ಬೆಳಿಗ್ಗೆ ಎದ್ದ ಕೂಡಲೇ ಸ್ತ್ರೀಯರು ಈ 3 ಕೆಲಸಗಳನ್ನು ಮಾಡುವುದರಿಂದ ಸಂಪತ್ತು ಲಭಿಸುತ್ತದೆ

0

ನಾವು ಈ ಲೇಖನದಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಸ್ತ್ರೀಯರು ಈ 3 ಕೆಲಸಗಳನ್ನು ಮಾಡುವುದರಿಂದ ಸಂಸತ್ತು ಹೇಗೆ ಲಭಿಸುತ್ತದೆ ಎಂದು ತಿಳಿಯೋಣ. ಬೆಳಿಗ್ಗೆ ಎದ್ದ ತಕ್ಷಣ ಸ್ತ್ರೀಯರು ಈ ಕೆಲಸಗಳನ್ನು ಮಾಡುವುದರಿಂದ , ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ . ಬೇಡವೆಂದರೂ ಕೂಡ ಐಶ್ವರ್ಯ ಬರುತ್ತದೆ . ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಲಕ್ಷ್ಮಿ ಕಟಾಕ್ಷ ಬೇಕು . ಲಕ್ಷ್ಮೀದೇವಿಯ ಅನುಗ್ರಹ ಇಲ್ಲದಿದ್ದರೆ , ಯಾವ ಕೆಲಸಗಳು ಕೂಡ ಮುಂದಕ್ಕೆ ಸಾಗುವುದಿಲ್ಲ .

ಈ ಪ್ರಪಂಚದಲ್ಲಿ ಬದುಕುವುದಕ್ಕೂ ಬಹಳ ಕಷ್ಟವಾಗಿ ಬಿಡುತ್ತದೆ . ಲಕ್ಷ್ಮಿಯು ಸಂಪತ್ತನ್ನು ನೀಡುತ್ತಾಳೆ . ಸಂಪತ್ತು ಎಂದರೆ ಕೇವಲ ಬೆಳ್ಳಿ , ಬಂಗಾರ , ನಿಧಿ, ಹಣ, ಭಾವನೆಗಳೇ ಅಲ್ಲ, ಈ ಬೌತಿಕ ಸಂಪಾದನೆಯು ಶಾಶ್ವತವಲ್ಲ . ಲಕ್ಷ್ಮೀದೇವಿ ನೀಡುವುದು ನಿಜವಾಗಿಯೂ ಆಧ್ಯಾತ್ಮಿಕ ಸಂಪತ್ತು . ಇದು ಕರಗಿ ಹೋಗುವುದಿಲ್ಲ ಕಷ್ಟದ ಸಮಯದಲ್ಲಿ ಧೈರ್ಯ ನೀಡುತ್ತದೆ . ಅಂತಹ ಸಂಪತ್ತು ಕಷ್ಟಗಳಿಂದ ತಪ್ಪಿಸಿಕೊಳ್ಳುವುದಿಲ್ಲ . ಕಷ್ಟಗಳನ್ನು ಎದುರಿಸುವ ಬಲವನ್ನು ನೀಡುತ್ತದೆ .

ಲಕ್ಷ್ಮೀದೇವಿಯ ರೂಪು ರೇಷಗಳಲ್ಲಿ , ವಸ್ತ್ರಧಾರಣೆಯಲ್ಲಿ ಮತ್ತು ಬಣ್ಣಗಳಿಗೂ ಕೂಡ ಪ್ರಾಧಾನ್ಯತೆ ಇದೆ . ಲಕ್ಷ್ಮೀ ದೇವಿಯು ಹೆಚ್ಚಾಗಿ ಕೆಂಪು ಮತ್ತು ಎಲೆ ಹಸಿರಿನ ವಸ್ತ್ರಗಳನ್ನು ಧರಿಸಿದ ಹಾಗೆ ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ. ಮತ್ತು ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ . ಕೆಂಪು ಬಣ್ಣವು ಶಕ್ತಿಗೆ ಮತ್ತು ಎಲೆ ಹಸಿರಿನ ಬಣ್ಣವು ಸಫಲತೆಗೆ ಪ್ರತೀಕವಾದ ಚಿಹ್ನೆಗಳಾಗಿವೆ . ಈ ಪ್ರಕೃತಿಗೆ ಲಕ್ಷ್ಮೀ ದೇವಿಯು ಪ್ರತಿನಿಧಿ ಆದ್ದರಿಂದ ಆಕೆಯನ್ನು ಈ ಎರಡು ಬಣ್ಣಗಳ ವಸ್ತ್ರಗಳಲ್ಲಿ ಹೆಚ್ಚಾಗಿ ಚಿತ್ರೀಕರಿಸುತ್ತಾರೆ .

