ನಾವು ಈ ಲೇಖನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಈ ಒಂದು ಮಂತ್ರ ಹೇಳಿಕೊಂಡರೆ , ಕಷ್ಟಗಳೆಲ್ಲ ಕರಗುತ್ತವೆ ಎಂಬುದನ್ನು ನೋಡೋಣ . ಸನಾತನ ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಮಂತ್ರಗಳಿವೆ . ಈ ಮಂತ್ರಗಳನ್ನು ಸದುದ್ದೇಶ ಮತ್ತು ಒಳ್ಳೆಯ ಮನಸ್ಸಿನಿಂದ ಪಠಿಸಿದರೆ , ಆಗ ಆ ಮಂತ್ರದ ಫಲ ಖಂಡಿತವಾಗಿಯೂ ಸಿಗುತ್ತದೆ . ಇಂತಹ ಮಂತ್ರಗಳಲ್ಲಿ ಮಹಾ ಮೃತ್ಯುಂಜಯ ಮಂತ್ರ ಕೂಡ ಒಂದು . ಈ ಮಂತ್ರಗಳನ್ನು ವೇದಗಳ ಹೃದಯ ಎಂದು ಹೇಳಲಾಗುತ್ತದೆ .
ಮಹಾ ಮೃತ್ಯುಂಜಯ ಮಂತ್ರವು ನಾಲ್ಕು ವೇದಗಳಲ್ಲಿ ಕೆಲವೊಂದು ಭಾಗಗಳಾಗಿ ಕಂಡು ಬರುತ್ತದೆ , ಅನ್ನುವ ಒಂದು ಉಲ್ಲೇಖವಿದೆ. ಶುಕ್ರಾಚಾರ್ಯರಿಗೆ ಸ್ವತಃ ಭಗವಾನ್ ಈಶ್ವರ ಈ ಮಂತ್ರವನ್ನು ಕಲಿಸಿದ್ದಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ . ರಾಕ್ಷಸರ ಗುರುವಾಗಿದ್ದ ಶುಕ್ರಾಚಾರ್ಯರು ಸಾವನ್ನ ಗೆದ್ದು ಬರುವ ಮಂತ್ರವನ್ನು ಶಿವನಿಂದ ಪಡೆದಿದ್ದರು .
ಆದರೆ ವಶಿಷ್ಠ ಮಹರ್ಷಿಗಳು ದೀರ್ಘಾವಧಿ ತಪಸ್ಸಿನ ಮೂಲಕ ಈ ಮಂತ್ರವನ್ನು ಪಡೆದು , ಅದನ್ನು ಲೋಕ ಕಲ್ಯಾಣ ಅರ್ಥವಾಗಿ ಬಳಿಸಿ ಕೊಂಡರು , ಅನ್ನೋದನ್ನ ನಾವು ಪುರಾಣಗಳಲ್ಲಿ ವಿವರವಾಗಿ ಹೇಳಲಾಗಿದೆ . ಇಂತಹ ಪವಿತ್ರ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳೇನು? ಮತ್ತು ಈ ಮಂತ್ರವನ್ನು ಹೇಗೆ ಪಡಿಸಬೇಕು ಎಂಬುದನ್ನು ನೋಡೊಣ .
ಮಹಾ ಮೃತ್ಯುಂಜಯ ಮಂತ್ರವನ್ನು ನಿರಂತರವಾಗಿ ಪಠಿಸುವ ವ್ಯಕ್ತಿಯನ್ನು ಯಮ ಲೋಕಕ್ಕೆ ಕರಿದು ಕೊಂಡು ಹೋಗೋಕೆ ಯಮ ರಾಜನೂ ಕೂಡ ಯೋಚಿಸಬೇಕಾಗುತ್ತದೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ . ಮಹಾದೇವ ನನ್ನ ದೇವಾದಿ ದೇವ ಎಂದು ಕರೆಯಲಾಗಿದೆ . ಭಕ್ತರ ಮೊರೆಯನ್ನು ಕೇಳಿದ ತಕ್ಷಣ ಓಡಿ ಬರುವವನು ಮಹಾದೇವ .ಮತ್ತು ಭಕ್ತರ ನೋವನ್ನ ಬಹುಬೇಗ ನಿವಾರಿಸುತ್ತಾನೆ .
ಶಿವನನ್ನು ಒಲಿಸಿಕೊಳ್ಳುವುದು ಬಹಳ ಸುಲಭ . ಮಹಾದೇವನ ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸುವುದರ ಮೂಲಕ ಶಿವನನ್ನು ಸಂತೋಷ ಪಡಿಸಿ ಜೀವನದಲ್ಲಿ ಇರುವ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು . ಶಿವನ ಮಹಾ ಮೃತ್ಯುಂಜಯ ಮಂತ್ರವನ್ನು ಮಹಾಮಂತ್ರ ಎಂದು ಕರೆಯಲಾಗುತ್ತದೆ . ಇದರಲ್ಲಿ ಶಿವನಿಗೆ ಮಹಾ ಮೃತ್ಯುಂಜಯ ರೂಪದಲ್ಲಿ ದೀರ್ಘಾವಧಿಯ ಪ್ರಾರ್ಥನೆ ಮಾಡಲಾಗುತ್ತದೆ .
ಈ ಮಂತ್ರವನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ . ಗುಣಪಡಿಸಲಾಗದ ಖಾಯಿಲೆಗಳನ್ನು ತೊಡೆದು ಹಾಕೋಕೆ , ಮತ್ತು ಅಕಾಲಿಕ ಮರಣವನ್ನು ತಪ್ಪಿಸುವುದಕ್ಕೆ ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸುವ ಬಗ್ಗೆ ಧರ್ಮ ಗ್ರಂಥಗಳು ಮತ್ತು ಪುರಾಣಗಳಲ್ಲಿ ವಿಶೇಷವಾದ ಉಲ್ಲೇಖವಿದೆ. ಮಹಾ ಮೃತ್ಯುಂಜಯ ಮಂತ್ರವು ಶಿವನನ್ನು ಮೆಚ್ಚಿಸುವುದಕ್ಕೆ ಇರುವ ಅತ್ಯಂತ ಸುಲಭದ ದಾರಿ ಎಂದು ಹೇಳಲಾಗಿದೆ .
ಭಗವಾನ್ ಶಂಕರನನ್ನ ಮೆಚ್ಚಿಸೋಕೆ ಇದು ಸರಳ ಮತ್ತು ದೋಷ ರಹಿತ ಮಂತ್ರ ಎಂದು ಪರಿಗಣಿಸಲಾಗುತ್ತದೆ .ಈ ಶಿವ ಮಂತ್ರವು ಅಮೋಘ ಮತ್ತು ಮೋಕ್ಷವಾಗಿದೆ . ವಿಷಮ ಕಾಲದಲ್ಲಿ ಭಕ್ತನು ಈ ಮಂತ್ರವನ್ನು ಪಠಿಸುವುದರಿಂದ ಅಥವಾ ಜಪಿಸುವುದರಿಂದ ಆತನ ಕಷ್ಟ ಮತ್ತು ಸಮಸ್ಯೆಗಳು ಒಂದೊಂದಾಗಿ ಪರಿಹಾರವಾಗಲು ಪ್ರಾರಂಭವಾಗುತ್ತದೆ .
ಈ ಮಂತ್ರವನ್ನು ಪಠಿಸುವುದರಿಂದ ಜೀವನದ ಅತ್ಯಂತ ದೊಡ್ಡ ಅಡೆ ತಡೆಗಳು ದೂರವಾಗುತ್ತವೆ .ಆದರೆ ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಮಾತ್ರ ಮಂತ್ರದ ಶಕ್ತಿ ಹೆಚ್ಚಾಗುತ್ತದೆ . ಮತ್ತು ಮಂತ್ರದ ಪ್ರಯೋಜನ ಕೂಡ ಸಂಪೂರ್ಣವಾಗಿ ದೊರೆಯುತ್ತದೆ . ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದಕ್ಕೆ ಸೋಮವಾರದ ದಿನ ಅಥವಾ ಪ್ರದೋಷ್ ದಿನವನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಸೂಕ್ತ ಎಂದು ಹೇಳಲಾಗುತ್ತದೆ .
