ಸಿಂಹ ರಾಶಿಗೆ ಏನು ಗುಡ್ ನ್ಯೂಸ್?

0

ಸಿಂಹ ರಾಶಿಯವರಿಗೆ ಏಪ್ರಿಲ್ ನಲ್ಲಿ ಗುರು ಬಂದು ನಿಮ್ಮ ಭಾಗ್ಯದಲ್ಲಿ ಕೂತಿದ್ದಾನೆ. ರಾಹು ಅವನ ಜೊತೆಗಿದ್ದರೂ ಅಷ್ಟೊಂದು ಗಂಭೀರ ವಿಷಯವೇನಲ್ಲ. ಶನಿ 7ನೇ ಮನೆಯಲ್ಲಿ ಕೂತು ಒಳ್ಳೆಯ ದೃಷ್ಟಿಯನ್ನೇ ಬೀರುತ್ತಿದ್ದಾನೆ. ಗ್ರಹಣದಿಂದ ಸಣ್ಣಪುಟ್ಟ ಕಿರಿಕಿರಿಗಳಿದ್ದರೂ ಅವುಗಳಿಗೆ ತಡೆ ಉಂಟಾಗುತ್ತದೆ. ಅಕ್ಟೋಬರ್ ನಂತರ ನಿಮ್ಮ ಘ ಗರ್ಜನೆ ಕೇಳಿ ನಿಮ್ಮ ಶತ್ರುಗಳು ಭಯಭೀತರಾಗುತ್ತಾರೆ.

ಗ್ರಹಣವು ಅಕ್ಟೋಬರ್ 28 2023 ಶನಿವಾರದ ದಿನ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣವಾಗುತ್ತದೆ. ಇದು ಈ ವರ್ಷ ನಮಗೆ ಗೋಚಾರ ಈ ವರ್ಷದ ಮೊದಲ ಚಂದ್ರಗ್ರಹಣವಾಗಿದೆ. ನಾವಿರುವ ಕಡೆ ಮಧ್ಯರಾತ್ರಿ ಒಂದು ಐದಕ್ಕೆ ಶುರುವಾಗಿ ಎರಡು 23ಕ್ಕೆ ಬಿಡುಗಡೆ ಆಗುತ್ತದೆ. ಒಟ್ಟಾರೆಯಾಗಿ ಒಂದು ತಾಸು 18 ನಿಮಿಷ ಗ್ರಹಣ ಗೋಚಾರ ಇದ್ದು,

ಈ ಸಮಯದಲ್ಲಿ ಸೂತಕ ಮಾನ್ಯವಾಗಿರುತ್ತದೆ. ಇದನ್ನು ಪುಣ್ಯ ಕಾಲ ಎಂದು ಕರೆಯುತ್ತೇವೆ. ಆದಷ್ಟು ದೇವರ ಧ್ಯಾನ ಪೂಜೆಯನ್ನು ಮಾಡಿದರೆ ಸಾಕಷ್ಟು ಲಾಭವಿದೆ ಎಂಬುದು ಹಿರಿಯರ ಮಾತು. ಸಿಂಹ ರಾಶಿಯವರ ಮಟ್ಟಿಗೆ ಈ ಗ್ರಹಣ 640 ಅಂದರೆ 60 ಪರ್ಸೆಂಟ್ ಒಳ್ಳೆಯದಾದರೆ ಇನ್ನು ಬಾಕಿ 40% ವಿಚಾರದಲ್ಲಿ ಎಚ್ಚರ ವಹಿಸಬೇಕು. ಈಗ ಸಿಕ್ಸ್ಟಿ ಪರ್ಸೆಂಟ್ ಒಳ್ಳೆಯ ಫಲಗಳನ್ನು ನೋಡೋಣ,

ಗ್ರಹಣ ನಿಮ್ಮಿಂದ 9ನೇ ಮನೆ ಮನೆಯಲ್ಲಿ ನಡೆಯುತ್ತಿದೆ ಇದನ್ನು ಭಾಗ್ಯ ಸ್ಥಾನ ಎಂದು ಕರೆಯುತ್ತೇವೆ. ರಾಹು ಸಡನ್ನಾಗಿ ಅನುಗ್ರಹ ಕೊಟ್ಟು ಪರಾರಿಯಾಗುತ್ತಾನೆ. ಹೇಗೆ ಲಾಭವಾಯಿತು ಯಾರಿಂದ ಎಷ್ಟು ಲಾಭವಾಯಿತು ಎಂದು ಅಷ್ಟು ಬೇಗ ತಿಳಿಯುವುದಿಲ್ಲ. ಸರಿಯಾಗಿ ಯೋಚಿಸಿ ಕ್ಯಾಲ್ಕುಲೇಟ್ ಮಾಡಬೇಕಾಗುತ್ತದೆ. ಅಂತಹ ಒಂದಷ್ಟು ಲಾಭವನ್ನು ಈಗ ಹೇಳುತ್ತೇನೆ.