ಇನ್ನೂ ಲಕ್ಷ್ಮೀ ದೇವಿಯು ಚಿನ್ನದ ಆಭರಣಗಳನ್ನು ಧರಿಸಿದ ಹಾಗೆ ಪುರಾತನ ಕಾಲದಿಂದಲೂ ಚಿತ್ರೀಕರಿಸುತ್ತಾರೆ . ನಾವು ಕೂಡ ಹಾಗೆಯೇ ತಿಳಿದಿದ್ದೇವೆ . ಈ ಬಂಗಾರವು ಐಶ್ವರ್ಯಕ್ಕೆ ಸಂಕೇತ . ಐಶ್ವರ್ಯಕ್ಕೆ ಅಧಿದೇವತೆ ಲಕ್ಷ್ಮಿ ದೇವಿ ಆದ್ದರಿಂದ ಆಕೆಯನ್ನು ಬಂಗಾರದ ಆಭರಣಗಳಿಂದ ಅಲಂಕರಿಸುತ್ತಾರೆ . ವಿಷ್ಣುವಿನ ಆರಾಧನೆಯಲ್ಲಿಯೂ ಕೂಡ ಲಕ್ಷ್ಮಿ ದೇವಿಗೆ ಪ್ರಾಧಾನ್ಯತೆ ಇರುತ್ತದೆ . ಲಕ್ಷ್ಮಿ ದೇವಿಯ ಅನುಗ್ರಹ ಇದ್ದರೆ ವಿಷ್ಣು ಮೂರ್ತಿಯು ಕರುಣಿಸಬಲ್ಲನು . ಲಕ್ಷ್ಮೀದೇವಿ ಪ್ರಸನ್ನಳಾಗದಿದ್ದರೆ ,

ವಿಷ್ಣು ಮೂರ್ತಿಯು ಕೂಡ ಭಕ್ತರಿಗೆ ದರ್ಶನವನ್ನು ನೀಡುವುದಿಲ್ಲ . ಸದಾ ಆಚಾರ, ವಿಚಾರ , ಸದ್ ಪ್ರವರ್ತನೆ , ಸದ್ಗುಣಗಳು , ಸನ್ನಡತೆ ಇವೆಲ್ಲವೂ ಕೂಡ ಲಕ್ಷಿ ದೇವಿಯ ಆಹ್ವಾನಗಳು . ಮೊದಲಿಗೆ ಲಕ್ಷ್ಮಿ ದೇವಿಯ ಅನುಗ್ರಹದ ನಂತರ ವಿಷ್ಣು ಮೂರ್ತಿಯ ಅನುಗ್ರಹ ಕೂಡ ಪಡೆಯಬಹುದು . ಆದ್ದರಿಂದ ಎಲ್ಲರಿಗೂ ಲಕ್ಷ್ಮಿ ಕಟಾಕ್ಷ ಅತ್ಯವಶ್ಯಕ. ಹಾಗಾದರೆ ಈ ಲಕ್ಷ್ಮಿ ಕಟಾಕ್ಷ ಲಭಿಸಬೇಕಾದರೆ, ಆ ತಾಯಿಯನ್ನು ಪುಸನ್ನಳಾಗಿಸಬೇಕು . ಅಮ್ಮನವರನ್ನು ಪ್ರಸನ್ನ ಮಾಡಿಕೊಳ್ಳಲು ನಮ್ಮ ಪೂರ್ವಜರು , ಮಹರ್ಷಿಗಳು ಮತ್ತು ಶಾಸ್ತ್ರಗಳು ಬಹಳಷ್ಟು ಸೂತ್ರಗಳನ್ನು ಹೇಳಿದ್ದಾರೆ.

