್ಯವಿಲ್ಲ ಹಾಗಿದ್ದಾಗಲೂ ನಿಮ್ಮನ್ನು ಎಚ್ಚರಿಸಲು ಕಾಪಾಡಲು

ಕೇತು ಅನ್ನುವ ರಕ್ಷಾ ಕವಚ ನಿಲ್ಲುವ ದಿನಗಳು ಎಂದು ಹೇಳಬಹುದು ಇನ್ನೊಂದು ವಿಷಯ ಯಾವುದಾದರೂ ಕಾರಣಕ್ಕೆ ನೆರೆಯವರೊಂದಿಗೆ ಜಗಳವಾಗಿದ್ದರೆ ಮಾತು ಬಿಟ್ಟಿದ್ದರೆ ಅದು ಒಂದು ಹಂತದ ಮಾತುಕತೆಯಿಂದ ಸಂಬಂಧ ಸುಧಾರಿಸಬಹುದು ನೋಡಿ ನಾನು ಮೊದಲೇ ಹೇಳುತ್ತೇನೆ ನಾನು ಹೇಳಿದಂತೆ 100% ಆಗುತ್ತದೆ ಎಂದು ಹೇಳುತ್ತಿಲ್ಲ ಈ ರೀತಿ ಆಗುವ ಸಾಧ್ಯತೆಯು ಕೇತುವಿನಿಂದ ಇದೆ

ಎಂದು ಹೇಳುತ್ತಿದ್ದೇನೆ ಯಾವ ದೃಷ್ಟಿಯಿಂದ ಕೇತುವಿನಿಂದ ಒಳ್ಳೆಯದಾಗುತ್ತಿದೆ ಎಂದು ಕೇಳಿದರೆ ಕೆಲವರಿಗೆ ಶ್ರೀಮಂತಿಕೆಯನ್ನು ಕೊಡಬಹುದು ಹೇಗೆಂದರೆ ಬುದ್ಧಿವಂತಿಕೆಯಿಂದ ಇನ್ನೊಂದಿಷ್ಟು ಕೆಲಸದಲ್ಲಿ ಮುನ್ನಡೆ ಸಾಧಿಸುತ್ತೀರಾ ಕೇತುವಿಗೆ ಸಂಬಂಧಿಸಿದ ಉದ್ಯೋಗಗಳು ಮಿಟರಿಗೆ ಸಂಬಂಧಪಟ್ಟ ಅಥವಾ ಗೂಢಚಾರಿಯಲ್ಲಿದ್ದರೆ ಧಾರ್ಮಿಕ ಮುಖಂಡರಾಗಿದ್ದರೆ

ಧಾರ್ಮಿಕ ಗ್ರಂಥದ ಬರಹಗಾರರಾಗಿದ್ದರೆ ದಾನಿಗಳು ವಾಸ್ತುಶಿಲ್ಪಿಗಳಾಗಿದ್ದರೆ ಹೀಗೆ ಉದ್ಯಮದಲ್ಲಿ ಇದ್ದವರಿಗೆ ಒಂದಷ್ಟು ಲಾಭವಾಗುವ ಸಾಧ್ಯತೆ ಇದೆ ಕೆಲವರಿಗೆ ಪ್ರಮೋಷನ್ ಸಿಗುವ ಮೂಲಕವೂ ಶ್ರೀಮಂತರಾಗುವ ಸಾಧ್ಯತೆ ಇದೆ ಅಥವಾ ಗುತ್ತಿಗೆದಾರರಾಗಿದ್ದರೆ ಬಹಳಷ್ಟು ಒಳ್ಳೆಯ ಕಾಂಟ್ರಾಕ್ಟ್ ಸಿಗುವ ಸಾಧ್ಯತೆ ಇದೆ ವ್ಯಾಪಾರ ವ್ಯವಹಾರದಲ್ಲಿ ಪಾಸಿಟಿವ್ ಆಗಿ ಸುಧಾರಣೆಯಾಗುದರಿಂದ ಇಲ್ಲ ಅಂದರೆ

2024 ರ ಮೇ ತಿಂಗಳಲ್ಲಿ ನಿಮಗೆ ಗುರುಬಲ ಬರುವ ಸಾಧ್ಯತೆ ಇದೆ ಕೆಲವರಿಗೆ ವಿವಾಹದ ನಂತರ ಶ್ರೀಮಂತಿಕೆ ಜೀವನ ಬರಬಹುದು ಇನ್ನು ಕೃಷಿ ಮಾಡುತ್ತಿದ್ದರೆ ಅಚಾನಕ್ಕಾಗಿ ಕೆಲವು ಬೆಳೆಗಳಿಗೆ ಒಳ್ಳೆಯ ಬೆಲೆ ಸಿಗಬಹುದು ನೋಡಿ ಇಷ್ಟೊತ್ತು ಕೇತುವಿನ ಫಲದ ಬಗ್ಗೆ ಹೇಳಿದೆನಲ್ಲ ಅದರ ವ್ಯಾಲಿಡಿಟಿ ಎಷ್ಟು ದಿನ ಇಷ್ಟು ದಿನ ಕೇತು ನಿಮ್ಮಿಂದ ತೃತೀಯ ಭಾವದಲ್ಲಿರುತ್ತಾನೆ

