ಸಿಂಹ ರಾಶಿಯವರ ಯುಗಾದಿ ವರ್ಷ ಭವಿಷ್ಯ

0

ನಾವು ಈ ಲೇಖನದಲ್ಲಿ ಸಿಂಹ ರಾಶಿಯವರ ಯುಗಾದಿ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ. ಈ ವರ್ಷ ಯುಗಾದಿ ಶುರುವಾದಾಗಿನಿಂದ 9ನೇ ತಾರೀಖಿನಿಂದ 30ನೇ ತಾರೀಖಿನವರೆಗೆ ಗುರುಬಲ ಸಂಪೂರ್ಣವಾಗಿ ಇರುತ್ತದೆ. ನಂತರ ಸಾಧಾರಣವಾಗಿ ಕಂಡುಬರುತ್ತದೆ. ಅಂದರೆ ಹತ್ತನೇ ಗುರುವಾಗಿರುತ್ತಾರೆ. ಪ್ರಸ್ತುತವಾಗಿ 9ನೇ ಗುರು ಇರುತ್ತದೆ. ತುಂಬಾ ಉತ್ತಮವಾದ ಫಲವನ್ನು ಕೊಡುತ್ತಾನೆ.

ಆದರೆ ಏಪ್ರಿಲ್ 30ರ ನಂತರ ಗುರು ಹತ್ತನೇ ಮನೆಯನ್ನು ಪ್ರವೇಶ ಮಾಡುತ್ತಾನೆ. ಸ್ವಲ್ಪ ಗುರು ಬಲ ಕಡಿಮೆಯಾಗಿರುವುದು ಕಂಡುಬರುತ್ತದೆ. ಗುರುವಿನ ಪ್ರಭಾವದಿಂದ ಕೆಲವೊಂದು ಶುಭ ವಿಚಾರಗಳು ಇರುತ್ತವೆ. ಆದರೆ ನೀವು ಸ್ವಲ್ಪ ಹೆಚ್ಚಿನ ಶ್ರಮವನ್ನು ವಹಿಸಬೇಕಾಗುತ್ತದೆ. ಇದರಿಂದ ನೀವು ಹೆಚ್ಚಿನ ಲಾಭವನ್ನು ಮತ್ತು ಸಂತೋಷವನ್ನು ಪಡೆಯುತ್ತೀರಾ.

ಆದರೆ ಇದುವರೆಗೆ ಸ್ವಲ್ಪ ಅದೃಷ್ಟ ನಿಮ್ಮ ಹಿಂದೆ ಇತ್ತು. ಆದರೆ ಈಗ ನೀವು ಹೆಚ್ಚಿನ ಪರಿಶ್ರಮ ಮತ್ತು ಪ್ರಯತ್ನದಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಬೇಕು .ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ,ಕೆಲಸ ಕಾರ್ಯದಲ್ಲಿ ಇದ್ದರೂ ಹೆಚ್ಚಿನ ಬುದ್ಧಿವಂತಿಕೆ ಬೇಕು . ಸಮಯ ಪ್ರಜ್ಞೆ ಇರಬೇಕು .ಪ್ರಯತ್ನ ಎಂಬುದನ್ನು ನೀವು ನಿರಂತರವಾಗಿ ಮಾಡುತ್ತಿರಬೇಕು. ಈ ರೀತಿ ಮಾಡಿದರೆ ನಿಮಗೆ ಖಂಡಿತವಾಗಲೂ ಶುಭ ಫಲಗಳು ದೊರಕುತ್ತದೆ. ಗುರು ಅನುಗ್ರಹ ಮತ್ತು ತಂದೆ ತಾಯಿಗಳ ಆಶೀರ್ವಾದವನ್ನು ಪಡೆದುಕೊಳ್ಳಬೇಕು.

ಮತ್ತು ತಂದೆ ತಾಯಿಗಳ ಸೇವೆ ಗುರುಗಳ ಸೇವೆಯನ್ನು ಮಾಡಬೇಕು. ಮತ್ತು ಪೂಜ್ಯರ ಮತ್ತು ಪುಣ್ಯ ಕ್ಷೇತ್ರಗಳ ದರ್ಶನದಿಂದ ನಿಮ್ಮ ಮನಸ್ಸು ಶಾಂತಿ ಇಂದ ಕೂಡಿರುತ್ತದೆ . ಸಿಂಹ ರಾಶಿಯವರು ಎಂದರೆ ಕೋಪ ಹಠ ಹೆಚ್ಚಿಗೆ ಮಟ್ಟದಲ್ಲಿ ನಿಮಗೆ ಇರುತ್ತದೆ. ಕೋಪವನ್ನು ಬಿಟ್ಟು ಶಾಂತಿಯನ್ನು ತೆಗೆದುಕೊಂಡರೆ ಅಂದುಕೊಂಡ ಅಂತಹ ಕೆಲಸವನ್ನು ನೀವು ನಿರ್ವಹಿಸಬಹುದು.

ಕೌಟುಂಬಿಕ ವಿಚಾರದಲ್ಲಿ ಕೆಲವೊಂದು ಸಂತೋಷವಾದಂತಹ ಬೆಳವಣಿಗೆಗಳು ನಡೆಯುತ್ತದೆ. ಆದರೆ ಭದ್ರವಾಗಿ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಕುಟುಂಬದಲ್ಲಿ ಏನೇ ಅಡೆತಡೆಗಳಿದ್ದರೂ ಅದನ್ನು ಶಾಂತವಾಗಿ ನಿರ್ವಹಿಸಬೇಕಾಗುತ್ತದೆ. ಎಲ್ಲರ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಪ್ರಯತ್ನ ನಿಮ್ಮ ಮೇಲಿನ ಜವಾಬ್ದಾರಿ ಸದೃಢವಾಗಿ ನಿರ್ವಹಿಸುವ ಕೆಲಸವನ್ನು ಮಾಡಿದರೆ ಖಂಡಿತವಾಗಲೂ ನಿಮಗೆ ಶುಭ ಫಲಗಳು ದೊರಕುತ್ತವೆ. ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತದೆ .

ಪ್ರೇಮಿಗಳ ಮಧ್ಯೆ ಹೊಂದಾಣಿಕೆಯು ಕಂಡುಬರುತ್ತದೆ. ಆದರೆ ಅದನ್ನು ಉಳಿಸಿಕೊಂಡು ಹೋಗುವ ಪ್ರಯತ್ನವನ್ನು ನೀವು ಮಾಡಬೇಕಾಗುತ್ತದೆ. ಮನೆಯಲ್ಲಿ ಶುಭಕಾರಕವಾದಂತಹ ಸನ್ನಿವೇಶಗಳು ಮಂಗಳ ಕಾರ್ಯಗಳು ನಡೆಯುವಂತಹ ಸನ್ನಿವೇಶ ಕಂಡುಬರುತ್ತದೆ. ಮದುವೆಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ಹೆಚ್ಚಿನ ಪರಿಶ್ರಮವನ್ನು ಹಾಕಿದರೆ ಎಷ್ಟೇ ಕಷ್ಟಗಳು ಅಡೆತಡೆಗಳು ಬಂದರೂ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಕೊನೆಯಲ್ಲಿ ಒಳ್ಳೆಯ ಫಲಗಳು ಸಿಗುತ್ತದೆ.

