ಪಾರಿವಾಳ ಮನೆಯಲ್ಲಿ ಮೊಟ್ಟೆ ಇಟ್ಟರೆ 1 ತಿಂಗಳಲ್ಲಿ ಈಘಟನೆ ನಡೆಯುತ್ತೆ

0

ನಾವು ಈ ಲೇಖನದಲ್ಲಿ ಪಾರಿವಾಳ ಮನೆಯಲ್ಲಿ ಮೊಟ್ಟೆ ಇಟ್ಟರೆ, ಒಂದು ತಿಂಗಳಲ್ಲಿ ಯಾವ ಘಟನೆ ನಡೆಯುತ್ತದೆ. ಎಂಬುದರ ಬಗ್ಗೆ ತಿಳಿಯೋಣ . ಪಾರಿವಾಳ ಮನೆಯಲ್ಲಿ ಮೊಟ್ಟೆ ಇಟ್ಟರೆ , ಈ ಘಟನೆ ಮೂರು ತಿಂಗಳಲ್ಲಿ ಮನೆಯಲ್ಲಿ ನಡೆಯುತ್ತದೆ. ಪಾರಿವಾಳಗಳು ಇಲ್ಲದ ಸ್ಥಳ ಎಲ್ಲಿಯೂ ಇಲ್ಲ ಎಂದು ಹೇಳಬಹುದು . ಪಾರಿವಾಳ ಹಲವಾರು ವರ್ಷಗಳಿಂದ ಜನಜೀವನದ ಅಂಗವಾಗಿದೆ ಎಂದು ಹೇಳಬಹುದು . ಹಿಂದಿನ ಕಾಲದಲ್ಲಿ ಪಾರಿವಾಳ ಸಂದೇಶ ಕಳಿಸಲು ಬಳಕೆ ಮಾಡುತ್ತಿದ್ದರು ,

ಎಂಬ ವಿಷಯ ಎಲ್ಲರಿಗೂ ತಿಳಿದೇ ಇರುತ್ತದೆ . ಆದರೆ ಜ್ಯೋತಿಷ್ಯದ ದೃಷ್ಟಿಯಿಂದ ನೋಡಿದಾಗ ಪಾರಿವಾಳಕ್ಕೂ , ಮನುಷ್ಯರಿಗೂ ಅಂತಹ ಶುಭ ಶಕುನ ಸೂಚನೆ ಇಲ್ಲ ಎಂದು ಹೇಳಬಹುದು . ಪಾರಿವಾಳಗಳು ಮನೆಯ ಮಹಡಿಯ ಮೇಲೆ , ಕಿಟಕಿಯಲ್ಲಿ , ಹೊರಾಂಡದಲ್ಲಿ ಮತ್ತು ಒಮ್ಮೊಮ್ಮೆ ಮನೆ ಒಳಗೆ ಕೂಡ ನುಗ್ಗುವುದು ಉಂಟು . ಮನೆ ಒಳಗಡೆ ಬಂದು ಮೊಟ್ಟೆಗಳನ್ನು ಕೂಡ ಇಡುತ್ತವೆ . ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಬಂದು ಗುಟ್ರುಗೂ ಗುಟ್ರುಗೂ ಅಂತ ಶಬ್ಧ ಮಾಡುತ್ತಿದ್ದರೆ ,

ಮನೆಯ ಮೇಲೆ ಮತ್ತು ಮನೆಯ ಸದಸ್ಯರ ಮೇಲೆ ಯಾವ ಪರಿಣಾಮ ಬೀರುತ್ತದೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ .ಪಾರಿವಾಳವು ಮನೆಯಲ್ಲಿ ಮೊಟ್ಟೆ ಇಟ್ಟರೆ , ಅದೃಷ್ಟ ಹೆಚ್ಚಾಗುತ್ತದೆಯೇ ಅಥವಾ ಮನೆಗೆ ಬಡತನವನ್ನು ತರುತ್ತದೆಯೇ , ಮನೆಯಲ್ಲಿ ಪಾರಿವಾಳಗಳು ದಿನವಿಡೀ ಕೂತು ಗುಟ್ರುಗೂ ಅಂತ ಶಬ್ದ ಮಾಡುತ್ತಿದ್ದರೆ , ಅದು ಮನೆಗೆ ಕೆಡಕನ್ನು ತರುತ್ತದೆಯೇ , ಅಥವಾ ಭಾಗ್ಯವನ್ನು ಹೆಚ್ಚಿಸುತ್ತದೆಯೇ ಅನ್ನೋದನ್ನ ಒಂದು ಕಥೆಯ ಮೂಲಕ ತಿಳಿಸಲಾಗುತ್ತದೆ .

