ಮೇಷ ರಾಶಿಗೆ ಕೊನೆ ಭಾಗ್ಯ!

0

ನಾವು ಈ ಲೇಖನದಲ್ಲಿ 2024 ರ ಮೇಷ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ. 2024ರಲ್ಲಿ ಶನಿ ಬೇರೆ ರಾಶಿಗೆ ಪರಿವರ್ತನೆ ಆಗುತ್ತಿಲ್ಲಾ. ಅಂದರೆ , ಹಿಂದೆ ಇರುವ ಕುಂಭ ರಾಶಿಯಲ್ಲಿ ಹಸ್ತನಾಗಿ ಇದ್ದಾನೆ. ಹಾಗೆಯೇ ಶನಿ ಹಿಮ್ಮುಖವಾಗಿ ಕೂಡ ಹೋಗುತ್ತಾನೆ . ಆದರೆ ಇದು ಬಹಳಷ್ಟು ಜನರಿಗೆ ಲಾಭ ಆಗುವ ಸಾಧ್ಯತೆ ಇದೆ. ಕೈಯಲ್ಲಿ ಕಾಂಚಾಣ ಉಳಿಯುತ್ತದೆ. ಇದು ಭಾಗ್ಯೋದಯ ಕಾಲ ಎಂದು ಹೇಳಬಹುದು . ಶನಿಯಿಂದ ಯಾವ ತಿಂಗಳಲ್ಲಿ ಲಾಭ ಆಗುತ್ತದೆ . ಯಾವಾಗ ನೀವು ಅಂದು ಕೊಂಡಿರುವುದನ್ನು ಸಾಧನೆ ಮಾಡುತ್ತೀರಾ .ಮತ್ತು ಯಾವಾಗ ಎಚ್ಚರಿಕೆಯಿಂದ ಇರಬೇಕು ಅನ್ನೋ ವಿಚಾರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಶನಿ ಹಿಮ್ಮುಖವಾಗಿ ಹೋಗುವುದು ಎಂದರೆ , ಅದಕ್ಕೆ ವಕ್ರ ಶನಿ ಎಂದು ಕರೆಯಲಾಗುತ್ತದೆ . ಶನಿ ಹಸ್ತ ಎಂದರೆ , ಶನಿ ಒಂದಷ್ಟು ದಿನ ಆಗೋಚರನಾಗಿ ಇರುತ್ತಾನೆ . ಕಣ್ಣಿಗೆ ಕಾಣಿಸುವುದಿಲ್ಲ ಎಂದು ಅರ್ಥ . ಸೂರ್ಯನಿಗೆ ಶನಿ ಹತ್ತಿರ ಆದಾಗ ಶನಿ ಹಸ್ತನಾಗಿ ಇರುತ್ತಾನೆ. ಎಂದು ಹೇಳುತ್ತಾರೆ. ಇದು 25 ದಿನದಿಂದ 30 ದಿನಗಳ ಕಾಲದವರೆಗೆ ನಡೆಯುತ್ತದೆ . ಇವೆರಡು ಪ್ರಮುಖವಾದ ಘಟನೆಗಳು ಆಗುತ್ತದೆ . ಇದರಿಂದ ಮೇಷ ರಾಶಿಗೆ ಯಾವ ರೀತಿಯ ಫಲ ದೊರೆಯುತ್ತದೆ ಎಂದು ನೋಡೋಣ .

ಶನಿ ಈಗ ಕುಂಭ ರಾಶಿಯಲ್ಲಿ ಬಂದು ಗಟ್ಟಿಯಾಗಿ ಕೂತಿದ್ದಾನೆ . ಅದು ನಿಮ್ಮಿಂದ 11ನೇ ಮನೆ ಆಗುತ್ತದೆ . ನೀವು ಕೈ ಹಾಕಿದ ಕೆಲಸಗಳಲ್ಲಿ ಬಹಳ ಯಶಸ್ಸು ಕಾಣಬಹುದು . ಸ್ವಂತ ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿದ್ದರೆ ಅದರಿಂದ ಒಳ್ಳೆಯ ಹೊಗಳಿಕೆ ಯಶಸ್ಸನ್ನು ಗಳಿಸಬಹುದು . ನಿಮ್ಮ ಆದಾಯ ಕೂಡ ಹೆಚ್ಚಾಗಿರುತ್ತದೆ . ಅನಿರೀಕ್ಷಿತ ಲಾಭಗಳು ಕೂಡ ಆಗಿರುತ್ತದೆ . ಕೆಲವರಿಗೆ ತಮ್ಮ ಆದಾಯವನ್ನು ನೋಡಿ ಆಶ್ಚರ್ಯ ಆಗುವ ಸಾಧ್ಯತೆಗಳು ಇದೆ . ಶನಿ ನಿಮಗೆ ನ್ಯಾಯಯುತವಾಗಿ ಆದಾಯ ಮಾಡಿಕೊಳ್ಳುವ ಬುದ್ಧಿ ಕೊಡುವುದರ ಜೊತೆಗೆ ಜನರ ಜೊತೆಗೆ ನಿಮ್ಮ ಬಾಂಧವ್ಯ ಚೆನ್ನಾಗಿರುವ ಹಾಗೆ ಕೂಡ ನೋಡಿಕೊಳ್ಳುತ್ತಾನೆ .