ಪ್ರಮುಖ ವ್ಯಕ್ತಿಗಳ ಭೇಟಿಯಾಗುವಂತಹ ಸನ್ನಿವೇಶ ಕಂಡುಬರುತ್ತದೆ. ಆ ಬೇಟಿಯಿಂದ ನಿಮಗೇನು ಲಾಭವಾಗುತ್ತದೆ. ಎಂಬುದನ್ನು ತಿಳಿದುಕೊಂಡು ನೀವು ಮುನ್ನಡೆಯಬೇಕು. ಸೇವಕ ವರ್ಗದಿಂದ ಒಳ್ಳೆಯ ಧನ ಲಾಭಗಳು ಸಿಗುತ್ತದೆ. ಶನಿಪರಮಾತ್ಮನು ನಿಮಗೆ ವರ್ಷ ಆರಂಭದಿಂದ ವರ್ಷದ ಅಂತ್ಯದವರೆಗೂ 7ನೇ ಯವನಾಗಿರುತ್ತಾನೆ. ತಾಮ್ರಪಾದದಿಂದ ಬಂದಿರುತ್ತದೆ. ಸಾಧಾರಣವಾದಂತಹ ಶುಭಕಾರಕನಾಗಿರುತ್ತಾನೆ. ಅದ್ಭುತವಾದ ಫಲಗಳು ದೊರೆಯುವುದಿಲ್ಲ.

ಆದರೆ ಅದ್ಭುತವಾದ ಫಲಗಳನ್ನು ನೀವು ಪಡೆದುಕೊಳ್ಳಬೇಕೆಂದರೆ ಕೆಲವೊಂದು ಎಚ್ಚರಿಕೆಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಶನಿದೇವನು ಮಿಶ್ರ ಫಲದಾಯಕನಾಗಿರುವುದರಿಂದ ವ್ಯಾಪಾರ ಉದ್ಯೋಗಗಳಲ್ಲಿ ಸವಾಲುಗಳಿರುತ್ತದೆ. ಮತ್ತು ಎಲ್ಲ ಸವಾಲುಗಳನ್ನು ನೀವು ಬಹಳ ಬುದ್ಧಿವಂತಿಕೆಯಿಂದ ಮಾನಸಿಕವಾಗಿಯೂ ,ನೀವು ತಯಾರಾಗಿ ಇರಬೇಕಾಗುತ್ತದೆ. ದುಷ್ಟ ಜನಗಳ ಸಹವಾಸವಿರುತ್ತದೆ .ಆದ್ದರಿಂದ ದುಷ್ಟ ಜನಗಳ ಸಹವಾಸವನ್ನು ನೀವು ಬಿಡಬೇಕಾಗುತ್ತದೆ.

ದುಷ್ಟ ಚಟಗಳಿಂದ ದೂರವಿರಬೇಕು. ಖರ್ಚು ವೆಚ್ಚಗಳ ಬಗ್ಗೆ ಕಡಿವಾಣ ಹಾಕಬೇಕಾಗುತ್ತದೆ. ಆದಾಯದಲ್ಲಿ ವಿಳಂಬವಾಗುತ್ತದೆ. ಅಂದರೆ ಬರುವ ದುಡ್ಡು ಸಕಾಲಕ್ಕೆ ಬರದೆ ಹಣಕಾಸಿನಲ್ಲಿ ನಿಧಾನ ಗತಿಯಲ್ಲಿ ವ್ಯವಸ್ಥೆಗಳು ನಡೆಯುತ್ತದೆ. ಇದರಿಂದ ನಿಮಗೆ ಬೇಸರವಾಗುವಂತಹ ಸನ್ನಿವೇಶಗಳು ಒದಗುತ್ತದೆ. ದುಡ್ಡಿನ ವಿಚಾರದಲ್ಲಿ ಮತ್ತು ನಂಬಿಕೆಯ ವಿಚಾರದಲ್ಲಿ ನೀವು ಜಾಗೃತರಾಗಿರಬೇಕು. ವಿರೋಧಿಗಳ ಉಪದ್ರವ ಅಂದರೆ ಶತ್ರುಗಳ ಕಿರಿಕಿರಿ ಇರುತ್ತದೆ. ಇಂತಹ ಜನಗಳ ಬಗ್ಗೆ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಕೆಲವೊಂದು ಜನರು ನಿಮ್ಮ ಬೆನ್ನ ಹಿಂದೆ ನಿಂತು ನಿಮ್ಮನ್ನು ಕೆಲಸದಿಂದ ತೆಗೆದು ಹಾಕುವ ಪ್ರವೃತ್ತಿಯಲ್ಲಿ ತೊಡಗಿರುತ್ತಾರೆ. ಹಾಗಾಗಿ ನಂಬಿಕೆಯಿಂದ ನೀವು ಹೆಜ್ಜೆ ಇಡಬೇಕಾಗುತ್ತದೆ. ಕೆಲಸದಲ್ಲಿ ನೀವು ಹೆಚ್ಚಿನ ಶ್ರಮವನ್ನು ವಹಿಸಬೇಕಾಗುತ್ತದೆ. ಗುರುವಿನ ಮತ್ತು ಶನಿಯ ಮಿಶ್ರಫಲವಿರುವಾಗ ನಿಮ್ಮ ಶ್ರಮವನ್ನು ನೀವು ಹೆಚ್ಚಿಗೆ ಹಾಕಬೇಕಾಗುತ್ತದೆ. ಎಷ್ಟೇ ಸಮಸ್ಯೆಗಳು ಬಂದರೂ ನೀವು ತಾಳ್ಮೆಯಿಂದ ವರ್ತಿಸಬೇಕು. ಮಂಗಳ ಕಾರ್ಯದಲ್ಲಿ ನೀವು ಪ್ರಮುಖವಾದಂಥ ಸ್ಥಾನಮಾನವನ್ನು ವಹಿಸುತ್ತೀರಾ.

ಲೇವಾದೇವಿ ವ್ಯವಹಾರದಲ್ಲಿ ಹಣಕಾಸಿನ ವಿಚಾರದಲ್ಲಿ , ಸ್ವಲ್ಪ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಹಣಕಾಸಿನ ಕೊರತೆಗಳು ನಿಮಗೆ ಕಂಡು ಬರುತ್ತದೆ. ಸ್ತ್ರೀ ಸಂಬಂಧಿತ ಚಿಂತೆಗಳು ನಿಮ್ಮನ್ನು ಕಾಡುತ್ತದೆ. ವ್ಯರ್ಥ ಚಿಂತೆಗಳು ಕಾಡುತ್ತದೆ. ಆದ್ದರಿಂದ ನೀವು ತಾಳ್ಮೆಯನ್ನು ತೆಗೆದುಕೊಂಡು ಧೈರ್ಯವಾಗಿ ಎದುರಿಸುವ ಪ್ರಯತ್ನವನ್ನು ಮಾಡಿದರೆ ನೀವು ಅದ್ಭುತ ಫಲವನ್ನು ಪಡೆಯುತ್ತೀರಾ. ಸಜ್ಜನರ ಸಂಗವನ್ನು ಮಾಡಬೇಕು. ಮಧ್ಯಸ್ಥಿಕೆ ಕೆಲಸವನ್ನು ವಹಿಸಲು ಹೋಗಬೇಡಿ. ನಿಮ್ಮ ಕೆಲಸದ ಮೇಲೆ ಮಾತ್ರ ನೀವು ಕಾಳಜಿಯನ್ನು ವಹಿಸಿರಿ.

ಖರ್ಚುವೆಚ್ಚಕ್ಕೆ ಮತ್ತು ದುಂದು ವೆಚ್ಚವನ್ನು ನಿಯಂತ್ರಿಸಿ. ಜೇಷ್ಠ ಮಾಸ ಒಂದು , ಎಂಟು ಹದಿಮೂರನೆಯ ತಿಥಿಗಳು ಶನಿವಾರ ,ಮೂಲ ನಕ್ಷತ್ರ ಇವುಗಳು ನಿಮಗೆ ಘಾತವಾಗಿರುತ್ತದೆ. ಇಂತಹ ಸಂದರ್ಭಗಳನ್ನು ತಪ್ಪಿಸಿಕೊಂಡು ನೀವು ಕೆಲಸವನ್ನು ಮಾಡಿ. ಇವು ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಾಗಿದ್ದರೆ ಮೇಲಾಧಿಕಾರಿಗಳ ಕಿರಿಕಿರಿ ಇರುತ್ತದೆ .ಮನಸ್ಸಿಗೆ ತುಂಬಾ ಬೇಸರ ಉಂಟಾಗುತ್ತದೆ ಮೈಮರೆತು ಯಾವ ಕೆಲಸವನ್ನು ಮಾಡಬೇಡಿ. ಅಂದರೆ ಪ್ರಮುಖ ಕಾಗದ ಪತ್ರಗಳ

