ತುಲಾ ರಾಶಿಗೆ ಹೀಗಾದಾಗ ಆಶ್ಚರ್ಯ ಕಟ್ಟಿಟ್ಟ ಬುತ್ತಿ

0

ನಾವು ಈ ಲೇಖನದಲ್ಲಿ ತುಲಾ ರಾಶಿಯವರ ಗುರುಗ್ರಹದ ಸ್ಥಾನ ಬದಲಾವಣೆಯ ಬಗ್ಗೆ ತಿಳಿದುಕೊಳ್ಳೋಣ . ತುಲಾ ರಾಶಿಯವರಿಗೆ ಪಂಚಮ ಶನಿಯ ಕಾಟ ಒಂದು ಕಡೆಯಾದರೆ ಕೇತುವು ವ್ಯಯಸ್ಥಾನದಲ್ಲಿದ್ದಾನೆ. ಇನ್ನೊಂದು ಕಡೆ ಗುರುವು ಸಹ ನಿಮಗೆ ನಷ್ಟವನ್ನುಂಟು ಮಾಡಲಿದ್ದಾನೆ . ದೊಡ್ಡ ದೊಡ್ಡ ಹೊಡೆತಗಳು ಮತ್ತು ನಷ್ಟಗಳು ನಿಮಗೆ ಉಂಟಾಗಬಹುದು. ಅಂತಹ ಸಮಸ್ಯೆಗಳು ನಿಮಗೆ ಎದುರಾಗುತ್ತದೆ ಮೇ 1 ,2024 ರಿಂದ ನಿಮಗೆ ಸಮಸ್ಯೆಗಳು ಎದುರಾಗುತ್ತದೆ .

ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತ ಪರಿಸ್ಥಿತಿ ಸಹ ಬರಬಹುದು .ನೀವು ಏನೇ ಮಾಡಿದರು ತಪ್ಪು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಗಾದರೆ ಇದಕ್ಕೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳೋಣ .ಮತ್ತು ನಿಮ್ಮ ಬೆಂಬಲಕ್ಕೆ ಇದ್ದುಕೊಂಡು ನಿಮ್ಮನ ಕಾಯುವಂತಹ ಗ್ರಹದ ಬಗ್ಗೆಯೂ ತಿಳಿದುಕೊಳ್ಳೋಣ .ವೃಷಭ ರಾಶಿಗೆ ಗುರುವು ಹೋದಾಗ ನಿಮಗೆ ಸಮಸ್ಯೆಗಳು ಉಂಟಾಗುತ್ತದೆ .ಅಂದರೆ ಮೇ ಒಂದು 2024ಕ್ಕೆ ವೃಷಭ ರಾಶಿಯು ನಿಮಗೆ ಎಂಟನೇ ಮನೆ ಆಗುತ್ತದೆ.

ಎಂಟನೇ ಮನೆಯೂ ಅಂತಹ ಒಳ್ಳೆಯ ಸ್ಥಾನವಲ್ಲ ಇಷ್ಟು ದಿನ ಬಹಳಷ್ಟು ಜನರ ವೈವಾಹಿಕ ಜೀವನದಲ್ಲಿ ನೆಮ್ಮದಿ ಇತ್ತು .ಮತ್ತು ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಬೆಳವಣಿಗೆಯು ಸಹಾಯ ಇತ್ತು . ಆದರೆ ಇನ್ನು ಮುಂದೆ ನಿಮ್ಮ ನೆಮ್ಮದಿಗೆ ಭಂಗ ಬರುತ್ತದೆ .ಗುರುವು 8ನೇ ಮನೆಗೆ ಬರುವುದರಿಂದ ಈ ಸ್ಥಾನವನ್ನು ನಾವು ರಂಧ್ರ ಸ್ಥಾನ ಆಯುಷ್ಯ ಸ್ಥಾನ ಎಂದು ಕರೆಯುತ್ತೇವೆ. ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಬಹಳಷ್ಟು ಜನರು ಜೀವಭಯದಲ್ಲಿ ಒದ್ದಾಡಬೇಕಾಗುತ್ತದೆ.

