ನಿನಗೆ ನೀನೇ ದಾರಿದೀಪ

0

ನಾವು ಈ ಲೇಖನದಲ್ಲಿ ನಿನಗೆ ನೀನೇ ದಾರಿ ದೀಪ ಎಂಬ ವಿಷಯದ ಬಗ್ಗೆ ತಿಳಿಯೋಣ . ದುಃಖವನ್ನು ಅನುಭವಿಸುವವರು ಮುಂದೊಂದು ದಿನ ಸುಖವಾಗಿ ಇರಬಹುದು . ದುಃಖವನ್ನು ಕೊಡುವವನು ಎಂದಿಗೂ ಸುಖವಾಗಿರಲು ಸಾಧ್ಯವಿಲ್ಲ ….!

ಯಾರೋ ಒಬ್ಬ ವ್ಯಕ್ತಿಯನ್ನು ಸಮಯಕ್ಕೆ ತಕ್ಕಂತೆ ನಂಬಿಸಿ ಮೋಸ ಮಾಡುತ್ತಾರೋ, ಅಂತವರಿಗೆ ಆ ಸಮಯವೇ ಒಂದು ದಿನ ತಕ್ಕ ಪಾಠ ಕಲಿಸುತ್ತದೆ .

ಕನ್ನಡಿ ಸ್ವಚ್ಛವಾಗಿ ಇದ್ದಲ್ಲಿ ಪ್ರತಿಬಿಂಬ ಸುಂದರವಾಗಿ ಕಾಣುವಂತೆ , ಮನಸ್ಸು ಸ್ವಚ್ಛವಾಗಿ ಇದ್ದಲ್ಲಿ ಜಗತ್ತು ಸುಂದರವಾಗಿ ಕಾಣುತ್ತದೆ .

ನಾವು ಯಾರ ಬದುಕಿಗೂ ಅನಿವಾರ್ಯವಲ್ಲ , ಎಂಬುದು ಅರಿವಾದಾಗಲೇ , ನಮಗೂ ಒಂದು ಬದುಕಿದೆ ಎಂದು ಅರಿವಾಗುವುದು …

ಪ್ರಕೃತಿ ಮಾನವರಿಗೆ ತಿಳಿಸಿದ ಅತೀ ಸುಂದರವಾದ ಸಂದೇಶ ನೀವು ಮಾಲೀಕರು ಅಲ್ಲ . ನೀವು ಈ ಜಗತ್ತಿಗೆ ಬಂದ ಅತಿಥಿಗಳು ಮಾತ್ರ …

ನಿಮ್ಮನ್ನು ಪ್ರೀತಿಸುವ ನೂರಾರು ಹೃದಯಗಳು ನಿಮಗೆ ಸಿಗಬಹುದು . ಆದರೆ ನೀವು ಪ್ರೀತಿಸದಿದ್ದರೂ ನಿಮ್ಮನ್ನು ಪ್ರೀತಿಸುವ ಹೃದಯ ಒಂದಿದ್ದರೆ ಅದು ತಾಯಿ ಮಾತ್ರ…

ಗೆಳೆಯರು ಕಡಿಮೆ ಇದ್ದರೂ ಪರವಾಗಿಲ್ಲ . ಆದರೆ ಒಳ್ಳೆಯ ಗುಣ ಇರುವ ಸ್ನೇಹಿತರು ಇರುವುದು ಮುಖ್ಯ . ಹಣದ ಸಹಾಯ ಮಾಡದಿದ್ದರೂ , ನೋವಿನಲ್ಲಿ ಜೊತೆಗೆ ನಿಲ್ಲುವ ಒಬ್ಬ ಗೆಳೆಯ ಅಥವಾ ಗೆಳತಿ ಇದ್ದರೂ ಸಾಕು.

ಸಂಬಂಧಗಳ ನಡುವೆ ಕ್ಷಮೆ ಹಾಗೂ ಧನ್ಯವಾದಗಳು ಇರುವುದಿಲ್ಲವೆಂದು ಹಲವರು ಹೇಳುತ್ತಾರೆ. ಆದರೆ ಈ ಎರಡೇ ಪದಗಳು ಅಂತ್ಯ ಗೊಳ್ಳಬಹುದಾದ ಎಷ್ಟೋ ಸಂಬಂಧಗಳನ್ನು ಉಳಿಸಿರುತ್ತದೆ .