ಎರಡು ದಿನವನ್ನು ಶಿವನ ದಿನ ಎಂದು ಪರಿಗಣಿಸಲಾಗುತ್ತದೆ .ಮತ್ತು ಈ ದಿನದಂದು ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸುವುದರ ಮೂಲಕ ವಿಶೇಷ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು .ಸೋಮವಾರದ ದಿನ ಅಥವಾ ಪ್ರದೋಷ್ ದಿನ ಬೆಳಿಗ್ಗೆ ಬೇಗ ಸ್ನಾನ ಮಾಡಿ , ಉತ್ತಮ ಆಲೋಚನೆಗಳು ಮತ್ತು ಸ್ವಾ ಶುದ್ಧೀಕರಣದ ಜೊತೆ ಪೂಜಾ ಸ್ಥಳ ದಲ್ಲಿ ಶಿವನ ಮುಂದೆ ಕುಳಿತುಕೊಳ್ಳಬೇಕು .
ತುಪ್ಪದ ದೀಪವನ್ನು ಬೆಳಗಿಸಿ ನಂತರ , ಮಹಾ ಮೃತ್ಯುಂಜಯ ಮಂತ್ರವನ್ನು ಕನಿಷ್ಠ 108 ಬಾರಿ ಶ್ರೀಗಂಧದ ಹಾರವನ್ನು ಕೈಯಲ್ಲಿ ಹಿಡಿದು ಜಪಿಸಬೇಕು . ಶಿವನನ್ನು ಭಕ್ತಿಯಿಂದ ಸ್ಮರಿಸಿ ಮತ್ತು ಜೀವ ಮತ್ತು ಜೀವನವನ್ನು ಉಳಿಸಬೇಕೆಂದು ಪ್ರಾರ್ಥಿಸಿ . ಇನ್ನು ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಕೆಲವು ನಿಯಮಗಳನ್ನು
ಅನುಸರಿಸಬೇಕು . ಮತ್ತು ಆ ನಿಯಮಗಳ ಪ್ರಕಾರ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸದೆ ಇದ್ದರೆ , ನೀವು ಮಂತ್ರವನ್ನು ಪಠಿಸಿಯು ಪ್ರಯೋಜನವಿಲ್ಲ .
ಅಷ್ಟು ಮಾತ್ರವಲ್ಲ ನೀವು ತಪ್ಪಾದ ನಿಯಮದಲ್ಲಿ ಮಂತ್ರವನ್ನು ಪಠಿಸಿದರೆ ಭಗವಾನ್ ಶಿವನು ಕೂಡ ಕೋಪಗೊಳ್ಳುತ್ತಾನೆ .ಮತ್ತು ಮಹಾ ಮೃತ್ಯುಂಜಯ ಮಂತ್ರವನ್ನು ಯಾವುದೇ ಸಮಯದಲ್ಲಿ ಬೇಕಾದರೂ ಪಠಿಸಬಹುದು .ಮಹಾ ಮೃತ್ಯುಂಜಯ ಮಂತ್ರವನ್ನು ಶ್ರಾವಣದಲ್ಲಿ ಪಠಿಸುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು .
ಈ ಮಂತ್ರವನ್ನು ಪಠಿಸುವಾಗ ಯಾವಾಗಲೂ ಉಚ್ಚಾರಣೆ ಸರಿಯಾಗಿರಬೇಕು . ಅಪ್ಪಿ ತಪ್ಪಿಯೂ ಕೂಡ ಮಂತ್ರದ ಉಚ್ಚಾರಣೆಯಲ್ಲಿ ತಪ್ಪಾಗಬಾರದು .ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಎಂದಿಗೂ ನೆಲದ ಮೇಲೆ ಕುಳಿತುಕೊಂಡು ಪಠಿಸಬಾರದು . ಇನ್ನು ಧಾರ್ಮಿಕ ಗ್ರಂಥಗಳ ಪ್ರಕಾರ ಮುಂಜಾನೆ ಎರಡರಿಂದ ನಾಲ್ಕು ಗಂಟೆಯ ಸಮಯ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸೋಕೆ ಅತ್ಯುತ್ತಮ ಸಮಯವಾಗಿದೆ . ಆದರೆ ಈ ಸಮಯದಲ್ಲಿ ನಿಮಗೆ ಜಪ ಮಾಡಲು ಸಾಧ್ಯವಾಗದೇ ಇದ್ದರೆ ,
ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡಿ , ಶುಚಿಯಾಗಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಬಹುದು .ರುದ್ರಾಕ್ಷಿಯನ್ನು ಹಿಡಿದು ಈ ಮಂತ್ರವನ್ನು ಕನಿಷ್ಠ ಐದು ಬಾರಿ ಜಪಿಸಬೇಕು. ಆದರೆ ಇಲ್ಲಿ ನೀವು ಗಮನಿಸಬೇಕಾದ ವಿಷಯ ಯಾವುದೆಂದರೆ , ಯಾವಾಗಲೂ ಮಹಾ ಮೃತ್ಯುಂಜಯ ಮಂತ್ರದ ಪಠಣದ ಸಂಖ್ಯೆ ಹೆಚ್ಚಾಗುತ್ತಾ ಹೋಗಬೇಕು .ಅಂದರೆ ಇಂದು ನೀವು ಐದು ಬಾರಿ ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸಿದರೆ , ನಾಳೆ ಆರು ಬಾರಿ ಮತ್ತು ನಾಳಿದ್ದು ಏಳು ಬಾರಿ ಅಥವಾ ಇದಕ್ಕೂ ಹೆಚ್ಚು ಬಾರಿ ಜಪಿಸಬೇಕಾಗುತ್ತದೆ .
ಜಪಿಸುವ ಸಂಖ್ಯೆಯನ್ನು ಎಂದಿಗೂ ಕಡಿಮೆ ಮಾಡಬಾರದು .ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸುವಾಗ ನಿಮ್ಮ ತುಟಿಗಳಿಂದ ಮಂತ್ರ ಹೊರ ಬರಬಾರದು . ಅಂದರೆ ಮನಸ್ಸಿನಲ್ಲಿ ಮಂತ್ರವನ್ನು ಪಠಿಸಬೇಕು .ಮಂತ್ರವನ್ನು ಪಠಿಸುವಾಗ ನಿಮ್ಮ ಮುಖ ಪೂರ್ವಕ್ಕೆ ಮುಖ ಮಾಡಿರಬೇಕು . ಪೂರ್ವದತ್ತ ಮುಖ ಮಾಡಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು .ಅಷ್ಟು ಮಾತ್ರವಲ್ಲ ಈ ಮಂತ್ರವನ್ನು ಕೇವಲ ನಿಗದಿತ ಸ್ಥಳದಲ್ಲಿ ಮಾತ್ರ ಜಪಿಸಬೇಕು. ಮಂತ್ರವನ್ನು ಜಪಿಸುವ ಸ್ಥಳದಲ್ಲಿ ನಿಮ್ಮ ಮುಂದೆ ಶಿವನ ವಿಗ್ರಹ ಅಥವಾ ಫೋಟೋ ಅಥವಾ ಮಹಾ ಮೃತ್ಯುಂಜಯ ಯಂತ್ರವನ್ನು ಇಟ್ಟು ಜಪಿಸಬೇಕು .
ಹಾಗೆ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಮನಸ್ಸನ್ನು ಕೇಂದ್ರೀಕರಿಸಬೇಕು . ನಿಮ್ಮ ಮನಸ್ಸು ಕೇವಲ ಮಂತ್ರದ ಮೇಲೆ ಕೇಂದ್ರೀಕೃತವಾಗಿರಬೇಕು . ಮಂತ್ರ ಪಠಿಸುವಾಗ ನಿಮ್ಮ ಮನಸ್ಸನ್ನು ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಿ .ಮನಸ್ಸಿನಲ್ಲಿ ಬೇರೆ ಯಾವುದೇ ಚಿಂತೆ ಇರಬಾರದು .ಮಹಾ ಮೃತ್ಯುಂಜ ಮಂತ್ರವನ್ನು ಪಠಿಸುವಾಗ ಯಾವುದೇ ರೀತಿಯ ಸೋಮಾರಿತನ , ಉದಾಸೀನತೆ ಇರಬಾರದು . ಮಾಂಸಾಹಾರವನ್ನು ಸೇವಿಸಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಬಾರದು .
ನಿತ್ಯವೂ ಈ ಮಂತ್ರವನ್ನು 108 ಬಾರಿ ಜಪಿಸಬೇಕು .ನೀವು ಈ ಮಂತ್ರವನ್ನು ಒಂದು ಸಾವಿರ ಬಾರಿ ಪಠಿಸಬೇಕು ಎಂದು ಬಯಸಿದರೆ ನುರಿತ ಬ್ರಾಹ್ಮಣರನ್ನು ಕರೆಸಿ ಈ ಮಂತ್ರವನ್ನು ಪಠಿಸುವಂತೆ ಹೇಳಬೇಕು .ಇನ್ನು ನಿಮ್ಮ ಹತ್ತಿರ ಕಡಿಮೆ ಸಮಯ ಇದ್ದು ,ಮಂತ್ರದ ಪೂರ್ಣ ಫಲವನ್ನು ಪಡೆಯಬೇಕೆಂಬ ಇಚ್ಛೆಯನ್ನು ಹೊಂದಿದ್ದರೆ , ಹತ್ತಿರದ ಶಿವ ದೇವಾಲಯಕ್ಕೆ ಹೋಗಿ ನೀರಿನಿಂದ ಶಿವಲಿಂಗವನ್ನು ತೊಳೆಯುವಾಗ ಈ ಮಂತ್ರವನ್ನು ಪಠಿಸಿ , ಜೊತೆಗೆ ಭಗವಂತನಿಗೆ ಬಿಲ್ವದ ಎಲೆಯನ್ನು ಅರ್ಪಿಸಿ .
ಇದನ್ನು ಸೋಮವಾರ ಆರಂಭಿಸಿ , ನಂತರ 15 ದಿನಗಳ ಕಾಲ ಅನುಸರಿಸಿ .ಈ ಮಹಾ ಮೃತ್ಯುಂಜಯ ಮಂತ್ರ ಅನ್ನುವುದು ಅತ್ಯಂತ ಶಕ್ತಿಯುತ ಮಂತ್ರವಾಗಿದ್ದು , ಮನಸ್ಸಿಗೆ ಪೋಷಣೆ ಮತ್ತು ಪುನರ್ಜೀವನವನ್ನು ಕೊಡುತ್ತದೆ .ಜೀವನದಲ್ಲಿ ಶಾಂತಿ, ಸಮೃದ್ಧಿ , ಆರೋಗ್ಯ ,ಸಂಪತ್ತು ಮತ್ತು ಸಂತೋಷದ ದೀರ್ಘಾವಧಿಯೊಂದಿಗೆ ಆಶೀರ್ವಾದ ನೀಡುತ್ತದೆ . ಒಳ್ಳೆಯ ‘ಆಲೋಚನೆಗಳನ್ನು ಮತ್ತು ಸಕಾರಾತ್ಮಕ ಭಾವನೆಗಳನ್ನು ಉತ್ತೇಜಿಸುವ ಮೂಲಕ ನಿಮ್ಮ ಮನಸ್ಸನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ .
ನಿಮ್ಮನ್ನು ಕಾಡುತ್ತಿರುವ ಯಾವುದೇ ಖಾಯಿಲೆಯಿಂದ ವೇಗವಾಗಿ ಚೇತರಿಸಿಕೊಳ್ಳುವುದಕ್ಕೆ ,ಸಹಾಯ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾದ ಆಹಾರ ಮತ್ತು ಔಷಧದ ರೀತಿ ಇದು ಕೆಲಸ ಮಾಡುತ್ತದೆ. ಈ ಮಂತ್ರ ಸಕಾರಾತ್ಮಕತೆ ಯನ್ನು ಆಕರ್ಷಿಸುತ್ತದೆ .ನಿಮ್ಮ ಸುತ್ತಮುತ್ತಲಿನ ಅಶುದ್ಧತೆಯನ್ನು ಮತ್ತು ಯಾವುದೇ ರೀತಿಯ ಋಣಾತ್ಮಕತೆಯನ್ನು ನಾಶ ಮಾಡುತ್ತದೆ .