ಒಂದು ಊರಿನಲ್ಲಿ ಮೋಹನ ಎನ್ನುವ ವ್ಯಕ್ತಿ ತನ್ನ ಹೆಂಡತಿಯ ಜೊತೆ ಒಂದು ಮನೆಯಲ್ಲಿ ವಾಸ ಮಾಡುತ್ತಿದ್ದ . ಆ ಮನೆಯಲ್ಲಿಯೇ ಒಂದು ಪಾರಿವಾಳದ ಜೋಡಿ ಕೂಡ ಇತ್ತು . ಮೋಹನನಿಗೆ ಪಾರಿವಾಳಗಳು ಅಂದರೆ ತುಂಬಾ ಇಷ್ಟ . ಆದರೆ ಮೋಹನನ ಹೆಂಡತಿಗೆ ಪಾರಿವಾಳಗಳನ್ನು ಕಂಡರೆ ಆಗುತ್ತಿರಲಿಲ್ಲ . ಮೋಹನ ಬೆಳಗ್ಗೆ ದಿನ ಎದ್ದ ತಕ್ಷಣ ಪಾರಿವಾಳಗಳಿಗೆ ಕಾಳು ಮತ್ತು ನೀರು ಹಾಕುತ್ತಿದ್ದ . ಈ ರೀತಿ ಮಾಡುವುದು ಅವನ ಹೆಂಡತಿಗೆ ಇಷ್ಟವಾಗುತ್ತಿರಲಿಲ್ಲ .

ಆತನ ಹೆಂಡತಿಯ ನಡುವೆ ಈ ವಿಷಯಕ್ಕಾಗಿ ಪ್ರತಿದಿನ ಜಗಳ ನಡೆಯುತ್ತಿತ್ತು . ಅವನ ಹೆಂಡತಿ ಕಾಳು ಮತ್ತು ನೀರು ಹಾಕುವುದರಲ್ಲಿ ನಿಮ್ಮ ಸಮಯವನ್ನು ಏಕೆ ಹಾಳು ಮಾಡುತ್ತಿದ್ದೀರಾ , ಎಂದು ಜಗಳ ಆಡುತ್ತಿದ್ದಳು . ಮೋಹನ ಒಂದು ದಿನ ತನ್ನ ಹೆಂಡತಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡುತ್ತಾನೆ . ಈ ಪಕ್ಷಿಗಳು ದೇವರ ಸೃಷ್ಟಿ . ಇವುಗಳನ್ನು ನಾವು ನೋಡಿಕೊಳ್ಳಬೇಕು . ಆಹಾರ ಮತ್ತು ನೀರು ಕೊಟ್ಟು , ಕಾಳಜಿ ಮಾಡಬೇಕು . ಇವು ಮನುಷ್ಯರಿಗೆ ಒಳ್ಳೆಯದಾಗಲಿ ಎಂದು ಹರಸುತ್ತವೆ .

