ವೆಂಕಟೇಶ್ವರ ಸ್ವಾಮಿಗೆ ಮುಡುಪು ಈ ರೀತಿ ಕಟ್ಟಿದರೆ ಸಂಕಷ್ಟಗಳು ಕಳೆದು ದೈವಬಲ ಹಣಬಲ ಖಚಿತ

ತುಂಬಾ ಬಡತನವಿದ್ದರೆ, ಹಣಕಾಸಿನ ಸಂಕಷ್ಟಗಳು ಹೆಚ್ಚಾಗಿದ್ದರೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ಈ ರೀತಿಯ ಮುಡುಪನ್ನು ಕಟ್ಟಿದರೆ ಸಾಕು, ನೀವು ಅಂದುಕೊಂಡಂತಹ ಕೆಲಸಗಳು ಆಗುತ್ತವೆ. ನಿಮ್ಮ ಮನಸ್ಸಿನ ಕೋರಿಕೆಗಳು ಈಡೇರುವುದರ ಜೊತೆಗೆ ಕಲಿಯುಗ ದೈವ ಶ್ರೀವೆಂಕಟೇಶ್ವರ ಸ್ವಾಮಿಯ ಅನುಗ್ರಹ ಸದಾ ಕಾಲ ನಿಮ್ಮ ಜೊತೆ ಇರುತ್ತದೆ.

ಯಾವ ರೀತಿ ಮುಡುಪನ್ನು ಕಟ್ಟಬೇಕು? ಆ ಮುಡುಪನ್ನು ಯಾವ ರೀತಿ ಶ್ರೀವೆಂಕಟೇಶ್ವರ ಸ್ವಾಮಿಗೆ ಅರ್ಪಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕಲಿಯುಗ ದೈವ ಶ್ರೀವೆಂಕಟೇಶ್ವರ ಸ್ವಾಮಿ ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ವಿಧಿವಿಧಾನಗಳನ್ನು ಪಾಲಿಸಿದರೆ ಶೀಘ್ರವಾಗಿ ಕಷ್ಟಗಳಿಂದ ಪಾರುಮಾಡುತ್ತಾನೆ. ತೀವ್ರವಾದ ಹಣಕಾಸಿನ ಸಮಸ್ಯೆ ಬಂದಾಗ,

ದೊಡ್ಡ ಕೋರಿಕೆಗಳು ಈಡೇರಬೇಕು ಎಂದಾಗ, ಮದುವೆ, ಸಂತಾನ, ಮನೆಕಟ್ಟಿಸುವುದಕ್ಕೆ ಆಗಿರಬಹುದು, ಭೂಮಿಯ ಖರೀದಿಯ ಬಗ್ಗೆ ಆಗಿರಬಹುದು, ಎಂದದ್ದೇ ಕಷ್ಟ, ಕೋರಿಕೆ ಇರಲಿ ವೆಂಕಟೇಶ್ವರ ಸ್ವಾಮಿಗೆ ಮುಡುಪನ್ನು ಕಟ್ಟಬೇಕು. ಆದರೇ ಎಷ್ಟೋ ಜನರಿಗೆ ಈ ಮುಡುಪನ್ನು ಯಾವ ರೀತಿ ಕಟ್ಟಬೇಕು ಕೆಲಸವಾದ ನಂತರ ಯಾವ ರೀತಿ

ಆ ಮುಡುಪನ್ನು ವೆಂಕಟೇಶ್ವರನಿಗೆ ಅರ್ಪಿಸಬೇಕು ಎಂಬ ಮಾಹಿತಿ ಎಷ್ಟೊ ಜನರಿಗೆ ಗೊತ್ತಿರುವುದಿಲ್ಲ. ಈ ಮುಡುಪನ್ನು ಕಟ್ಟಬೇಕಾದರೇ ಕೆಲವು ನಿಯಮಗಳನ್ನು ಪಾಲಿಸಬೇಕು. ಹೀಗೆ ಮಾಡಿದರೇ ಎಂತಹ ಕಷ್ಟವಾದ ಕೋರಿಕೆಯು ಸಹ ಸುಲಭವಾಗಿ ಈಡೇರುತ್ತದೆ. ಮೊದಲು ಬಿಳಿ ವಸ್ತ್ರವನ್ನು ತೆಗೆದುಕೊಳ್ಳಬೇಕು. ಈ ಬಿಳಿ ವಸ್ತ್ರವನ್ನು ಅರಿಶಿಣ ಬೆರೆಸಿದ ನೀರಿನಲ್ಲಿ ನೆನೆಸಿ ಇಡಬೇಕು.

ನಂತರ ಆ ವಸ್ತ್ರವನ್ನು ಹೊರತೆಗೆದು ಒಣಗಲು ಬಿಡಬೇಕು. ವಸ್ತ್ರ ಆರಿದ ನಂತರ ಅದು ಹಳದಿ ವಸ್ತ್ರವಾಗುತ್ತದೆ. ಈ ಹಳದಿ ವಸ್ತ್ರಕ್ಕೆ ನಾಲ್ಕು ಮೂಲೆಯಲ್ಲೂ ಕುಂಕುಮದ ಬಟ್ಟನ್ನು ಇಡಬೇಕು. ಹನ್ನೊಂದು ರೂ ನಾಣ್ಯ ಅಥವಾ ಇಪ್ಪತ್ತೊಂದು ರೂ ನಾಣ್ಯವಾಗಿರಬಹುದು, ಐವತ್ತನಾಲ್ಕು ರೂ ನಾಣ್ಯ, ಅಥವಾ ನೂರ ಎಂಟು ರೂ ನಾಣ್ಯವಾಗಿರಬಹುದು,

ನಿಮ್ಮ ಶಕ್ತಿಗೆ ಅನುಸಾರವಾಗಿ ಆ ಹಳದಿ ವಸ್ತ್ರದಲ್ಲಿಟ್ಟು ಮೂಟೆಯ ರೀತಿಯಲ್ಲಿ ಕಟ್ಟಬೇಕು. ಮೂಟೆಗಳನ್ನು ಕಟ್ಟುವಾಗ ಮೂರು ಗಂಟುಗಳನ್ನು ತಪ್ಪದೇ ಹಾಕಬೇಕು. ಗಂಟುಗಳನ್ನು ಹಾಕುವಾಗ ಒಂದೊಂದು ಗಂಟನ್ನು ಹಾಕುವಾಗ ವೆಂಕಟೇಶ್ವರನಿಗೆ ನಿಮ್ಮ ಕಷ್ಟಗಳನ್ನು ಹೇಳಬೇಕು ಹಾಗೂ ಈ ರೀತಿಯ ಮುಡುಪನ್ನು ಕಟ್ಟುವ ಮುನ್ನ ಮಾಡಲೇ ಬೇಕಾದ ಕೆಲಸವೇನೆಂದರೆ

ಮನೆಯಲ್ಲಿ ಗಣೇಶನ ಪೋಟೋ ಮುಂದೆ ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆಯನ್ನು ಮಾಡಬೇಕು. ಐದು ಬತ್ತಿಯನ್ನ ಬಿಡಿ ಬಿಡಿಯಾಗಿ ಕೂರಿಸಿ ದೀಪಾರಾಧನೆಯನ್ನು ಮಾಡಬೇಕು. ಗಣಪತಿಗೆ ಸಮಸ್ಕಾರ ಮಾಡುತ್ತಾ ಓಂ ಗಂ ಗಣಪತಿಯೇ ನಮಃ ಎಂದು 21 ಬಾರಿ ಹೇಳಿಕೊಳ್ಳುತ್ತಾ ವೆಂಕಟೇಶ್ವರ ಸ್ವಾಮಿಗೆ ಮುಡುಪನ್ನು ಕಟ್ಟುತ್ತೇವೆಂದು ಗಣೇಶನಿಗೆ ಹೇಳಿ ನಮಸ್ಕಾರ ಮಾಡಿಕೊಳ್ಳಬೇಕು.

ನಂತರ ನಿಮ್ಮ ಶಕ್ತಿಗೆ ಅನುಸಾರ ಮೇಲೇ ಹೇಳಿದ ರೂಪಾಯಿಯನ್ನು ಹಾಕಿ ಮುಡುಪನ್ನು ಕಟ್ಟಬೇಕು. ಗಣೇಶನನ್ನು ಪೂಜಿಸಿ ಆತನಿಗೆ ತಲೆಬಾಗಿ ವೆಂಕಟೇಶ್ವರ ಸ್ವಾಮಿಗೆ ಮುಡುಪನ್ನು ಕಟ್ಟಿದರೆ, ಆ ಮುಡುಪಿನ ಮೂಲಕ ವೆಂಕಟೇಶ್ವರ ಸ್ವಾಮಿಯು ಶೀಘ್ರವಾಗಿ ಅನುಗ್ರಹಿಸುತ್ತಾನೆ. ಹಾಗೆಯೇ ಮೂರು ಗಂಟನ್ನು ಕಟ್ಟಿದ ನಂತರ ಆ ಮುಡುಪನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟು ವೆಂಕಟೇಶ್ವರ ಸ್ವಾಮಿಯ ಅಷ್ಟೋತ್ತರವನ್ನು ಹೇಳಿಕೊಳ್ಳಬೇಕು.

ಕರ್ಪೂರದಿಂದ ವೆಂಕಟೇಶ್ವರ ಸ್ವಾಮಿಗೆ ಮತ್ತು ನೀವು ಕಟ್ಟಿದ ಮುಡುಪಿಗೆ ಆರತಿಯನ್ನು ಬೆಳಗಬೇಕು. ನಿಮ್ಮ ಕೋರಿಕೆಗಳು ತೀರಿದ ನಂತರ ಈ ಮುಡುಪನ್ನು ತೆಗೆದುಕೊಂಡು ತಿರುಪತಿಯ ಗುಡಿಯ ಹುಂಡಿಯಲ್ಲಿ ಅರ್ಪಿಸಬೇಕು. ಹುಂಡಿಗೆ ಈ ಮುಡುಪನ್ನು ಹಾಕಬೇಕಾದರೆ ಮತ್ತೆ ಸ್ವಲ್ಪ ಹಣವನ್ನು ಸೇರಿಸಿ ಹಾಕಬೇಕು. ಎಷ್ಟೊ ಜನರು ಮುಡುಪನ್ನು ಮಾತ್ರ ಹಾಕುತ್ತಾರೆ ಆದರೆ

ಆ ಮುಡುಪಿನಲ್ಲಿರುವ ಹಣದ ಜೊತೆಗೆ ಬಡ್ಡಿಯ ರೂಪದಲ್ಲಿ ಹಣವನ್ನು ಸೇರಿಸಿ ವೆಂಕಟೇಶ್ವರನಿಗೆ ಅರ್ಪಿಸಬೇಕು. ಜೊತೆಗೆ ಸ್ವಾಮಿ ನಿನಗೆ ಬಡ್ಡಿಯನ್ನು ಸೇರಿಸಿ ಅರ್ಪಿಸುತ್ತಿದ್ದೀವಿ ಎಂದು ಹೇಳಿ ಅರ್ಪಿಸಬೇಕು. ಹೀಗೆ ಪ್ರತ್ಯೇಕವಾದ ವಿಧಿವಿಧಾನಗಳನ್ನು ಪಾಲಿಸುತ್ತಾ ವೆಂಕಟೇಶ್ವರಸ್ವಾಮಿಗೆ ಮುಡುಪನ್ನು ಕಟ್ಟಿದರೆ ಸ್ವಾಮಿಯ ಅನುಗ್ರಹದಿಂದ ಶೀಘ್ರವಾಗಿ ಕಷ್ಟಗಳು ಕಳೆದು ಹೋಗುತ್ತವೆ

ಮತ್ತು ಮನಸ್ಸಿನ ಕೋರಿಕೆಗಳು ಬಹಳ ವಿಶೇಷವಾಗಿ ದೈವಬಲದಿಂದ ಈಡೇರುತ್ತದೆ. ಜೊತೆಗೆ ಶನಿವಾರದ ದಿನ ವಿಶೇಷವಾಗಿ ದೀಪಾರಾಧನೆಯನ್ನು ಮಾಡುತ್ತಾ ಬರಬೇಕು. ಮನಸ್ಸಿಗೆ ನೆಮ್ಮದಿ ಇಲ್ಲದಾಗ ವೆಂಕಟೇಶ್ವರ ಸ್ವಾಮಿಯ ದೇವಾಲಯಕ್ಕೆ ಹೋಗಿ 21 ಬಾರಿ ಓಂ ಗೋವಿಂದಾಯ ನಮಃ ಪಠಿಸುತ್ತಾ ಪ್ರದಕ್ಷಣೆಯನ್ನು ಹಾಕಿ ಬರಬೇಕು. ಇದರಿಂದ ದೈವಬಲ ವೃದ್ಧಿಯಾಗಿ ನಿಮ್ಮ ಜೀವನದಲ್ಲಿರುವ ಗೊಂದಲಗಳಿಗೆ ದೇವರು ನಿಮಗೆ ಮಾರ್ಗವನ್ನು ತೋರಿಸುತ್ತಾನೆ.

Leave a Comment