ಹೆಣ್ಣುಮಕ್ಕಳು ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನ ಮನೆಗೆ ಅದೃಷ್ಟ

0

ನಾವು ಈ ಲೇಖನದಲ್ಲಿ ಹೆಣ್ಣು ಮಕ್ಕಳು ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನ ಮನೆಗೆ ಅದೃಷ್ಟ ಹೇಗೆ ಬರುತ್ತದೆ. ಎಂದು ತಿಳಿಯೋಣ. ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಅವರ ಒಂದು ಜೀವನ ಬದಲಾಗಿ ಹೋಗುತ್ತದೆ. ಅವರ ಒಂದು ಸಾಲ ಭಾದೆ ತೀರಿ ಹೋಗುತ್ತದೆ . ಸಾಲ ಭಾದೆಯಿಂದ ನೋವು ಪಡುತ್ತಿದ್ದರೆ ಲಕ್ಷ್ಮೀ ದೇವಿ ಅನುಗ್ರಹ ಲಭಿಸುತ್ತದೆ.

ನಿಮ್ಮ ಜೀವನ ಬದಲಾಗಿ ಹೋಗುತ್ತದೆ. ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು, ಅಂದುಕೊಂಡರೆ ಅದನ್ನು ಸಾಧಿಸುತ್ತೀರಾ . ಈಗ ಹೇಳುವ ವಸ್ತುಗಳನ್ನು ನಿಮ್ಮ ತವರು ಮನೆಯಿಂದ ತೆಗೆದುಕೊಂಡರೆ ಅವರ ಒಂದು ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗುತ್ತದೆ. ಇನ್ನೂ ಹುಟ್ಟಿದ ಮನೆಯಿಂದ ತಂದು ಕೊಂಡರೆ ಸಾಲ ಭಾದೆ ತೀರಿ ಹೋಗುತ್ತದೆ ಅನ್ನುವ ವಿಷಯಗಳ ಬಗ್ಗೆ ತಿಳಿಯೋಣ.

1 . ನೀವು ನಿಮ್ಮ ತವರು ಮನೆಯಿಂದ ಒಂದು ಬೆಲ್ಲದ ಅಚ್ಚನ್ನು ತೆಗೆದುಕೊಂಡು ತಂದು ಇಟ್ಟುಕೊಳ್ಳಿ . ಬೆಲ್ಲಕ್ಕೆ ಅತ್ಯಂತ ಶಕ್ತಿ ಇದೆ . ಯಾರು ಬೆಲ್ಲವನ್ನು ಉಪಯೋಗಿಸುತ್ತಾರೆ ಅವರಿಗೆ ಋಣ ಭಾದೆಗಳು ಎಲ್ಲಾ ತೀರಿ ಹೋಗುತ್ತದೆ. ಬೆಲ್ಲಕ್ಕೆ ಅಂತಹ ಶಕ್ತಿ ಇದೆ . ಬೆಲ್ಲ ಲಕ್ಷ್ಮೀ ದೇವಿ ಸ್ವರೂಪ ಬೆಲ್ಲವನ್ನು ನಾವು ಹುಟ್ಟಿದ ಮನೆಯಿಂದ ತೆಗೆದುಕೊಂಡು ಬಂದರೆ ನಿಮಗೆ ಇರುವ ಸಾಲ ಭಾದೆ ಎಲ್ಲಾ ಕೂಡ ತೊಲಗಿ ಹೋಗುತ್ತದೆ, ಎಂದೂ ಪಂಡಿತರು ಹೇಳುತ್ತಾರೆ.

2 . ಗ್ರಹಗಳು ಎನ್ನುವುದು ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಗ್ರಹಗಳು ಒಳ್ಳೆಯ ರೀತಿಯಲ್ಲಿ ಇದ್ದರೂ , ನಾವು ಕೆಲವು ವಸ್ತುಗಳನ್ನು ತವರು ಮನೆಯಿಂದ ತೆಗೆದುಕೊಳ್ಳಬೇಕು. ಆವಾಗಲೇ ಅದೃಷ್ಟ ಐಶ್ವರ್ಯ ಅನ್ನುವುದು ಆಗುತ್ತದೆ. ಜೀವನದಲ್ಲಿ ಏನಾದರೂ ಒಳ್ಳೆಯದು ಆಗಬೇಕು. ಅಂದರೆ ಬೃಹಸ್ಪತಿ ಮೂಲವಾಗಿ ಜಾತಕದಲ್ಲಿ ಎಲ್ಲವೂ ಸರಿಯಾಗಿ ಇರಬೇಕು. ಅಂದರೆ ಹುಟ್ಟಿದ ಮನೆಯಿಂದ ಕೆಲವು ವಸ್ತುಗಳನ್ನು ತರಬೇಕು . ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ , ಅವು ಕೂಡ ಪರಿಹಾರ ಆಗುತ್ತದೆ. ನೀವು ಸಾಲ ಭಾದೆಯಿಂದ ನೋವು ಪಡುತ್ತಾ ಇದ್ದರೆ , ತವರು ಮನೆಯಿಂದ ಈ ವಸ್ತುಗಳನ್ನು ತರಬೇಕು.