ಆದರೆ ಅವು ಕೆಟ್ಟದಾಗಲಿ ಎಂದು ಎಂದಿಗೂ ಬಯಸುವುದಿಲ್ಲ . ಅವುಗಳ ಸೇವೆ ಮಾಡುವುದು ನಮ್ಮ ಕರ್ತವ್ಯ . ಹಾಗಾಗಿ ಅವುಗಳಿಗೆ ಆಹಾರ ಮತ್ತು ನೀರನ್ನು ಕೊಡುತ್ತೇನೆ . ಇದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಎಂದು ತನ್ನ ಹೆಂಡತಿಗೆ ಅರ್ಥ ಆಗುವ ರೀತಿ ಹೇಳುತ್ತಾನೆ . ಆದರೆ ಅವನ ಹೆಂಡತಿ ಅವನ ಮಾತನ್ನು ಕೇಳಲು ತಯಾರು ಇರುವುದಿಲ್ಲ . ಆತನ ಹೆಂಡತಿ ಪಾರಿವಾಳಗಳನ್ನು ಮನೆಯಿಂದ ಮೊದಲು ಓಡಿಸಿ ಎಂದು ಹೇಳುತ್ತಾಳೆ . ಅವಳು ತನ್ನ ಮಗನನ್ನು ತುಂಬಾ ಪ್ರೀತಿಸುತ್ತಿರುತ್ತಾಳೆ .

ಆದರೆ ಪಾರಿವಾಳ ಮತ್ತು ಮರಿಗಳನ್ನು ಕಂಡರೆ ದ್ವೇಷ ಮಾಡುತ್ತಿರುತ್ತಾಳೆ . ಮೋಹನನು ತನ್ನ ಹೆಂಡತಿಗೆ ಅರ್ಥ ಮಾಡಿಸಲು ತುಂಬಾ ಪ್ರಯತ್ನ ಮಾಡುತ್ತಾನೆ . ಆದರೆ ಅವಳು ಅರ್ಥ ಮಾಡಿಕೊಳ್ಳುವುದೇ ಇಲ್ಲ . ಮೋಹನನ ಮನೆಯಲ್ಲಿದ್ದ ಪಾರಿವಾಳಗಳು ಮೊಟ್ಟೆ ಇಡುತ್ತವೆ ..ಮೋಹನನ ಹೆಂಡತಿ ಮತ್ತೆ ಜಗಳ ಮಾಡುತ್ತಾ ಹೇಳುತ್ತಾಳೆ . ನಾನು ಮೊದಲೇ ನಿಮಗೆ ಹೇಳಿದ್ದೆ , ಇವುಗಳನ್ನು ಮನೆಯಿಂದ ಓಡಿಸಿ . ಈಗ ನೋಡಿ ಈ ಪಾರಿವಾಳಗಳು ಮೊಟ್ಟೆ ಹಾಕಿದೆ . ಮತ್ತು ಗಲೀಜು ಮಾಡುತ್ತಿವೆ ಎಂದು ಹೇಳುತ್ತಾಳೆ .

ಇದೇ ವಿಷಯಕ್ಕೆ ಜಗಳ ನಡೆಯುತ್ತಲೇ ಇರುತ್ತದೆ . ಒಂದು ದಿನ ಮೋಹನ ಕೆಲಸಕ್ಕೆ ಎಂದು ಪಟ್ಟಣಕ್ಕೆ ಹೋಗುತ್ತಾನೆ . ಹೋಗುವ ಮೊದಲು ಅವನು ಹೆಂಡತಿಗೆ ಹೇಳುತ್ತಾನೆ . ಪಾರಿವಾಳಗಳು ಮತ್ತು ಮೊಟ್ಟೆಯ ಹತ್ತಿರ ನೀನು ಹೋಗಬೇಡ . ಮರಿಗಳು ದೊಡ್ಡದಾಗಿ ಹೊರಬಂದು ಅವುಗಳ ತಂದೆ ತಾಯಿಯ ಜೊತೆ ಹೋಗುವವರೆಗೂ ನೀನು ಅವುಗಳನ್ನು ಕೆಣುಕಬೇಡ . ಇದರ ಬದಲಿಗೆ ದಿನ ಅವುಗಳಿಗೆ ಕಾಳು ಮತ್ತು ನೀರನ್ನು ಹಾಕು . ಇದರಿಂದ ನಿನಗೆ ನಿನ್ನ ಜೀವನದಲ್ಲಿ ಸುಧಾರಣೆಯಾಗಿ ಇಂದಿನ ಜನ್ಮದಲ್ಲಿ ಒಳ್ಳೆಯದು ಆಗುತ್ತದೆ

