ನಾವು ಈ ಲೇಖನದಲ್ಲಿ ಅಂಗೈಯಲ್ಲಿ ಅರ್ಧಚಂದ್ರಾಕೃತಿ ರೇಖೆ ಇದ್ದರೆ ಒಳ್ಳೆಯ ಯೋಗ ಕೂಡಿ ಬರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಾವು ನಮ್ಮ ಎರಡು ಹಸ್ತಗಳನ್ನು ಸೇರಿಸಿದರೆ ಅಥವಾ ಅಂಗೈಯನ್ನು ಸೇರಿಸಿದರೆ ನಮ್ಮ ಎರಡು ಅಂಗೈಗಳ ಹೃದಯ ರೇಖೆಗಳು ಸೇರಿ ಅರ್ಧಚಂದ್ರಾಕೃತಿ ಏರ್ಪಡುತ್ತದೆ. ಅರ್ಧಚಂದ್ರಾಕೃತಿಯ ಫಲಾಫಲಗಳೇನು ಎಂಬುದನ್ನು ತಿಳಿದುಕೊಳ್ಳೋಣ. ನಮ್ಮ ಎರಡು ಅಂಗೈಗಳನ್ನ ಜೋಡಿಸಿದಾಗ ಸಾಮಾನ್ಯವಾಗಿ ಎರಡು ರೇಖೆಗಳು ಹೊಂದಿಕೊಂಡಿರುವುದನ್ನು ನೋಡುತ್ತೇವೆ.
ನಾವು ಅಂಗೈಯನ್ನು ಜೋಡಿಸಿದಾಗ , ಮೂರು ರೀತಿಯಲ್ಲಿ ರೇಖೆಗಳು ಒಬ್ಬರಿಗೆ ಒಂದೊಂದು ರೀತಿಯಲ್ಲಿ ಜೋಡಣೆಯಾಗಿರುತ್ತದೆ. ಈ ಮೂರು ರೀತಿಯ ಪ್ರಕಾರಗಳು ಬೇರೆ ಬೇರೆ ಗುಣಲಕ್ಷಣಗಳನ್ನು ತೋರಿಸುತ್ತದೆ. ಪ್ರಮುಖವಾಗಿ ಗೋಚರಿಸುವ ಮೂರು ವಿಧಗಳೆಂದರೆ ಮೊದಲನೇದು ಸಂಪೂರ್ಣ ಅರ್ಧ ಚಂದ್ರಾಕೃತಿ. ಎರಡನೆಯದಾಗಿ ಬಲ ಅಂಗೈ ರೇಖೆ ಮೇಲೆ ಇರುವಂತೆ ಕಾಣಿಸುತ್ತದೆ .ಮೂರನೆಯದಾಗಿ ಎಡ ಅಂಗೈ ರೇಖೆ ಮೇಲೆ ಇರುವ ಆಕೃತಿ.
ನಾವು ಮೊದಲನೆಯದಾಗಿ ಸಂಪೂರ್ಣ ಅರ್ಧ ಚಂದ್ರಾಕೃತಿಯ ಬಗ್ಗೆ ತಿಳಿದುಕೊಳ್ಳೋಣ. ಸಂಪೂರ್ಣ ಅರ್ಧ ಚಂದ್ರಾಕೃತಿ ಬಂದರೆ, ಅದು ಒಳ್ಳೆಯ ಲಕ್ಷಣವಾಗಿರುತ್ತದೆ. ಇದನ್ನು ನಾವು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಕಾಣಬಹುದು. ಈ ರೀತಿಯ ರೇಖೆ ಇರುವಂತಹ ವ್ಯಕ್ತಿಗಳು ಯಾವುದೇ ರೀತಿಯ ಕಲಹಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ. ಮನಸ್ಸಿನ ಶಾಂತಿ ಇವರಿಗೆ ಬಹಳ ಮುಖ್ಯ. ಮಾನಸಿಕವಾಗಿ ತುಂಬಾ ಗಟ್ಟಿ ಇರುತ್ತಾರೆ .ಇವರು ಮನುಷ್ಯತ್ವಕ್ಕೆ ತುಂಬಾ ಬೆಲೆ ಕೊಡುವಂತವರಾಗಿರುತ್ತಾರೆ.
