ನಿಂಬೆಹಣ್ಣನ್ನು ಇಲ್ಲಿ ಬಚ್ಚಿಡಿ! ಕಷ್ಟಗಳೆಲ್ಲ ಕರಗುತ್ತೆ

0

ಬೇಸಿಗೆ ಕಾಲದಲ್ಲಿ ನಿಂಬೆಹಣ್ಣನ್ನು ಕೇವಲ ಪಾನಕ ಮಾಡಿ ಕುಡಿಯುವುದಲ್ಲದೇ ರುಚಿರುಚಿಯಾದ ಉಪ್ಪಿನಕಾಯಿಯನ್ನು ಮಾಡಿಕೊಂಡು ತಿನ್ನುತ್ತೇವೆ. ರುಚಿರುಚಿಯಾದ ಅಡುಗೆ ಮಾಡಿಕೊಂಡು ಸೇವನೆ ಮಾಡುತ್ತೇವೆ. ಆಹಾರದಲ್ಲಿ ಬಳಸುವುದಲ್ಲದೇ ಇದರ ಶಕ್ತಿಯು ಕೂಡ ಮಹತ್ತ್ವಪೂರ್ಣವಾಗಿದೆ. ನೀವು ಅಂದುಕೊಂಡಿರುವ ಯಾವುದಾದರೂ ಕೆಲಸಗಳು ಆಗುತ್ತಿಲ್ಲವೆಂದಾದರೇ ಇದೇ ನಿಂಬೆಹಣ್ಣಿಗೆ ಆ ಕೆಲಸಗಳು ಯಶಸ್ವಿಯಾಗಿ ಆಗುವಂತೆ ಮಾಡುತ್ತದೆ.

ನಿಮ್ಮ ಶತೃಗಳಿಗೆ ಸರಿಯಾಗಿ ಬುದ್ಧಿಕಲಿಸುವಂತಹ ತಾಕತ್ತು ಈ ನಿಂಬೆಹಣ್ಣಿಗೆ ಇದೆ. ಕೆಲವು ವಿಧಿವಿಧಾನಗಳನ್ನು ಅನುಸರಿಸಿದರೇ ಮಾತ್ರ ಈ ನಿಂಬೆಹಣ್ಣಿನ ಪವಾಡ ಏನು ಎಂದು ತಿಳಿಯೋದು.
ಸಾಮಾನ್ಯವಾಗಿ ಶಕ್ತಿದೇವತೆಯನ್ನು ಪೂಜಿಸುವಾಗ ಕುಂಬಳಕಾಯಿಯನ್ನು ಹೊಡೆಯುತ್ತಾರೆ ಮತ್ತು ನಿಂಬೆಹಣ್ಣಿನ ದೀಪವನ್ನು ಹಚ್ಚುತ್ತಾರೆ. ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ತಂತ್ರಕಾರ್ಯ ಪೂಜೆಗಳಲ್ಲಿ ತಪ್ಪದೇ ನಿಂಬೆಹಣ್ಣನ್ನ ಬಳಸುತ್ತಾರೆ.

ಇದು ಹಿಂದಿನಿಂದ ಬಂದ ಪದ್ಧತಿಯಾಗಿದೆ. ಈಗಲೂ ಮುಂದುವರೆದುಕೊಂಡು ಹೋಗುತ್ತಿದೆ. ನಿಮ್ಮ ಎಲ್ಲಾ ಅನೇಕ ಸಮಸ್ಯೆಗಳು ಮತ್ತು ಕಂಟಕಗಳನ್ನು ನಿವಾರಣೆ ಮಾಡಲು ನಿಂಬೆಹಣ್ಣಿನ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಕರಗಿ ಹೋಗಿ ಸುಖ, ಸಂತೋಷ ನೆಲೆಸುತ್ತದೆ. ನಿಮ್ಮ ಕಷ್ಟಗಳ ನಿವಾರಣೆಯ ಮಾಡಲು ಕೆಲವು ಸರಳ ನಿಂಬೆಹಣ್ಣಿನ ಪರಿಹಾರವನ್ನು ಮಾಡಿಕೊಳ್ಳಿ ಅದನ್ನು ಹೇಗೆ ಮಾಡಬೇಕೆಂದರೆ
ಮೊದಲು ಹಳದಿ ಬಣ್ಣದ ನಿಂಬೆಹಣ್ಣನ್ನು ತೆಗೆದುಕೊಳ್ಳಿ

