ನೀವು ಏನನ್ನು ಯೋಚಿಸುತ್ತೀರೋ ಏನನ್ನು ಫೀಲ್ ಮಾಡುತ್ತಿರೋ ಅದನ್ನೇ ನೀವು ಆಕರ್ಷಿಸುತ್ತೀರ.

ನೀವು ಏನನ್ನು ಯೋಚಿಸುತ್ತೀರೋ ಏನನ್ನು ಫೀಲ್ ಮಾಡುತ್ತಿರೋ ಅದನ್ನೇ ನೀವು ಆಕರ್ಷಿಸುತ್ತೀರ. ನಿಮ್ಮ ಕಡೆ ಸೆಳೆಯುತ್ತೀರ. ನಿಮ್ಮಿಂದ ಎಷ್ಟಾಗುತ್ತೋ ಅಷ್ಟು ಧನಾತ್ಮಕವಾಗಿ ಯೋಚನೆ ಮಾಡಲು ಪ್ರಯತ್ನಿಸಿ. ಒಳ್ಳೆಯ ಫೀಲ್ ಮಾಡೋದಕ್ಕೆ ಪ್ರಯತ್ನಿಸಿ. ಏಕೆಂದರೆ ನೀವು ಏನನ್ನು ಯೋಚನೆ ಮಾಡುತ್ತೀರೋ, ಹೇಗೆ ಯೋಚನೆ ಮಾಡುತ್ತಿರೋ, ಹೇಗೆ ಫೀಲ್ ಮಾಡುತ್ತಿರೋ ಅದೇ ರೀತಿ ನೀವು ಆಗುವಿರಿ. ಅದನ್ನೇ ನೀವು ಕಾರ್ಯರೂಪಕ್ಕೆ ತರುತ್ತೀರಿ. ನಿಮ್ಮ ಜೀವನ ಅದೇ ರೀತಿ ಆಗುತ್ತಾ ಹೋಗುವುದು.

ನಿಮಗೆ ನಿಮ್ಮ ಜೀವನದಲ್ಲಿ ಧನಾತ್ಮಕ ಯೋಚನೆ ಬೇಕೆಂದರೆ ನೀವು ಧನಾತ್ಮಕ ಯೋಚನೆಯನ್ನೇ ಮಾಡಬೇಕು. ನೀವು ನಕಾರಾತ್ಮಕ ಯೋಚನೆ ಮಾಡಿ ಸಕಾರಾತ್ಮಕ ಫಲಿತಾಂಶ ಪಡೆಯುವ ಆಸೆ ಬಿಟ್ಟುಬಿಡಿ. ಏಕೆಂದರೆ ನೀವು ನಕಾರಾತ್ಮಕ ಯೋಚನೆ ಮಾಡಿ ಫಲಿತಾಂಶ ಒಳ್ಳೆಯ ತರಲು ಸಾಧ್ಯವೇ ಇಲ್ಲ. ನೀವು ಸೇಬು ಬೀಜ ಬಿತ್ತಿ, ಕಿತ್ತಲೆ ಫಲ ಪಡೆಯಲು ಸಾಧ್ಯವಿಲ್ಲ.

ನಿಮಗೆ ಕಿತ್ತಲೆ ಬೇಕೆಂದರೆ ಕಿತ್ತಲೆ ಬೀಜವನ್ನೇ ಬಿತ್ತಿ. ಇದೇ ರೀತಿ ನಿಮಗೆ ಫಲಿತಾಂಶ ಧನಾತ್ಮಕವಾಗಿರಬೇಕೆಂದರೆ, ನಿಮ್ಮ ಯೋಚನೆ ಸಹ ಧನಾತ್ಮಕವಾಗಿರಬೇಕು. ಮೊದಲ ತತ್ವ, ನೀವು ಹೇಗೆ ಯೋಚಿಸುತ್ತೀರೋ ಹಾಗೆ ಆಗುತ್ತೀರಾ. ನೀವು ಬೇರೆಯವರಿಗೆ ಏನು ಮಾಡುವಿರೋ ಅದೇ ನಿಮಗೂ ಸಿಗುವುದು. ಬೇರೆಯವರನ್ನು ಜಡ್ಜ್ ಮಾಡಲು ಹೋಗಬೇಡಿ. ಬದಲಿಗೆ ಸಹಾಯ ಮಾಡಿ. ನಿಮಗೂ ಅದೇ ಮರಳಿ ಸಿಗುವುದು. ಮನಸ್ಸಿಗೆ ಆನಂದ ಸಿಗುವುದು. ಇನ್ನೂ ಒಳ್ಳೆ ಮನಸ್ಸಿನಿಂದ ನಿಮ್ಮ ಜೀವನವನ್ನು ಆನಂದಿಸಬಹುದು.