ಅಂತ ನಿಮಗೆ ಗೊತ್ತಾ ಗೊತ್ತಿಲ್ಲವೆಂದರೆ ನಾನೇ ಹೇಳುತ್ತೇನೆ ಕೇತುವಿನಿಂದ ಬರುವ ಶುಭ ಸುದ್ದಿಗಳ ವ್ಯಾಲಿಡಿಟಿ ಇನ್ನು ಒಂದುವರೆ ವರ್ಷವಿದೆ ಅಂದರೆ 2023 ಅಕ್ಟೋಬರ್ 30 ರಿಂದ ಮೇ 18 2025 ರವರಿಗೆ ಕೇತು ಕೇತು ಕನ್ಯಾ ರಾಶಿಯಲ್ಲಿ ಉಳಿದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾನೆ ಅವಧಿಯಲ್ಲಿ ಆಗುವ ಒಳ್ಳೆಯ ವಿಚಾರವೆಂದರೆ ಬಹಳಷ್ಟು ಜನ ಒಳ್ಳೆಯ ವಿಚಾರವನ್ನು ಹವ್ಯಾಸವನ್ನು ಬೆಳೆಸಿಕೊಳ್ಳುತ್ತೀರ ಅಂದರೆ ಯಾವಾಗಲೂ

ಒಳ್ಳೆಯ ಯೋಚನೆ ಮಾಡುವುದು ಯಾರಾದರೂ ಸಹಾಯ ಕೇಳಿದರೆ ಮಾಡುವುದು ಪ್ರಾಣಿ ಪಕ್ಷಿಗಳ ಆರೈಕೆ ಮಾಡುವುದು ತಮಗಿಂತ ಚಿಕ್ಕವರೇ ಆಗಿರಲಿ, ಹಿರಿಯರೇ ಆಗಿರಲಿ ಅವರಿಗೆ ಗೌರವ ಕೊಡುವ ಮನಸ್ಥಿತಿ ಇರುತ್ತದೆ ಪ್ರೀತಿ ಪಾತ್ರರಿಗೆ ಟೈಮ್ ಕೊಡುತ್ತೀರಾ ಅವರು ಹೇಳಿದ್ದನ್ನು ಕೇಳುವ ತಾಳ್ಮೆಯನ್ನು ತೋರುತೀರಾ ಇಂತಹ ಒಂದಷ್ಟು ಗುಣ ಯಾರು ಹೇಳಿ ಕೊಡದೆ ಬೆಳೆಯುತ್ತದೆ

ಕೆಲವರು ಸೈಲೆಂಟಾಗಿರುವ ಕಡೆ ಕೂತು ಒಂದಷ್ಟು ಸ್ಟಡಿ ಮಾಡುತ್ತೀರಾ ಬೇರೆಯವನನ್ನು ಖುಷಿಪಡಿಸಲು ಅವರ ಮಾತನ್ನು ಫಾಲೋ ಮಾಡುತ್ತೀರಾ ನಿಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನ ಪಡುತ್ತೀರಾ ಪಾಸಿಟಿವ್ ಆದ ದಾರಿಯಲ್ಲಿ ಮುಂದಿನ ಒಂದುವರೆ ವರ್ಷ ಕಳೆಯಬಹುದು ಮತ್ತೆ ಕೆಲವರು ಫೇಮಸ್ ಆಗುವ ಅವಕಾಶವೂ ಇದೆ ಯಾವ ವಿಚಾರದಲ್ಲಿ ಅಂದರೆ

ನಿಮ್ಮ ಲೀಡರ್ಷಿಪ್ ಕ್ವಾಲಿಟಿಯಿಂದ ಹಾಗೆ ಅದರ ಜೊತೆ ದೇವರ ಬಗ್ಗೆ ಭಯ ಭಕ್ತಿ ನಂಬಿಕೆ ಜಾಸ್ತಿ ಆಗುತ್ತದೆ ತೀರ್ಥಯಾತ್ರೆಗೆ ಹೋಗುವ ಸಾಧ್ಯತೆ ಇದೆ ಅವಕಾಶ ಕೊಡುವೆಂದರೆ ಬಿಡಬೇಡಿ ಆರೋಗ್ಯದ ವಿಚಾರದಲ್ಲೂ ಒಳ್ಳೆಯದಾಗುವ ಸಾಧ್ಯತೆ ಇದೆ ಅಂದರೆ ಬಹಳಷ್ಟು ಜನ ಸ್ವಾಶಕೋಶದ ತೊಂದರೆ ಗಂಟಲು ನೋವು ಮಾನಸಿಕ ಆರೋಗ್ಯ ನರಗಳಿಗೆ ಸಂಬಂಧಪಟ್ಟ ಏನಾದರೂ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ

ಅಂತದ್ದಕ್ಕೆ ಒಂದಷ್ಟು ಸಮಾಧಾನ ಸಿಗುತ್ತದೆ ಹಾಗೆ ಒಳ್ಳೆಯ ಕಡೆ ಚಿಕಿತ್ಸೆಗೆ ಅವಕಾಶ ಸಿಗಬಹುದು ಬೆಲ್ಲ ಒಂದೇ ದಿನದಲ್ಲಿ ಆಗುವುದಿಲ್ಲ ಇದು ಇದಕ್ಕೆ ಒಂದುವರೆ ವರ್ಷ ಸಮಯವಿದೆ ಅಷ್ಟರ ಒಳಗೆ ನಾನು ಹೇಳಿದಂತೆ ಒಂದಷ್ಟು ಘಟನೆ ಯಾಗಬಹುದು ಅಥವಾ ಕೆಲವರಿಗೆ ಆಗದೇ ಇರಬಹುದು ಅಂದರೆ ನಿಮ್ಮ ಜಾತಕ ಬಲವು ಅಷ್ಟೇ ಮುಖ್ಯವಾಗುತ್ತದ ಅದು ಬಿಟ್ಟರೆ ಕೆಲವೊಂದು

ವಿಚಾರ ಇನ್ನಷ್ಟು ಸರ್ಪ್ರೈಸ್ ಆಗಿರಬಹುದು ಹೀಗೂ ಆಗುತ್ತಾ ಎಂದೆನಿಸಬಹುದು ಹೀಗೆ ರಾಹುವಿನ ಹಾಗೆ ಕೇತು ಕೂಡ ವಿಚಿತ್ರ ಸ್ವಭಾವದವನು ಹೇಗೆ ಯಾವ ಮೂಲದಿಂದ ಲಾಭ ಮಾಡಿಕೊಡುತ್ತಾನೆ ಅಥವಾ ಯಾವ ಗ್ಯಾಪಲ್ಲಿ ತಮ್ಮ ಪರವಾಗಿ ಕೆಲಸವಾಗುವಂತೆ ಮಾಡುತ್ತಾನೆ ಎಂದು ಗೊತ್ತಾಗುವುದಿಲ್ಲ ದುಡ್ಡು ಹೇಗೆ ಬರುತ್ತದೆಯೋ ಹಾಗೆ ಹೆಚ್ಚಿನ ಜನ ಉಳಿತಾಯವನ್ನು ಮಾಡುತ್ತಾರೆ

ಹೇಗೆ ಎಂದು ಕೇಳಿದರೆ ಹೆಚ್ಚಿನ ಜನ ಬೇರೆಯವರ ಕರ್ಚಲ್ಲಿ ಲೈಫ್ ಎಂಜಾಯ್ ಮಾಡಲು ಬಯಸುತ್ತೀರಾ ಹಾಗೆ ಒಂದೊಂದು ಸಲ ಇದು ಉಲ್ಟಾ ಹೊಡೆಯಬಹುದು ನೀವು ಬೇರೆಯವರಿಗೆ ಚಮಕ್ಕೊಡಲು ಹೋಗಿ ಅದು ನಿಮಗೆ ವಾಪಸ್ ಬಂದರು ಬರಬಹುದು ಸ್ವಲ್ಪಮಟ್ಟಿಗೆ ಮುಜುಗರ ಊಹಾಪಗಳು ಹರಿದಾಡುವುದು ಏಕೆಂದರೆ ಮೊದಲೇ ಹೇಳಿದಂತೆ ಕೇತು ಮತ್ತು ಚಂದ್ರನಿಗೆ

ಅಷ್ಟೊಂದು ಸರಿ ಬರುವುದಿಲ್ಲವೆಂದು ಇಂಥದರಿಂದ ಪರಿಹಾರ ಬೇಕೆಂದರೆ ನೀವು ಏನನ್ನು ಪಾಲಿಸಬೇಕು ಎಂದು ಹೇಳಿದ್ದೆ ನೀವು ಕೈಯಲ್ಲಿ ಆಗದೆ ಇರುವವರಿಗೆ ಬಡವರಿಗೆ ಬಹಳಷ್ಟು ಸಹಾಯ ಮಾಡುವುದರಿಂದ ಯಾರಾದ್ರೂ ಬಟ್ಟೆಯನ್ನು ದಾನ ಮಾಡುವುದಿದ್ದರೆ ಬೂದು ಬಣ್ಣದ ಬಟ್ಟೆಯನ್ನು ದಾನ ಮಾಡುವುದರಿಂದ ಕೇತುವಿನ ಕೃಪೆಗೆ ಪಾತ್ರರಾಗಬಹುದು ಕೆಲವರು ಪ್ರಚಾರಕ್ಕೋಸ್ಕರನೇ ದಾನ ಮಾಡಬಹುದು ಈ ರೀತಿ ಮಾಡುವುದರಿಂದ ಯಾವ ಫಲವು ಸಿಗುವುದಿಲ್ಲ ಎಂದು ಶುದ್ದ ಮನಸ್ಸಿನಿಂದ ದಾನ ಮಾಡಿದರೆ ಮಾತ್ರ ಒಳ್ಳೆಯದಾಗುತ್ತದೆ

Leave A Reply

Your email address will not be published.