ವಿಶ್ವಾಸದಲ್ಲೆ ವಿಷ ಇರುತ್ತೆ ಎಚ್ಚರದಿಂದಿರಿ

0

ನಾವು ಈ ಲೇಖನದಲ್ಲಿ ಕೆಟ್ಟ ದಿನಗಳು ಕಳೆದು ಒಳ್ಳೆಯ ಸಮಯ ಬರುತ್ತದೆ ಎಂದು ತಿಳಿಸುವ ಎರಡು ಸೂಚನೆಗಳು ಯಾವುದು ಎಂದು ತಿಳಿಯೋಣ . ಯಾವಾಗಲೂ ಒಂದು ವಿಷಯವನ್ನು ನೆನಪಿನಲ್ಲಿ ಡಿ. ದೇವರನ್ನು ಹೊರತುಪಡಿಸಿ ನಿಮ್ಮ ಕಣ್ಣೀರು ನೋವು ಮತ್ತು ಮುಖವನ್ನು ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.

ಮನದಲ್ಲಿ ಆಸೆಗಳು ಕಡಿಮೆಯಾದಷ್ಟು ನೆಮ್ಮದಿ ತಾನಾಗಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ.

ಒಳ್ಳೆಯವರಾಗಿ ನಟಿಸಿದರು ಜನಗಳನ್ನು ನಂಬಿಸಬಹುದಷ್ಟೇ ಮೇಲೆ ಕೂತು ನೋಡುತ್ತಿರುವ ದೇವರನ್ನಲ್ಲ.

ಮಾತು ಮುಗಿದಿರಬಹುದು ,ಪ್ರೀತಿ ಸಿಗದಿರಬಹುದು, ಸ್ನೇಹ ಕೈ ಕೊಟ್ಟಿರಬಹುದು . ಸಂಬಂಧಿಕರು ಕಡೆಗಣಿಸಿರಬಹುದು. ಆದರೆ ನೆನಪಿಡಿ ಯಾರಿಲ್ಲದಿದ್ದರೂ ಜೀವನ ಸಾಗಿಯೇ ಸಾಗುತ್ತದೆ.

ನಾವು ಸಂಪಾದಿಸಿದ್ದು ಯಾವುದು ನಮ್ಮದಲ್ಲ . ಆದರೆ ಒಳ್ಳೆಯ ಗುಣ , ನಡತೆ , ದಾನ , ಧರ್ಮ , ನಾವು ಮಾಡಿದ ಪುಣ್ಯ ಇಷ್ಟವಾದವರ ಹೃದಯದಲ್ಲಿ ಪ್ರೀತಿ , ಇವುಗಳೇ ನಾವು ಸಂಪಾದಿಸುವ ಕೋಟಿ ಆಸ್ತಿ .

ಹಣದಿಂದ ಎಲ್ಲಿ ಬೇಕಾದರೂ ಸ್ಥಳ ಖರೀದಿಸಬಹುದು. ಆದರೆ ಮತ್ತೊಬ್ಬರ ಹೃದಯದಲ್ಲಿ ಕೊಂಚ ಜಾಗ ಕೂಡ ಖರೀದಿಸಲು ಸಾಧ್ಯವಿಲ್ಲ. ಅದು ಕೇವಲ ಒಳ್ಳೆಯ ಗುಣ ಹಾಗೂ ಪ್ರೀತಿಯಿಂದ ಮಾತ್ರ ಸಾಧ್ಯ .

ಅತಿ ಬುದ್ಧಿವಂತಿಕೆಯಿಂದ ಮೋಸ ಮಾಡಿದವರು ಸಮಯ ಬಂದಾಗ ಅತಿ ದಡ್ಡ ತನದಿಂದಲೇ ಮೋಸ ಹೋಗುವುದು ಖಚಿತ .

ಈ ಜನರು ನೀವು ಮಾಡಿರುವ ಸಾವಿರ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೋ , ಇಲ್ಲವೋ , ಆದರೆ ನೀವು ಮಾಡುವಂತ ಒಂದೇ ಒಂದು ತಪ್ಪನ್ನು ಮಾತ್ರ ಹೆಚ್ಚು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.

ವಿಶ್ವಾಸದಲ್ಲಿ ವಿಷ ಇರುತ್ತದೆ. ಎಚ್ಚರದಿಂದ ಇರಬೇಕು .

ಮನಸ್ಸು ಎಲ್ಲರಿಗೂ ಇರುತ್ತದೆ . ಆದರೆ ಅರ್ಥ ಮಾಡಿಕೊಳ್ಳುವ ಮನಸ್ಸು ಕೆಲವರಿಗೆ ಮಾತ್ರ ಇರುತ್ತದೆ .

