ನಾವು ಈ ಲೇಖನದಲ್ಲಿ 2024 ರಲ್ಲಿ ಯಾರಿಗೆಲ್ಲಾ ಲಕ್ಷ್ಮಿ ನಾರಾಯಣ ಯೋಗದ ಫಲ ಸಿಗಲಿದೆ ಎಂದು ತಿಳಿಯೋಣ .
ಬುಧ ಗ್ರಹವನ್ನು ನವಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ . ಹಾಗೆ ಶುಕ್ರ ಗ್ರಹವನ್ನು ಅಸುರರ ಅಧಿಪತಿ ಎಂದು ಕರೆಯಲಾಗುತ್ತದೆ . ಈ ಎರಡು ಗ್ರಹಗಳು ಒಂದುಗೂಡಿದಾಗ ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳುತ್ತದೆ . ಈ ಯೋಗವು ಮಂಗಳಕರ ಯೋಗವಾಗಿ ಇದೆ .
ಈ ಯೋಗ ಡಿಸೆಂಬರ್ 28ರಂದು ವೃಶ್ಚಿಕ ರಾಶಿಯಲ್ಲಿ ರೂಪುಗೊಂಡಿರುತ್ತದೆ . ಈ ಯೋಗದೊಂದಿಗೆ 2024ರ ಆರಂಭವು ಕೆಲವು ರಾಶಿ ಚಕ್ರ ಚಿಹ್ನೆಗಳಿಗೆ ಬಹಳ ಅದ್ಭುತವಾಗಿದೆ . ಮುಖ್ಯವಾಗಿ ಕೆಲವು ರಾಶಿಯವರು ಹೆಚ್ಚಿನ ಯಶಸ್ಸು ಮತ್ತು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ . ಈಗ 2024ರ ಆರಂಭದಲ್ಲಿ ಲಕ್ಷ್ಮೀನಾರಾಯಣ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಸಿಗುತ್ತದೆ ಎಂದು ನೋಡೋಣ .
ವೃಶ್ಚಿಕ ರಾಶಿ :- ಲಕ್ಷ್ಮೀನಾರಾಯಣ ಯೋಗದಿಂದಾಗಿ ವೃಶ್ಚಿಕ ರಾಶಿಯವರಿಗೆ 2024ರ ಆರಂಭವು ಶುಭವಾಗಲಿದೆ . ಅದೃಷ್ಟದ ಸಂಪೂರ್ಣ ಬೆಂಬಲ ವೃಶ್ಚಿಕ ರಾಶಿಯವರಿಗೆ ಸಿಗಲಿದೆ . ವೃಶ್ಚಿಕ ರಾಶಿಯವರ ದೀರ್ಘಾವಧಿಯ ಆಸೆಗಳು ಈಡೇರುತ್ತವೆ . ಉನ್ನತ ವಿದ್ಯಾಭ್ಯಾಸ ಮಾಡುವ ಆಸೆ ಈಡೇರಲಿದೆ . ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ . ಹೊಸ ವರ್ಷದಲ್ಲಿ ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಸಂತೋಷವಾಗಿರುತ್ತವೆ.. ಉದ್ಯೋಗಿಗಳು ಉನ್ನತಿಗಾಗಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ . ಲಕ್ಷ್ಮೀದೇವಿಯ ಕೃಪೆಯಿಂದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ .
ಮಿಥುನ ರಾಶಿ :- ಮಿಥುನ ರಾಶಿ ಅವರಿಗೆ ಲಕ್ಷ್ಮೀನಾರಾಯಣ ಯೋಗವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ . ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಸಂಪೂರ್ಣಗೊಳ್ಳಲಿವೆ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಕೆಯನ್ನು ಹೊಂದಿದ್ದರೆ, ನೀವು ಈ ಸಮಯದಲ್ಲಿ ಅದನ್ನು ಪ್ರಾರಂಭಿಸಿದರೆ , ಉತ್ತಮ ಫಲಿತಾಂಶಗಳನ್ನು ಪಡೆಯಬಹುದು .
ಆಕಾಂಕ್ಷಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುತ್ತಾರೆ . ಕೆಲವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ . ಅದರೊಂದಿಗೆ ಈ ಸಮಯದಲ್ಲಿ ನೀವು ಸಂಬಳ ಹೆಚ್ಚಳ ಅಥವಾ ಬಡ್ತಿ ಇತ್ಯಾದಿಗಳನ್ನು ಪಡೆಯಬಹುದು . ಕುಟುಂಬದವರೊಂದಿಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ಸಿಗುತ್ತದೆ . ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ . ಪೋಷಕರೊಂದಿಗೆ ಸಂಬಂಧವು ಬಲಗೊಳ್ಳುತ್ತದೆ .
ಧನಸ್ಸು ರಾಶಿ :- ಧನುಸ್ಸು ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗವು 2024ರ ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ . ಕುಟುಂಬದವರೊಂದಿಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ಸಿಗುತ್ತದೆ . ಕೆಲವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ . ಕೆಲವರು ಹಣ ಗಳಿಸುವ ಅವಕಾಶಗಳನ್ನು ಕಂಡುಕೊಳ್ಳುತ್ತಾರೆ . ಲಕ್ಷ್ಮಿ ದೇವಿಯ ಕೃಪೆಯಿಂದ ಸಮಾಜದಲ್ಲಿ ಕೀರ್ತಿ ಹೆಚ್ಚುತ್ತದೆ . ನಿಮ್ಮ ಮಾತಿನ ಮೂಲಕ ನೀವು ಅನೇಕರನ್ನು ಮೆಚ್ಚಿಸಬಹುದು . ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ , ಈ ಸಮಯ ತುಂಬಾ ಆಹ್ಲಾದಕರವಾಗಿ ಇರುತ್ತದೆ . ಕುಟುಂಬ ಜೀವನವೂ ಸಂತೋಷ ಮತ್ತು ಸಮೃದ್ಧವಾಗಿರುತ್ತದೆ .