ಇನ್ನು ಪ್ರತಿದಿನ ನಿಮ್ಮ ಉದ್ಯೋಗಗಳಿಗೆ ಮತ್ತು ವೃತ್ತಿ ನಿಮತ್ತ ಅಥವಾ ಮನೆಯಿಂದ ಹೊರಡುವ ಮುನ್ನ ಯಾವುದಾದರೂ ಶುಭ ಕಾರ್ಯಕ್ಕೆ ಅಥವಾ ಅಗತ್ಯ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗುವ ಮುನ್ನ , ರಾತ್ರಿ ಮಲಗುವ ಮುನ್ನ ಯಾವುದೇ ಔಷಧಿ ಸೇವಿಸುವ ಮುನ್ನ ಈ ಮಂತ್ರವನ್ನು ಕನಿಷ್ಠ 9 ಬಾರಿ ಪಠಿಸಬೇಕು . ವಾಹನ ಚಲಾಯಿಸುವುದಕ್ಕೆ ತೊಡಗುವ ಮುನ್ನ ಅಥವಾ ಪ್ರಯಾಣದ ವಾಹನದ ಚಾಲನೆಗೂ ಮುನ್ನ ಈ ಮಂತ್ರವನ್ನು ಮೂರು ಬಾರಿ ಪಠಿಸಬೇಕು .
ದಿನದ ಇತರೆ ಯಾವುದೇ ಬಿಡುವಿನ ವೇಳೆಯಲ್ಲಿ 108 ಬಾರಿ ಪ್ರತಿದಿನ ಪಠಿಸುವುದರ ಮೂಲಕ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ . ಸ್ನಾನದ ಬಳಿಕ ದೇಹಕ್ಕೆ ಹಚ್ಚುವ ವಿಭೂತಿ ಅಥವಾ ಭಸ್ಮ ,ಚಂದನ , ಕುಂಕುಮವನ್ನು ಹಚ್ಚಿಕೊಳ್ಳುವಾಗ ಈ ಮಂತ್ರವನ್ನು ಪಠಿಸಬೇಕು . ಇನ್ನೊಂದು ವಿಧಾನ ಎಂದರೆ , ಒಂದು ಲೋಟದಲ್ಲಿ ತಣ್ಣೀರು ತುಂಬಿ ಪೂರ್ವಾಭಿಮುಖವಾಗಿ ,
ಅಂದರೆ ಸಾಧ್ಯವಾದರೆ ಪದ್ಮಾಸನದಲ್ಲಿ ಚಕ್ಕ ಮಕ್ಕಲ ಹಾಕಿಕೊಂಡು ಬೆನ್ನು ನೆಟ್ಟಗೆ ಇರುವ ಹಾಗೆ ಕುಳಿತುಕೊಂಡು ಬಲ ಹಸ್ತದಿಂದ ಲೋಟವನ್ನು ಮುಚ್ಚಿ ಈ ಮಂತ್ರವನ್ನು 1 ಸಾವಿರದ 8 ಸಾರಿ ಪಠಿಸಿ ಈ ನೀರನ್ನು ಮನೆ ಒಳಗಡೆ ಎಲ್ಲ ಪ್ರೋಕ್ಷಿಸಬೇಕು . ಚಿಕ್ಕ ಚಮಚ ಅಥವಾ ಪ್ರಸಾದದ ಮಿಳ್ಳೆ ಅನ್ನು ಉಪಯೋಗಿಸಿ ಇತರೆ ಭಕ್ತರಿಗೂ ವಿತರಿಸಿ .ಇದರಿಂದ ಶಿವನ ಅಪಾರವಾದ ಶಕ್ತಿಯ ಒಂದು ಅಂಶ ಈ ನೀರಿಗೆ ಲಭ್ಯವಾಗಿ ಮನೆಯನ್ನು ಬೆಳಗುತ್ತದೆ . ಹಾಗೂ ಭಕ್ತರಿಗೂ ಕೂಡ ಒಳ್ಳೆಯದಾಗುತ್ತದೆ .
