ವಿವಾಹ ಭವಿಷ್ಯ 2024 ಈ ವರ್ಷ ಮದುವೆಯಾಗುವ ರಾಶಿಗಳು ಇದು

0

ಇಂದಿನ ಲೇಖನದಲ್ಲಿ 2024ರಲ್ಲಿ ಆರು ರಾಶಿಗಳಿಗೆ ವಿವಾಹದ ಲಾಭಗಳು ದೊರೆಯಲಿವೆ. ಯಾವ ಯಾವ ರಾಶಿಗಳು ಆ ಯೋಗವನ್ನು ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಗುರುಗ್ರಹವು ಮೇ ತಿಂಗಳಿನಲ್ಲಿ ತನ್ನ ಪಥವನ್ನು ಬದಲಾಯಿಸುತ್ತಿದ್ದಾನೆ. ಮೇ ತಿಂಗಳಿನಲ್ಲಿ ಬದಲಾವಣೆಯಾಗುವ ಮೊದಲು ಒಂದಷ್ಟು ಯೋಗಗಳು ಇರುತ್ತವೆ. ಈಗಾಗಲೇ ಕೆಲವೊಂದು ರಾಶಿಗಳಿಗೆ ಪೂರ್ವಸಿದ್ಧತೆಯಾಗಿ ವಿವಾಹದ ಭಾಗ್ಯಗಳು ಕೂಡಿ ಬಂದುಬಿಟ್ಟಿವೆ.

ಉದಾಹರಣೆಗೆ ಮೇಷರಾಶಿಗೆ ಇರಬಹುದು, ಧನಸ್ಸು ಮತ್ತು ಮೀನರಾಶಿಗೆ ಇರಬಹುದು ಮದುವೆಗೆ ಸಂಬಂಧಿಸಿದಂತೆ ಒಳ್ಳೆಯ ದಿನ ಮೇ ತಿಂಗಳಿನವರೆವಿಗೂ ಇರುತ್ತದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಂಗಾತಿ ಎಂಬುದು ಪ್ರಮುಖವಾದದ್ದು ಸಂಗಾತಿಯ ಅವಶ್ಯಕತೆ ಪ್ರತೀ ಜೀವಿಗೂ ಇದೆ. ದ್ವಂದ್ವಗಳಲ್ಲಿ ಬದುಕು ಸಾಗುತ್ತಿರುವುದರಿಂದ ವಿವಾಹ ಜೀವನದ ಭವಿಷ್ಯ ಗೊಂದಲಮಯವಾಗುತ್ತಿದೆ. ಈ ವರ್ಷ ಪ್ರಬಲವಾದ ಗುರುಬಲದಿಂದಾಗಿ ಯಾವ ಯಾವ ರಾಶಿಗಳಿಗೆ ಒಳ್ಳೆಯದಾಗುತ್ತದೆ.

ಈ ವರ್ಷ ಪ್ರಬಲವಾದ ಗುರು ಬಲ ಅಂದರೆ ಅರ್ಥ ಮೇಷಯ ಒಳಗಡೆ ಕುಜನ ಮನೆಯಲ್ಲಿ ಗುರು ಇದ್ದಾನೆ ನಂತರ ಹೋಗುತ್ತಿರುವುದು ವೃಷಭ ರಾಶಿಗೆ ಹೋಗುತ್ತಿದ್ದಾನೆ. ವೃಷಭ ರಾಶಿಯ ರಾಶಿಯ ಅಧಿಪತಿ ಶುಕ್ರನಿಗೂ ಮತ್ತು ಗುರುವಿಗೂ ಇರುವ ಅವಿನಾಭಾವ ಸಂಬಂಧ . ಇಬ್ಬರು ಗುರುಗಳೇ ಒಬ್ಬರು ಅಸುರರ ಗುರುಗಳು ಇನ್ನೊಬ್ಬರು ದೇವತೆಗಳ ಗುರುಗಳು. ಈ ಎರಡು ಗುರುಗಳ ಸ್ಥಾನಮಾನಗಳು ಒಂದೇ ರೀತಿ ಇರುತ್ತದೆ. ಒಂದು ಗುರುವಿನ ಸ್ಥಾನಕ್ಕೆ ಮತ್ತೊಂದು ಗುರು ಬರುತ್ತಿರುವುದನ್ನ ಪ್ರಬಲವಾದ ಯೋಗವೆಂದು ಕರೆಯಬಹುದು. ಗುರು ಗ್ರಹವು ಮೇ ತಿಂಗಳಿನಲ್ಲಿ ವೃಷಭ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ಒಂದುಷ್ಟು ರಾಶಿಗಳಿಗೆ ಪ್ರಬಲವಾದ ಕಂಕಣಭಾಗ್ಯವು ದೊರೆಯುತ್ತದೆ.

ಮೊದಲನೆಯದಾಗಿ ಮೇಷರಾಶಿಯವರಿಗೆ ಕಂಕಣಭಾಗ್ಯ ಬರುತ್ತದೆ. ಕಳೆದ ವರ್ಷದಿಂದ ಮದುವೆಯ ವಿಚಾರದಲ್ಲಿ ಸ್ವಲ್ಪ ಒಳ್ಳೆಯದು ಮಾಡಿದ್ದರೂ ಇನ್ನು ಮುಂದೆ ದ್ವಿತೀಯ ಸ್ಥಾನಕ್ಕೆ ಗುರು ಹೋಗುವುದರಿಂದ ಅನುಕೂಲಕರವಾಗಿರುತ್ತದೆ ಜೊತೆಗೆ ಸಪ್ತಮಾಧಿಪತಿಯಾದಂತಹ ಶುಕ್ರ ಅಷ್ಟಮದಲ್ಲಿರುತ್ತಾನೆ ಪ್ರಾರಂಭದಲ್ಲಿ ಅಂದರೆ ಜನವರಿ ತಿಂಗಳಿನಲ್ಲಿ ಮುಂದೆ ಸಪ್ತಮಾಧಿಪತಿಯ ಪ್ರಭಾವವು ದೊರೆತು ಮದುವೆ ನಿಶ್ಚಯವಾಗುವಂತಹ ಸಾಧ್ಯತೆಗಳು ಇವೆ. ಕರ್ಕಾಟಕ ರಾಶಿಯವರಿಗೆ 2024ರಲ್ಲಿ ಮದುವೆಯ ಭಾಗ್ಯ ಇದೆ.

ಸಿಂಹರಾಶಿಯವರಿಗೂ ಕೂಡ ಈ ವರ್ಷ ಕಂಕಣ ಭಾಗ್ಯವಿದೆ. ಕನ್ಯಾರಾಶಿಯವರಿಗೆ ಭಾಗ್ಯದ ಗುರು ಮತ್ತು ರಾಶಿಯ ಮೇಲೆ ದೃಷ್ಟಿ ಬರುವಂತದ್ದು ಈ ಎರಡು ಕಾರಣಗಳಿಂದ ತೊಂದರೆಗಳಿಂದ ಹೊರಬರುತ್ತೀರಿ ಮತ್ತು ಮದುವೆಯ ಯೋಗ ಬರುತ್ತದೆ. ವೃಶ್ಚಿಕ ರಾಶಿಯವರಿಗೆ ನೇರವಾಗಿ ಸಪ್ತಮ ಸ್ಥಾನಕ್ಕೆ ಬಂದು ನಿಮ್ಮ ರಾಶಿಯ ಮೇಲೆ ಸಪ್ತಮದ ದೃಷ್ಟಿ ಬೀಳುತ್ತಿರುವುದರಿಂದ ಅತ್ಯದ್ಭುತವಾದಂತಹ ಕಂಕಣಭಾಗ್ಯದ ಯೋಗವಿದೆ. ಕುಂಭರಾಶಿಯವರಿಗೆ ತುಂಬಾ ಸರಳವಾಗಿ ಮತ್ತು ಸುಲಭವಾಗಿ ನಿಮಗೆ ಈ ವರ್ಷ ಮದುವೆ ಸೆಟ್ ಆಗುತ್ತದೆ.

ವೃಷಭ ರಾಶಿಯವರಲ್ಲಿ ವಿಚ್ಛೇದಿತರಿದ್ದರೇ ಎರಡನೇ ಮದುವೆಗೆ ಪ್ರಯತ್ನ ಪಡುತ್ತಿದ್ದರೇ ತುಂಬಾ ಬೇಗ ವಿವಾಹವಾಗುತ್ತದೆ. ಮೊದಲನೇ ವಿವಾಹಕ್ಕಿಂತ ಎರಡನೇ ಮದುವೆಗೆ ಪ್ರಯತ್ನ ಪಡುತ್ತಿದ್ದರೇ ಒಳ್ಳೆಯದಾಗುತ್ತದೆ. ಉಳಿದ ರಾಶಿಗಳಿಗೆ ನಿಮ್ಮ ಜಾತಕದಲ್ಲಿ ಕಂಕಣ ಬಲವಿದ್ದರೇ ಖಂಡಿತವಾಗಿ ಕಂಕಣಬಲ ಕೂಡಿಬರುತ್ತದೆ. ಈ ವರ್ಷದಲ್ಲಿ ಯಾವ ರಾಶಿಗಳಿಗೂ ಮದುವೆಯ ವಿಷಯದಲ್ಲಿ ಅಷ್ಟೊಂದು ಕಷ್ಟಕರವೇನಿಲ್ಲ.
ಮದುವೆ ಸೆಟ್ ಆಗದೇ ಇರುವವರಿಗೆ ಸರಳವಾದ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ಈ ಪರಿಹಾರ ಮಾಡಿದರೇ ಬೇಗನೇ ಕಂಕಣಭಾಗ್ಯ ಕೂಡಿ ಬರುತ್ತದೆ. ಪ್ರತೀ ದಿನ ಶಚಿ ದೇವಿಯ ಪೂಜೆಯನ್ನು ಮಾಡಿರಿ. ಶಚಿ ದೇವಿಯ ಆರಾಧನೆಯನ್ನು ಮಾಡುವುದರಿಂದ ಬೇಗನೇ ಮದುವೆ ಫಿಕ್ಸ್ ಆಗುತ್ತದೆ.

Leave A Reply

Your email address will not be published.