ಜನ ನಿಮ್ಮ ಸ್ಥಾನಮಾನವನ್ನು ನೋಡಿ, ನಿಮ್ಮ ಬಗೆಗಿನ ಅಭಿಪ್ರಾಯವನ್ನು ಬದಲಿಸುತ್ತಾರೆ .
ನೀವು ಒಳ್ಳೆಯ ಸ್ಥಾನದಲ್ಲಿದ್ದರೆ ನಿಮ್ಮ ತಪ್ಪುಗಳೆಲ್ಲವನ್ನು ಮನ್ನಿಸುತ್ತಾರೆ.

ಇಲ್ಲದಿದ್ದರೆ ಅವರೇ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ . ಹೀಗಾಗಿ ಜನರ ಅಭಿಪ್ರಾಯದ ಬಗ್ಗೆ ಬಹಳ ಮಹತ್ವ ಕೊಡಬೇಡಿ .

ಜೀವನದ ಮಾತು ಮುಗಿದಿರಬಹುದು .ಪ್ರೀತಿ ಸಿಗದಿರಬಹುದು . ಸ್ನೇಹ ಕೈ ಕೊಟ್ಟಿರಬಹುದು . ನಂಬಿಕೆ ಮುರಿದಿರಬಹುದು . ಸಂಬಂಧಗಳು ಕಡೆಗಣಿಸಬಹುದು ಆದರೆ ನೆನಪಿರಲಿ ತಾಳ್ಮೆ ಒಂದಿದ್ದರೆ ಜೀವನ ನಿಲ್ಲದು ಸಾಗುತ್ತಲೇ ಇರುತ್ತದೆ .

ಸುಂದರವಾದ ನಾಳೆ ಬರುವುದೇ ಇಲ್ಲ .ಅದನ್ನು ನೋಡಿದವರು ಇಲ್ಲ. ಹೀಗಾಗಿ ಕಾಣದ ನಾಳೆಗಾಗಿ ಇಂದಿನ ಅಮೂಲ್ಯ ಸಮಯವನ್ನು ಹಾಳು ಮಾಡಬಾರದು. ಈ ಕ್ಷಣವಷ್ಟೇ ನಿಮ್ಮದು .

ಯಾರಾದರೂ ನಿಮ್ಮಲ್ಲಿ ಕೋಪ ಬರುವಂತೆ ಅಥವಾ ಮೂಡು ಕೆಡಿಸಿಕೊಳ್ಳುವಂತೆ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ. ನಕಾರಾತ್ಮಕ ವ್ಯಕ್ತಿಗಳನ್ನು ಖುಷಿಪಡಿಸಲು ನಿಮ್ಮ ಉದ್ದೇಶವಾಗಿರಬಾರದು .

ಜೀವನದಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲವೂ ನಿಮ್ಮ ಚಿಂತೆಯನ್ನು ಅವಲಂಬಿಸಿದೆ .ಶಾಲೆಯ ಗಂಟೆ ಬೆಳಗ್ಗೆ ಎಂಟಕ್ಕೆ ಕರ್ಕಶವಾಗಿ ಕೇಳಿಸಿದರೆ , ಸಂಜೆ ನಾಲ್ಕು ಗಂಟೆಗೆ ಇಂಪಾಗಿ ಕೇಳಿಸುತ್ತದೆ .ನೀವು ಹೇಗೆ ಸ್ವೀಕರಿಸುತ್ತೀರಿ ಎಂಬುದನ್ನು ಎಲ್ಲವೂ ಅವಲಂಬಿಸಿರುತ್ತದೆ .

ಚರ್ಮದ ಮೇಲಿರುವ ಬಿಳಿ ಬಣ್ಣವೇ ಸೌಂದರ್ಯ ವಲ್ಲ . ಎದೆಯೊಳಗೆ ಇರುವ ಪ್ರೀತಿ , ಕರುಣೆ , ನಂಬಿಕೆಯೇ ನಿಜವಾದ ಸೌಂದರ್ಯ .

ಹರಸುವ ಹಿರಿಯರು, ಹಾರೈಸುವ ಆತ್ಮೀಯರು, ಪ್ರೀತಿಸುವ ಗೆಳೆಯರು, ಇದ್ದರೆ ಸಾಕು… ಅರಸನಾಗೋ ಅಗತ್ಯವೇ ಇಲ್ಲ…!! ನಾವು ಒಳ್ಳೆಯವರಾಗಿ ಇರಬೇಕು ನಿಜ. ಆದರೆ ಮುಗ್ಧರಾಗಿರಬಾರದು .
ಜನ ನಮ್ಮನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ .

Leave A Reply

Your email address will not be published.