ಹವಾಮಾನ ಮತ್ತು ವಾತಾವರಣದ ಬದಲಾವಣೆಯಿಂದ ನೀರಿನ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ನೀವು ಭಯ ಬೀಳುವ ಸಾಧ್ಯತೆಯೂ ಹೆಚ್ಚು .ಇದರಿಂದ ನಿಮ್ಮನ್ನು ಸುಸ್ತು ಸಹ ಕಾಡಬಹುದು. ಸಣ್ಣ ಪುಟ್ಟ ಕೆಲಸ ಮಾಡಿದರು ಸಹ ಬಹಳ ಆಯಾಸವಾದಂತೆ ನಿಮಗೆ ಅನಿಸಲು ಶುರುವಾಗುತ್ತದೆ .ಮತ್ತೆ ಕೆಲವರಿಗೆ ಅಪಘಾತ ಆಗೋ ಭಯ ಅಥವಾ ಮೇಲಿನ ಒಂದು ಜಾಗದಿಂದ ಕೆಳಗೆ ಬೀಳುವ ಭಯ ಕೂಡ ಕಾಡಬಹುದು . ಬೇಡದ ಮಾನಸಿಕ ಆಲೋಚನೆಗಳು ನಿಮ್ಮನ್ನು ಕಾಡುತ್ತವೆ. ನಿಮ್ಮಲ್ಲಿ ನಕರಾತ್ಮಕ ಆಲೋಚನೆಗಳು ಹೆಚ್ಚಾಗುತ್ತದೆ .

ಯಾಕೆಂದರೆ ನಾವು ಗುರುವನ್ನು ಬುದ್ಧಿ ಕಾರಕ ಎಂದು ಹೇಳುತ್ತೇವೆ. ಗುರುಗ್ರಹ ಬುದ್ಧಿಯನ್ನು ಸಹಜ ಸ್ಥಿತಿಯಲ್ಲಿ ಇಡಲು ಅನುಕೂಲ ಮಾಡಿಕೊಡುತ್ತಾನೆ. ಅಂತಹ ಗುರುವು ನಮಗೆ ನಷ್ಟ ಸ್ಥಾನದಲ್ಲಿ ಇರುವುದರಿಂದ ಇಂತಹ ಆಲೋಚನೆಗಳು ಬರುತ್ತದೆ .ಇದರಿಂದ ಮಾನಸಿಕ ನೆಮ್ಮದಿಯನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಮತ್ತು ನೀವು ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಮತ್ತು ಆಭರಣದ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು .ಕೋರ್ಟ್ ಮತ್ತು ಕಚೇರಿಯ ವಿಷಯಗಳಲ್ಲಿ ನೀವು ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ . ಎಚ್ಚರ ತಪ್ಪಿದ್ದರೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು .

ಇನ್ನು ಕೆಲವರು ನಿಮ್ಮನ್ನು ಸಿಕ್ಕಿ ಹಾಕಿಸಿ ಮಾನ ಹಾನಿ ಮಾಡುವ ಸಾಧ್ಯತೆಯೂ ಸಹ ಹೆಚ್ಚಿರುತ್ತದೆ .ಬಹಳಷ್ಟು ಜನ ಸಹೋದ್ಯೋಗಿಗಳ ಜೊತೆ ಜಗಳ ಮತ್ತು ಸಮಸ್ಯೆ ಮಾಡಿಕೊಳ್ಳಬಹುದು. ಏನಾದರೂ ನಕಾರಾತ್ಮಕ ವಾದಂತಹ ಕೆಲಸ ಮಾಡಲು ಹೋಗಿ ಕೆಲಸ ಕಳೆದು ಕೊಳ್ಳುವಂತಹ ಸಾಧ್ಯತೆಯೂ ಹೆಚ್ಚಿರುತ್ತದೆ. ಗುರುವು 8ನೇ ಸ್ಥಾನದಲ್ಲಿದ್ದಾಗ ಆಗುವಂತಹ ಮುಖ್ಯವಾದ ಬದಲಾವಣೆ ಎಂದರೆ ಅದು ಅವಮಾನ .ಕೆಲಸ ಮಾಡುವ ಸ್ಥಳದಲ್ಲಾಗಬಹುದು

