ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ? ಗುಣ ಲಕ್ಷಣ?

0

ನಾವು ಈ ಲೇಖನದಲ್ಲಿ ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಹೇಗೆ ಆಗುತ್ತಾರೆ. ಎಂದು ತಿಳಿದುಕೊಳ್ಳೋಣ. ಪ್ರತಿಯೊಬ್ಬರು ತಮ್ಮ ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ಹಲವಾರು ರೀತಿಯ ಉಪಾಯಗಳನ್ನು ಮಾಡುತ್ತಾರೆ . ಹೋಮ – ಹವನ , ಯಜ್ಞ , ಪೂಜೆ , ಪಾಠ ಇತ್ಯಾದಿಗಳನ್ನು ಮಾಡಿರುತ್ತಾರೆ. ಆದರೆ ಮಗು ಯಾವ ದಿನ ಜನಿಸಿದರೆ ಅದೃಷ್ಟವಂತರು ಆಗಿರುತ್ತಾರೆ , ಎಂಬುದನ್ನು ತಿಳಿಯೋಣ . ಎಲ್ಲಾ ದಿನಗಳನ್ನು ಭಗವಂತನೇ ಸೃಷ್ಟಿ ಮಾಡಿರುತ್ತಾನೆ. ಇವುಗಳಲ್ಲಿ ಯಾವುದಾದರೂ ಒಂದು ದಿನವನ್ನು ಅದೃಷ್ಟ ಶಾಲಿ ಅನ್ನೋದು ಸರಿಯಾಗುತ್ತದೆಯೇ , ಇಲ್ಲಿ ಏಳು ದಿನಗಳಲ್ಲಿ ಒಂದು ದಿನ ಚೆನ್ನಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ .

ಇಲ್ಲಿ ನಾವು ತಿಳಿಸುವ ವಿಷಯ ಏನೆಂದರೆ , ಜನ್ಮ ಕುಂಡಲಿ, ಜನ್ಮ ತಿಥಿ , ಹಸ್ತ ರೇಖೆಗಳ ಅನುಸಾರವಾಗಿ , ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದು . ಆದರೆ ಇವುಗಳ ಬಗ್ಗೆ ತಿಳಿಯುವ ಮುನ್ನ , ವ್ಯಕ್ತಿಯ ಜನನ ಯಾವ ವಾರ ಆಗಿದೆ ಅನ್ನೋದನ್ನ ಮೊದಲು ತಿಳಿದುಕೊಳ್ಳುವುದು ಒಳ್ಳೆಯದು . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಯಾವ ದಿನ , ಯಾವ ವಾರ ,ವ್ಯಕ್ತಿಯ ಜನ್ಮ ಆಗುತ್ತದೆಯೋ , ಆ ದಿನದ ಗ್ರಹಗಳ ವಿಶೇಷತೆಯು ವ್ಯಕ್ತಿಯ ಶರೀರದಲ್ಲಿ ಪ್ರವೇಶ ಮಾಡುತ್ತವೆ .

ಇದರಿಂದ ಅದೇ ಪ್ರಕಾರದ ವ್ಯಕ್ತಿತ್ವ ವ್ಯಕ್ತಿಯ ಒಳಗಡೆ ಹುಟ್ಟುತ್ತದೆ. ಇಂತಹ ಸ್ಥಿತಿಯಲ್ಲಿ ವಾರದ ದಿನಗಳಿಗೆ ಇರುವ ಎಲ್ಲಾ ವಿಶೇಷತೆಗಳನ್ನು ಇಲ್ಲಿ ಹೇಳಲಾಗಿದೆ. ಇವುಗಳ ಮೂಲಕ ಯಾವ ದಿನದಲ್ಲಿ ಅಥವಾ ಯಾವ ವಾರದಲ್ಲಿ ಜನಿಸಿದ ಮಗುವಿನ ಗುಣ ಹೇಗೆ ಇರುತ್ತದೆ ಎಂದು ಅಂದಾಜಿಸಬಹುದು. ಇದರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ . ಇಲ್ಲಿ ಯಾವ ವಾರ ಜನಿಸಿದ ಮಗು ಅದೃಷ್ಟ ಶಾಲಿಯಾಗಿರುತ್ತದೆ .

ಸೋಮವಾರದ ದಿನ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ .ಇಲ್ಲಿ ಯಾವ ಮಕ್ಕಳ ಜನ್ಮ ಸೋಮವಾರದ ದಿನ ಆಗಿರುತ್ತದೆಯೋ , ಅಂತಹ ಮಕ್ಕಳು ಬುದ್ಧಿವಂತರು ಶಾಂತ ಸ್ವಭಾವದವರು ಆಗಿರುತ್ತಾರೆ . ಇದಲ್ಲದೆ ಇಂತಹ ಮಕ್ಕಳ ಧ್ವನಿಯು ಆಕರ್ಷಕವಾಗಿ ಮತ್ತು ಮಧುರವಾಗಿ ಇರುತ್ತದೆ . ಈ ಮಕ್ಕಳು ಸ್ಥಿರ ಸ್ವಭಾವದವರು ಆಗಿರುತ್ತಾರೆ . ಸುಖ ಇರಲಿ, ದುಃಖ ಇರಲಿ , ಎಲ್ಲಾ ಸ್ಥಿತಿಯಲ್ಲೂ ಇವರು ಸಮಾನವಾಗಿ ಇರುತ್ತಾರೆ . ಇಂತಹ ಮಕ್ಕಳು ಹಣಕಾಸಿನ ವಿಚಾರದಲ್ಲೂ ಅದೃಷ್ಟ ಶಾಲಿಗಳು ಆಗಿರುತ್ತಾರೆ . ಮುಂದೆ ಇವರ ಜೀವನದಲ್ಲಿ ಸರ್ಕಾರದಿಂದ ಗೌರವ , ಘನತೆ ಸಿಗುತ್ತದೆ .

ಮಂಗಳವಾರ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಮಂಗಳವಾರ ಜನಿಸಿದ ಮಕ್ಕಳ ಸ್ವಾಮಿ ಮಂಗಳ ಗ್ರಹ ಆಗಿದೆ. ಇಂತಹ ಮಕ್ಕಳು ಸ್ವಭಾವದಲ್ಲಿ ತುಂಬಾ ಶಕ್ತಿ ಶಾಲಿಗಳು ಮತ್ತು ಬಹದ್ದೂರರು ಆಗಿರುತ್ತಾರೆ. ಜೊತೆಗೆ ಇವರು ಪ್ರೇಮಿ ಮತ್ತು ಪರಾಕ್ರಮಿಗಳು ಆಗಿರುತ್ತಾರೆ . ಇವರು ತಮ್ಮ ಮಾತುಗಳನ್ನು ನಡೆಸುವಂಥವರು ಆಗಿರುತ್ತಾರೆ . ಅವಶ್ಯಕತೆ ಇದ್ದಾಗ ಎಷ್ಟೇ ಕಷ್ಟಗಳು ಇದ್ದರೂ ಅವುಗಳನ್ನು ಎದುರಿಸಲು ಇವರು ಮುಂದೆ ಬರುತ್ತಾರೆ .ಆದರೆ ಇವರ ಸ್ವಭಾವದಲ್ಲಿ ಒಂದು ದೊಡ್ಡ ವಿಶೇಷತೆ ಇದೆ .ಇವರು ತಮ್ಮ ಇಡೀ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ .

ಬುಧವಾರ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಬುಧವಾರ ಜನಿಸಿದ ಮಕ್ಕಳು ಮಧುರ ವಾಣಿಯಲ್ಲಿ ಮಾತನಾಡುವಂತಹ ಮತ್ತು ವಿಧ್ಯಾಭ್ಯಾಸದಲ್ಲಿ ತುಂಬಾ ಕುತೂಹಲವನ್ನು ಹೊಂದಿರುತ್ತಾರೆ .ಇವರು ಜ್ಞಾನಿಗಳು ಆಗಿರುತ್ತಾರೆ . ಇವುಗಳ ಜೊತೆಗೆ ಇವರು ಬರೆಯುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ . ಇವರು ಎಲ್ಲಾ ವಿಷಯಗಳ ಮಾಹಿತಿಯನ್ನು ಚೆನ್ನಾಗಿ ತಿಳಿದಿರುತ್ತಾರೆ . ಇದರ ಜೊತೆಗೆ ಇವರ ಬಳಿ ಧನ ಸಂಪತ್ತಿನ ಯಾವುದೇ ರೀತಿಯ ಕೊರತೆ ಇರುವುದಿಲ್ಲ .ಆದರೆ ಇವರು ಜನರನ್ನು ಸ್ವಲ್ಪ ಮೂರ್ಖರನ್ನಾಗಿ ಮಾಡುವುದರಲ್ಲಿ ಮುಂದೆ ಇರುತ್ತಾರೆ .

ಗುರುವಾರದ ದಿನ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಯಾವ ಮಕ್ಕಳ ಜನ್ಮ ಗುರುವಾರದ ದಿನ ಆಗಿರುತ್ತದೆಯೋ,ಅವರ ಮೇಲೆ ಗುರುವಿನ ಪ್ರಭಾವ ಅಧಿಕವಾಗಿ ಇರುತ್ತದೆ . ಇಂತಹ ಜನರು ಧಾರ್ಮಿಕ ಸ್ವಭಾವ ಮತ್ತು ಗಂಭೀರ ಗುಣವನ್ನು ಹೊಂದಿರುತ್ತಾರೆ .ಇವರು ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಾರೆ . ಎಲ್ಲರ ಒಳ್ಳೆಯದರ ಬಗ್ಗೆ ಯೋಚನೆ ಮಾಡುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ . ಗುರುವಿನ ಸ್ಥಿತಿ ಚೆನ್ನಾಗಿಲ್ಲ ಎಂದರೆ , ಇಂತಹ ಮಕ್ಕಳು ಮೂರ್ಖ ಸಾಧುಗಳು ಸಹ ಆಗಬಹುದು .

ಶುಕ್ರವಾರ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಶುಕ್ರವಾರ ಜನಿಸಿದ ಮಕ್ಕಳ ಗ್ರಹದ ಸ್ವಾಮಿ ಶುಕ್ರ ಗ್ರಹ ಆಗಿರುತ್ತದೆ . ಈ ಮಕ್ಕಳು ತುಂಬಾ ಸುಂದರ ಮತ್ತು ಪ್ರತಿಭಾವಂತ ಮಕ್ಕಳು ಆಗಿರುತ್ತಾರೆ . ಇವುಗಳ ಜೊತೆಗೆ ವಾದ ಮಾಡುವುದರಲ್ಲಿ ನಿಪುಣ ಮತ್ತು ವಿಧ್ಯಭ್ಯಾಸದಲ್ಲಿ ಮುಂದೆ ಇರುತ್ತಾರೆ .ಜೊತೆಗೆ ಇವರು ಶ್ರೀಮಂತರು ಆಗಿರುತ್ತಾರೆ . ಇವರ ಬುದ್ಧಿ ತುಂಬಾ ತೀಕ್ಷ್ಣವಾಗಿ ಇರುತ್ತದೆ.

ಶನಿವಾರದ ದಿನ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಶನಿವಾರ ಜನಿಸಿದ ಮಕ್ಕಳ ಮೇಲೆ ಶನಿ ದೇವರ ಪ್ರಭಾವ ಇರುತ್ತದೆ . ಹಾಗಾಗಿ ಇವರು ತಮ್ಮ ಜೀವನವನ್ನು ತಮ್ಮ ರೀತಿಯೇ ಜೀವಿಸಲು ಇಷ್ಟಪಡುತ್ತಾರೆ . ಇಂಥಹ ಜನರ ಸ್ವಭಾವದಲ್ಲಿ ಸ್ವಲ್ಪ ಕಠೋರವಾಗಿ ಇರುತ್ತಾರೆ .ಹಾಗಾಗಿ ಈ ದಿನ ಜನಿಸಿದ ಮಕ್ಕಳು ತಮ್ಮ ದುಃಖಗಳನ್ನು ಸುಲಭವಾಗಿ ಸಹಿಸಿಕೊಳ್ಳುತ್ತಾರೆ. ಇವುಗಳ ಜೊತೆಗೆ ಇವರು ಗಂಭೀರ ಸ್ವಭಾವವನ್ನು ಹೊಂದಿರುತ್ತಾರೆ. ಸೇವೆ ಮಾಡುವ ಮನೋಭಾವ ಇವರಿಗೆ ತುಂಬಾ ಇಷ್ಟವಾಗುತ್ತದೆ .

ಭಾನುವಾರದಂದು ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ. ಭಾನುವಾರ ಜನಿಸಿದ ಮಕ್ಕಳ ಮೇಲೆ ಸಿಂಹ ರಾಶಿ ಮತ್ತು ಸೂರ್ಯ ದೇವರ ಪ್ರಭಾವ ಇರುತ್ತದೆ . ಮತ್ತು ಈ ದಿನ ಯಾವ ಮಕ್ಕಳ ಜನನ ಆಗಿರುತ್ತದೆಯೋ , ಇಂತಹ ಮಕ್ಕಳು ತೇಜಸ್ವಿ , ಮತ್ತು ಕ್ರೋಧದ ಗುಣ ಇರುತ್ತದೆ . ಇಂತಹ ಜನರು ಚತುರರು ಮತ್ತು ಗುಣವಂತರು ಆಗಿರುತ್ತಾರೆ . ಇಂತಹ ಮಕ್ಕಳು ಸಾಹಸಿಗಳು ಮತ್ತು ನಾಯಕರು ಆಗಿರುತ್ತಾರೆ . ಯಾವತ್ತಿಗೂ ಸಕಾರಾತ್ಮಕವಾಗಿ ಇರುತ್ತಾರೆ. ಇವುಗಳ ಜೊತೆಗೆ ಇವರಿಗೆ ಸುತ್ತಾಡುವುದು ಎಂದರೆ ತುಂಬಾ ಇಷ್ಟ . ಹಾಗಾಗಿ ಇವರು ತಮ್ಮ ಹೆಚ್ಚಿನ ಸಮಯವನ್ನು ಸುತ್ತಾಡುವುದರಲ್ಲಿ ಕಳೆಯುತ್ತಾರೆ . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಭಿನ್ನ – ಭಿನ್ನವಾದ ದಿನಗಳಲ್ಲಿ ಜನಿಸಿದಂತಹ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ.

Leave A Reply

Your email address will not be published.