ಮೇಷ ರಾಶಿಗೆ ಕ್ಷಣಾರ್ಧದಲ್ಲಿ ಇವೆಲ್ಲ! 

0

ನಾವು ಈ ಲೇಖನದಲ್ಲಿ ಫೆಬ್ರವರಿ ತಿಂಗಳ ಮೇಷ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ. ನಮ್ಮ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಕೆಲವೊಂದು ಚಟುವಟಿಕೆಗಳನ್ನು ಮಾಡಿಕೊಳ್ಳಬೇಕು . ಫೆಬ್ರವರಿ ತಿಂಗಳು ನಿಮ್ಮ ಮಟ್ಟಿಗೆ ತುಂಬಾ ಚೆನ್ನಾಗಿದೆ ಎಂದು ಹೇಳಬಹುದು. ವಿಶೇಷವಾಗಿ ಹೇಳುವುದಾದರೆ, ಕೇಂದ್ರದಲ್ಲಿ ಇರುವ ರಾಶಿಯಾಧಿಪತಿ ಇದಕ್ಕಿಂತಲೂ ಮುಖ್ಯವಾಗಿ ನಿಮಗೆ ರವಿಯ ಅನುಗ್ರಹ ಹೆಚ್ಚಾಗಿ ಇರುತ್ತದೆ. 11ನೇ ತಾರೀಖಿನ ವರೆಗೂ ರವಿ ದಶಮ ಭಾವದಲ್ಲಿ ಇರುತ್ತದೆ.

ಈ ಸಮಯದಲ್ಲಿ ಮಹತ್ವದ ಕಾರ್ಯಗಳಿಗೆ ಜಯ ಸಿಗುವ ಸಾಧ್ಯತೆ ಇರುತ್ತದೆ . ನೀವು ಯಾವ ಕೆಲಸ ಕಾರ್ಯಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತೀರಾ, ಅಂತಹ ಕೆಲಸದಲ್ಲಿ ಜಯ ಗಳಿಸುವ ಸಾಧ್ಯತೆ ಇರುತ್ತದೆ . ಕೆಲವರು ಕೆಲಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಲು ಬಯಸುತ್ತಾರೆ. ವ್ಯಾಪಾರ ವ್ಯವಹಾರಗಳನ್ನು ಮಾಡುವ ವ್ಯಕ್ತಿಗಳಿಗೆ ಹೆಚ್ಚಿನ ಲಾಭ ಆಗುವ ಸಾಧ್ಯತೆ ಇದೆ . 13 ನೇ ತಾರೀಖಿನ ನಂತರ ಲಾಭ ಸ್ಥಾನಕ್ಕೆ ರವಿ ಗ್ರಹ ಬರುತ್ತದೆ. ಶನಿ ಮತ್ತು ರವಿ ತಂದೆ ಮಕ್ಕಳ ಹೊಂದಾಣಿಕೆಯ ಹಾಗೆ ಇರುತ್ತದೆ.

ಬಹಳ ಒಳ್ಳೆಯ ಪರಿಣಾಮಗಳನ್ನು ತಂದು ಕೊಡುತ್ತವೆ. ಈ ಎರಡೂ ಗ್ರಹಗಳ ಸಹಕಾರದಿಂದ ನಿಮಗೆ ಯಶಸ್ಸು ದೊರೆಯುತ್ತದೆ. ರೋಗಗಳು ಇದ್ದರೆ, ದೂರ ಆಗುವ ಸಾಧ್ಯತೆ ಇರುತ್ತದೆ . ಗೌರವ ಮತ್ತು ಜನರಿಂದ ಮನ್ನಣೆ ಪಡೆಯು ಸಾಧ್ಯವೆ ಇದೆ. ಉಳಿತಾಯ ಜಾಸ್ತಿ ಆಗುವುದಕ್ಕೆ ಕೆಲವೊಂದು ದಾರಿಗಳು ದೊರೆಯುತ್ತವೆ. ನಿಮ್ಮ ಪರದಾಟವನ್ನು ಕಡಮೆ ಮಾಡುವಂತಹ ಒಂದಷ್ಟು ಘಟನೆಗಳು ನಿಮಗೆ ಖುಷಿಯನ್ನು ತಂದು ಕೊಡುತ್ತದೆ. ರವಿಯಿಂದ ನಿಮಗೆ ಪ್ರಸಿದ್ಧಿ ಸಿಗುವ ಸಾಧ್ಯತೆ ಹೆಚ್ಚಾಗಿ ಇದೆ.

ಕಲೆ, ಸಾಹಿತ್ಯ , ಸಂಗೀತ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸನ್ನು ತಂದು ಕೊಡುವುದಕ್ಕೆ ಶುಕ್ರ ಗ್ರಹದ ಬೆಂಬಲ ಇದೆ. ಇಲ್ಲಿರುವ ಶುಕ್ರ ಅದೃಷ್ಟವನ್ನು ಜಾಸ್ತಿ ಮಾಡುತ್ತದೆ. ನಿಮ್ಮ ಪ್ರಯತ್ನ ಇಲ್ಲದೆ ಬರುವ ಸ್ವತ್ತುಗಳು ಹೆಚ್ಚಾಗಿ ಸಿಗುತ್ತದೆ. ಪ್ರಯತ್ನ ಹಾಕಿರುವುದಿಲ್ಲ. ಮತ್ತು ನಿರೀಕ್ಷೆಗಳು ಕಡಿಮೆ ಇರುತ್ತದೆ. ಇಂತಹ ಬೆಳವಣಿಗೆ ಮತ್ತು ಅದೃಷ್ಟ ಪವಾಡಗಳು ನಡೆಯುವುದು ಜಾಸ್ತಿ ಇರುತ್ತದೆ. ಭಾಗ್ಯದಲ್ಲಿ ಶುಕ್ರ ಗ್ರಹ ಬಂದಾಗ , ರಾಶಿಯಾಧಿಪತಿ ಕೇಂದ್ರದಲ್ಲಿ ಇರುತ್ತಾನೆ.

