ಕಟಕ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಅಕ್ಟೋಬರ್ ತಿಂಗಳಲ್ಲಿ ಕಟಕ ರಾಶಿಯವರ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ. ಎರಡನೇ ಮನೆಯಲ್ಲಿರುವ ಶುಕ್ರ ನಿಮ್ಮ ವಾಕ್ಚಾತುರ್ಯವನ್ನು ಹೆಚ್ಚು ಮಾಡುತ್ತಾನೆ. ಕೇಂದ್ರದಲ್ಲಿ ಗುರು ಸ್ವಲ್ಪ ಸಮಸ್ಯೆಗಳನ್ನು ತಂದುಕೊಡುತ್ತಾ ಇದ್ದರು ಸಹ ಸ್ವಲ್ಪ ಬ್ಯಾಲೆನ್ಸ್ ಆಗಿದೆ ಅಂದೆ ಎಂದು ಹೇಳಬಹುದು. ಇದುವರೆಗೂ ಗುರು ಚಾಂಡಾಲ ಯೋಗ ಇತ್ತು ಎಂದು ಹೇಳಬಹುದು. ಗುರು ದಶಮದಲ್ಲಿ ಕುಳಿತಿದ್ದರಿಂದ ಬರುತ್ತಾ ಇದ್ದ ಸಮಸ್ಯೆಗಳು ಬ್ಯಾಲೆನ್ಸ್ ಆಗುತ್ತಾ ಇತ್ತು ಎಂದು ಹೇಳಬಹುದು.

ಇದು ಹೀಗೆ ಮುಂದುವರೆದು ಕೆಲಸದಲ್ಲಿ ಬರುವ ಅವಕಾಶಗಳು ಹೆಚ್ಚಾಗುತ್ತದೆ. ಜೀವನದಲ್ಲಿ ಹೊಸ ಸ್ಥಾನಕ್ಕೆ ಇರಬಹುದು ಸಂಪತ್ತಿನಲ್ಲಿ ಹೆಚ್ಚಾಗಬಹುದು. ಶನಿ ನಿಮಗೆ ಆರೋಗ್ಯದಲ್ಲಿ ಒಂದಲ್ಲ ಒಂದು ತೊಂದರೆಯನ್ನು ಕೊಡುತ್ತಿದ್ದಾನೆ. ತಲೆನೋವು ಬೆನ್ನೆನೋವು ಇಂತಹ ಸಮಸ್ಯೆಗಳಿದ್ದರೆ ಒಂದು ಮಟ್ಟಕ್ಕೆ ಕಮ್ಮಿಯಾಗುತ್ತದೆ ಎಂದು ಹೇಳಬಹುದು. ಇಲ್ಲ ಸಂಪೂರ್ಣ ಕಮ್ಮಿ ಆಗಬಹುದು.

ಅಕ್ಟೋಬರ್ 16ರವರೆಗೆ ನಿಮ್ಮ ಹಣ ಸಂಪತ್ತು ನಿರಂತರವಾಗಿ ನಡೆದುಕೊಂಡು ಹೋಗುತ್ತದೆ. ಕೋಟು ಕಛೇರಿ ವಿಚಾರದಲ್ಲಿ ಗೆಲುವನ್ನು ಸಾಧಿಸುವಿರಿ. ಸಂತೋಷದಿಂದ ಇರುವಿರಿ ಮತ್ತು ಋಣಾತ್ಮಕ ಯೋಚನೆಗಳು ಹೆಚ್ಚಾಗುತ್ತದೆ. ನಿಮ್ಮ ತೃತೀಯ ಭಾಗದಿಂದ ಬುದಾದಿತ್ಯ ಯೋಗ ಉಂಟಾಗುತ್ತದೆ. ಇದು ನಿಮಗೆ ಪರಾಕ್ರಮವನ್ನು ತಂದುಕೊಡುತ್ತದೆ. ಇದರಿಂದ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಈ ತಿಂಗಳಲ್ಲಿ

ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಾಲ್ಕನೇ ಸ್ಥಾನದಲ್ಲಿ ಕುಜ ಬಂದಿರುವುದರಿಂದ ತಾಯಿಯ ಆರೋಗ್ಯದಲ್ಲೂ ಎಚ್ಚರಿಕೆ ವಹಿಸಬೇಕು. ನಿಮ್ಮನ್ನು ಚಂಚಲತೆಕಾಣಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಕೋಪ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಬೇಕು.

ವಿಶೇಷವಾಗಿ 18ರ ನಂತರ ರವಿ ಮತ್ತು ಬುಧ ಗ್ರಹ ನಿಮಗೆ ಹೆಚ್ಚಿನ ಫಲವನ್ನು ಕೊಡುತ್ತದೆ. ಧೈರ್ಯ ಮತ್ತು ಶೌರ್ಯವನ್ನು ತಂದುಕೊಡುತ್ತದೆ. ಯಾವುದೇ ಸರ್ಕಾರಿ ಕೆಲಸ ಆಗಬೇಕೆಂದಿದ್ದರೆ 16ರವರೆಗೆ ಉತ್ತಮವಾಗಿದೆ ಅಂತ ಹೇಳಬಹುದು ನಂತರ ಚೆನ್ನಾಗಿ ಇಲ್ಲ. ದ್ವಿತೀಯದಲ್ಲಿರುವ ಶುಕ್ರ ನಿಮ್ಮನ್ನು ಸತತವಾಗಿ ಕಾಪಾಡುತ್ತ ಬರುತ್ತಾನೆ.

Leave A Reply

Your email address will not be published.