ನೋಡಲು ಬಹಳ ಒರಟಾಗಿ ಅಥವಾ ಗಟ್ಟಿಯಾಗಿರುವಂತೆ ಕಂಡರು ,ಬಹಳ ಮೃದು ಸ್ವಭಾವದವರಾಗಿರುತ್ತಾರೆ. ಮತ್ತು ಸೂಕ್ಷ್ಮಮತಿಗಳಾಗಿರುತ್ತಾರೆ. ಇಂತಹ ರೇಖೆವುಳ್ಳ ಜನರು ವಿಮರ್ಶಾತ್ಮಕವಾಗಿ ಅಂದರೆ ಪರಿಸ್ಥಿತಿಗೆ ತಕ್ಕನಾಗಿ ನಡೆದುಕೊಳ್ಳುವಂಥ ಸ್ವಭಾವದವರಾಗಿರುತ್ತಾರೆ. ಇವರು ಯಾವಾಗಲೂ ಕ್ರಿಯಾತ್ಮಕವಾಗಿ ಇರಲು ಇಷ್ಟಪಡುತ್ತಾರೆ. ಈ ರೀತಿಯ ರೇಖೆ ಇರುವಂತವರಿಗೆ ಒಳ್ಳೆಯ ಮದುವೆ ಸಂಬಂಧಗಳು ಕೂಡಿಬರುತ್ತದೆ. ನೀವು ಪ್ರೀತಿಸುತ್ತಿದ್ದರೆ, ಅಥವಾ ಮನೆಯವರು ನೋಡಿದ ಹುಡುಗಿಯಾದರೂ
ಸಹ ಕುಟುಂಬದ ಎಲ್ಲ ಸದಸ್ಯರ ಒಪ್ಪಿಗೆಯ ಮೇರೆಗೆ ನಿಮ್ಮ ವಿವಾಹವಾಗುತ್ತದೆ. ಮತ್ತು ನಿಮ್ಮ ದಾಂಪತ್ಯ ಜೀವನ ತುಂಬಾ ಸುಖಮಯವಾಗಿರುತ್ತದೆ. ಮದುವೆಯ ನಂತರ ನಿಮ್ಮ ಜೀವನ ಅತ್ಯುತ್ತಮ ಪ್ರಗತಿಯಾಗುತ್ತದೆ. ಸಂಪೂರ್ಣ ಅರ್ಧಚಂದ್ರಾಕೃತಿಯ ರೇಖೆಯು ತುಂಬಾ ಶುಭ ರೇಖೆಯಾಗಿದೆ . ಇದು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಕಾಣಿಸುತ್ತದೆ. ಇದು ತುಂಬಾ ವಿಶೇಷವಾಗಿದೆ. ಇನ್ನು ಎರಡನೆಯದಾಗಿ ಬಲ ಅಂಗೈ ರೇಖೆ ಎಡ ಅಂಗೈ ರೇಖೆಗಿಂತ ಮೇಲೆ ಇದ್ದರೆ, ಇವರು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಅಂದರೆ ಈ ರೀತಿಯ ರೇಖೆ ಇರುವಂತಹ ಜನರು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ, ಕೆಲಸ ಮಾಡುವವರೆಗೂ ಬಿಡುವ ಜಯಮಾನದವರಲ್ಲ .
