ನಮಸ್ಕಾರ ಸ್ನೇಹಿತರೆ ಅದೃಷ್ಟದ ಬಾಗಿಲು ತೆರೆಯುವಾಗ ಈ 8 ಸಂಕೇತಗಳು ದೊರೆಯುತ್ತವೆ ಹಾಗಾದರೆ ಆ ಎಂಟು ಸಂಕೇತಗಳು ಯಾವುವು ಅಂತ ನೋಡೋಣ ಬನ್ನಿ 01. ಯಾವುದೇ ಶುಭ ಕಾರ್ಯದ ನಿಮಿತ್ತ ಮನೆಯಿಂದ ಹೊರಗೆ ಹೋಗುತ್ತಿದ್ದರೆ ದಾರಿಯಲ್ಲಿ ಜೇನು ಅಥವಾ ಹಸು ಕಂಡರೆ ಕೆಲಸ ಸಫಲವಾಗುತ್ತದೆ ಎಂದರ್ಥ 02.ಕನಸಿನಲ್ಲಿ ಪೂರ್ವಜರು ನಗುವುದನ್ನು ನೋಡುವುದು ಕೂಡ ಶುಭ ಸಂಕೇತ
03. ದಾರಿಯಲ್ಲಿ ಹೋಗುವಾಗ ಗರ್ಭಿಣಿ ಸ್ತ್ರೀ ಕಾಣಿಸಿದರೆ ಅದು ಶುಭ ಸಂಕೇತ 04. ದಾರಿಯಲ್ಲಿ ಕರು ಹಸುವಿನ ಹಾಲನ್ನು ಕುಡಿಯುವುದನ್ನು ನೋಡಿದರೆ ಅದು ತುಂಬಾ ಶುಭ ಮಂಗಳಕರವಾಗಿರುತ್ತದೆ 05. ನೀರು ತುಂಬಿದ ಮಡಿಕೆ ನೋಡುವುದು ತುಂಬಾ ಮಂಗಳಕರ 06. ಮುಂಜಾನೆ ನಿಮ್ಮ ಮನೆಗೆ ವಯಸ್ಸಾಗಿರುವ ಭಿಕ್ಷುಕ ಬಂದರೆ ಅದು ತುಂಬಾ
ಶುಭ ಅವರನ್ನು ಬರಿಗೈಯಲ್ಲಿ ಹಿಂದಿರುಗಲು ಬಿಡಬೇಡಿ ಅವರಿಗೆ ಕೊಂಚ ಹಣವನ್ನು ದಾನ ಮಾಡುವುದರಿಂದ ಎಲ್ಲೋ ಬಾಕಿ ಉಳಿದಿರುವ ನಿಮ್ಮದೇ ಹಣವನ್ನು ಮರಳಿ ಪಡೆಯುತ್ತೀರಿ ಎಂದು ಹೇಳಲಾಗುತ್ತದೆ ಅಥವಾ ನಿಮ್ಮ ವ್ಯವಹಾರದಲ್ಲಿ ಲಾಭವಾಗುತ್ತದೆ
07. ನಾವು ಮನೆಯಿಂದ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವಸ್ಥಾನದ ಗಂಟೆಯ ಸದ್ದು ಕೇಳಿಸಿದರೆ ಕೆಲಸದಲ್ಲಿ ಯಶಸ್ಸು ಖಚಿತ 08. ನಿಮ್ಮ ಮನೆಯ ಅಂಗಳದಲ್ಲಿ ನವಿಲು ಕಾಣಿಸಿಕೊಳ್ಳುವುದು ಅಥವಾ ದಾರಿಯಲ್ಲಿ ಪಕ್ಷಿಗಳು ತಮ್ಮ ನಡುವೆ ಆಹಾರವನ್ನು ಹಂಚಿಕೊಳ್ಳುವುದು ನೋಡಿದರೆ ನಿಮ್ಮ ಕೆಲಸವು ಪೂರ್ಣಗೊಳ್ಳುವ ಹಾದಿಯಲ್ಲಿ ಇದೆ ಎಂದರ್ಥ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು