ಮಿಥುನ ರಾಶಿ ಕೇತು ಪರಿವರ್ತನೆ

0

ಆತ್ಮೀಯ ಮಿಥುನ ರಾಶಿಯವರೆ ನಿಮ್ಮ ಕೇತು ಫಲವನ್ನು ನೋಡೋಣ ಇಷ್ಟು ದಿನ ಶನಿಯಿಂದ ಒಂದು ಮಟ್ಟಿಗೆ ಒಳ್ಳೆಯದಾಗುತ್ತದೆ. ರಾಹು ಮತ್ತು ಗುರುವಿನಿಂದಒಂತೂ ಬಂಪರ್ ಫಲಗಳೇ ಇವೆ, ಕೇತುವಿನಿಂದ ಸ್ವಲ್ಪ ಅಪಾಯವಾಗುವ ಸಾಧ್ಯತೆ ಇದೆ ಎಂದು ಈಗ ಹೇಳಬೇಕಾದ ಸಮಯ. ಬಾರಿ ಪ್ರವಾಹ ಬರುವುದಿದೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ

ಸಮುದ್ರಕ್ಕೆ ಇಳಿಯಬೇಡಿ ನೀರಿನಿಂದ ದೂರ ಇರಿ ಎಂದು ಎಚ್ಚರಿಕೆ ಮೊದಲೇ ನೀಡಿದರೆ ಜನ ಆ ಕೆಲಸವನ್ನು ಮಾಡಿ ಜೀವವನ್ನು ಉಳಿಸಿಕೊಳ್ಳುತ್ತಾರೆ. ಅದೇ ರೀತಿ ಸುಖ ಸ್ಥಾನಕ್ಕೆ ಆಗಮಿಸುವ ಕೇತು ಯಾವ ರೀತಿಯ ಅಪಾಯವನ್ನು ಮಾಡಬಹುದು ಎಂಬ ಸುಳಿವು ನೀಡಿದರೆ ನೀವು ಸ್ವಲ್ಪ ಎಚ್ಚರಗೊಳ್ಳಬಹುದು. ಕೇತು ಅಕ್ಟೋಬರ್ 30ಕ್ಕೆ ನಿಮಿಂದ ನಾಲ್ಕನೇ ಮನೆಯಾಗಿರುವ

ಕನ್ಯಾ ರಾಶಿಗೆ ಪ್ರವೇಶಿಸುತ್ತದೆ. ಅದರಿಂದ ಲಾಭವಿಲ್ಲ. ಈ ಸ್ಥಾನವನ್ನು ಸುಖ ಸ್ಥಾನವೆಂದು ಕರೆಯುತ್ತಾರೆ. ಸುಖ ನೆಮ್ಮದಿ ಮನಶಾಂತಿಗೆ ಬಂಗ ಬರುವುದಿದೆ. ನಿಮ್ಮಲ್ಲಿ ಕೆಲವರು ಜಾಬ್ ಮಾಡಲಿಕ್ಕೋಸ್ಕರ ಓದೋದಕ್ಕೋಸ್ಕರ ಮನೆಯಿಂದ ದೂರವಿರಬಹುದು ಅಥವಾ ಬೇರೆ ಕಡೆ ಮನೆ ಮಾಡಿರಬಹುದು ಹೀಗಿರುವಾಗ ತಂದೆ ತಾಯಿಯ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿ ವಾಪಾಸ್

ಊರಿಗೆ ಬಂದು ನೆಲೆಸುವಂತಹ ಸಂದರ್ಭ ಒದಗಬಹುದು. ಕೆಲವರಿಗೆ ಊರಲ್ಲಿ ಬಂದು ಸೆಟ್ಲಾಗಲು ಅವಕಾಶ ಅನ್ನಿಸಬಹುದು. ಆದರೆ ಒಳ್ಳೆಯ ಜಾಬಲ್ಲಿದ್ದು ಒಳ್ಳೆಯ ಎಜುಕೇಶನ್ ತೆಗೆದುಕೊಳ್ಳುತ್ತಿರುವವರಿಗೆ ಇದು ಲಾಸ್ ಎನಿಸುತ್ತದೆ. ಕೇತು ಸ್ವಲ್ಪ ಬತ್ತೆ ಇಡುವ ಕೆಲಸವನ್ನು ಮಾಡುತ್ತಾನೆ. ಮನೆಯವರ ನಡುವೆಯೇ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪ.