ಎಂದು ಅವಳಿಗೆ ಬುದ್ಧಿ ಹೇಳಿ , ಪಟ್ಟಣಕ್ಕೆ ಹೊರಡುತ್ತಾನೆ . ಮೋಹನ ಹೊರಟ ನಂತರ ಮೋಹನನ ಹೆಂಡತಿ ಪಾರಿವಾಳಗಳನ್ನು ಹೇಗೆ ಮನೆಯಿಂದ ಓಡಿಸುವುದು ಮತ್ತು ಮೊಟ್ಟೆಗಳನ್ನು ಹೇಗೆ ತೆಗೆಯುವುದು ಅಂತ ಯೋಚಿಸುತ್ತಿರುತ್ತಾಳೆ . ಮೋಹನನ ಚಿಕ್ಕ ಮಗನಿಗೂ ಇದು ಗೊತ್ತಾಗಿತ್ತು . ಮಗುವಿಗೆ ಪಾರಿವಾಳದ ಮೊಟ್ಟೆ ನೋಡಲು ಆಸೆ . ಅಪ್ಪ ಹೊರಗಡೆ ಹೋಗಿದ್ದಾರೆ .ಅಮ್ಮನೂ ಕೂಡ ಹೊರಗಡೆ ಹೋದರೆ ನಾನು ಪಾರಿವಾಳದ ಮೊಟ್ಟೆಯನ್ನು ನೋಡಬಹುದು ಎಂದು ಯೋಚಿಸುತ್ತಿರುತ್ತಾನೆ .

ಸ್ವಲ್ಪ ಹೊತ್ತಿನ ನಂತರ ಮೋಹನ ನ ಹೆಂಡತಿ ನೀರು ತರಲು ಹೊರಗಡೆ ಹೋದಾಗ , ಮೋಹನನ ಮಗ ಒಂದು ಏಣಿಯ ಸಹಾಯದಿಂದ , ಪಾರಿವಾಳದ ಮೊಟ್ಟೆಯನ್ನು ನೋಡಲು ಮೇಲೆ ಹತ್ತಿ , ಪಾರಿವಾಳದ ಮೊಟ್ಟೆಯನ್ನು ಮುಟ್ಟುತ್ತಾನೆ . ಜೊತೆಗೆ ಅದರ ಜೊತೆ ಆಟವಾಡಲು ಶುರು ಮಾಡುತ್ತಾನೆ . ಅಷ್ಟರಲ್ಲಿ ಅವನ ಅಮ್ಮ ಅಲ್ಲಿಗೆ ಬರುತ್ತಾಳೆ . ಮಗು ಏಣಿ ಏರಿ ಪಾರಿವಾಳದ ಮೊಟ್ಟೆಯನ್ನು ಮುಟ್ಟಿದ್ದನ್ನು ನೋಡಿ ಮಗುವಿನ ಮೇಲೆ ಕೋಪಿಸಿಕೊಂಡು, ಆ ಮಗುವನ್ನು ಹೊಡೆಯುತ್ತಾಳೆ .

ಮಗುವನ್ನು ಬೈಯುತ್ತಾ ಕೈ ಹಿಡಿದು ಎಳೆಯುತ್ತಾಳೆ . ಆಗ ಮಗುವಿನ ಕೈಯಲ್ಲಿದ್ದ ಪಾರಿವಾಳದ ಗೂಡು ಕೈಯಿಂದ ಜಾರಿ ಕೆಳಗೆ ಬೀಳುತ್ತದೆ . ಅದರಲ್ಲಿ ಇದ್ದ ಮೊಟ್ಟೆಗಳು ಒಡೆದು ಹೋಗುತ್ತವೆ . ಮಗುವಿನ ಕೈಯಲ್ಲಿ ಒಂದು ಮೊಟ್ಟೆ ಉಳಿದಿರುತ್ತದೆ . ಅದನ್ನು ಕೂಡ ಅಮ್ಮ ಕಿತ್ತುಕೊಂಡು ಕೆಳಗೆ ಬಿಸಾಡುತ್ತಾಳೆ .ಆ ಮೊಟ್ಟೆಯು ಕೂಡ ಒಡೆದು ಹೋಗುತ್ತದೆ . ಪಾರಿವಾಳಗಳು ವಾಪಸ್ ಬಂದಾಗ , ಅವುಗಳಿಗೆ ತಮ್ಮ ಗೂಡು ಮುರಿದು ಹೋಗಿರುವುದು , ಮತ್ತು ಮೊಟ್ಟೆಗಳು ಹೊಡೆದು ಹೋಗಿರುವುದನ್ನು ನೋಡಿ ತುಂಬಾ ದುಃಖ ಆಗುತ್ತದೆ .

ಮತ್ತು ಅವುಗಳು ಕಣ್ಣೀರು ಹಾಕುತ್ತವೆ . ಆಗ ಅವುಗಳಿಗೆ ಏನು ಮಾಡುವುದಕ್ಕೆ ತೋಚುವುದಿಲ್ಲ .ಅದೇ ಸಮಯಕ್ಕೆ ಮೋಹನನು ಮನೆಗೆ ಬರುತ್ತಾನೆ . ಅವನ ಮಗ ಜೋರಾಗಿ ಅಳುತ್ತಿರುತ್ತಾನೆ . ಆಗ ಅವನು ಆ ಮಗುವಿಗೆ ಯಾಕೆ ಹೇಳುತ್ತಿದ್ದೀಯಾ ಎಂದು ಕೇಳುತ್ತಾನೆ . ಮತ್ತೆ ಹೆಂಡತಿಯನ್ನು ಕೇಳುತ್ತಾನೆ . ಆಗ ಅವಳು ನಾನು ಮೊದಲೇ ಹೇಳಿದ್ದೆ ಈ ಪಾರಿವಾಳಗಳನ್ನು ಓಡಿಸಿ ಎಂದು , ಇವತ್ತು ಮಗು ಮೊಟ್ಟೆಯನ್ನು ಮುಟ್ಟಿದ್ದಾನೆ . ಅದಕ್ಕೆ ನಾನು ಅವನಿಗೆ ಹೊಡೆದೆ . ಅದಕ್ಕೆ ಹೇಳುತ್ತಿದ್ದಾನೆ ಎಂದು ಹೇಳುತ್ತಾಳೆ .

ಆಗ ಮೋಹನ ಪಾರಿವಾಳದ ಗೂಡಿನ ಹತ್ತಿರ ಹೋಗಿ ನೋಡುತ್ತಾನೆ . ಎಲ್ಲಾ ಮೊಟ್ಟೆಗಳು ಒಡೆದು ಹೋಗಿರುತ್ತವೆ . ಆಗ ಅವನು ಹೆಂಡತಿ ಹತ್ತಿರ ಹೋಗಿ ಪಾರಿವಾಳಗಳು ನಮಗೆ ಶಾಪ ಹಾಕುತ್ತವೆ . ಆ ಶಾಪಕ್ಕೆ ನಾವು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳುತ್ತಾನೆ . ಇದಾದ ಮೇಲೆ ಮೋಹನ ಮತ್ತೆ ಕೆಲಸಕ್ಕೆ ಪಟ್ಟಣಕ್ಕೆ ಹೋಗುತ್ತಾನೆ . ಆಗ ಮನೆಯಲ್ಲಿ ಮಗುವಿಗೆ ಆರೋಗ್ಯ ಕೆಡುತ್ತದೆ .ಆಗ ಅವನ ಹೆಂಡತಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯೋಚನೆ ಮಾಡುತ್ತಾಳೆ .