ಇನ್ನೂ ರಾತ್ರಿ ಕಳೆದ ನಂತರ ಮತ್ತು ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಸಂಭವಿಸುವ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ . ಅಂದರೆ ಬೆಳಗ್ಗೆ ನಾಲ್ಕು ಗಂಟೆಯಿಂದ ಐದು ಮೂವತ್ತರ ವರೆಗಿನ ಸಮಯವನ್ನ ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತ ಎಂದೂ ಕರೆಯಲಾಗುತ್ತದೆ .ಈ ಮುಹೂರ್ತಕ್ಕೆ ನಮ್ಮ ಋಷಿ ಮುನಿಗಳು ವಿಶೇಷವಾದ ಮಹತ್ವವನ್ನು ನೀಡಿದ್ದಾರೆ .
ಅವರ ಪ್ರಕಾರ ಈ ಸಮಯ ಮಲಗುವುದಕ್ಕೆ ಉತ್ತಮವಾಗಿರುವುದಿಲ್ಲ . ಬದಲಾಗಿ ಬ್ರಹ್ಮ ಮುಹೂರ್ತದಲ್ಲಿ ಹೆದ್ದೇಳುವುದು , ಸೌಂದರ್ಯ , ಶಕ್ತಿ ಜ್ಞಾನ ಮತ್ತು ಬುದ್ಧಿವಂತಿಕೆ ಮತ್ತು ಆರೋಗ್ಯವನ್ನು ತರುತ್ತದೆ . ಸೂರ್ಯೋದಯಕ್ಕೂ ಒಂದೂವರೆ ಗಂಟೆ ಮೊದಲು ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳಬೇಕು . ಈ ಸಮಯದಲ್ಲಿ ಮಲಗಬಾರದು ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ .
ನಿರ್ಮಲವಾದ ಹಾಗೂ ಶುದ್ಧವಾದ ವಾತಾವರಣ ಹೊಂದಿರುವ ಬ್ರಹ್ಮ ಮುಹೂರ್ತವು ಧನಾತ್ಮಕ ಶಕ್ತಿಗಳಿಂದ ಆವೃತವಾಗಿರುತ್ತದೆ .ಅಂತಹ ಸಮಯದಲ್ಲಿ ಒಬ್ಬ ವ್ಯಕ್ತಿ ಧ್ಯಾನ ಹಾಗೂ ಸೂರ್ಯ ನಮಸ್ಕಾರಗಳಂತಹ ವ್ಯಾಯಾಮ ಮಾಡುವುದರಿಂದ ಆಶೀರ್ವಾದವನ್ನು ಪಡೆಯಬಹುದು . ಇಂತಹ ಬ್ರಹ್ಮ ಮುಹೂರ್ತದಲ್ಲಿ ನಾವು ಹೇಳುವ ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಕಲ ಸೌಭಾಗ್ಯಗಳು ನಿಮ್ಮದಾಗುತ್ತದೆ .ಆ ಮಂತ್ರ
ಹೀಗಿದೆ ” ಓಂ ಜೂಂ ಸಃ ” ಇದನ್ನು ಲಘು ಮಹಾ ಮೃತ್ಯುಂಜಯ ಮಂತ್ರ ಎಂದು ಕರೆಯಲಾಗುತ್ತದೆ .
ಮಹಾ ಮೃತ್ಯುಂಜಯ ಮಂತ್ರದ ಅಷ್ಟೇ ಈ ಮಂತ್ರವೂ ಕೂಡ ಶಕ್ತಿಶಾಲಿ ಆಗಿರುತ್ತದೆ . ಇದನ್ನು ಪಠಿಸುವುದರಿಂದ ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆಯಲು ಸಾಧ್ಯವಾಗುತ್ತದೆ . ಇದು ಪರೀಕ್ಷೆ ಭೀತಿಯನ್ನು ನಿವಾರಿಸುತ್ತದೆ . ಪರೀಕ್ಷೆಯನ್ನು ತುಂಬಾ ಧೈರ್ಯದಿಂದ ಎದುರಿಸಲು ನೆರವಾಗುತ್ತದೆ .ಇದು ಏಕಾಗ್ರತೆ ಗಮನ ಮತ್ತು ದೃಷ್ಟಿಕೋನವನ್ನು ಹೆಚ್ಚಿಸುತ್ತದೆ .