ಬಡತನ ಇದ್ದರೆ ಏನಾಯ್ತು? ಬದುಕುವುದಕ್ಕೆ ನೀವು ಖುಷಿಯಾಗಿದ್ದರೆ ಅಷ್ಟೇ ಸಾಕು .

ಒಂದು ಮಾತನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಿ . ಈ ಮುಖ, ಈ ಸೌಂದರ್ಯ , ಈ ದೇಹ ಎಲ್ಲವೂ ನಾವು ಸಾಲದಲ್ಲಿ ಪಡೆದಿದ್ದೇವೆ . ಸಮಯ ಬಂದಾಗ ಇವುಗಳ ಮಾಲೀಕನಿಗೆ ನಾವು ಎಲ್ಲವನ್ನು ಹಿಂದಿರುಗಿಸಬೇಕು .

ಜೀವನದಲ್ಲಿ ಕಾಯುವುದನ್ನು ಕಲಿಯಬೇಕು. ಎಲ್ಲವೂ ನಡೆಯುವುದು ಸಮಯಕ್ಕೆ ಸರಿಯಾಗಿ ಹೊರತು ನಮ್ಮ ಅವಸರಕ್ಕೆ ತಕ್ಕಂತೆ ಅಲ್ಲ .

ಬದುಕು ಕೆಸರಾಗಿದ್ದರು ಪರವಾಗಿಲ್ಲ. ಆದರೆ ನೀವು ತಾವರೆಯಂತೆ ಬದುಕಬೇಕು . ಒಳ್ಳೆಯ ಸಮಯ ಬರುವಾಗ ಕೆಟ್ಟ ದಿನಗಳ ಕಾಲ ಹೆಚ್ಚಾಗಿ ಕಾಣುತ್ತದೆ . ವಿಪರೀತ ಪರೀಕ್ಷೆಗಳು ಉದ್ಭವಿಸುತ್ತದೆ . ಕೊನೆಗೆ ನಿರೀಕ್ಷೆಗೂ ಮೀರಿದ ಸುಖವನ್ನು ತಂದುಕೊಡುತ್ತದೆ .

ಸಿಹಿ ನೀರನ್ನು ತುಂಬಿಕೊಂಡಿರುವ ಬಾವಿ ಮೌನವಾಗಿ ಇರುತ್ತದೆ .ಅದೇ ಉಪ್ಪು ನೀರಿನಿಂದ ಇರುವ ಸಮುದ್ರ ಆರ್ಭಟಿಸುತ್ತಾ ಇರುತ್ತದೆ. ಅದೇ ರೀತಿಯಾಗಿ ಅಜ್ಞಾನಿ ಘರ್ಜಿಸುತ್ತಿರುತ್ತಾರೆ . ಜ್ಞಾನಿ ಮೌನವಾಗಿರುತ್ತಾನೆ . ಮುಂದಿನ ಪುಟದಲ್ಲಿ ಏನಿದೆ ಎಂದು ಭಗವಂತನಿಗೆ ಹೊರತು ಬೇರೆ ಯಾರಿಗೂ ತಿಳಿಯದ ಪುಸ್ತಕ ನಮ್ಮ ಜೀವನ .

ಏನೋ ಆಗಿದೆ ಅಂದರೆ ಅದಕ್ಕೆ ಏನೋ ಒಂದು ಕಾರಣ ಇರುತ್ತದೆ. ಆಗುವುದೆಲ್ಲ ಒಳ್ಳೆಯದಕ್ಕೆ . ಏನು ತಿಳಿಯದವರನ್ನು ಪರಿವರ್ತಿಸುವುದು ಸುಲಭ . ಎಲ್ಲವೂ ತಿಳಿದು ಗೊತ್ತಿಲ್ಲದಂತೆ ಸೋಗು ಹಾಕುವವರನ್ನು ತಿದ್ದುವುದು ಕಷ್ಟ .

ಮೋಸ ಹೋದೆ ಎಂದು ದುಃಖಿಸಬೇಡ . ಭಗವಂತನನ್ನು ನಂಬಿದವರಿಗೆ ಮೋಸವಾದರೆ ಮೋಸ ಮಾಡಿದವರಿಗೆ ಮೋಸ ಮಾಡಲು ಭಗವಂತ ಯಾರನ್ನಾದರೂ ಸೃಷ್ಟಿಸಿಯೇ ಸೃಷ್ಟಿಸುತ್ತಾನೆ . ಸಮಯ ಸಂದರ್ಭ ನೋಡಿಕೊಂಡು ಸತ್ಯವಾಗಿ ಸರಿಯಾದ ಪಾಠ ಕಲಿಸುತ್ತಾನೆ .