ಬಹಳಷ್ಟು ಜನರು ನಿಮ್ಮ ಮಕ್ಕಳ ಸಾಧನೆಯನ್ನು ನೋಡಿ ಖುಷಿಪಡುವ ಸಮಯ ಕೂಡ ಬರುತ್ತದೆ . ಹೊಸ ವರ್ಷದಲ್ಲಿ ಹೊಸ ಹೊಸ ನಿರೀಕ್ಷೆಗಳನ್ನು ಕೂಡ ಮಾಡಬಹುದು . ಸ್ವಲ್ಪ ತಾಳ್ಮೆಯಿಂದ ಇರಬೇಕು . ಫೆಬ್ರವರಿ 11 2024 ರಿಂದ ಮಾರ್ಚ್ 18 2024 ರವರೆಗೆ ಈ 37 ದಿನದಲ್ಲಿ ನಿಮ್ಮ ಜೀವನದಲ್ಲಿ ಬದಲಾವಣೆ ನಡೆಯುತ್ತದೆ. ಆದರೆ ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನಗಳು ಆಗಿರುತ್ತದೆ. ಶನಿ ಈ ವರ್ಷ ಹಸ್ತ ಆಗುವುದರಿಂದ ಬರುವ ಲಾಭಗಳು ನಿಂತು ಹೋಗುವ ಸಾಧ್ಯತೆ ಇರುತ್ತದೆ.

ಅಂದರೆ ಲಾಭಗಳು ಬರುವ ಪ್ರಮಾಣ ಕಡಿಮೆಯಾಗುತ್ತದೆ .ಒಂದು ರೀತಿಯಲ್ಲಿ ಹೇಳುವುದಾದರೆ ಶನಿಯಿಂದ ನಷ್ಟವಾಗುವ ದಿನಗಳು ಇದಾಗಿರುತ್ತದೆ . ಆದ್ದರಿಂದ ಹಣಕಾಸಿನ ವಿಚಾರದಲ್ಲಿ ತುಂಬಾ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು . ಕೆಲವರು ಸೋಮಾರಿತನ ಮಾಡುತ್ತಾರೆ .ಬೇಗ ಆಗುವ ಕೆಲಸವನ್ನು ಮುಂದೆ ಹಾಕುತ್ತಾರೆ . ಕೆಲಸದಲ್ಲಿ ಗೊಂದಲ ಸೃಷ್ಟಿ ಮಾಡಿಕೊಂಡು ಒಂದು ಕೆಲಸ ಮಾಡುವುದರ ಬದಲಿಗೆ ಮತ್ತೊಂದು ಕೆಲಸ ಮಾಡುತ್ತಾರೆ .

ಇಲ್ಲ ಎಂದರೆ ತಮ್ಮ ಕೆಲಸವನ್ನು ಬೇರೆಯವರಿಗೆ ವಹಿಸಿ ಅದರಿಂದ ನಷ್ಟ ಅನುಭವಿಸುವುದು . ಕೆಲವರಿಗೆ ಕೆಲಸದ ವಿಷಯದಲ್ಲಿ ನಿರಾಸಕ್ತಿ ಕಾಡಲು ಶುರುವಾಗುತ್ತದೆ . ಅಂದರೆ ಅಸಡ್ಡೆ ಮಾಡುವ ಸಾಧ್ಯತೆ ಇರುತ್ತದೆ . ಈ ಕಾರಣದಿಂದ ಕೆಲವರು ನಿಮ್ಮ ಮೇಲೆ ಭರವಸೆಯನ್ನು ಕಳೆದುಕೊಳ್ಳುತ್ತಾರೆ . ಈ 37 ದಿನ ತುಂಬಾ ಕಡಿಮೆ ಸಮಯ ಆಗಿದ್ದು , ಬೇಗ ಬಂದು ಬೇಗ ಕಳೆದು ಹೋಗುವುದರಿಂದ ಚಿಂತೆ ಮಾಡುವ ಅಗತ್ಯ ಇರುವುದಿಲ್ಲ , ಅಷ್ಟೊಂದು ತೊಂದರೆ ಆಗುವುದಿಲ್ಲ . ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಬೇಕು . ನಿಮ್ಮ ಮನ: ಶಾಂತಿಗೋಸ್ಕರ ಶನಿಯ ಮಂತ್ರವನ್ನು ಈ ಸಮಯದಲ್ಲಿ ಜಪ ಮಾಡಬಹುದು .