ಈ ರೀತಿ ನಿಮ್ಮ ಜೀವನ ಉತ್ತಮಗೊಳ್ಳುತ್ತಾ ಹೋಗುವುದು. ಯಾರ ಬಗೆಗಾದರೂ ಕೆಟ್ಟದ್ದು ಯೋಚಿಸಿದರೆ, ನಿಮಗೂ ಕೆಟ್ಟದ್ದಾಗುವುದು. ನಿಮಗೆ ಬೇರೆಯವರ ಮೇಲೆ ದ್ವೇಷ, ಅಸೂಯೆ ಇದ್ದರೆ, ನಿಮ್ಮೊಳಗೆಲ್ಲ ಕೆಟ್ಟ ಭಾವವೇ ತುಂಬಿದೆ. ನಿಮ್ಮ ಮನಸ್ಸು ಕೆಟ್ಟದ್ದಾಗಿದೆ, ನಿಮಗೂ ಕೆಟ್ಟದ್ದೇ ಆಗುವುದು. ಎರಡನೆಯ ತತ್ವ, ಬೇರೆಯವರಿಗೆ ನೀವು ಏನು ಮಾಡುವಿರೋ,

ಅದೇ ನಿಮಗೂ ಸಿಗುವುದು. ನೀವು ಯಾವುದರ ಬಗೆಗೆ ಫೋಕಸ್ ಮಾಡುವಿರೋ, ಅದೇ ಹೆಚ್ಚು ಆಗುವುದು. ಹರಡುವುದು. ಇನ್ನೂ ಹೆಚ್ಚಾಗುತ್ತಾ ಹೋಗುವುದು. ನೀವು ನಿಮ್ಮ ಜೀವನದಲ್ಲಿ ಏನನ್ನು ಇಚ್ಚಿಸುವಿರೋ, ಅದರ ಬಗೆಗೇನೆ ಗಮನ ಕೇಂದ್ರೀಕರಿಸಿ. ಅದರ ಬದಲು ನೀವು ನಿಮ್ಮ ಜೀವನದಲ್ಲಿ ಏನು ಆಗಬಾರದು ಎಂದುಕೊಂಡಿದ್ದಿರೋ, ಅದರ ಬಗೆಗೆ ಗಮನ ಕೇಂದ್ರೀಕರಿಸಬೇಡಿ. ಇದರಿಂದ ನೀವು ಏನು ಆಗಬಾರದು ಎಂದುಕೊಂಡಿದ್ದೀರೋ,

ಅದು ನಿಮ್ಮ ಜೀವನದಲ್ಲಿ ತನ್ನಿಂದ ತಾನೇ ಮಾಯವಾಗುವುದು. ಯಾವ ರೀತಿ ಪೇಪರ್ ಮೇಲೆ ಭೂತ ಕನ್ನಡಿಯಿಂದ ಸೂರ್ಯನ ಬೆಳಕು ಬಿದ್ದರೆ, ಬೆಂಕಿ ಉತ್ಪತ್ತಿಯಾಗುವುದು, ಅದೇ ರೀತಿ ಒಂದೆಡೆ ಗಮನಹರಿಸುವುದರಿಂದ, ಅಲ್ಲಿ ಬಹಳ ಪರಿಣಾಮ ಬೀರುವುದು. ಎಲ್ಲಿ ನಿಮ್ಮ ಗಮನವಿದೆಯೋ, ಅಲ್ಲೇ ನಿಮ್ಮ ಧ್ಯಾನ, ಅಲ್ಲೇ ನಿಮ್ಮ ಕಾನ್ಸಂಟ್ರೇಶನ್, ಅದೇ ರೀತಿ ನೀವು ಆಕ್ಷನ್ ತೆಗೆದುಕೊಳ್ಳುತ್ತೀರ. ಅದೇ ರೀತಿ ನಿಮಗೆ ಫಲಿತಾಂಶ ಸಿಗುವುದು.