ಹೋಗ್ತಾ ಹೋಗ್ತಾ ದೊಡ್ಡದಾಗಿ ಮಾತು ಬಿಡುವುದು ಹೇಗೆ ಮನೆಯಲ್ಲಿ ಶಾಂತಿ ಮಾಯವಾಗಬಹುದು ಮಾತಾಡಿದರೆ ಜಗಳ. ಹೀಗೂ ಆಗಬಹುದು ಕ್ಲೀನಿಂಗ್ ಮಾಡುವಾಗ ಕಾಗದಪತ್ರ ಸಿಗಬಹುದು ಅದೇನು ಎಂದು ನೋಡಿದರೆ ಮನೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಗೊತ್ತಾಗದ ಹಾಗೆ ಖರೀದಿ ಮಾಡಿದ ಬಿಲ್ಲು ಅಥವಾ ಬಂಗಾರ ಹೇಗೆ ದುಬಾರಿ ವೆಚ್ಚದ ವಸ್ತುಗಳನ್ನು ಖರೀದಿಸಿದ್ದು ಇರಬಹುದು

ಆಗ ನಿಮಗೆ ಕೆಲಸ ಫೀಲ್ ಆಗಬಹುದು. ಎಷ್ಟು ಖರ್ಚು ಮಾಡಿದರು ನಮಗೆ ಹೇಳಿಲ್ಲ ಎಂದೆನಿಸಬಹುದು. ಅತ್ತೆ ಸೊಸೆ ನಡುವೆ ಜಗಳವಾಗಿ ಮಾತು ಬಂದಾಗಬಹುದು. ಕೆಲವೊಮ್ಮೆ ಕಣ್ಣಾರೆ ಕಂಡಿದ್ದನ್ನು ಪ್ರಮಾಣಿಸಿ ನೋಡಬೇಕು. ಯಾವುದೇ ಟಾಪಿಕ್ ಮಾತನಾಡುವಾಗ ನಿಮ್ಮ ಹೆಸರು ಬಂದರೆ ಸಾಕು ನೀವೇ ವಿಲನ್ ಆಗಿರುವಿರಿ ಆ ಸ್ಟೋರಿಯಲ್ಲಿ ಎಂಬ ಅನುಮಾನ ನಿಮಗೆ.

ಎದುರುಗಡೆ ಹೊಗಳಿ ಹಿಂದೆ ನಿಮ್ಮ ಬಗ್ಗೆ ಅಪಪ್ರಚಾರ ಮಾಡಬಹುದು. ಒಳ್ಳೆಯವರ ಹಾಗೆ ಮುಖವಾಡ ಹಾಕಿಕೊಂಡು ನಿಮ್ಮನ್ನು ಯಾಬಾರಿಸಬಹುದು ಸೊ ಯಾರನ್ನು ಈಸಿಯಾಗಿ ನಂಬಬೇಡಿ ಅದರಲ್ಲೂ ಹಣಕಾಸಿನ ವಿಚಾರದಲ್ಲಿ ಇನ್ನು ಕೇರ್ಫುಲ್ ಆಗಿರಿ. ಏಕೆಂದರೆ ಯಾರನ್ನು ನಂಬಿ ಸಾಲ ಕೊಡೋದು ಸಾಲ ಕೊಡುವುದು ಯಾರಾದರೂ ಹಣ ಕೇಳಲು ಬಂದರೆ ಸರಿಯಾಗಿ ವಿಚಾರಿಸಿ ಕೊಡಿ.