ನನ್ನ ಮಗು ನೆನ್ನೆ ಚೆನ್ನಾಗಿತ್ತು . ಇವತ್ತು ಯಾಕೆ ಇತರ ಆಗಿದೆ ಎಂದು ಯೋಚನೆ ಮಾಡುತ್ತಾಳೆ . ಮಗುವನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ತೋರಿಸಿದರು ಕೂಡ ಸ್ವಲ್ಪವೂ ಗುಣವಾಗುವುದಿಲ್ಲ . ಇದರಿಂದ ಅವಳು ತುಂಬಾ ದುಃಖ ಪಡುತ್ತಾ ಕಣ್ಣೀರಿಡುತ್ತಾಳೆ . ನನಗೆ ಇರುವುದು ಇದೊಂದೇ ಮಗು ಏನಾದರೂ ಆದರೆ , ಏನು ಮಾಡುವುದು ದೇವರೇ ಎಂದು ಕಣ್ಣೀರು ಹಾಕುತ್ತಾಳೆ . ಮೋಹನನ ಮಗನ ಪರಿಸ್ಥಿತಿ ತುಂಬಾ ಗಂಭೀರವಾಗುತ್ತಾ , ಹೋಗುತ್ತದೆ . ಮಗು ಬದುಕುವುದು ಕೂಡ ಕಠಿಣವಾಗುತ್ತದೆ .

ಆಗ ಅವಳು ದೇವಸ್ಥಾನಕ್ಕೆ ಹೋಗಿ ಹೇ ದೇವರೇ ನನ್ನ ಮಗುವನ್ನು ಕಾಪಾಡು ಎಂದು ಬೇಡಿಕೊಳ್ಳುತ್ತಾಳೆ . ಮೋಹನ ಆಸ್ಪತ್ರೆಗೆ ಬರುತ್ತಾನೆ . ಪಾರಿವಾಳದ ಶಾಪ ಬೇಡ ಎಂದು ನಾನು ನಿನಗೆ ಮೊದಲೇ ಹೇಳಿದ್ದೆ . ನಾವು ಈಗ ಅನುಭವಿಸುತ್ತಿರುವುದು ಅದರ ಪರಿಣಾಮವೇ ಅಂತ ಹೇಳುತ್ತಾನೆ . ನೀನು ಪಾರಿವಾಳದ ಮೊಟ್ಟೆಗಳನ್ನು ಹೊಡೆದು ಹಾಕಿದ್ದೀಯಾ , ಅವು ಕೂಡ ಚಿಕ್ಕ ಚಿಕ್ಕ ಮಕ್ಕಳ ತರಹ . ಅವುಗಳನ್ನು ಹೊಡೆದ ಪರಿಣಾಮವೇ ಇದು ಎಂದು ಹೇಳುತ್ತಾನೆ .

ನೀನು ಅವುಗಳನ್ನು ಈ ಪ್ರಪಂಚಕ್ಕೆ ಬರುವುದಕ್ಕಿಂತ ಮೊದಲೇ ಸಾಯಿಸಿದ್ದೀಯಾ . ನಮಗೆ ಈ ಸಂಕಟದ ಪರಿಸ್ಥಿತಿ ಬಂದಿದೆ . ಮೋಹನ ಹೆಂಡತಿ ನನ್ನ ಮಗುವನ್ನು ಸರಿ ಮಾಡು ಎಂದು ಹಗಲು ರಾತ್ರಿ ದೇವರನ್ನು ಕೇಳಿ ಕೊಳ್ಳುತ್ತಿರುತ್ತಾಳೆ . ಆದರೆ ಅದು ದೇವರಿಗೆ ಕೇಳಿಸುತ್ತಿರಲಿಲ್ಲ . ಆದರೆ ಅವಳು ಎಷ್ಟು ಮೊಟ್ಟೆಗಳನ್ನು ಹೊಡೆದಿದ್ದಾಳೆ . ಮತ್ತು ಪಾರಿವಾಳಗಳನ್ನು ಮನೆಯಿಂದ ಓಡಿಸಿದ್ದಳೆ ಅದು ಅವಳಿಗೆ ಮಾತ್ರ ಗೊತ್ತಿರುತ್ತದೆ . ಮಗುವಿನ ಪರಿಸ್ಥಿತಿ ತುಂಬಾ ಹದಗೆಡುತ್ತಾ ಹೋದಾಗ ,