ಅಥವಾ ಮನೆಯಲ್ಲೇ ಆಗಬಹುದು ನಿಮ್ಮ ಮನಸ್ಸಿಗೆ ಕಿರಿಕಿರಿ ಹಿಂಸೆ ಉಂಟಾಗುತ್ತದೆ . ಸುಮ್ಮನೆ ಮಾತನಾಡುವುದು ಬೇರೆಯವರ ಮೇಲೆ ಆಪಾದನೆ ಒರೆಸುವುದು ಇಂತಹ ಕೆಲಸಗಳಿಂದ ದೂರವಿದ್ದರೆ ಒಳ್ಳೆಯದು. ನೀವು ಒಬ್ಬರ ಪರವಾಗಿ ಮಾತನಾಡಿ ಅದು ನಿಮಗೆ ಕೆಡಕು ಉಂಟು ಮಾಡುವ ಪರಿಸ್ಥಿತಿ ಬರುತ್ತದೆ . ಅಥವಾ ಏನನ್ನಾದರೂ ಮರೆತು ಅದರಿಂದ ನಿರಾಶೆಯನ್ನು ಅನುಭವಿಸುವುದು ಮತ್ತು ಸತತವಾಗಿ ಸೋಲನ್ನು ಕಾಣುವುದು. ಆದ್ದರಿಂದ ಸೂಕ್ತ ಹೆಜ್ಜೆಯನ್ನು ಇಡುವುದು ಒಳ್ಳೆಯದು .

ಇನ್ನು ಹಣಕಾಸಿನ ವಿಚಾರಕ್ಕೆ ಬಂದರೆ ಗುರುವಿನ ಕೈಯಲ್ಲಿ ಇರುವುದು. ಆದ್ದರಿಂದ ನಿಮಗೆ ಅಷ್ಟೇನೂ ಒಳ್ಳೆಯ ಲಾಭ ಇರುವುದಿಲ್ಲ . ಸ್ವಲ್ಪ ಹಣಕಾಸು ಬಂದರು ಅದು ಸಹ ಜೀವವಿಮೆ ಮತ್ತು ಬಹುಮಾನದ ರೂಪದಲ್ಲಿ ಬರಬಹುದು. ವ್ಯಾಪಾರ ವ್ಯವಹಾರ ಮಾಡುವವರಿಗೆ ಬಹಳ ನಷ್ಟವನ್ನು ಉಂಟುಮಾಡುತ್ತದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ .ತುಲಾ ರಾಶಿಯ ಕೆಲವು ಜನರು ಅವ್ಯವಹಾರ ಮಾಡಿ ಸಿಕ್ಕಿಕೊಳ್ಳುವ ಸಾಧ್ಯತೆಯೂ ಹೆಚ್ಚು. ಹೂಡಿಕೆ ಮಾಡಲು ಇದು ಒಳ್ಳೆಯ ಕಾಲವಲ್ಲ.

ಗುರುವು ಒಳ್ಳೆಯ ಸ್ಥಾನಕ್ಕೆ ಹೋಗುವ ತನಕ ಸ್ವಲ್ಪ ಕಾಯುವುದು ಉತ್ತಮವಾಗಿದೆ . 2025 ಮೇ 14 ಕ್ಕೆ ಗುರು ಪರಿವರ್ತನೆ ಆಗಲಿದ್ದಾನೆ. ಅಲ್ಲಿಯ ತನಕ ಎಲ್ಲಾ ಅಭಿವೃದ್ಧಿಗಳಿಗೂ ನಷ್ಟವಾಗುವಂತಹ ಸಾಧ್ಯತೆ ಹೆಚ್ಚಿರುತ್ತದೆ. ಮಾಂಗಲ್ಯ ಕಾರಕನಾಗಿರುವ ಗುರು ಮದುವೆ ಮತ್ತು ಶುಭ ಸಮಾರಂಭಗಳನ್ನು ನಡೆಸಲು ಇದು ಒಳ್ಳೆಯ ಕಾಲವಲ್ಲ . ಈಗಾಗಲೇ ಮದುವೆಯಾಗಿದ್ದರೆ ಗಂಡ ಹೆಂಡತಿಯ ನಡುವೆ ವೈಮನಸ್ಯ ಅನುಮಾನದಿಂದ ದೂರ ಕೂಡ ಆಗಬಹುದು. ವಿದ್ಯಾರ್ಥಿಗಳು ಈ ಕಾಲದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಪರೀಕ್ಷೆ ಇಂದಲು ದೂರ ಉಳಿಯಬೇಕಾಗುತ್ತದೆ.

ಮತ್ತು ಅನುತ್ತೀರ್ಣರಾಗುವಂತಹ ಸಂದರ್ಭವು ಹೆಚ್ಚು. ಓದಿದ್ದು ಸಹ ನೆನಪಿನಲ್ಲಿ ಉಳಿಯುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇವೆಲ್ಲವೂ ಹೆಚ್ಚಿನ ಜನರ ಜೀವನದಲ್ಲಿ ನಡೆಯುವಂತಹ ಸಾಧ್ಯತೆ ಇರುತ್ತದೆ .ಆರೋಗ್ಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ . ಆದರೆ ನಿಮ್ಮ ಬೆಂಬಲಕ್ಕೆ ಒಂದು ಗ್ರಹವು ನಿಮಗೆ ಜೊತೆಯಾಗಿ ನಿಲ್ಲುತ್ತದೆ. ಮತ್ತು ಧೈರ್ಯವನ್ನು ಕೊಡುತ್ತದೆ .ಆ ಗ್ರಹವೆಂದರೆ ರಾಹುಗ್ರಹವಾಗಿದೆ . ಈ ಗ್ರಹದ ಕೃಪೆಯಿಂದ ಸಿಗುವ ಒಂದು ಪ್ರೇರಣೆ ಅನುಗ್ರಹ ಆಕಸ್ಮಿಕವಾಗಿ ನಡೆಯುವಂತಹ ಘಟನೆಗಳು ನಿಮಗೆ ಸ್ಪೂರ್ತಿಯನ್ನು ನೀಡುತ್ತದೆ . ಮತ್ತು

ಗುರು ಕೃಪೆಗೆ ಪಾತ್ರರಾಗಲು ಒಂದು ಅದ್ಭುತವಾದ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು. ಇದನ್ನು ದಿನನಿತ್ಯ ಹೇಳಿದರೆ ನೀವು ಗುರುವಿನ ಕೃಪೆಗೆ ಪಾತ್ರರಾಗುತ್ತೀರಾ ನೀವು ದೇವರ ಮೇಲೆ ನಂಬಿಕೆ ಇಟ್ಟಿದ್ದರೆ , ಆಧ್ಯಾತ್ಮದ ಕಡೆಗೆ ಒಲವು ಇದ್ದರೆ ಆ ಗುರುವು ನಿಮಗೆ ದಾರಿಯನ್ನು ತೋರಿಸುತ್ತಾನೆ . ಆ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ . ದೇವ ಮಂತ್ರಿ ವಿಶಾಲಾಕ್ಷಹ ಸದಾ ಲೋಕ ಹಿತೇ ರತಂ ಅನೇಕ ಶಿಷ್ಯ ಸಂಪೂರ್ಣ ಪೀಡಾ ಹರತು ಮೇ ಗುರು ಈ ಮಂತ್ರವನ್ನು ಪಠಿಸಿಕೊಳ್ಳಿ .ಮೇ 14 2025ರ ತನಕ ನೀವು ಬಹಳ ಜಾಗೃತರಾಗಿರಿ ಬಹಳ ತಾಳ್ಮೆಯಿಂದ ನಡೆದುಕೊಳ್ಳಿ . ಗುರು ಭಾಗ್ಯಕ್ಕೆ ಹೋದ ಮೇಲೆ ನಿಮ್ಮ ಅದೃಷ್ಟ ಬದಲಾಗಲಿದೆ.

Leave A Reply

Your email address will not be published.