ನವೆಂಬರ್ ತಿಂಗಳ ಮೇಷರಾಶಿಯ ಮಾಸ ಭವಿಷ್ಯವನ್ನು ಈ ತಿಂಗಳಿನಲ್ಲಿ ತಿಳಿದುಕೊಳ್ಳೋಣ. ಶನಿಯು ಲಾಭವನ್ನು ತಂದುಕೊಡುತ್ತಾನೆ. ಅಕ್ಟೋಬರ್ ತಿಂಗಳಿನಲ್ಲಿ ಕೇತು ಮತ್ತು ರಾಹುವಿನ ಪರಿವರ್ತನೆಯಾಗಿದೆ. ಕೇತುವಿನ ಪರಿವರ್ತನೆಯು ನಿಮಗೆ ಅದ್ಭುತವಾಗಿದೆ. ಕನ್ಯಾರಾಶಿಗೆ ಬರುವ ಕೇತುವು ಷಷ್ಠದಲ್ಲಿ ಶತೃ ನಾಶ ಮತ್ತು ಬಹಳಷ್ಟು ವಿಚಾರದಲ್ಲಿ ಯಶಸ್ಸು ಸಿಗುವುದು,
ದುಡ್ಡಿನ ಮೂಲಗಳು ಸಿಗುತ್ತದೆ. ಸಾಕಷ್ಟುಅವಕಾಶಗಳು ಅನುಗ್ರಹಗಳು ಆಗುತ್ತವೆ. ಒಂದು ವಿಚಾರ ನೆನಪಿರಲಿ ಕೇತುವಿನ ಅನುಗ್ರಹದಿಂದ ದುಡ್ಡು ಹೇಗೆ ಬರುತ್ತದೆಯೋ ಅದೇ ರೀತಿ ರಾಹುವು ಖರ್ಚನ್ನು ತರುತ್ತಾನೆ. ಮೀನರಾಶಿಯಲ್ಲಿ ರಾಹುವು 12ನೇ ಭಾವದಲ್ಲಿ ಖರ್ಚನ್ನು ಕೊಡುತ್ತಾನೆ. ರಾಹು ಕೇತುವಿನಿಂದ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದೇ ಇರುತ್ತದೆ.
ಶನಿಯು ನಿಮಗೆ ಲಾಭವನ್ನು ತಂದುಕೊಡುವುದರಿಂದ ಚೆನ್ನಾಗಿ ಇರುತ್ತದೆ ಮತ್ತು ಇನ್ನಷ್ಟು ಲಾಭವನ್ನು ತುಂದುಕೊಡುತ್ತದೆ. ಸಹೋದರ ಮತ್ತು ಸಹೋದರಿಯರು ನಿಮಗೆ ಸ್ಪಂದಿಸುತ್ತಾರೆ. ಮೇಷರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ತಂದುಕೊಡುತ್ತದೆ. ದುಡ್ಡು ಸಿಗುವ ಅವಕಾಶವಿದೆ. ಆದರೇ ಈ ತಿಂಗಳು ನಿಮ್ಮ ರಾಶ್ಯಾಧಿಪತಿ ನಿಮಗೆ ಸಪೋರ್ಟ್ ಆಗಿಲ್ಲ.
ವಿಶೇಷವಾಗಿ ಸಪ್ತಮದಲ್ಲಿರುವ ಕುಜ ಸುಖ ಕಡಿಮೆ ಮಾಡುತ್ತಾನೆ. ಸ್ವಲ್ಪ ಕಿರುಕುಳ ಪತಿ ಪತ್ನಿಯ ಕಡೆಯಿಂದ ಆರೋಗ್ಯದಲ್ಲಿ ಏನಾದರೂ ತೊಂದರೆ ಬರಬಹುದು. ಸಣ್ಣ ಪುಟ್ಟ ಜಗಳಗಳು ಉಂಟಾಗುತ್ತದೆ. ಕುಜ ಮತ್ತು ರವಿಯು ಕಳತ್ರ ಭಾವಕ್ಕೆ ಅಪಾಯಕಾರಿಯಾದವು. ಜೀವನವು ನೀರಸವಾಗುವಂತೆ ಅಂದರೆ ಜೀವನವು ಉತ್ಸಾಹ ಇಲ್ಲದಂತಾಗುತ್ತದೆ ಏಕೆಂದರೆ ವಿಪರೀತ ಆಲೋಚನೆಗಳು.
ದುಡ್ಡು ಹೆಚ್ಚು ಬರುವುದರಿಂದ ಕೆಲಸವೂ ಹೆಚ್ಚಾಗಿ, ಒತ್ತಡವೂ ಹೆಚ್ಚಾಗುತ್ತದೆ. ನಿಮಗೆ ಸಿಡಿಮಿಡಿಗೊಳ್ಳುವ ಸ್ವಭಾವವು ಇದೆ. ನವೆಂಬರ್ 16ರ ನಂತರವೂ ಇದೇ ಮುಂದುವರೆಯುತ್ತದೆ. ನೆಗಡಿ, ಫುಡ್ ಪಾಯಿಸನಿಂಗ್ ಆಗುವುದು ಆಗುತ್ತದೆ. ರೋಡ್ ಗಳಲ್ಲಿ ಕೆಲಸ ಮಾಡುವವರು, ಹೊರಗಡೆ ದುಡಿಯುವವರಿಗೆ ದೂಳಿನಿಂದ ಕಣ್ಣಿನ ಸಮಸ್ಯೆ ಮತ್ತು ಅಲರ್ಜಿ ಬರಬಹುದು.