ಮುಖ್ಯವಾಗಿ ಸ್ತ್ರೀಯರು ಲಕ್ಷ್ಮಿ ಕಟಾಕ್ಷವಾದ್ದರಿಂದ ಆಕೆಯನ್ನು ಮನೆಯ ಮಹಾಲಕ್ಷ್ಮಿ ಎಂದು ಕರೆಯುತ್ತಾರೆ. ಇಂತಹ ಮನೆ ಬೆಳಗುವ ಸ್ತ್ರೀಯರು ಮನೆಯಲ್ಲಿ ಕೆಲವು ಕಾರ್ಯಗಳನ್ನು ಖಂಡಿತವಾಗಿ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಅವೆಲ್ಲವೂ ಹಳೆಯ ಕಾಲದ ಸಂಪ್ರದಾಯ. ಈಗ ಕಾಲ ಬದಲಾಗಿದೆ. ಮಹಿಳೆಯರೂ ಕೂಡ ದುಡಿಯುವ ಅನಿವಾರ್ಯತೆ ಮತ್ತು ಅವಶ್ಯಕತೆ ಇದೆ. ಅವರಿಗೂ ಕೂಡ ಈ ಕಾರ್ಯನಿರತ ಜೀವನದಲ್ಲಿ ಸಮಯ ಸಾಕಾಗುತ್ತಿಲ್ಲಾ. ಆದರೂ ಕೂಡ ಕೆಲವೊಂದು ಮುಖ್ಯವಾದ ಕೆಲಸ ಮಾಡುವುದರಿಂದ ಲಕ್ಷ್ಮಿ ದೇವಿಯು ಸಿದ್ಧಿಸುತ್ತಾಳೆ.

ಲಕ್ಷ್ಮಿ ದೇವಿಯನ್ನು ಹೋಲಿಸಿಕೊಳ್ಳಲು ಮಾಡಬಹುದಾದ ಆ ಕೆಲಸಗಳು ಯಾವುವು ಮತ್ತು ಲಕ್ಷ್ಮೀ ದೇವಿಯನ್ನು ಗಣಪತಿಯ ಜೊತೆ ಸೇರಿಸಿ ಏಕೆ ಲಕ್ಷ್ಮಿ ಗಣಪತಿ ಎಂದು ಕರೆಯುತ್ತಾರೆ. ಎಂಬುದನ್ನು ತಿಳಿಯೋಣ . ಮೊದಲಿಗೆ ಲಕ್ಷ್ಮಿಯನ್ನು ಗಣಪತಿಯ ಜೊತೆ ಸೇರಿಸಿ ಏಕೆ ಲಕ್ಷ್ಮಿ ಗಣಪತಿ ಎಂದು ಕರೆಯುತ್ತಾರೆ. ಎಂದು ತಿಳಿಯೋಣ. ಪೂರ್ವ ಕಾಲದಲ್ಲಿ ತ್ರಿಪುರಾಸುರರೆಂಬ ಮೂರು ಜನ ರಾಕ್ಷಸರು ಇದ್ದರು. ಆದರೆ ಈ ಮೂರು ಜನ ರಾಕ್ಷಸರು ಪರ್ವತ ರೂಪದಲ್ಲಿ ಇದ್ದರು.

ಈ ಮೂರು ಜನ ರಾಕ್ಷಸರನ್ನು ಕೊಲ್ಲಬೇಕೆಂದರೆ ಆ ಮೂರು ಪರ್ವತಗಳನ್ನು ದ್ವಂಸ ಮಾಡಬೇಕು . ಆದರೆ ಹಾಗೆ ಮಾಡುವುದಕ್ಕೆ ಮೂರು ಪರ್ವತಗಳು ಒಂದೇ ತರ ಇಲ್ಲ . ಒಂದೇ ರೀತಿಯಾಗಿ ಇಲ್ಲ. ಆಗ ಶಿವನ ವಾಹನವಾದ ನಂದೀಶ್ವರನು ತನ್ನ ಮೂರು ಕೊಂಬುಗಳಿಂದ ಆ ಪರ್ವತಗಳನ್ನು ಒಂದೇ ರೀತಿ ನಿಲ್ಲಿಸುತ್ತಾನೆ. ಮೂರು ಒಂದೇ ಜಾಗದಲ್ಲಿ ಒಂದೇ ರೀತಿ ಇದ್ದುದ್ದರಿಂದ ಮಹಾ ಶಿವನು ನಾರಾಯಣಾಸ್ತ್ರವನ್ನು ಪ್ರಯೋಗಿಸಿ ಆ ಮೂರು ಪರ್ವತಗಳನ್ನು ಅಂದರೆ ಆ ಮೂರು ಜನ ರಾಕ್ಷಸರನ್ನು ಸಂಹರಿಸುತ್ತಾನೆ. ಆದರೆ
ದುರಾದುಷ್ಟ ವಸಾತ್