ಮಾರ್ಚ್ 18ಕ್ಕೆ ಶನಿ ಉದಯವಾಗುತ್ತದೆ . ಈ ಸಮಯದ ನಂತರ ಏಪ್ರಿಲ್, ಮೇ, ಜೂನ್ ಈ ಸಮಯವನ್ನು ಮೇಷ ರಾಶಿಯ ಜನರು ಬಿಂದಾಸ್ ಆಗಿ ಕಳೆಯುತ್ತಾರೆ . ಮತ್ತೆ ನಿಮ್ಮ ಕೈಯಲ್ಲಿ ಹಣಕಾಸು ಓಡಾಡಲು ಶುರು ಮಾಡುತ್ತದೆ . ಜನರ ನಂಬಿಕೆ ಪ್ರೀತಿಯನ್ನು ಕೂಡ ಗಳಿಸಬಹುದು . ಕೆಲವೊಂದು ಶುಭಫಲಗಳು ಈ ಮೂರು ತಿಂಗಳಲ್ಲಿ ಮುಂದುವರೆಯುತ್ತವೆ . ಒಟ್ಟಾರೆಯಾಗಿ ಒಳ್ಳೆಯ ಅಭಿವೃದ್ಧಿ, ಒಳ್ಳೆಯ ಆದಾಯ, ಜೀವನದಲ್ಲಿ ಖುಷಿ , ದೊರೆಯುತ್ತದೆ. ಹೆಚ್ಚಿನ ಜನ ಉಳಿತಾಯವನ್ನು ಕೂಡ ಮಾಡುತ್ತಾರೆ .

ತುಂಬಾ ದಿನಗಳಿಂದ ಆಸೆ ಪಟ್ಟಿರುವ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತದೆ . ಮುಖ್ಯವಾಗಿ ಶನಿಯಿಂದ ನಿಮಗೆ ಸಮಾಧಾನ ದೊರೆಯುತ್ತದೆ . ಕಿರಿ ಕಿರಿಗಳು ಕಡಿಮೆಯಾಗುತ್ತದೆ . ಕೆಲಸ ಬಹಳ ವೇಗವಾಗಿ ಆಗುವ ಸಾಧ್ಯತೆ ಇದೆ . ಹೀಗೆ ಶನಿ ದೆಶೆಯಿಂದ ನಿಮ್ಮ ಜೀವನ ಮೂರು ತಿಂಗಳು ಸರಾಗವಾಗಿ ನಡೆಯುತ್ತದೆ . ಆದರೆ ಈ ಸರಾಗವಾಗಿ ನಡೆಯುವ ಜೀವನದಲ್ಲಿ ಅಡ್ಡಗಾಲು ಹಾಕಲು ವಕ್ರ ಶನಿ ಪ್ರವೇಶ ಮಾಡುತ್ತಾನೆ. ಜೂನ್ 29 2024 ಇದೇ ದಿನ ಶನಿ ವಕ್ರನಾಗಿ ನಿಮ್ಮನ್ನು ಕಾಡುವುದಕ್ಕೆ ಶುರು ಮಾಡುತ್ತಾನೆ.

ಹಣದ ವಿಚಾರದಲ್ಲಿ ಸಮಸ್ಯೆಗಳು ಶುರುವಾಗುತ್ತವೆ . ಶನಿ ನೇರ ಚಲನೆಯಲ್ಲಿದ್ದಾಗ ಹಣವನ್ನು ಮಾಡಿಕೊಳ್ಳಬಹುದು. ವಕ್ರ ಶನಿ ಇದ್ದಾಗ, ಹಣ ಖಾಲಿಯಾಗುವ ಸಾಧ್ಯತೆ ಇರುತ್ತದೆ . ನೀವು ದಿನಗಳನ್ನು ಮುಂದೂಡುತ್ತಾ ಹೋದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ . ಇನ್ನು ಕೆಲವರು ಹಣವನ್ನು ಸ್ನೇಹಿತರು, ಕುಟುಂಬದವರಿಗೂ ಖರ್ಚು ಮಾಡಿ ಹಾಳು ಮಾಡುತ್ತಿರುತ್ತಾರೆ . ಇದು ಅಷ್ಟೊಂದು ಒಳ್ಳೆಯ ಸಮಯ ಅಲ್ಲ . ನಿಮ್ಮ ಸ್ನೇಹಿತರು ನಿಮ್ಮನ್ನು ಅಡ್ಡ ದಾರಿಯಲ್ಲಿ ಕರೆದುಕೊಂಡು ಹೋಗುತ್ತಾರೆ . ಇಲ್ಲ ಬೇಡದ ವಿಚಾರಗಳನ್ನು ನಿಮ್ಮ ತಲೆಯಲ್ಲಿ ತುಂಬುವ ಸಾಧ್ಯತೆ ಕೂಡ ಇರುತ್ತದೆ .