ನೀವು ಫೋಕಸ್ ಯಾವುದರ ಬಗೆಗೆ ಮಾಡುವಿರೋ, ಅದೇ ಹೆಚ್ಚಿಗೆ ಆಗುವುದು. ಅದು ದುಡ್ಡಾಗಿರಬಹುದು, ಜನರೊಂದಿಗೆ ಸಂಬಂಧ ವಾಗಿರಬಹುದು ಅಥವಾ ಬ್ಯುಸಿನೆಸ್ ಲಾಭ ಇರಬಹುದು. ಮೂರನೆಯ ತತ್ವ, ನೀವು ಯಾವುದರ ಮೇಲೆ ಫೋಕಸ್ ಮಾಡುವಿರೋ ಅದೇ ಹೆಚ್ಚಾಗುವುದು. ನಿಮ್ಮಲ್ಲಿ ಎಸ್ಟಿದೆಯೋ ಅದರಲ್ಲಿ ಸ್ವಲ್ಪ ಬೇರೆಯವರಿಗೆ ಕೊಡಿ.

ಮುಷ್ಟಿ ಮಾಡಿದ ಕೈಯಿಂದ ಬಿಡಲು ಆಗದು, ಕೊಡಲು ಆಗದು. ನಾಲ್ಕನೆಯ ತತ್ವ, ನಿಮ್ಮ ಬಳಿ ಏನಿದೆಯೋ ಅದರಲ್ಲಿ ಸ್ವಲ್ಪ ಬೇರೆಯವರಿಗೆ ಕೊಡಿ. ಕಾಂಟ್ರಿಬ್ಯುಟ್ ಮಾಡಿ. ನಿಮ್ಮ ಬಳಿ ಇರುವುದರಿಂದ ಖುಷಿಯಾಗಿದ್ದರೆ, ಅದಕ್ಕೆ ಧನ್ಯವಾದ ಹೇಳಿದರೆ, ಇನ್ನೂ ಹೆಚ್ಚು ನಿಮ್ಮದಾಗುವುದು. ಧನ್ಯತಾಭಾವದಿಂದ ನಿಮಗೆ ಯಾವಾಗಲೂ ಇನ್ನೂ ಹೆಚ್ಚು ಸಿಗುವುದು.

ಜೀವನದಲ್ಲಿ ಎಷ್ಟು ಮಂದಿ ಸಕ್ಸಸ್ ಆಗಿದ್ದಾರೋ, ಅವರೆಲ್ಲರಲ್ಲೂ ಇದು ಸಾಮಾನ್ಯವಾಗಿದೆ. ಅವರೆಲ್ಲರೂ ತಮ್ಮ ಬಳಿ ಇರುವುದಕ್ಕೆ, ಧನ್ಯತಾಭಾವದಿಂದ ಇರುತ್ತಾರೆ. ಐದನೆಯ ತತ್ವ, ನಮ್ಮಲ್ಲಿ ಎಷ್ಟಿದೆಯೋ ಅದಕ್ಕೆ ಧನ್ಯವಾದ ಹೇಳಿ. ಇದೇ ಆ ಐದು ತತ್ವಗಳು. ಈ ಐದನ್ನು ನಿಮ್ಮ ಜೀವನದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡರೆ, ಇದರಲ್ಲಿರೋ ಅದ್ಭುತ ಶಕ್ತಿ ನಿಮ್ಮ ಜೀವನಕ್ಕೊಂದು ಹೊಸ ಡೈರೆಕ್ಷನ್ ಕೊಡಬಹುದು.

Leave a Comment