ಈ ಹಣ್ಣಿನ ಮೇಲೆ ಯಾವುದೇ ಚಿಕ್ಕ ಕಲೆಯೂ ಕೂಡ ಇರಬಾರದು. ಫ್ರೆಶ್ ಆಗಿರುವ ಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಬಟ್ಟೆಯಿಂದ ಹೊರೆಸೆ ಇಟ್ಟುಕೊಳ್ಳಿ ನಂತರ ನಾಲ್ಕು ಲವಂಗವನ್ನು ತೆಗೆದುಕೊಳ್ಳಿ ದೇವರ ಮನೆಗೆ ಹೋಗಿ ನಿಂತುಕೊಂಡು ದೇವರನ್ನು ಪ್ರಾರ್ಥಿಸಿ ನಿಮ್ಮ ಕಷ್ಟಗಳನ್ನು ದೇವರ ಮುಂದೆ ಹೇಳಿಕೊಳ್ಳಿ, ನೀವು ಅಂದುಕೊಂಡಂತಹ ಕೆಲಸ ಸರಾಗವಾಗಿ ನಡೆಯಲಿ ಎಂದು ಕೇಳಿಕೊಳ್ಳಿ. ಈ ಉಪಾಯವನ್ನು ಮಾಡಲು ಯಾವ ಸಮಯ, ದಿನ ಬೇಕಾಗಿಲ್ಲ, ನಿಮಗೆ ಅನುಕೂಲಕರವಾದಾಗ ಮಾಡಿಕೊಳ್ಳಬಹುದು.

ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ದೇವರ ಮುಂದೆ ಪ್ರಾರ್ಥನೆ ಮಾಡಿ ನಂತರ ಲವಂಗವನ್ನು ನಾಲ್ಕು ಕಡೆಗಳಲ್ಲಿ ಚುಚ್ಚಬೇಕು. ಹೀಗೆ ಮಾಡುವಾಗ ಮನಸ್ಸು ಸ್ಥಿರವಾಗಿರಬೇಕು ಮತ್ತು ಅಂದುಕೊಂಡ ಕೆಲಸ ಆಗುತ್ತೆ ಎಂಬ ದೃಢಮನೋಭಾವನೆ ಇರಬೇಕು. ಹಾಗಿದ್ದಲ್ಲಿ ಮಾತ್ರ ನಿಂಬೆಹಣ್ಣಿನ ಅಪಾರ ಶಕ್ತಿ ಏನು ಎಂದು ಗೊತ್ತಾಗುತ್ತದೆ. ನಿಂಬೆಹಣ್ಣಿಗೆ ಲವಂಗವನ್ನು ಚುಚ್ಚಿದ ನಂತರ ಮನೆಯ ಹೊರಗಡೆ ತರಬೇಕಾಗುತ್ತದೆ. ಮನೆಯಿಂದ ಸ್ವಲ್ಪ ದೂರ ತೆರಲಿ ಗೋವಿನ ಸಗಣಿಯಿಂದ ಆ ನಿಂಬೆಹಣ್ಣನ್ನು ಮುಚ್ಚಿಬಿಡಿ. ಆ ಸಗಣಿಗೆ ಬಿಳಿ ಹೂ ಅಥವಾ ಯಾವುದಾರೂ ಹೂವನ್ನು ಹಾಕಿ,

ಕುಂಕುಮವನ್ನು ಹಾಕಿ ನನಗೆ ಒಳ್ಳೆಯದು ಆಗಲಿ ಎಂದು ಹೇಳಿ ಹಿಂದಕ್ಕೆ ತಿರುಗಿ ನೋಡದೇ ಮನೆಗೆ ಬಂದುಬಿಡಿ. ಆಗಲೇ ನಿಜವಾದ ಶಕ್ತಿ ಶುರು ಮಾಡುತ್ತದೆ. ಆಗಲೇ ನೀವು ಅಂದುಕೊಂಡಂತೆ ನಾಲ್ಕು ದಿಕ್ಕುಗಳಿಂದ ಶುಭ ಸುದ್ಧಿಗಳು ಬರುತ್ತದೆ. ಇಷ್ಟದಿಂದ ಅನುಭವಿಸಿದ್ದ ಕಷ್ಟಗಳು ಹೋಗಿ ಆರಾಮಾಗಿ ಇರಬಹುದು. ಎಷ್ಟೇ ಕಷ್ಟಪಟ್ಟರೂ ಕೆಲವು ಸಲ ಕೆಲಸ ಕಾರ್ಯಗಳು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ಈ ನಿಂಬೆಹಣ್ಣಿನ ಉಪಾಯವನ್ನು ಮಾಡಿಕೊಳ್ಳಬಹುದು. ಯಾವುದಾದರೂ ಶನಿವಾರ ಹನುಮಾನ್ ದೇವಸ್ಥಾನಕ್ಕೆ ಒಂದು ನಿಂಬೆಹಣ್ಣು ಮತ್ತು ನಾಲ್ಕು ಲವಂಗವನ್ನು ತೆಗೆದುಕೊಂಡು ಹೋಗಿ ನಿಂಬೆಹಣ್ಣನ್ನು ಎರಡು ಹೋಳು ಮಾಡಿ