ಮೇಲೆ ನಿಮ್ಮ ಲಕ್ಷ್ಯವಿರಲಿ. ಬಡ್ತಿಯ ವಿಚಾರದಲ್ಲಿ ನಿಮ್ಮ ಹೆಚ್ಚಿನ ಶ್ರಮವನ್ನು ವಹಿಸಿದರೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಮಿತ್ರರು ದ್ರೋಹ ಮಾಡುವ ಸನ್ನಿವೇಶವಿರುತ್ತದೆ. ಕರ್ತವ್ಯದಲ್ಲಿ ಯಾವುದೇ ಚ್ಯುತಿ ಬರದಂತೆ ನೋಡಿಕೊಳ್ಳಿ. ವ್ಯಾಪಾರಸ್ಥರಿಗೆ ಉದ್ಯೋಗದಲ್ಲಿ ತಕ್ಕಮಟ್ಟಿಗೆ ಫಲವನ್ನು ಕಾಣುತ್ತೀರ. ಸ್ವಲ್ಪ ಲಾಭವಿದ್ದರೂ ಅಧಿಕ ಖರ್ಚು ಇರುತ್ತದೆ. ಮತ್ತು ಸಾಲದ ಬಾದೆಗಳು ಸಹ ಕಂಡುಬರುವ ಸನ್ನಿವೇಶವಿದೆ. ಕೃಷಿಕರು ಸಹ ಎಚ್ಚರದಿಂದ ಇರಬೇಕು .ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಶ್ರಮವನ್ನು ವಹಿಸಿ. ಅಭ್ಯಾಸ ಮಾಡಬೇಕಾಗುತ್ತದೆ ದೂರವಾಣಿಯ ಬಳಕೆಯಿಂದ ಸ್ವಲ್ಪ ದೂರವಿರಬೇಕು.

ಒಟ್ಟಾರೆಯಾಗಿ ಸವಾಲುಗಳ ಮಧ್ಯೆ ಶುಭಕಾರಕವಾದ ಫಲಗಳನ್ನು ನೀವು ಕಾಣುತ್ತೀರ. ಈ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಸಾರವಾಗಿ ನೀವು ಕೆಲಸಗಳನ್ನು ಮಾಡಿದರೆ ಒಳ್ಳೆಯ ಫಲಗಳನ್ನು ಕಾಣುತ್ತೀರಾ. ಪರಿಹಾರವೆಂದರೆ ಗುರುರಾಯರ ದರ್ಶನವನ್ನು ಮಾಡಿ. ದತ್ತಾತ್ರೇಯ ಸ್ವಾಮಿಯ ದರ್ಶನವನ್ನು ಮಾಡಿ. ಗುರುಗಳ ಸೇವೆ ಮತ್ತು ತಂದೆ ತಾಯಿಯ ಸೇವೆಯನ್ನು ಮಾಡಿ. ಇದರಿಂದ ಗುರುವಿನ ಅನುಗ್ರಹವಾಗುತ್ತದೆ . ನಿರ್ಗತಿಕರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ, ಸಹಾಯವನ್ನು ಮಾಡಿ . ರುದ್ರ ಸೂಕ್ತಪಠನೆಯನ್ನು ಮಾಡಿ. ಆಂಜನೇಯ ಸ್ವಾಮಿಗೆ ಅಭಿಷೇಕ ಮತ್ತು ಅರ್ಚನೆಗಳನ್ನು ಮಾಡಿಸಿಕೊಳ್ಳಿ. ಕೇಸರಿ ತಿಲಕ ಧಾರಣೆಯನ್ನು ಮಾಡಿ. ಇದರಿಂದ ನಿಮಗೆ ಜೀವನದಲ್ಲಿ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.

Leave A Reply

Your email address will not be published.