ಮನಸ್ಸಿನಲ್ಲಿರುವ ಎಲ್ಲಾ ಅಸ್ಥಿರತೆಯನ್ನು ನಿವಾರಣೆ ಮಾಡುತ್ತದೆ . ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ಶಿವನ ಮೂರ್ತಿ ಅಥವಾ ಫೋಟೋ ಮುಂದೆ ಕುಳಿತುಕೊಂಡು ಈ ಮಂತ್ರವನ್ನು 21 ಬಾರಿ ಪಠಿಸಬೇಕು. ಓದುವುದರಲ್ಲಿ ನಿಮಗೆ ಯಾವುದೇ ಸಮಸ್ಯೆ ಇದ್ದರೂ , ನಿವಾರಣೆಯಾಗುತ್ತದೆ .ಶಾಲೆಗೆ ಹೋಗುವ ಮೊದಲು ಈ ಮಂತ್ರವನ್ನು ಮೂರು ಬಾರಿ ಪಠಿಸಿ , ಫಲಿತಾಂಶಕ್ಕಾಗಿ ಮಲಗುವ ಮೊದಲು ಮೂರು ಬಾರಿ ಪಠಿಸಬೇಕು .ಇನ್ನು ಸಾಲ ಎನ್ನುವುದು ನಿಮ್ಮನ್ನ ಚಿಂತೆಗೆ ಈಡು ಮಾಡು ತ್ತದೆ .
ಅದೇ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ , ಸಾಲದಿಂದ ಮುಕ್ತಿ ಪಡೆದು , ನೀವು ಕಳೆದುಕೊಂಡಿರುವ ಹಣ ಮರಳಿ ಬರುತ್ತದೆ . ಸಾಲದ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ , ಬೆಳಿಗ್ಗೆ ಸ್ನಾನದ ಆ ನಂತರ 108 ಬಾರಿ ಪಠಿಸಬೇಕು. ಅದೇ ರೀತಿ ಸಂಜೆ ಕೂಡ ಈ ಮಂತ್ರವನ್ನು ಪಠಿಸುತ್ತಾ ಬಂದರೆ , ಆಗ ನಿಮ್ಮ ಆರ್ಥಿಕ ಪರಿಸ್ಥಿತಿಯು ಖಂಡಿತವಾಗಿ ಸುಧಾರಣೆ ಆಗುತ್ತದೆ .
ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ .ಆತ್ಮವಿಶ್ವಾಸ ಮರಳಿ ಬರುತ್ತದೆ . ಇನ್ನು ನಿಮ್ಮ ವೃತ್ತಿಪರ ಯಶಸ್ಸು ಮತ್ತು ಪ್ರಗತಿಯನ್ನ ಸಹಿಸದ ಹಲವಾರು ಜನರು ಇರುತ್ತಾರೆ . ಇದರಿಂದ ನಿಮ್ಮ ಸಾಧನೆಗೆ ಅಡ್ಡಿ ಕೂಡ ಆಗುತ್ತಿರುತ್ತದೆ . ಪ್ರತೀ ನಿತ್ಯವೂ ನೀವು 54 ಬಾರಿ ಮತ್ತು ಸಂಜೆ ವೇಳೆ 54 ಬಾರಿ ಮಂತ್ರವನ್ನು ಪಠಿಸಬೇಕು . ನಿಮ್ಮ ದೈನಂದಿನ ಕೆಲಸವನ್ನು ಆರಂಭಿಸುವ ಮೊದಲು ಈ ಮಂತ್ರವನ್ನು ಮೂರು ಬಾರಿ ಪಠಿಸಬೇಕು . ಇದರಿಂದ ನಿಮ್ಮ ಶತ್ರುಗಳು ಸೂರ್ಯನ ಬೆಳಕಿನಡಿಯಲ್ಲಿ ಮಂಜು ಕರಗುವ ಹಾಗೆ ನಾಶವಾಗುತ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ಈ ಒಂದು ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿರುವ ಕಷ್ಟಗಳು ಮಾಯವಾಗುತ್ತದೆ ಎಂಬುದನ್ನು ಹೇಳಲಾಗಿದೆ.