ಮಿಥುನ ರಾಶಿ ಮಾರ್ಚ್ ಮಾಸ ಭವಿಷ್ಯ

0

ಸ್ನೇಹಿತರೇ ಈ ಮಿಥುನ ರಾಶಿಯ ಮಾರ್ಚ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮಿಥುನ ರಾಶಿಯವರಿಗೆ ಈ ತಿಂಗಳಿನಲ್ಲಿ ದೊಡ್ಡ ಹೊರೆ ಕಳಚಿದ ಹಾಗೇ ಆಗುತ್ತದೆ. ಸ್ಪಷ್ಟವಾದ ವಿಚಾರವೇನೆಂದರೆ 2ನೇ ತಾರೀಖಿಗೆ ಒಂದು ಪರಿವರ್ತನೆ ನಡೆಯುತ್ತದೆ. ಮಾರ್ಚ್ 14ಕ್ಕೆ ರವಿ ಪರಿವರ್ತನೆಯಾಗುತ್ತದೆ. 14ನೇ ತಾರೀಖಿನ ವರೆಗೆ ನಿಮ್ಮ ಭಾಗ್ಯದಲ್ಲಿ ರವಿಗ್ರಹವಿರುತ್ತದೆ. ಭಾಗ್ಯದಲ್ಲಿ ರವಿ ಇರುವಾಗ ಸ್ವಲ್ಪ ಕೇರ್ ಫುಲ್ ಆಗಿ ಇರಬೇಕಾಗುತ್ತದೆ. ಎಚ್ಚರಿಕೆಯ ವಿಷಯವೇನೆಂದರೆ ನಿಮ್ಮ ಫ್ಯಾಮಿಲಿ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕು.

ನಿಮ್ಮ ಬಂಧುಗಳ ಬಗ್ಗೆಯೂ ಕಾಳಜಿ ತೋರಿಸಬೇಕಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅಸ್ಥವ್ಯಸ್ಥವಾಗುತ್ತದೆ. ಇತ್ತೀಚಿನ ಪರಿಸ್ಥಿತಿಯಲ್ಲಿ ಕೆಲಸ ಮಾಡುವವರು ಕೆಲಸ ಮಾಡುವ ರೀತಿಯೇ ಆಗಿದೆ. ನೀವು ಚೆನ್ನಾಗಿ ಕೆಲಸ ಮಾಡುತ್ತೀನಿ ಎಂದರೆ ನಿಮಗೆ ಕೆಲಸವನ್ನು ಹೆಚ್ಚು ಹೇಳುತ್ತಾರೆ. ಕೆಲಸದಿಂದ ಸಂಬಳ ಸಿಕ್ಕರೂ ಒತ್ತಡ ಹೆಚ್ಚು ಇರುವುದರಿಂದ ಫ್ಯಾಮಿಲಿಗೆ ಹೆಚ್ಚು ಸಮಯವನ್ನು ಕೊಡಲು ಸಾಧ್ಯವಾಗುವುದಿಲ್ಲ. ಮಾರ್ಚ್ 14ರ ಒಳಗಿನ ಸಮಯದಲ್ಲಿ ಸ್ವಲ್ಪ ಎಚ್ಚರವಹಿಸಬೇಕಾಗುವ ಸಂದರ್ಭ ಬರುತ್ತದೆ.

ಅನಾರೋಗ್ಯ, ಕೆಲವೊಂದು ಜವಾಬ್ದಾರಿಯ ಕೆಲಸವಿರಬಹುದು, ಯಾವುದೋ ಕೆಲಸಕ್ಕೆ ಹೋಗಬೇಕಾದಾಗ ಅಡೆತಡೆಗಳು ಉಂಟಾಗಬಹುದು. ಸಣ್ಣ ಪುಟ್ಟ ವಿಷಯಗಳಿಗೂ ಕಿರಿಕಿರಿಯಾಗುತ್ತದೆ. ಕುಟುಂಬದಲ್ಲಿ ಕೆಲವೊಂದು ವಿಚಾರಗಳಲ್ಲಿ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಬರಬಹುದು. ಇನ್ನೊಂದು ಎಚ್ಚರಿಕೆಯ ವಿಷಯವೇನೆಂದರೆ ಕೆಲವೊಂದು ವಿಷಯದಲ್ಲಿ ಅಪಮಾನವಾಗಬಹುದು. ಜೀವನದಲ್ಲಿ ಆ ರೀತಿಯ ವಿಚಾರಗಳು ಬಂದು ಹೋಗುತ್ತಿರುತ್ತವೆ ಆದ್ದರಿಂದ ತಾಳ್ಮೆಯಿಂದ ಇದ್ದರೇ ಒಳ್ಳೆಯದು.

ಗಂಭೀರವಾಗಿ ತೆಗೆದುಕೊಳ್ಳದೇ ಮುನ್ನುಗುವುದೇ ಪರಿಹಾರವಾಗಿದೆ. ಮಾರ್ಚ್ 14ರ ವರೆಗೆ ಸ್ವಲ್ಪ ತಾಳ್ಮೆ ತೆಗೆದುಕೊಂಡರೇ ಒಳ್ಳೆಯದು ಏಕೆಂದರೆ ಪರಿಸ್ಥಿತಿಯು ಬದಲಾವಣೆ ಆಗುತ್ತದೆ. 14 ರ ನಂತರ ಸೂರ್ಯ ಮೀನರಾಶಿಗೆ ಬರುತ್ತಾನೆ. ಅದೇ ರೀತಿ ಶುಕ್ರ ಗ್ರಹವು ಮೀನರಾಶಿಗೆ ಬರುತ್ತದೆ. ಈ ಎರಡು ಗ್ರಹಗಳು ಬಹಳಷ್ಟು ಒಳ್ಳೆಯ ಪರಿಣಾಮಗಳನ್ನು ನೀಡುತ್ತವೆ. ವಿಶೇಷವಾಗಿ ರವಿಗ್ರಹ ಏಕಾದಶ ಭಾವದಲ್ಲಿರುವಾಗ ಯಶಸ್ಸು ಸಿಗುತ್ತದೆ. 14ನೇ ತಾರೀಖಿನ ನಂತರ ಆಗುವ ಪರಿವರ್ತನೆಯಾಗಿದೆ.

ಯಶಸ್ಸು ಯಾವ ರೂಪದಲ್ಲಿರುತ್ತದೆಂದರೆ ದುಡ್ಡಿನ ರೂಪದಲ್ಲಿರಬಹುದು, ಖ್ಯಾತಿಯ ರೂಪದಲ್ಲಿರಬಹುದು, ಮಹತ್ವಪೂರ್ಣ ವ್ಯಕ್ತಿಯಾಗಿದ್ದರೇ ನ್ಯೂಸ್ ಪೇಪರ್, ಟಿವಿ ಮಾಧ್ಯಮದವರು ನಿಮ್ಮನ್ನು ಕೇಳಿಕೊಂಡು ಬರಬಹುದು, ರಾಜಕೀಯ ವ್ಯಕ್ತಿಯಾಗಿದ್ದರೇ ನಿಮ್ಮ ಅಭಿಪ್ರಾಯ ಬಹಳ ಪ್ರಾಮುಖ್ಯತೆಯಾಗಿರುತ್ತದೆ. ನೀವು ಮುಖ್ಯ ವ್ಯಕ್ತಿಯಾಗಿದ್ದರೇ ನಿಮ್ಮನ್ನು ಬಿಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟಕರವಾಗಿರಬಹುದು. ಉದ್ಯೋಗ ಮಾಡುತ್ತಿರುವವರಿಗೆ ನಿಮ್ಮ ಸ್ಥಾನಮಾನ ಹೆಚ್ಚು ಆಗಬಹುದು ಈ ರೀತಿಯ ಸ್ಥಾನಮಾನಗಳು, ಪ್ರಭಾವಿ ವ್ಯಕ್ತಿಗಳಾಗಿರುತ್ತಾರೆ.

ಇದೇ ಸಂದರ್ಭದಲ್ಲಿ ನಾಯಕತ್ವದ ಹುದ್ಧೆಗಳು ಬರುತ್ತವೆ. ಮಿಥುನ ರಾಶಿಯವರು ಯಾವಾಗಲೂ ಹಾರ್ಡ್ ವರ್ಕ್ ಮಾಡುವಂತಹ ವ್ಯಕ್ತಿಗಳಾಗಿರುತ್ತಾರೆ ಆದ್ದರಿಂದ ಜನ ಇವರನ್ನು ಗುರುತಿಸುತ್ತಾರೆ. ಈ ತಿಂಗಳಿನಲ್ಲಿ ಕೆಲಸದಲ್ಲಿ ನಿಮ್ಮ ಪ್ರಭಾವ ಹೆಚ್ಚು ಆಗುವುದು ತುಂಬಾ ಮುಖ್ಯವಿಷಯವಾಗಿರುತ್ತದೆ. ಶುಕ್ರನಿಂದ ನಿಮಗೆ ಒಳ್ಳೆಯದೇ ಆಗುತ್ತದೆ. ವ್ಯವಹಾರದಲ್ಲಿ ವಿಶೇಷವಾಗಿ ಹಣಕಾಸಿನ ಲಾಭವಾಗುತ್ತದೆ. ನಿಮ್ಮ ಜೊತೆ ಶುಕ್ರಗ್ರಹವಿರುವುದರಿಂದ ಪೂರಕವಾಗಿ ಕೆಲಸವನ್ನು ಮಾಡುತ್ತೀರಿ. ಬುಧನ ಬದಲಾವಣೆಯಾಗಿದೆ ನಿಮ್ಮ ದಶಮ ಭಾವಕ್ಕೆ ಬಂದಿದೆ. ಇಡೀ ತಿಂಗಳು ಬುಧನು ನಿಮಗೆ ರಕ್ಷಣೆಯನ್ನು ಕೊಡುತ್ತಾನೆ.

ಏಕೆಂದರೆ ಮಿಥನ ರಾಶಿಗೆ ಬುಧನು ರಾಶಿಯ ಅಧಿಪತಿ. ನಿಮ್ಮ ಅಪೇಕ್ಷೆಗಳನ್ನು ಈಡೇರಿಸುವ ವಿಚಾರದಲ್ಲಿ, ಸಮಯವನ್ನು ನಿಮ್ಮ ಬುದ್ಧಿವಂತಿಕೆಯಿಂದ ಬಳಸಿಕೊಳ್ಳುವಂತದ್ದು, ಆ ಸಮಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಬಳಕೆ ಮಾಡುವಂತಹ ಚಾಣಾಕ್ಷತೆ ಇರಬಹುದು ಈ ಎಲ್ಲವೂ ಚೆನ್ನಾಗಿ ಕೆಲಸ ಮಾಡಬೇಕೆಂದರೆ ಬುಧನ ಬುದ್ಧಿವಂತಿಕೆ ಬಹಳ ಶಾರ್ಪ್ ಆಗಿದ್ದು ಮಾರ್ಚ್ 7 ನೇ ತಾರೀಖಿನ ನಂತರ ನಿಮ್ಮ ಸಹಾಯಕ್ಕೆ ಬರುತ್ತದೆ. ಬಹಳ ಜಾಗೃತಿಯಿಂದ ಅರಿವಿನಿಂದ ಇರಲು ಸಾಧ್ಯವಾಗುತ್ತದೆ.

ಈ ತಿಂಗಳು ಬಹಳ ಖುಷಿಯಿಂದ ಇರುತ್ತೀರ ಮತ್ತು ಬಹಳಷ್ಟು ಸಾಧನೆಗಳನ್ನು ಈ ತಿಂಗಳು ಮಾಡುತ್ತೀರ. ಏಕೆಂದರೆ ಬುಧಗ್ರಹ ಮಾರ್ಚ್ 27ನೇ ತಾರೀಖಿನ ಮೇಲೆ ಮೇಷರಾಶಿಗೆ ಹೋಗುತ್ತದೆ. ಮೇಷ ರಾಶಿಗೆ ಹೋದರೂ ಬಹಳ ಒಳ್ಳೆಯ ಕಾಂಬಿನೇಷನ್ ಆಗಿದೆ. ಬುಧ ಮತ್ತು ಗುರು ಒಳ್ಳೆಯ ಕಾಂಬಿನೇಷನ್ ಆಗುತ್ತಾರೆ. ಬಹಳ ಅದ್ಭುತವಾದ ಭೌತಿಕ ಫಲಗಳನ್ನು ಉಂಟುಮಾಡಬಹುದು. ನಿರೀಕ್ಷೆ ಇಲ್ಲದೇ ಬಹಳಷ್ಟು ಹಣ ಬರುತ್ತದೆ. ಗುರು ಗ್ರಹದ ಅನುಗ್ರಹ ಏಕಾದಶ ಭಾವದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ವಿಶೇಷ ಅನುಕೂಲಕರವಾಗಿದೆ.

Leave A Reply

Your email address will not be published.