ವಿಪರೀತ ಉಷ್ಣ ಹೆಚ್ಚು ಆಗುವುದು ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು. ಈ ಸಮಸ್ಯೆಗಳನ್ನ ಪರಿಹಾರ ಮಾಡಲು ಶುಭ ಗ್ರಹಗಳ ಬೆಂಬಲ ಇರುವುದಿಲ್ಲ. ರಾಶಿಯಲ್ಲಿ ಗುರು ಇದ್ದಾನೆ ದೇಹಕ್ಕೆ ಸ್ವಲ್ಪ ಬೆಂಬಲವಿದೆ. ಮಧ್ಯವಯಸ್ಸಿನವರು ಹೃದಯ ತಪಾಸಣೆ ಮಾಡಿಸಿಕೊಂಡರೆ ಉತ್ತಮ. ಆರೋಗ್ಯದಲ್ಲಿ ಏರುಪೇರು ಉಂಟಾದರೇ ಆಯುರ್ವೇದ ಔಷಧಿಗಳನ್ನೇ ಹೆಚ್ಚಾಗಿ ಬಳಸುವುದನ್ನ ರೂಢಿಸಿಕೊಳ್ಳಿ.
ಏಫ್ರಿಲ್ ವರೆವಿಗೂ ಅಷ್ಟೇನೂ ಚೆನ್ನಾಗಿರುವುದಿಲ್ಲ. ಗುರು ದ್ವಿತೀಯಕ್ಕೆ ಹೋಗುವವರೆವಿಗೂ ಕಾಯಬೇಕು. ಅಲ್ಲಿಯವರೆವಿಗೂ ಆರೋಗ್ಯದಲ್ಲಿ ಏರುಪೇರುಗಳು ಕಾಣಿಸುತ್ತಿರುತ್ತದೆ. ವಿಶೇಷವಾಗಿ ಶುಕ್ರ ಮತ್ತು ಗುರು ಎರಡು ಗ್ರಹಗಳ ಬೆಂಬಲ ನಿಮಗೆ ಇರುವುದರಿಂದ ಬುಧ ಗ್ರಹವು ಅನುಕೂಲಕರ ಸ್ಥಾನದಲ್ಲಿರುವುದಿಲ್ಲ. ಶುಭ ಗ್ರಹಗಳ ಬೆಂಬಲ ಸ್ವಲ್ಪ ಕಡಿಮೆ ಇದೆ. ಅಶುಭ ಗ್ರಹಗಳ
ಈ ಸಮಯದಲ್ಲಿ ನಿಮಗೆ ಇದೆ. 26ನೇ ತಾರೀಖು ಬುಧ ಧನುರ್ ರಾಶಿಗೆ ಹೋಗುತ್ತಾನೆ. ಅಲ್ಲಿಯವರೆಗೆ ಸಮತೋಲನಲ್ಲಿರುತ್ತದೆ ಆದರೂ ಬುಧ ಗ್ರಹವು ಸ್ವಲ್ಪ ಮಟ್ಟಿಗೆ ಒಳ್ಳೆಯದ್ದನ್ನೇ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ಸಮಯವಾಗಿದೆ. ಹಾಗೆಯೇ ಸಂಪತ್ತು ಕ್ರೋಢಿಕರಣವಾಗುವಂತೆ ಬುಧ ಗ್ರಹವು ಮಾಡುತ್ತದೆ. ಶಿಕ್ಷಕರು, ಫಾರ್ಮ ಇಂಡಸ್ಟ್ರಿ
ಈ ರೀತಿಯ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಒಳ್ಳೆಯ ಸಮಯ ಇದಾಗಿದೆ. ಬುಧ ಮತ್ತು ಶನಿಗ್ರಹಗಳು ಪಾಸಿಟಿವ್ ಅನ್ನಕೊಡುತ್ತವೆ. ರಿಯಲ್ ಎಸ್ಟೇಟ್ ನಲ್ಲಿ ಅಷ್ಟೊಂದು ಯಶಸ್ವಿ ಸಿಗುವುದಿಲ್ಲ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಇರುತ್ತವೆ. ತಪ್ಪುತಿಳುವಳಿಕೆ, ಕಲಹಗಳು ಉಂಟಾಗುತ್ತದೆ.
ಅಪ್ಪ ಮಕ್ಕಳ ನಡುವೆ, ಪತಿಪತ್ನಿಯ ನಡುವೆ ತಪ್ಪುತಿಳುವಳಿಕೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲಸದ ಕ್ಷೇತ್ರದಲ್ಲೂ ಮಾನಸಿಕ ಒತ್ತಡ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಬಹಳ ವಿಳಂಬಗಳೇ ಈ ಮಾಸದಲ್ಲಿ ಇರುತ್ತದೆ. ಇದೆಲ್ಲವನ್ನೂ ಮೀರಿ ನಿಮ್ಮನ್ನು ಕಾಪಾಡುವ ಶಕ್ತಿ ಶನಿ ಗ್ರಹಕ್ಕೆ ಇದೆ. ತಾಳ್ಮೆ ಒಂದೇ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ.