ಹಲವಾರು ಉಪಯುಕ್ತ ಮಾಹಿತಿ

ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಉಪಯೋಗ ಮಾಡಿಕೊಳ್ಳಬೇಕೆಂದು ಒಂದಿಷ್ಟು ಮಾಹಿತಿಯನ್ನು ಕೊಡುತ್ತೇನೆ. ಸ್ನೇಹಿತರೇ ನಿಮ್ಮ ಮನೆಯಲ್ಲಿ ನೊಣಗಳು ಹೆಚ್ಚಾಗಿದ್ದರೇ ನೀವು ನೆಲವನ್ನು ಹೊರೆಸುವಾಗ ಒಂದು ಅಥವಾ ಎರಡು ಕರ್ಪೂರವನ್ನು ತೆಗೆದುಕೊಂಡು ಚೆನ್ನಾಗಿ ಪುಡಿಮಾಡಿ ನೀವು ನೆಲವನ್ನು ಹೊರೆಸುವ ನೀರಿನಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಿ ನೆಲವನ್ನು ಹೊರೆಸುವುದರಿಂದ ನೊಣಗಳು ನಿಮ್ಮ ಮನೆಗೆ ಬರುವುದಿಲ್ಲ. ಇನ್ನು ಸಾಕಷ್ಟು ಜನರು

ನಿಮ್ಮ ಮನೆಯಲ್ಲಿರುವಂತಹ ದವಸ ಧಾನ್ಯಗಳು ಹಾಳಾಗಬಾರದೆಂದು ಇವುಗಳಿಗೆ ಕ್ರಿಮಿನಾಶಕ ಪುಡಿಗಳನ್ನು ಹಾಕುತ್ತಾರೆ. ಅಂದರೆ ಇಂತಹ ಕ್ರಿಮಿನಾಶಕ ಪುಡಿಗಳನ್ನು ಸೇರಿಸಿದಂತಹ ದವಸಧಾನ್ಯಗಳನ್ನು ತಿನ್ನುವುದರಿಂದ ನಿಮಗೆ ಸಾಕಷ್ಟು ಅನಾರೋಗ್ಯದ ತೊಂದರೆಗಳು ಉಂಟಾಗುತ್ತವೆ. ಹಾಗಾಗಿ ನಿಮ್ಮ ಮನೆಯಲ್ಲಿ ಇಟ್ಟಿರುವಂತಹ ದವಸ ಧಾನ್ಯಗಳು ಮತ್ತು ಕಾಳುಗಳು ಹಾಳಾಗಬಾರದೆಂದರೆ

ನೀವು ಅವುಗಳಿಗೆ ಬೇವಿನ ಸೊಪ್ಪು ಹಾಕಬಹುದು ಅಥವಾ ಮೆಣಸಿನಕಾಳು ಹಾಕಬಹುದು ಅಥವಾ ತುಳಸಿ ಎಲೆಯನ್ನು ಯಾವುದಾದರೂ ಅವುಗಳಿಗೆ ಸೇರಿಸಿ ಇಟ್ಟಿದರೆ ನಿಮ್ಮ ದವಸ ಧಾನ್ಯಗಳು ಹಾಳಾಗುವುದಿಲ್ಲ. ಇನ್ನು ಸಾಕಷ್ಟು ಜನರು ಹೆಸರುಕಾಳಿಗೂ ಕೂಡ ಕ್ರಿಮಿನಾಶಕ ಪುಡಿಯನ್ನು ಸೇರಿಸಿ ಇಡುತ್ತಾರೆ. ಆದರೆ ಇದನ್ನು ಮಾಡುವ ಬದಲು ಹೆಸರುಕಾಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಗಾಳಿ ಹಾಡುವಂತಹ ಸ್ಥಳದಲ್ಲಿ ಇಡಬೇಕು ಮತ್ತು ಇವುಗಳಿಗೆ ಬೇವಿನ ಸೊಪ್ಪು ಹಾಕುವುದರಿಂದ ಹುಳುಗಳು ಹೆಸರು ಕಾಳಿಗೆ ಬರುವುದಿಲ್ಲ. ಇನ್ನು ಕೆಲವೊಮ್ಮ ಉಪ್ಪಿನ ಪ್ರಮಾಣ ಅಡುಗೆಗೆ ಜಾಸ್ತಿಯಾಗಿರುತ್ತದೆ.

ಉಪ್ಪು ಜಾಸ್ತಿಯಾದರೇ ಯಾರು ಕೂಡ ಅಡುಗೆಯನ್ನು ಸೇವನೆ ಮಾಡಲು ಇಷ್ಟಪಡುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಸ್ವಲ್ಪ ಗೋಧಿಹಿಟ್ಟನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕಲಸಿ ಉಂಡೆಯಾಕಾರದಲ್ಲಿ ಅದನ್ನು ಮಾಡಬೇಕು. ಈ ಉಂಡೆಗಳನ್ನು ಉಪ್ಪು ಜಾಸ್ತಿಯಾಗಿರುವಂತಹ ಅಡುಗೆಗಳಲ್ಲಿ ಇಟ್ಟರೆ ಗೋಧಿ ಹಿಟ್ಟು ಉಪ್ಪನ್ನು ಹೀರಿಕೊಳ್ಳುತ್ತದೆ. ಒಮ್ಮೆ ಇದನ್ನು ಪ್ರಯತ್ನಿಸಿ ನೋಡಿ. ಇನ್ನು ಸಾಕಷ್ಟು ಜನರು ತಮ್ಮ ಮನೆಯಲ್ಲಿ ಇರುವೆಗಳು ಜಾಸ್ತಿಯಾದಾಗ ಕ್ರಿಮಿನಾಶಕಗಳನ್ನು ಹೊಡೆಯುತ್ತಾರೆ.

ಇವುಗಳನ್ನು ಹೊಡೆಯುವುದರಿಂದ ಚಿಕ್ಕ ಮಕ್ಕಳು ನಿಮ್ಮ ಮನೆಯಲ್ಲಿದ್ದರೆ ಅವರು ಅವುಗಳನ್ನು ಮುಟ್ಟುವುದರಿಂದ ಸಾಕಷ್ಟು ತೊಂದರೆ ಉಂಟಾಗುತ್ತದೆ. ಹಾಗಾಗಿ ಇರುವೆಗಳು ನಿಮ್ಮ ಮನೆಯಲ್ಲಿದ್ದಾಗ ಅದಕ್ಕೆ ಸ್ವಲ್ಪ ಅರಿಶಿಣವನ್ನು ಹಾಕಬಹುದು ಅಥವಾ ಕರ್ಪೂರದ ಪುಡಿಯನ್ನು ಹಾಕುವುದರಿಂದ ಇರುವೆಗಳು ಸುಳಿಯುವುದಿಲ್ಲ ಮತ್ತು ಇರುವೆಗಳು ಸಾಯುತ್ತವೆ.

ಇನ್ನು ರಂಗೋಲಿಯನ್ನು ಹಾಕುವಾಗ ಸ್ವಲ್ಪ ಅರಿಶಿಣದ ಪುಡಿ ಅಥವಾ ಸುಣ್ಣದ ಪುಡಿಯನ್ನು ಮಿಶ್ರಣ ಮಾಡಿ ಹಾಕುವುದರಿಂದ ಕ್ರಿಮಿಕೀಟಗಳು ನಿಮ್ಮ ಮನೆಗೆ ಬರುವುದಿಲ್ಲ ಮತ್ತು ನಿಮ್ಮ ಮನೆಯ ಬಾಗಿಲಿಗೆ ಅರಿಶಿಣವನ್ನು ಹಚ್ಚುವುದರಿಂದ ಕ್ರಿಮಿಕೀಟಗಳು ನಿಮ್ಮ ಮನೆಗೆ ಬರುವುದಿಲ್ಲ. ಹಾಗಾಗಿ ಹಿಂದಿನ ಕಾಲದಲ್ಲಿ ಸಾಕಷ್ಟು ಜನರು ಮನೆಯ ಬಾಗಿಲಿಗೆ ಅರಿಶಿಣ ಮತ್ತು ಕುಂಕುಮವನ್ನು ಹಚ್ಚುತ್ತಾ ಇದ್ದರು. ಈಗ ಸಾಕಷ್ಟು ಜನರು ಮರೆತುಬಿಟ್ಟಿದ್ದಾರೆ.

Leave a Comment