ಅಂದರೆ ಅಷ್ಟು ಶ್ರದ್ಧೆಯಿಂದ ತಮ್ಮ ಕೆಲಸವನ್ನು ಪೂರ್ಣಗೊಳಿಸುವ ವರು. ಅಂತೆಯೇ ಇವರ ಕುಟುಂಬದವರು ಇವರನ್ನು ತುಂಬಾ ಇಷ್ಟಪಡುತ್ತಾರೆ. ಮತ್ತು ಕುಟುಂಬದ ಹಿರಿಯರಿಗೆ ಬಹಳ ಇಷ್ಟವಾಗಿರುತ್ತಾರೆ .ಮತ್ತು ಕುಟುಂಬದ ಹಿರಿಯರಿಗೆ ಇಂತಹ ವ್ಯಕ್ತಿಗಳು ತುಂಬಾ ವಿಧೇಯವಾಗಿರುತ್ತಾರೆ . ಈ ತರಹ ಅಂಗೈ ರೇಖೆಯನ್ನು ಹೊಂದಿರುವವರು ಯಾವುದೇ ಊಹಾಪೋಹಗಳಿಗೆ ಕಿವಿಗೊಡುವವರಲ್ಲ . ಹಾಗೆಯೇ ತಮ್ಮ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುತ್ತಾರೆ. ಹೇಳುವುದಾದರೆ
ಈ ರೀತಿಯ ರೇಖೆ ಉಳ್ಳಂತಹ ವ್ಯಕ್ತಿಗಳು ತಮ್ಮ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಅಂತರದವರನ್ನು ಮದುವೆಯಾಗುವಂತಹ ಸಾಧ್ಯತೆ ಇರುತ್ತದೆ. ಅಥವಾ ತುಂಬಾ ವಯಸ್ಸಿನ ಅಂತರ ಹೆಚ್ಚಿಗೆ ಇರುವವರನ್ನು ಮದುವೆಯಾಗುವಂತಹ ಸಾಧ್ಯತೆ ಇರುತ್ತದೆ. ಈ ರೀತಿಯ ರೇಖೆ ಇರುವವರನ್ನು ಹೆಚ್ಚಿಗೆ ವ್ಯಕ್ತಿಗಳಲ್ಲಿ ನೋಡಬಹುದು. ಇನ್ನು ಕೊನೆಯದಾಗಿ ಅಥವಾ ಮೂರನೆಯದಾಗಿ ,ಎಡ ಅಂಗೈ ಹೃದಯ ರೇಖೆ ಬಲ ಅಂಗೈ ಹೃದಯ ರೇಖೆಗಿಂತ ಮೇಲೆ ಇದ್ದರೆ, ಏನು ಫಲ ಎಂಬುದನ್ನು ತಿಳಿದುಕೊಳ್ಳೋಣ.
ಎಡ ಅಂಗೈ ರೇಖೆ ಮೇಲೆ ಇರುವಂತಹ ಜನರು ಬೇಗ ವಿವಾಹವನ್ನು ಮಾಡಿಕೊಳ್ಳುತ್ತಾರೆ. ಅಂದರೆ ವಿದ್ಯಾಭ್ಯಾಸದ ಸಮಯದಲ್ಲಿ ಅಥವಾ ವಿದ್ಯಾಭ್ಯಾಸ ಮುಗಿದ ತಕ್ಷಣ ಬೇಗ ಮದುವೆಯಾಗುವಂತಹ ಯೋಗವನ್ನು ಹೊಂದಿರುತ್ತಾರೆ. ಕೆಲವೊಂದು ಬಾರಿ ನಿಮ್ಮ ಜೀವನ ಸಂಗಾತಿ ನಿಮಗಿಂತ ಚಿಕ್ಕವರಾಗಿರುತ್ತಾರೆ. ಇದು ಕೆಲವೇ ವ್ಯಕ್ತಿಗಳಲ್ಲಿ ಮಾತ್ರ ನೋಡ ಸಿಗುತ್ತದೆ .ಈ ರೀತಿ ರೇಖೆ ಇರುವವರು ಯಾವುದೇ ಕುತೂಹಲವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಇವರು ತುಂಬಾ ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುತ್ತಾರೆ. ಹಾಗೆ ಇವರು ಸ್ವಲ್ಪ ಮುಂಗೋಪಿಗಳಾಗಿರುತ್ತಾರೆ. ಇಂತಹ ರೇಖೆ ಇರುವ ವ್ಯಕ್ತಿಗಳಿಗೆ ಬಹಳ ಬೇಗನೆ ಸಿಟ್ಟು ಬರುತ್ತದೆ. ಇವರು ತುಂಬಾ ಆಕ್ರಮಣಕಾರಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.