ದಶಮ ಭಾವದಲ್ಲಿ ನಿಮ್ಮ ಕರ್ಮದ ಮೇಲೆ ಕುಜನ ಪ್ರಭಾವ ಇರುತ್ತದೆ. ಇದು ಅಷ್ಟೊಂದು ಒಳ್ಳೆಯದು ಅಲ್ಲ. ಕೆಲವೊಂದು ತಪ್ಪುಗಳು ನಿಮ್ಮಿಂದ ಆಗುವ ಸಾಧ್ಯತೆ ಇರುತ್ತದೆ . ಕೆಲವೊಂದು ಬಾರಿ ಒರಟಾಗಿ ನಡೆದುಕೊಳ್ಳುತ್ತಾರೆ. ಅವರಿಗೆ ನಿಮ್ಮ ವರ್ತನೆ ಕೂಡ ಇಷ್ಟವಾಗುವುದಿಲ್ಲ. ಅತಿಯಾದ ಸುಸ್ತು ನಿಮ್ಮನ್ನು ಕಾಡುತ್ತದೆ. ಹಲವಾರು ರೀತಿಯ ಪ್ರಯತ್ನಗಳನ್ನು ನೀವು ಮಾಡುತ್ತೀರಾ . ಯಶಸ್ಸು ಇದ್ದರೂ ಕೂಡ ಹಲವಾರು ರೀತಿಯ ಆಲೋಚನೆಗಳು ಬರುತ್ತವೆ.

ಒಂದು ರೀತಿಯ ಸಮತೋಲನ ತಂದುಕೊಳ್ಳಲು ಕಷ್ಟವಾಗುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಭವ್ಯವಾದ ತಿಂಗಳು ಆಗಿರುತ್ತದೆ. ಬುಧ ಗ್ರಹ ಮತ್ತು ಶುಕ್ರ ಗ್ರಹ ಇವೆರಡೂ ಗ್ರಹಗಳಿಗೂ ಒಳ್ಳೆಯ ಬಲವಿದೆ. ಹಾಗೆಯೇ ಗುರುವಿನ ಆಶೀರ್ವಾದ ಸ್ವಲ್ಪ ಮಟ್ಟಿಗೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಈ ತಿಂಗಳು ಅದ್ಭುತವಾದ ತಿಂಗಳು ಆಗಿರುತ್ತದೆ. ಯಾವ ರೀತಿ ಹಣ ಬರುತ್ತದೆಯೋ , ಅದೇ ರೀತಿ ಖರ್ಚಾಗುವ ಸಂಭವ ಕೂಡ ಇದೆ. ವ್ಯಯ ಭಾವದಲ್ಲಿ ಇರುವ ರಾಹು ಅಷ್ಟು ಸುಲಭವಾಗಿ ಬಿಡುವುದಿಲ್ಲ.

ಕೊಡುವುದಕ್ಕೆ ಹಲವಾರು ಕೈಗಳು ಇರುವಾಗ ಖರ್ಚು ಮಾಡುವುದಕ್ಕೆ ಒಂದು ಕೈ ಇದ್ದರೆ, ಏನೂ ವ್ಯತ್ಯಾಸ ಇರುವುದಿಲ್ಲ . ಶತ್ರುಗಳ ಕಾಟ ಮತ್ತು ದುಷ್ಟಶಕ್ತಿಗಳ ಕಾಟ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕೇತು ಷಷ್ಟ ಭಾವದಲ್ಲಿ ಇರುವಾಗ ಈ ರೀತಿಯ ಘಟನೆ ನಡೆಯುವುದಿಲ್ಲ. ಶತ್ರುಗಳಿಗೆ ತಿರುಗೇಟು ಕೊಡುವ ಮೂಲಕ ನಿಮಗೆ ಅರ್ಥ ಆಗುವ ಸಾಧ್ಯತೆ ಇರುತ್ತದೆ . ಇದು ಆಗದೇ ಇದ್ದರೆ, ಈ ರೀತಿಯ ಸನ್ನಿವೇಶ ಸೃಷ್ಟಿಯಾಗಬಹುದು. ನಾವು ಸಾಧನೆಯನ್ನು ಮಾಡುವಾಗ ನಾವು ಬೇರೆಯವರಿಗೆ ನೋವು ಅಥವಾ ಪೆಟ್ಟು ಕೊಟ್ಟು ಸಾಧನೆ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ. ನಿಮಗೆ ಧನಾತ್ಮಕ ಚಿಂತನೆಗಳು ಬರುವ ಸಾಧ್ಯತೆ ಇರುತ್ತದೆ . ನಾವು ಯಾವಾಗಲೂ ಒಳ್ಳೆಯ ರೀತಿಯಲ್ಲಿ ಸಾಧನೆಯನ್ನು ಮಾಡಿದಾಗ ಮಾತ್ರ ಅದರ ಯಶಸ್ಸು ದೊರೆಯಲು ಸಾಧ್ಯ .

Leave A Reply

Your email address will not be published.