ಮೋಹನನೂ ಕೂಡ ದೇವರ ಮೊರೆ ಹೋಗುತ್ತಾನೆ . ಪೂಜೆ ಅರ್ಚನೆಯನ್ನು ಮಾಡಿಸುತ್ತಾನೆ . ಮೋಹನನ ಕೂಗು ದೇವರಿಗೆ ಕೇಳಿಸುತ್ತದೆ . ಆಗ ಮಗು ಸ್ವಲ್ಪ ಸ್ವಲ್ಪ ಹುಷಾರಾಗುತ್ತದೆ . ಮೋಹನ ತನ್ನ ಹೆಂಡತಿಗೆ ಮತ್ತೆ ಬುದ್ಧಿವಾದ ಹೇಳುತ್ತಾನೆ . ನಾವು ಯಾವಾಗಲೂ ಯಾರ ಶಾಪವನ್ನು ತೆಗೆದುಕೊಳ್ಳಬಾರದು . ಯಾವುದೇ ಪಕ್ಷಿಗಳ ಶಾಪವನ್ನು ತೆಗೆದುಕೊಳ್ಳಬಾರದು . ಮೋಹನನ ಹೆಂಡತಿಗೆ ಬುದ್ಧಿ ಬರುತ್ತದೆ . ಆಗ ಅವಳು ಕೂಡ ಪಕ್ಷಿಗಳ ಸೇವೆ ಮಾಡಲು ಮುಂದಾಗುತ್ತಾಳೆ .

ಅವುಗಳಿಗೆ ಆಹಾರ ಮತ್ತು ನೀರನ್ನು ಕೊಡುತ್ತಾಳೆ . ನಿಮ್ಮ ಮನೆಯಲ್ಲಿ ಪಾರಿವಾಳ ಬಂದು ಗುಟ್ರುಗೂ ಅಂತ ಶಬ್ದ ಮಾಡುತ್ತಿದ್ದರೆ ಅದು ಅಶುಭ . ನೀವು ಅಲ್ಲಿ ಕುಳಿತುಕೊಳ್ಳುವುದಕ್ಕೆ ಬಿಡಬೇಡಿ . ಅವುಗಳು ಮೊಟ್ಟೆ ಇಟ್ಟಿದ್ದರೆ , ಹುಷಾರಾಗಿ ದೂರದ ಮರದ ರೆಂಬೆ ಕೊಂಬೆಗಳಿಗೆ ಅಥವಾ ಗಿಡ ಗೆಡ್ಡೆ ಸ್ಥಳದಲ್ಲಿ ಹುಷಾರಾಗಿ ಅದರ ಗೂಡನ್ನು ಮೊಟ್ಟೆ ಒಡೆಯದಂತೆ , ಸಾಗಿಸಿ . ಇದರಿಂದ ಅವುಗಳಿಗಗೂ ತೊಂದರೆಯಾಗುವುದಿಲ್ಲ . ಪಾರಿವಾಳಗಳನ್ನು ರಾಹುವಿನ ಸಂಕೇತ ಎಂದು ಹೇಳುವುದರಿಂದ ಅದರಿಂದ ನಮಗೂ ಕೂಡ ತೊಂದರೆಯಾಗುವುದಿಲ್ಲ . ಆದ್ದರಿಂದ ನಾವು ಯಾವುದೇ ಪ್ರಾಣಿ-ಪಕ್ಷಿ ಜೀವ ಜಂತುಗಳಿಗೆ ತೊಂದರೆ ಕೊಡಬಾರದು .ಮತ್ತು ಅವುಗಳಿಂದ ನಮಗೂ ತೊಂದರೆಯಾಗುವುದು ಬೇಡ ಎಂದು ಹೇಳಲಾಗಿದೆ .

Leave A Reply

Your email address will not be published.