ನಾವು ಈ ಲೇಖನದಲ್ಲಿ ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ, ಏನಾಗುತ್ತದೆ ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ .ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ಏನಾಗುತ್ತೆ ಗೊತ್ತಾ…? ದೇವರು ನಮ್ಮ ಪೂಜೆಯನ್ನು ಸ್ವೀಕರಿಸಲಿ, ನಮ್ಮ ಕೋರಿಕೆಯನ್ನು ಈಡೇರಿಸಲಿ ಎಂಬುದು ಪ್ರತಿಯೊಬ್ಬರ ಆಸೆ. ದೇವರನ್ನು ಪೂಜಿಸುವಾಗ ಕೆಲವೊಮ್ಮೆ ನಮ್ಮ ಕಣ್ಣು ತುಂಬಿಕೊಳ್ಳುತ್ತದೆ. ಅಥವಾ ಕಣ್ಣಿನಲ್ಲಿ ನೀರು ಬರುತ್ತದೆ. ಇದರ ಅರ್ಥ ದೇವರು ನಮ್ಮ ಮೇಲೆ ಕೋಪಿಸಿಕೊಂಡಿದ್ದಾನೆ ಎಂಬುವುದಾಗಿದೆಯೇ…? ಅಥವಾ ನಮ್ಮ ಪೂಜೆಯಿಂದ ಸಂತುಷ್ಟನಾಗಿದ್ದಾನೆ ಎಂಬುವುದಾಗಿದೆಯೇ ….?
ನಮ್ಮೊಂದಿಗೆ ಸದಾ ಕಾಲ ದೇವರು ಇರಲೆಂದು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುತ್ತೇವೆ. ಶುದ್ಧ ಮನಸ್ಸಿನಿಂದ, ಭಕ್ತಿಯಿಂದ ದೇವರನ್ನು ಪೂಜಿಸುತ್ತೇವೆ. ದೇವರು ನಾವು ಮಾಡುವ ಪೂಜೆಯನ್ನು ಸ್ವೀಕರಿಸಬೇಕು, ನಮ್ಮೆಲ್ಲಾ ಆಸೆಗಳನ್ನು ಈಡೇರಿಸಬೇಕು ಎಂಬುವುದು ಕೂಡ ಇದರ ಉದ್ದೇಶವಾಗಿದೆ. ದೇವರು ನಮ್ಮ ಪ್ರಾರ್ಥನೆಯನ್ನು ಹೇಗೆ ಕೇಳಿಸಿಕೊಳ್ಳುತ್ತಾನೆ…?
ಅವನು ನಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಂಡಿದ್ದಾನೆ ಎಂಬುದನ್ನು ನಾವು ತಿಳಿಯೋದು ಹೇಗೆ….? ಈ ಎಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಾಮಾನ್ಯ. ಹೌದು, ದೇವರು ನಮ್ಮ ಮೊರೆಯನ್ನು ಕೇಳಿಸಿಕೊಂಡಿದ್ದಾನೆ ಎಂದಾದರೆ ಸೂಚನೆಯನ್ನು ನೀಡುತ್ತಾನೆ. ಈ ಸೂಚನೆ ನಿಮ್ಮ ಅನುಭವಕ್ಕೆ ಬಂದರೆ ದೇವರು ನಿಮ್ಮ ಕೋರಿಕೆಯನ್ನು ಕೇಳಿಸಿಕೊಂಡಿದ್ದಾನೆ ಎಂದರ್ಥ. ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಂಡಾಗ ಯಾವ ಸೂಚನೆಯನ್ನು ನೀಡುತ್ತಾನೆ….?
ಇದು ದೇವರು ನಿಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಂಡಿದ್ದಾನೆ ಎಂಬುದನ್ನು ಸೂಚಿಸುತ್ತದೆ . ನಾವು ಮಾಡುವ ಪೂಜೆಯ ಸಮಯದಲ್ಲಿ ದೇವರು ನಮಗೆ ವಿವಿಧ ರೀತಿಯ ಸೂಚನೆಗಳನ್ನು ನೀಡುವ ಮೂಲಕ ಪೂಜೆಯಲ್ಲಿ ಪಾಲ್ಗೊಂಡಿರುವುನ್ನು ಸೂಚಿಸುತ್ತಾನೆ. ಪೂಜೆಯ ಸಮಯದಲ್ಲಿ ತಂಪಾದ ಗಾಳಿ ಬೀಸುವುದು, ಹಸು ಮುದ್ದಾಗಿ ಕರೆಯುವುದು ಅಥವಾ ಇಂಪಾದ ಶಬ್ದಗಳನ್ನು ಕೇಳಿಸಿಕೊಂಡರೆ ದೇವರು
