ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ

0

ನಾವು ಈ ಲೇಖನದಲ್ಲಿ ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ . ಮತ್ತು ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳು ಏನು ಎಂದು ಈ ಲೇಖನದಲ್ಲಿ ನೋಡೋಣ . ಹೆಣ್ಣನ್ನು ನವ ದುರ್ಗೆಯ ಸ್ವರೂಪ ಎಂದು ಕರೆಯುತ್ತಾರೆ. ಹಾಗಾಗಿ ಹೆಣ್ಣನ್ನು ದೀಪಕ್ಕೆ ಹೋಲಿಕೆ ಮಾಡುತ್ತಾರೆ. ಮತ್ತು ತಾಯಿ ಲಕ್ಷ್ಮಿಯ ಸ್ವರೂಪ ಎನ್ನುತ್ತಾರೆ. ಒಂದು ಮನೆ ಅಭಿವೃದ್ಧಿ ಹೊಂದಬೇಕು ಎಂದರೆ ,

ಹೆಣ್ಣಿನ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ. ಒಂದು ಹೆಣ್ಣು ತಾಯಿಯಾಗಿ , ತಂಗಿಯಾಗಿ , ಮಡದಿಯಾಗಿ ಮನೆಗೆ ಬರುತ್ತಾಳೆ. ಹಾಗಾಗಿ ಶಾಸ್ತ್ರಾಧಾರಿತವಾಗಿ , ಬಂದಿರುವುದು ಎಲ್ಲವೂ ನಮ್ಮ ಋಣದಲ್ಲಿ ಇದೆ ಎಂದರ್ಥ . ಅನಾಚಾರದಿಂದ ಬರುವುದು ಎಲ್ಲವೂ ಶಾಪದಿಂದ ಬರುವುದು ಎಂದರ್ಥ

ಸ್ತ್ರೀ ಶಾಪ ಎಂದರೆ ಹೆಣ್ಣನ್ನು ಇಷ್ಟಪಟ್ಟು , ದೌರ್ಜನ್ಯ ಪೂರ್ವಕವಾಗಿ ಹೆಣ್ಣಿನ ಮೇಲೆ ತೊಂದರೆ ಮಾಡಿದರೆ , ಅಥವಾ ಇಷ್ಟಪಟ್ಟು ಒಂದು ಹೆಣ್ಣನ್ನು ಅರ್ಧ ದಾರಿಯಲ್ಲಿ ಕೈಬಿಡುವುದು , ಹೆಣ್ಣಿಗೆ ತೊಂದರೆ ಕೊಡುವುದು , ವಿವಾಹವಾಗಿ ಹೆಂಡತಿಯ ಮೇಲೆ ದೌರ್ಜನ್ಯ ಮಾಡುವುದು , ಇವೆಲ್ಲವೂ ಒಂದು ಹೆಣ್ಣಿನ ಶಾಪ ದೋಷಕ್ಕೆ ಗುರಿ ಆಗುವಂತೆ ಮಾಡುತ್ತದೆ

ಹೆಣ್ಣನ್ನು ಇಷ್ಟಪಟ್ಟು ಮದುವೆ ಆಗದಿದ್ದರೆ , ಅಥವಾ ತೊಂದರೆ ಕೊಟ್ಟರೆ , ಅವಳ ಕಣ್ಣೀರಿನ ಒಂದೊಂದು ಹನಿಯೂ ಶಾಪವಾಗಿ , ನಿಮಗೆ ಕಾಡಲು ಶುರುವಾಗುತ್ತದೆ . ಆದ್ದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ

ಹೆಣ್ಣಿನ ಮನಸ್ಸು ಎಷ್ಟು ನೊಂದು ಕೊಳ್ಳುತ್ತದೆ , ನರಳುತ್ತದೆ , ಅಷ್ಟು ಪರಿಣಾಮವಾಗಿ ತೊಂದರೆ ಕೊಟ್ಟ ಪುರುಷರಿಗೆ ಪರಿಣಮಿಸುತ್ತದೆ . ಹಾಗಾಗಿ ಸ್ತ್ರೀ ಶಾಪ ಮತ್ತು ಸರ್ಪ ಶಾಪ ಒಂದೇ ಮಾರ್ಗದಲ್ಲಿ ಬರುತ್ತದೆ ಎಂದು ಒಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ . ಹಾಗಾಗಿ ಎರಡು ದೋಷಗಳು ಪುರುಷರನ್ನು ನರಳುವಂತೆ ಮಾಡುತ್ತದೆ