ಇಲ್ಲವಾದರೆ ನೀವು ಹಣ ಕಳೆದುಕೊಳ್ಳಬೇಕಾಗುತ್ತದೆ. ಟೆನ್ಶನ್ ಆಗಬಹುದು. ನೀವೇ ಜನರಿಗೆ ಟೋಪಿ ಹಾಕೋಕೆ ಎಲ್ಲಿ ಅವಕಾಶ ಸಿಗುತ್ತೆ ಎಂದು ನೋಡುವಿರಿ. ಕೆಲವೊಂದಷ್ಟು ಜನರು ಈ ರೀತಿಯಾಗಿ ಬದಲಾಗುತ್ತಾರೆ. ನೀವ್ ಇಷ್ಟ ಪಟ್ಟ ವಸ್ತು ನಿಮಗೆ ಸಿಗದೇ ಇದ್ದರೆ ನಿಮಗೆ ಬೇಸರವಾಗುತ್ತದೆ ಬಲವಂತವಾಗಿ ಪಡೆಯಲು ಪ್ರಯತ್ನಿಸುತ್ತೀರಿ ಯಾರಿಗಾದರೂ ಕಷ್ಟ ಕೊಟ್ಟಾದರೂ ನೀವು ಅದನ್ನು ಪಡೆಯಲು ಪ್ರಯತ್ನಿಸುತ್ತೀರಿ.

ಇನ್ನು ಕೆಲವರಿಗೆ ಎರಡು ಮದುವೆಯ ಭಾಗ್ಯವಿದೆ. ರಾಹುವಿನ ಹಾಗೆ ಕೇತು ಸಹ ದುರ್ಬುದ್ಧಿಯನ್ನು ಕೊಡುತ್ತಾನೆ. ಸಂಬಂಧಿಕರ ವಿಷಯಕ್ಕೆ ಬಂದರೆ ಅವರ ಮೇಲೆ ಬಹಳಷ್ಟು ಜನಕ್ಕೆ ಕೋಪ ಹುಟ್ಟಿಕೊಳ್ಳಬಹುದು. ಅವರು ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ ಎಂತಲೂ ಅಥವಾ ಮನೆಯಲ್ಲಿ ಏನಾದರೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂತಲೂ ಯಾವುದಾದರೂ

ಶುಭ ಕಾರ್ಯಕ್ಕೆ ಅಡ್ಡ ಕಾಲು ಹಾಕಬಹುದು ಎಂದು ನೀವು ಸಂಬಂಧಿಕರನ್ನು ದೂರ ಇಡುವಿರಿ. ಅಕ್ಟೋಬರ್ 30 2018 23 ರಿಂದ ಮೇ 18 2025 ರ ತನಕ ಕೇತು ಅಶುಭ ಸ್ಥಾನದಲ್ಲಿಯೇ ಇರುತ್ತಾನೆ. ಇನ್ನು ತುಂಬಾ ವಿಚಾರದಲ್ಲಿ ಕೇತು ಹಿನ್ನಡೆಯನ್ನು ತರುವವನಿದ್ದಾನೆ. ಅಕ್ಟೋಬರ್ 28ಕ್ಕೆ ಚಂದ್ರ ಗ್ರಹಣ ಇದೆ ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಆಗುವುದಿದೆ. ಪರಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕo ರೌದ್ರಂ ರೌದ್ರಾತ್ಮಕಂ ಘೋರo
ತಮ್ ಕೇತುo ಪ್ರಣಾಮ್ಯಹಂ.

ಈ ಮಂತ್ರವನ್ನು ನೀವು ಸಮಯವಿದ್ದಾಗ ಹೇಳಬಹುದು ಮುಸ್ಸಂಜೆ ಹೇಳಬಹುದು. ಇದನ್ನು ಹೇಳುವುದರಿಂದ ಕೇತುವಿನ ನಕಾರಾತ್ಮಕ ಪ್ರಭಾವದಿಂದ ಮುಕ್ತಿ ಸಿಗುತ್ತದೆ. ನೀವು ಗಣಪತಿಗೆ ಕೆಂಪು ಹೂವನ್ನು ಅಥವಾ ದುರ್ವೆಯನ್ನು ಅರ್ಪಿಸಿದರೆ ಒಳ್ಳೆಯದು. ಸುಖ ಸ್ಥಾನದಲ್ಲಿ ಕೇತು ಕುಳಿತುಕೊಂಡು ಆಸ್ತಿ ಮನೆ ಭೂಮಿ ವಾಹನ ವಿಚಾರದಲ್ಲಿ ನಿರಾಶೆ ಆಗಬಹುದು.