ಉದಾಹರಣೆಗೆ ಗುಟ್ಟಾಗಿ ನಡೆಯುವ ಒಂದಷ್ಟು ಕೆಲಸಗಳಿಗೆ ವ್ಯಾಲ್ಯೂ ಬರುತ್ತದೆ. ನೀವು ಖಾಸಗಿ ಡಿಟೆಕ್ಟಿವ್ ಏಜೆನ್ಸಿ ನಡೆಸುತ್ತಿದ್ದಾರೆ ಯಾರನ್ನಾದರೂ ಕಳೆದು ಹೋಗಿರುವ ವಸ್ತುವನ್ನು ಹುಡುಕುತ್ತಿದ್ದರೆ, ಒಂದು ದಿನ ನಿಮಗೆ ಕಾಲ್ ಬರುತ್ತದೆ ಇಂಥವರನ್ನು ಹುಡುಕಿಕೊಟ್ಟರೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ,ನೀವು ಒಪ್ಪಿಕೊಂಡು ಬೇಗನೆ ಆ ವ್ಯಕ್ತಿಯನ್ನು ಪತ್ತೆ ಹಚ್ಚುತ್ತೀರ ಆಗ ಮಾತಾಡಿದ

ಹಣಕ್ಕಿಂತ ಹೆಚ್ಚು ಮೊತ್ತದ ಹಣ ನಿಮ್ಮದಾಗುತ್ತದೆ. ರಾಹುವಿನದು ಹುಡುಕಾಟದ ಪ್ರವೃತ್ತಿ ಹಾಗಾಗಿ ಇಂತಹ ಕ್ಷೇತ್ರದಲ್ಲಿ ಇರುವವರ ಬೆನ್ನಿಗೆ ನಿಂತು ಸಪೋರ್ಟ್ ಮಾಡುತ್ತಾನೆ. ಕೆಲವರಿಗೆ ಜೂಜು ಚಾಲೆಂಜ್ ಕಟ್ಟುವುದರಲ್ಲಿ ಒಲವಿರಬಹುದು. ಈಗ ಕುದುರೆ ರೇಸ್ ನಲ್ಲಿ ಬೆಟ್ ಕಟ್ಟಿದ್ದಾರೆ ಎಂದುಕೊಳ್ಳಿ ಅವರು ಹೇಳಿದ ಕುದುರೆ ಮೊದಲು ಸೋಲುವಂತೆ ಕಂಡರೂ ನಂತರ ಗೆಲ್ಲುತ್ತದೆ.

ಕೆಲವರು ಸ್ಪೋರ್ಟ್ಸ್ ಬೆಟ್ಟಿಂಗ್ ಬ್ಲಾಕ್ಮೇಲ್ ಇಂತಹ ದರಿಂದಲೂ ಹಣ ಎಣಿಸುತ್ತಾರೆ. 9ನೇ ಮನೆಯಲ್ಲಿದ್ದಾಗ ಬುದ್ಧಿವಂತಿಕೆ ಸಹ ಬರುತ್ತದೆ. ಗ್ರಹಣದ ನಂತರ ಕೆಲವರು ಹೊಸ ಉದ್ಯಮವನ್ನು ಶುರು ಮಾಡಬಹುದು. ಮುಂದಾಲೋಚನೆಯನ್ನು ಮಾಡಿ ಕೆಲವಷ್ಟು ಇನ್ವೆಸ್ಟ್ಮೆಂಟ್ ಗಳನ್ನು ಮಾಡುವುದು, ಲಾಭ ಬರುವಂತಹ ಮೂಲಗಳನ್ನು ಹುಡುಕಿಕೊಳ್ಳುವುದು ಹೀಗೆ.

ಇನ್ನೂ ಕೆಲವರಿಗೆ ಷೇರು ಮಾರುಕಟ್ಟೆಯಲ್ಲಿ ಆಶ್ಚರ್ಯ ವಾಗುವಂತಹ ಲಾಭ ಸಿಗಬಹುದು. ಇನ್ವೆಸ್ಟನ್ಟ್ ಕಡಿಮೆ ಮಾಡಿದರು ರಿಟರ್ನ್ಸ್ ಜಾಸ್ತಿ ಬರುತ್ತದೆ. ಕೆಲವರು ಆನ್ಲೈನ್ ನಲ್ಲಿಯೂ ದುಡ್ಡು ಮಾಡಬಹುದು. ಕೆಲವರು ಆನ್ಲೈನ್ ಗೇಮ್ಗಳಿಂದ ದುಡ್ಡು ಮಾಡಬಹುದು. 9ನೇ ಮನೆ ಪಿತೃ ಸ್ಥಾನ ಕೂಡ ಹೌದು. ಹಾಗಾಗಿ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಹೆಚ್ಚು.