ಅನುಮಾನ ತಪ್ಪಾಗಬಹುದು, ಆದರೆ ಅನುಭವ ತಪ್ಪಾಗಲಾರದು, ಯಾಕೆಂದರೆ ಅನುಮಾನ ಮನಸ್ಸಿನ ಕಲ್ಪನೆ , ಅನುಭವ ಜೀವನದ ಸತ್ಯ ಘಟನೆ .

ಮನೆ ಅಂದ ಮೇಲೆ ಕಸ ಬರುತ್ತದೆ . ಬದುಕು ಅಂದ ಮೇಲೆ ಕಷ್ಟ ಇರುತ್ತದೆ . ಕಸವಾದರೆ ಗುಡಿಸಬೇಕು, ಕಷ್ಟವಾದರೆ ಜಯಿಸಬೇಕು . ತಮ್ಮನ್ನೇ ಅರಿಯದವರು ನಮ್ಮನ್ನು ಅಳೆಯುವರು. ತಾನೇ ತಪ್ಪಾದರೂ ನಮ್ಮನ್ನು ತಿದ್ದುವರು .

ಓ ಮನುಜ ನೀನು ಕಟ್ಟಿದ ಮನೆಯಲ್ಲಿ ನಿನಗೆ ಜಾಗವಿಲ್ಲ . ಅಂತಹುದರಲ್ಲಿ ಜನನ ಜೀವನ ಮರಣ ಎಂಬ ಮೂರು ದಿನದ ಸಂತೆಯಲ್ಲಿ ಸ್ವಾರ್ಥ , ಅಹಂಕಾರ , ದೊಡ್ಡ ಸ್ಥಿಕೆ ತೋರುವುದರಲ್ಲಿ ಅರ್ಥವೇ ಇಲ್ಲ.

ನಿಮ್ಮನ್ನು ನೀವು ಸ್ವೀಕರಿಸಿಕೊಳ್ಳಿ . ಸರಿ ಹೋಗದೆ ಇರುವ ವಿಷಯಕ್ಕೆ ಚಿಂತೆ ಮಾಡಿ, ನಿಮ್ಮ ಆರೋಗ್ಯವನ್ನು ಹಾಳು ಮಾಡಿ ಕೊಳ್ಳಬೇಡಿ .

ಮನಸ್ಸಿನಲ್ಲಿ ಕೊಳಕು ತುಂಬಿಕೊಂಡು ಹೊರಗಡೆ ಚಿನ್ನದಂತೆ ಹೊಳೆಯುವ ಬದಲು ಒಳಗಡೆ ಜೇನಿನಂತೆ ಸಿಹಿ ತುಂಬಿಕೊಂಡು ಹೊರಗಡೆ ಮಣ್ಣಿನ ಮಡಿಕೆಯಂತೆ ಇದ್ದರೂ ಪರವಾಗಿಲ್ಲ ಹೊಳೆಯುವುದು ಮುಖ್ಯವಲ್ಲ . ಒಳ್ಳೆಯ ಮನಸ್ಸು ಇರುವುದು ಮುಖ್ಯ .

ಜೀವನದಲ್ಲಿ ಸಮಸ್ಯೆಗಳು ಬಂದಾಗ ನಾವು ಯಾರ ಹತ್ತಿರ ಸಲಹೆಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವುದು ತುಂಬಾ ಮುಖ್ಯ . ಯಾಕೆಂದರೆ ದುರ್ಯೋಧನ ಶಕುನಿ ಹತ್ತಿರ ಸಲಹೆಗಳನ್ನು ಕೇಳುತ್ತಿದ್ದ .ಆದರೆ ಅರ್ಜುನ ಶ್ರೀ ಕೃಷ್ಣನ ಹತ್ತಿರ ಸಲಹೆಗಳನ್ನು ಕೇಳುತ್ತಿದ್ದ .

ಒಳ್ಳೆಯವರು ಇತರರಿಗೆ ಒಳ್ಳೆಯದನ್ನು ಮಾಡುವ ವ್ಯಕ್ತಿಗಳು ಯಾವಾಗಲೂ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಯಾಕೆಂದರೆ ಯಾವಾಗಲೂ ಹಣ್ಣುಗಳನ್ನು ನೀಡುವ ಮರಗಳು ಕಲ್ಲಿನ ಏಟನ್ನು ಸಹಿಸಿಕೊಳ್ಳ ಬೇಕಾಗುತ್ತದೆ .
ಹಾಗೆ ಅವರ ಒಳ್ಳೆಯ ತನದಿಂದ ಅವರು ಹೆಚ್ಚು ಕಷ್ಟವನ್ನು ಹೆಚ್ಚು ಕೆಟ್ಟದ್ದನ್ನು ಅನುಭವಿಸಬೇಕಾಗುತ್ತದೆ .

Leave A Reply

Your email address will not be published.