ಏನನ್ನಾದರೂ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಸಾಧ್ಯವಾಗದೆ ಹೋಗಬಹುದು. ಯಾವುದಕ್ಕೂ ಇನ್ವೆಸ್ಟ್ ಮಾಡಬೇಕೆಂದುಕೊಂಡು ಇದ್ದ ಹಣವನ್ನು ಬೇರೆ ಯಾವುದಕ್ಕೂ ಖರ್ಚು ಮಾಡಬಹುದು. ಜಮೀನು ಖರೀದಿಯ ವಿಚಾರದಲ್ಲಿ ಕಾನೂನಿನ ತೊಡಕುಗಳು ಬರಬಹುದು. ವಾಹನದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆಕಸ್ಮಿಕವಾಗಿ ಸ್ಕಿಡ್ ಆಗಿ ಹೇಳಬಹುದು.

ಅಥವಾ ಎಲ್ಲ ಬೇರೆ ಗಾಡಿ ಓಡಿಸಿ ಬಿಟ್ಟು ಮಾಡಿಕೊಳ್ಳಬಹುದು.. ಬೇರೆ ಯಾರಿಗೋ ಗುದ್ದಬಹುದು. ತಾಯಿಯ ವಿಚಾರದಲ್ಲಿ ಹುಷಾರಾಗಿರಿ.. ಆರೋಗ್ಯದಲ್ಲಿ ಏರುಪೇರಾಗಬಹುದು ನಿಮ್ಮಿಂದ ಅವರ ಮನಸ್ಸಿಗೆ ಬೇಸರವಾಗಬಹುದು ಅವರಿಗೆ ಎದುರು ಮಾತಾಡಿ ಬೇಸರ ಪಡಿಸಬಹುದು. ಬೇರೆಯವರ ಮೇಲಿನ ಸಿಟ್ಟನ್ನು ತಾಯಿಯ ಎದುರಿಗೆ ತೋರಿಸಬಹುದು. ಕೇತು ಮಿಥುನ ರಾಶಿಯಲ್ಲಿ ದುರ್ಬಲನಾಗಿದ್ದಾನೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಿ.

ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಸಣ್ಣ ಆರೋಗ್ಯದ ಸಮಸ್ಯೆ ದೊಡ್ಡದಾಗಬಹುದು ಸಿಗರೇಟ್ ಡ್ರಿಂಕ್ಸ್ ಜಂಕ್ ಫುಡ್ ಇದರಿಂದ ಶ್ವಾಸಕೋಶ ಪ್ರಾಬ್ಲಮ್ ಬರಬಹುದು. ನಿಮ್ಮ ಪಾಲಿಗೆ ಅನುಮಾನವೇ ಶತ್ರು, ಸಣ್ಣ ಪುಟ್ಟ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಮನೆಯಲ್ಲಿ ಅಥವಾ ಆಫೀಸಿನಲ್ಲಿ ಸ್ನೇಹಿತರು ಅಥವಾ ಸಂಬಂಧಿಕರ ಮೇಲೆ ಸಿಟ್ಟು ಮಾಡಿಕೊಳ್ಳುವ ಹಾಗೆ ಆಗಬಹುದು ಆದಷ್ಟು ತಾಳ್ಮೆಯಿಂದ ಇರಿ ಯಾರನ್ನಾದರೂ ದ್ವೇಷಿಸುವ ಮುನ್ನ ಸ್ವಲ್ಪ ಯೋಚಿಸಿ ಇಲ್ಲವಾದರೆ ಮುಂದೆ ಜನ ನಿಮ್ಮನ್ನು ನಂಬದೇ ಹೋಗಬಹುದು.

Leave A Reply

Your email address will not be published.