ತುಂಬ ದಿನಗಳಿಂದ ಆಸ್ತಿ ವ್ಯಾಜ್ಯ ಕೋರ್ಟಿನಲ್ಲಿ ನಡೆಯುತ್ತಿದ್ದರೆ ಅದರ ಹಕ್ಕು ನಿಮಗೆ ಸಿಗಬಹುದು. ಸರಿಯಾದ ಒಂದು ನಿರ್ಣಯಕ್ಕೆ ಬರಲು ಇದು ಸಕಾಲ. ನೀವು ತಂದೆಯನ್ನು ಮತ್ತು ತಂದೆ ಸಮಾನರನನ್ನು ಗೌರವದಿಂದ ಕಾಣುತ್ತೀರ. ಅವರಿಂದ ಬರುವ ಅಪಾಯವನ್ನು ತಪ್ಪಿಸಲು ರಾಹು ನಿಮಗೆ ಮಾರ್ಗದರ್ಶನ ನೀಡುತ್ತಾನೆ. ಇದರಿಂದಾಗಿ ಅವರ ನಂಬಿಕೆಯನ್ನು ನೀವು ಗಳಿಸಬಹುದು.

ರಾಹು ಬಂದಾಗ ದೇವರಲ್ಲಿ ಭಯ ಭಕ್ತಿ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ನಿಮ್ಮ ವಿಚಾರದಲ್ಲಿ ಅದು ಉಲ್ಟ ಆಗುವುದಿದೆ. ಏಕೆಂದರೆ 9ನೇ ಮನೆಯಲ್ಲಿ ರಾಹುವಿಗೆ ನೆಗೆಟಿವ್ ಗಿಂತ ಪಾಸಿಟಿವ್ ಪವರ್ ಹೆಚ್ಚು. ಹೇಗಾಗಿ ದೇವರ ಮೇಲೆ ನಂಬಿಕೆಯುರುತ್ತದೆ ಶ್ರದ್ಧಾಭಕ್ತಿಯಿಂದ ಪೂಜೆಯನ್ನು ಮಾಡುತ್ತೀರ. ಕನಸುಗಳು ಬರುವುದು ರಾಹುವಿನ ಪ್ರಭಾವದಿಂದ.

ನಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಕನಸಿನ ರೂಪದಲ್ಲಿ ಕಲ್ಪಿಸಿ ಖುಷಿಪಡುತ್ತವೆ. ಕನಸಿನ ರೂಪದಲ್ಲಿ ರಾಹು ಒಂದಷ್ಟು ಒಳ್ಳೆಯ ಸೂಚನೆಗಳನ್ನು ಕೊಡಬಹುದು ನಿಮಗೆ ಕೆಟ್ಟದಾಗುತ್ತದೆ ಎಂದಿದ್ದರೂ ರಾಹು ನಿಮಗೆ ಉಪಾಯಗಳನ್ನು ಕೊಡುತ್ತಾನೆ. ನಿಮ್ಮ ಗೊಂದಲ ಬೇಜಾರು ಮಾನಸಿಕ ಒತ್ತಡ ಕಡಿಮೆಯಾಗುವುದಿದೆ. ನಿಮ್ಮಲ್ಲಿ ಕೆಲವರಿಗೆ ವಿದೇಶ ಪ್ರಯಾಣದ ಯೋಗ ಕೂಡಿ ಬರಲಿದೆ.

ಬಿಸಿನೆಸ್ ಸಲುವಾಗಿ ಅಥವಾ ಪರ್ಸನಲ್ ಟ್ರಿಪ್ ಆಗಿ ಕೂಡ ಸುತ್ತಾಡುವ ಅವಕಾಶವಿದೆ. ಕೆಲವೊಂದು ವಿಚಾರದಲ್ಲಿ ನೀವು ಎಚ್ಚರ ವಹಿಸಬೇಕು. ಕಿಲಾಡಿ ಆಗಿರುವ ರಾಹು ನಿಮ್ಮನ್ನು ಕಾಡಿಸುವುದು ಯಾವ ವಿಚಾರದಲ್ಲಿ ಅಂದರೆ, ನಿಮಗೆ ಗುರು ಬಲ ಬಂದಿದೆ. ನೀವು ಯಾವ ಯಾವ ವಿಚಾರದಲ್ಲಿ ಮುಂದುವರಿಯಬಹುದು? ಎಂದು ತಿಳಿಯಲು ನೀವು ಐದು ವರ್ಷದ ಗುರು ಬಲವನ್ನು ನೋಡಬಹುದು.ಗ್ರಹಣದ ಸಮಯದಲ್ಲಿ ಸಮಯ ಹಾಳು ಮಾಡಬೇಡಿ. ರಾಹು ಮತ್ತು ಚಂದ್ರನ ಅಷ್ಟೋತ್ತರ ಕೇಳಿ. ನೀವು ಈ ಮಂತ್ರವನ್ನು ಹೇಳಿಕೊಂಡರೆ ಒಳ್ಳೆಯದು ಇದು ತುಂಬಾ ವಿಶೇಷವಾದ ಮಂತ್ರ.

Leave A Reply

Your email address will not be published.