3 . ಇನ್ನೊಂದು ವಸ್ತು ಏನು ಅಂದರೆ ಅರಿಶಿಣ , ಕುಂಕುಮ ಯಾರು ತವರು ಮನೆಯಿಂದ ಅರಿಶಿಣ , ಕುಂಕುಮವನ್ನು ತರುತ್ತಾರೋ , ಅವರ ಜೀವನ ಬದಲಾಗುತ್ತದೆ . ದೀರ್ಘ ಕಾಲ ಸುಮಂಗಲಿಯಾಗಿ ಇರುತ್ತಾರೆ. ಹಾಗೆಯೇ ಅವರ ಜೀವನ ಆನಂದ ಮಯವಾಗಿ ಇರುತ್ತಾರೆ.

4 . ಹಾಗೆಯೇ ತವರು ಮನೆಯಿಂದ ಆನೆಯ ಗೊಂಬೆಯನ್ನು ತೆಗೆದುಕೊಂಡು ಬಂದು ಇಟ್ಟುಕೊಳ್ಳಿ ಇದರಿಂದ ಅದೃಷ್ಟ ಬರುತ್ತದೆ. ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ. ಲಕ್ಷ್ಮಿ ದೇವಿ ಅನುಗ್ರಹ ನಿಮಗೆ ಲಭಿಸುತ್ತದೆ. ಆನೆಯ ಗೊಂಬೆಗಳನ್ನು ಬೆಳ್ಳಿ ಬಂಗಾರದಿಂದ ಮಾಡಿದ್ದೇ ಆಗಬೇಕು . ಅಂತ ಏನಿಲ್ಲ ಕಟ್ಟಿಗೆಯಿಂದ ಮಾಡಿದರೂ ಪರವಾಗಿಲ್ಲ ಲೋಹದಲ್ಲಿ ಮಾಡಿದ ಆನೆಯ ಬೊಂಬೆಯನ್ನು ತಂದು ಇಟ್ಟುಕೊಳ್ಳಿ ಸಾಲ ಭಾದೆ ಇದ್ದವರು ಒಂದು ಸಾರಿ ಆನೆಯ ಗೊಂಬೆಯನ್ನು ನಿಮ್ಮ ತವರು ಮನೆಯಿಂದ ತಂದು ಕೊಳ್ಳಿ ನಿಮ್ಮ ಜೀವನ ಅನ್ನುವುದು ಬದಲಾಗಿ ಹೋಗುತ್ತದೆ. ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ನೀವು ನಿಮ್ಮ ಮನೆಗೆ ತಂದರೆ ನಿಮಗೆ ಎಲ್ಲಾ ಶುಭವೇ ಆಗುತ್ತದೆ . ಹಣ ಕೂಡ ಚೆನ್ನಾಗಿ ಬರುತ್ತದೆ. ಮಣ್ಣಿನಲ್ಲಿ ಜೀವ ನಿಮ್ಮ ಕುಟು೦ಬಕ್ಕೆ ಬರುತ್ತದೆ.

5 . ಹೆಣ್ಣು ಮಕ್ಕಳು ಮದುವೆ ಆದಾಗಿನಿಂದ ಅತ್ತೆ ಮನೆಗೆ ಹೋಗುವಾಗ ಏನೋ ಒಂದು ತೆಗೆದುಕೊಂಡು ತವರು ಮನೆಗೆ ಹೋದಾಗ ಏನಾದರೂ ವಸ್ತು ಕಂಡರೆ ಇದು ನನಗೇನಾ ಅಂತ ತೆಗೆದುಕೊಳ್ಳುತ್ತಾರೆ. ಇದು ಸಾಧಾರಣವಾಗಿ ಹೆಣ್ಣು ಮಕ್ಕಳಿಗೆ ಇರುವ ಹಕ್ಕಾಗಿ ಭಾವಿಸುತ್ತಾರೆ.

6 . ಕಿರಾಣಿ ಸಾಮಾನುಗಳು ಮನೆಯ ಅಲಂಕಾರ ವಸ್ತುಗಳು ಅಮ್ಮನ ಸೀರೆಗಳು ಒಡವೆಗಳು ಹೆಚ್ಚಾಗಿ ಇರುತ್ತದೆ. ಹೀಗೆ ಕೆಲವು ವಸ್ತುಗಳನ್ನು ತವರು ಮನೆಯಿಂದ ತರಬಾರದು ಎಂದು ಹೇಳುತ್ತಾರೆ. ಲಕ್ಷ್ಮಿ ದೇವಿಯನ್ನು ಅತ್ತೆ ಮನೆಗೆ ತೆಗೆದುಕೊಂಡು ಹೋಗುವುದರಿಂದ ತವರು ಮನೆ ಬಡತನದ ಪಾಲಾಗುತ್ತದೆ. ಎಂದು ನಂಬಿಕೆ ಇದೆ. ಹಾಗಾಗಿ ಲಕ್ಷ್ಮಿ ದೇವಿಯನ್ನು ಎಂದಿಗೂ ಕೂಡ ನಿಮ್ಮ ತವರು ಮನೆಯಿಂದ ತೆಗೆದುಕೊಂಡು ಹೋಗಬಾರದು.

Leave A Reply

Your email address will not be published.