ಆತನ ಜೀವನದಲ್ಲಿ ಏನೇ ಮಾಡಿದರು ಕೂಡ ದರಿದ್ರ ತನ ಹುಟ್ಟುತ್ತದೆ . ಮಾಡುವ ಕೆಲಸದಲ್ಲಿ ಜಯವನ್ನು ಸಾಧಿಸಲು ಆಗುವುದಿಲ್ಲ . ಹಾಗೂ ಸ್ತ್ರೀ ಶಾಪದಿಂದಾಗಿ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ . ಇದರಿಂದ ನೆಮ್ಮದಿ ಮತ್ತು ಸಂತೋಷ ಇರುವುದಿಲ್ಲ

ಇದರಿಂದ ಪಾರಾಗಬೇಕು ಎಂದರೆ , ತೊಂದರೆ ಕೊಟ್ಟ ಸ್ತ್ರೀಯರಿಗೆ ಅಥವಾ ಮೋಸ ವಂಚನೆ ಮಾಡಿದ ಸ್ತ್ರೀ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು . ಇಲ್ಲವಾದರೆ, ಆತ ಶಾಪದಿಂದಾಗಿ ದರಿದ್ರ ತನದಿಂದ ನಷ್ಟವನ್ನು ಅನುಭವಿಸಿ ಜೀವನದಲ್ಲಿ ಯಾವುದೇ ಸ್ತ್ರೀಯನ್ನು ವಿವಾಹವಾದರೂ , ನೆಮ್ಮದಿ , ಮನಃಶಾಂತಿ ಸಿಗದೇ , ಮಾನಸಿಕವಾಗಿ ನೆಮ್ಮದಿ ಮನ ಶಾಂತಿಯನ್ನು ಕಳೆದುಕೊಂಡು ಜೀವನದಲ್ಲಿ ಮೊದಲು ಚೆನ್ನಾಗಿ ಇರುವುದನ್ನು ನಾಶ ಮಾಡಿಕೊಂಡು ನರಳಾಟವನ್ನು ಅನುಭವಿಸುತ್ತಾರೆ

ಇದರಿಂದಾಗಿ ಮಾನಸಿಕವಾಗಿ ನೆಮ್ಮದಿ ಹಾಳಾಗುತ್ತದೆ . ಹಾಗೂ ಆರೋಗ್ಯ ಹಾಳಾಗುತ್ತದೆ . ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಾನೆ . ಹಣಕಾಸಿನ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ .ಇವರ ಸಹಾಯಕ್ಕೆ ಯಾರು ಬರುವುದಿಲ್ಲ . ಹಾಗಾಗಿ ಈ ರೀತಿ ಸ್ತ್ರೀ ಶಾಪದಿಂದ ಹೊರಗೆ ಬರಲು ಏನೇ ಮಾಡಿದರು , ಕೂಡ ಈ ಶಾಪದಿಂದ ಮುಕ್ತಿ ಹೊಂದುವುದಿಲ್ಲ . ಎಂದು ನಿಮ್ಮ ಮನಸ್ಸಿನಲ್ಲಿ ನಿಮ್ಮ ಕರ್ಮದ ಫಲ ನಿಮಗೆ ಅರಿವಾಗುತ್ತದೆ …

ಆ ಕರ್ಮದ ಫಲವನ್ನು ನಿವಾರಣೆ ಮಾಡಲು ಏನು ಮಾಡಬೇಕು ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ . ಹಾಗಾಗಿ ಯಾರೇ ಆಗಲಿ ಇಷ್ಟಪಟ್ಟ ಹುಡುಗಿಯನ್ನು , ವಿವಾಹವಾದ ಹೆಂಡತಿಯನ್ನು , ಹಾಗೂ ಹೆಣ್ಣಿನ ಸ್ವರೂಪದ ತಾಯಿಯನ್ನು , ಅಕ್ಕ-ತಂಗಿಯರನ್ನು , ನೋಯಿಸಬಾರದು

ಅವರನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕು. ಸ್ತ್ರೀ ಶಾಪಕ್ಕೆ ಒಳಗಾಗಬಾರದು . ಶಾಪಕ್ಕೆ ಒಮ್ಮೆ ಒಳಗಾದರೆ , ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ . ಅದರಿಂದ ಹೊರಗೆ ಬರಲಾಗದೆ ತುಂಬಾ ಪಶ್ಚಾತಾಪವನ್ನು ಪಡಬೇಕಾಗುತ್ತದೆ . ಹಾಗಾಗಿ ಹೆಣ್ಣನ್ನು ದೇವರ ರೂಪದಲ್ಲಿ ಕಾಣಬೇಕು ಈ ಎಲ್ಲಾ ಕಾರಣದಿಂದ ಹೆಣ್ಣಿಗೆ ಒಂದು ದೇವತೆಯ ಜಾಗವನ್ನು ಕೊಡಬೇಕು ಮತ್ತು ಅವಳನ್ನು ಪೂಜಿಸಬೇಕು ಎಂದು ಹೇಳಲಾಗಿದೆ .

Leave A Reply

Your email address will not be published.