ಈ ನಾಲ್ಕು ನಿಂಬೆಹಣ್ಣಿಗೆ ಚುಚ್ಚಿ ಹನುಮಾನ್ ದೇವರ ಮುಂದೆ ಇಡಬೇಕು. ನಂತರ ಸುಂದರ ಕಾಂಡ ಮತ್ತು ಹನುಮಾನ್ ಚಾಲೀಸಾವನ್ನು ಪಠಣೆ ಮಾಡಿ. ನಂತರ ಹನುಮಂತ ದೇವರನ್ನು ಪ್ರಾರ್ಥನೆ ಮಾಡಿರಿ. ನಂತರ ಲವಂಗ ಮತ್ತು ನಿಂಬೆಹಣ್ಣನ್ನು ವಾಪಸ್ಸು ಪಡೆದುಕೊಳ್ಳಿ. ದಿನಪೂರ್ತಿ ನಿಂಬೆಹಣ್ಣು ನಿಮ್ಮ ಜೊತೆ ಇರಲಿ, ಭಾನುವಾರ ಇದನ್ನು ಮರದ ಕೆಳಗಡೆ ಹಾಕಿ ಅಥವಾ ಹರಿಯುವ ನೀರಿಗೆ ಬಿಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಅರ್ಧಕ್ಕೆ ನಿಂತ ಕಾರ್ಯಗಳು ಬಹಳ ಬೇಗ ನಡೆಯುತ್ತದೆ

ಮತ್ತು ಯಶಸ್ಸು ಕೂಡ ಆಗುತ್ತದೆ. ಕೇವಲ ನಿಂಬೆಹಣ್ಣು ಮಾತ್ರವಲ್ಲ ನಿಂಬೆಹಣ್ಣಿನ ಸಿಪ್ಪೆಯಲ್ಲೂ ಅಪಾರವಾದ ಶಕ್ತಿಯಿದೆ. ಇದೇ ನಿಂಬೆಹಣ್ಣಿನ ಸಿಪ್ಪೆಯಲ್ಲಿ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನ ನಿವಾರಿಸುವಲ್ಲಿ ಅಪಾರವಾದ ಶಕ್ತಿ ಇದೆ. ವೈದಿಕ ಜ್ಯೋತಿಷ್ಯದಲ್ಲಿ ಶುಕ್ರ ಮತ್ತು ಚಂದ್ರನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ನಿಂಬೆಹುಳಿ ಶುಕ್ರನಿಗೆ ಸಂಬಂಧಿಸಿದೆ ಮತ್ತು ನೀರು ಚಂದ್ರನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ನಿಂಬೆಯ ಈ ಫಲಗಳು ಸಮಸ್ಯೆಗಳನ್ನು ತೆಗೆದು ಹಾಕಿ ಜಾತಕದಲ್ಲಿ ಶುಕ್ರ ಮತ್ತು ಚಂದ್ರನ ಸ್ಥಾನವನ್ನು ಬಲಪಡಿಸುತ್ತದೆ. ಆದ್ದರಿಂದ ನಿಮಗೆ ಸಮಯ ಸಿಕ್ಕಾಗ ಈ ಸರಳ ಹಾಗೂ ಸುಲಭವಾದ ಉಪಾಯವನ್ನು ಒಂದು ಸಲ ಪ್ರಯತ್ನ ಮಾಡಿರಿ. ನಿಮ್ಮ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತದೆ.

Leave A Reply

Your email address will not be published.