ನಿಮ್ಮ ಪೂಜೆಯನ್ನು ಸ್ವೀಕರಿಸುತ್ತಿದ್ದಾನೆ ಎಂಬುದಾಗಿದೆ. ಇದನ್ನು ಹೊರತುಪಡಿಸಿ, ಪೂಜೆ ಮಾಡುವಾಗ ಒಬ್ಬ ವ್ಯಕ್ತಿಯು ಅಳಲು ಪ್ರಾರಂಭಿಸಿದರೆ ಅಥವಾ ಅವನ ಕಣ್ಣಲ್ಲಿ ನೀರು ಬಂದರೆ, ದೇವರು ಆ ವ್ಯಕ್ತಿಯ ಕೋರಿಕೆಗಳನ್ನು ಸ್ವತಃ ಕೇಳಿಸಿಕೊಂಡಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಪೂಜೆಯ ಸಮಯದಲ್ಲಿ ಬರುವ ಕಣ್ಣೀರು ನಿಮ್ಮ ಮನಸ್ಸು ಸಂಪೂರ್ಣವಾಗಿ ಪರಿಶುದ್ಧವಾಗಿದೆ. ಮತ್ತು ನೀವು ನಿಮ್ಮ ಹೃದಯದಿಂದ ದೇವರನ್ನು ಧ್ವನಿಸುತ್ತಿದ್ದೀರಿ ಎಂಬುದರ ಸೂಚನೆಯಾಗಿದೆ. ಇದರೊಂದಿಗೆ ನೀವು ದೇವರೊಂದಿಗೆ ನೇರ ಸಂಪರ್ಕವನ್ನು ಪಡೆಯುತ್ತೀರಿ. ಪೂಜೆ ಮಾಡುವಾಗ ಕಣ್ಣಿಂದ ನೀರು ಬರುವುದು ಕೂಡ ನಿಮ್ಮ ಪೂಜೆ ಯಶಸ್ವಿಯಾಗಿದೆ ಎನ್ನುವುದರ ಸಂಕೇತವಾಗಿದೆ. ದೇವರು ನಿಮ್ಮ ಪೂಜೆಯಿಂದ ಸಂತುಷ್ಟನಾಗಿದ್ದಾನೆ ಅಥವಾ ನಿಮ್ಮ ಪೂಜೆಯನ್ನು ಸ್ವೀಕರಿಸಿದ್ದಾನೆ ಎಂಬುದಾಗಿದೆ.
ಪೂಜೆಯ ಸಮಯದಲ್ಲಿ ಕಣ್ಣೀರು ಏಕೆ ಬರುತ್ತದೆ….?ದೇವರು ನಮ್ಮ ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಈ ಕಾರಣಕ್ಕಾಗಿ ನೀವು ದೇವರ ಪೂಜೆಯನ್ನು ಮಾಡುವಾಗ ಶುದ್ಧ ಮನಸ್ಸಿನಿಂದ ಮತ್ತು ಒಳ್ಳೆಯ ಭಾವನೆಯಿಂದ ಮಾಡಬೇಕೆನ್ನುವ ನಂಬಿಕೆಯಿದೆ. ಭಾವನಾತ್ಮಕವಾಗಿ ಮಾಡುವ ಪೂಜೆಯಿಂದ ದೇವರು ಬೇಗನೆ ಸಂತುಷ್ಟನಾಗುತ್ತಾನೆ.
ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಸ್ವತಃ ಅವನೇ ಅರಿತುಕೊಳ್ಳುತ್ತಾನೆ. ಪೂಜೆ ಮಾಡುವಾಗ ಕಣ್ಣಲ್ಲಿ ನೀರು ಬರುವುದು ಕೂಡ ನಿಮ್ಮ ಮನಸ್ಸು ಸಂಪೂರ್ಣ ಪರಿಶುದ್ಧವಾಗಿದ್ದು , ಮನಃಶಾಂತಿಯಿಂದ ದೇವರ ಸೇವೆಯಲ್ಲಿ ನಿರತರಾಗಿದ್ದೀರಿ ಎಂಬುದರ ಸಂಕೇತವಾಗಿದೆ. ಯಾರ ಮನಸ್ಸು ಶಾಂತವಾಗಿರುತ್ತದೆ ಮತ್ತು ಯಾರ ಭಾವನೆಗಳು ದೇವರ ಕಡೆಗೆ ಇರುತ್ತದೆ. ಅವರ ಇಷ್ಟಾರ್ಥಗಳನ್ನು ದೇವರು ಖಂಡಿತವಾಗಿಯೂ ಪೂರೈಸುತ್ತಾನೆ.
ದೇವರ ಪೂಜೆಯನ್ನು ಮಾಡುವಾಗ ಅಥವಾ ದೇವರ ಬಳಿ ಯಾವುದೋ ಒಂದು ಬಯಕೆಯನ್ನು ಹೇಳಿಕೊಂಡಾಗ ಕಣ್ತುಂಬಿಕೊಳ್ಳುವ ಅಥವಾ ಕಣ್ಣಿನಿಂದ ನೀರು ಬರುವುದು ನಿಮ್ಮ ಅನುಭವಕ್ಕೂ ಬಂದಿರಬಹುದು. ಇಂತಹ ಅನುಭವ ನಿಮಗೂ ಆಗಿದ್ದರೆ , ಖಂಡಿತ ದೇವರು ನೀವು ಬೇಡಿಕೊಂಡ ಕೋರಿಕೆಯನ್ನು ಈಡೇರಿಸುತ್ತಾನೆ ಎಂಬುದಾಗಿದೆ. ಹಾಗೂ ದೇವರು ನಿಮ್ಮ ಪೂಜೆ – ಪುನಸ್ಕಾರಗಳಿಂದ ಸಂತುಷ್ಟನಾಗಿದ್ದಾನೆ ಎಂಬುದಾಗಿದೆ.