ಸ್ನೇಹಿತರಿಂದ ನಷ್ಟ ಅನುಭವಿಸುವ ಸಾಧ್ಯತೆ ಕೂಡ ಇರುತ್ತದೆ . ನೀವು ಸ್ವಲ್ಪ ಸಮಯವನ್ನು ತೆಗೆದುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ . ಕೆಲವರಿಗೆ ಅನಾರೋಗ್ಯದ ಸಮಸ್ಯೆ ಕೂಡ ಆಗುತ್ತದೆ . ನೀವು ಕೂತಲ್ಲಿ ಕೂರುವುದರ ಬದಲು ಸ್ವಲ್ಪ ಚಟುವಟಿಕೆಯಿಂದ ಇರಲು ಪ್ರಯತ್ನ ಮಾಡಿ . ಯೋಗ , ಧ್ಯಾನ ಈ ರೀತಿಯ ಬಗ್ಗೆ ಗಮನಹರಿಸುವುದು ಒಳ್ಳೆಯದು . ಕುಟುಂಬದ ವಿಚಾರಕ್ಕೆ ಬಂದರೆ , ಗಂಭೀರವಾಗಿ ಇರುವುದು ಒಳ್ಳೆಯದು . ಗಂಭೀರವಾಗಿ ಇರುವುದು, ಸಿಟ್ಟು ತೋರಿಸಿ ಕೊಳ್ಳುವುದು , ಹಿರಿಯರಿಗೆ ಅವಮಾನ ಮಾಡುವುದು .ಈ ರೀತಿಯ ಕೆಲಸಗಳನ್ನು ಮಾಡಬೇಡಿ .

ಹಿರಿಯ ಸೋದರಿ ಸೋದರಿಯರ ಮಾತುಗಳನ್ನು ಕೇಳಿ . ಅವರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಕೂಡ ಇರುತ್ತದೆ . ಈ ಎಲ್ಲ ವಿಚಾರದ ಬಗ್ಗೆ ಗಮನ ಹರಿಸುವುದು ಒಳ್ಳೆಯದು . ಈ ವರ್ಷದಲ್ಲಿ ಶನಿ ಸಣ್ಣಪುಟ್ಟ ಕಿರಿ ಕಿರಿಗಳನ್ನು ಕೊಟ್ಟರೂ , ಕೊನೆಯಲ್ಲಿ ಅದೃಷ್ಟ ತರುವ ಸಾಧ್ಯತೆ ಇದೆ . ವರ್ಷದ ಕೊನೆಯಲ್ಲಿ ನೀವು ಮಾಡಿರುವ ಹೂಡಿಕೆಯ ವಿಚಾರದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳಬಹುದು . ಸಮಾಜದಲ್ಲಿ ಗೌರವ ಸ್ಥಾನಮಾನವನ್ನು ತಂದು ಕೊಡುವುದರಲ್ಲಿ ಶನಿಯ ಕೃಪೆ ಕೂಡ ಇರುತ್ತದೆ . ವರ್ಷದ ಕೊನೆಯಲ್ಲಿ ಖುಷಿಯಿಂದ ಕಾಲ ಕಳೆಯುತ್ತೀರಿ . ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುತ್ತದೆ .

ಕುಟುಂಬದವರ ಜೊತೆ ಒಳ್ಳೆಯ ರೀತಿ ಸಮಯವನ್ನು ಕಳೆಯಬಹುದು . ಹೊಸ ಜನರ ಭೇಟಿ ಕೂಡ ಆಗಬಹುದು . ಅವರಿಂದ ಲಾಭಗಳು ಆಗುವ ಕೂಡ ಸಾಧ್ಯತೆ ಇರುತ್ತದೆ . ಇದು 2025 ಮಾರ್ಚ್ ವರೆಗೂ ಕೂಡ ಮುಂದುವರೆಯುತ್ತದೆ . ಸಾಮಾನ್ಯವಾಗಿ ಹೇಳುವುದಾದರೆ ಈ ವರ್ಷದಲ್ಲಿ ಶನಿ 80% ಲಾಭವನ್ನು ಕೊಡುತ್ತಾನೆ . ನೀವು ಅಂದುಕೊಳ್ಳುವ ಹೆಚ್ಚಿನ ಕೆಲಸ ಕೈಗೂಡುತ್ತದೆ . ಈ ವರ್ಷದಲ್ಲಿ ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಾಗಿರುತ್ತದೆ .

Leave A Reply

Your email address will not be published.