ಆ ನಂದೀಶ್ವರನ ಮೂರನೇ ಕೊಂಬು ಮುರಿದು ಹೋಗಿ ಈ ಭೂಮಿಯ ಮೇಲೆ ಬೀಳುತ್ತದೆ. ಆಗ ವಿಘ್ನೇಶ್ವರನು ಮುರಿದು ಹೋದ ಕೊಂಬನ್ನು ಹುಡುಕಿ ತಂದು ನಂದೀಶ್ವರನಿಗೆ ಒಪ್ಪಿಸುತ್ತಾನೆ. ಅದೇ ಕೊಂಬನ್ನು ಈ ಭೂಮಿಯ ಮೇಲಿರುವ ಅರಿಶಿಣದ ಕೊಂಬು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಮತ್ತು ನಮ್ಮ ಹಿರಿಯರು ನಂಬುತ್ತಾ ಬಂದಿದ್ದಾರೆ. ಪರಮೇಶ್ವರನು ಸಂತೋಷ ಪಟ್ಟು ಪ್ರತೀ ಮನೆಯಲ್ಲಿಯೂ ಅರಿಶಿಣದ ಕೊಂಬನ್ನು ಪುಡಿ ಮಾಡಿ, ಆ ಅರಿಶಿಣವನ್ನು ಪೂಜಾ ಕಾರ್ಯಗಳಲ್ಲಿ ಬಳಸಬೇಕೆಂದು ಮತ್ತು ಆ ಅರಿಶಿಣ ಪುಡಿಯಿಂದ ಗಣಪತಿಯನ್ನು ತಯಾರು ಮಾಡಿ , ಆ ಅರಿದ್ರ ಗಣಪತಿಗೆ ಪ್ರಥಮ ಪೂಜೆ ಮಾಡಬೇಕೆಂದು ಆದೇಶಿಸುತ್ತಾರೆ.

ಆ ಶಿವನು ವಿನಾಯಕನಿಗೆ ಯಾರು ಪ್ರಥಮ ಪೂಜೆ ಮಾಡುವುದಿಲ್ಲವೋ, ಅವರಿಗೆ ಆತಂಕಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ. ಆದ್ದರಿಂದ ಈಗಲೂ ಸಹ ಪೂಜಾ ಕಾರ್ಯಕ್ರಮದಲ್ಲೂ ಕೂಡ ಪ್ರಥಮ ಪೂಜೆಯನ್ನು ವಿನಾಯಕನಿಗೆ ಸಲ್ಲಿಸುತ್ತಾರೆ. ಕ್ಷೀರ ಸಾಗರ ಮಂಥನ ನಡೆಯುವುದಕ್ಕೂ ಮೊದಲು ಸುರ ಮತ್ತು ಅಸುರರು ಗಣಪತಿಯನ್ನು ಪೂಜಿಸದೆ ಆ ಕಾರ್ಯವನ್ನು ಶುರು ಮಾಡಿದರು. ಆದ್ದರಿಂದ ವಿನಾಯಕನಿಗೆ ಕೋಪ ಬಂದು ಆ ಕೆಲಸಕ್ಕೆ ಆತಂಕಗಳನ್ನು ಕಲ್ಪಿಸಬೇಕು ಎಂದು ಕೊಂಡನು.

ಕ್ಷೀರ ಸಾಗರದಿಂದ ಲಕ್ಷ್ಮೀದೇವಿಯ ಉದ್ಭವ ಆಗುತ್ತಿದ್ದಂತೆಯೇ ವಿನಾಯಕನು ಲಕ್ಷ್ಮಿ ದೇವಿಯನ್ನು ಕರೆದುಕೊಂಡು ಹೋಗುತ್ತಾನೆ. ನಂತರ ಬ್ರಹ್ಮ ಮತ್ತು ದೇವೇಂದ್ರರು ಇಬ್ಬರೂ ಗಣೇಶನ ಬಳಿ ಬಂದು ಈಗಾಗಲೇ ಲಕ್ಷ್ಮಿ ದೇವಿಯನ್ನು ವಿಷ್ಣು ಮೂರ್ತಿಗೆ ಪತ್ನಿಯಾಗಿ ನಿರ್ಣಯಿಸಲಾಗಿದೆ ಎಂದು ಹೇಳಿದಾಗ , ಗಣಪತಿ ಲಕ್ಷ್ಮಿ ದೇವಿಯನ್ನು ವಿಷ್ಣು ಮೂರ್ತಿಗೆ ಒಪ್ಪಿಸುತ್ತಾನೆ. ಆಗ ವಿನಾಯಕನು ಬ್ರಹ್ಮ ದೇವನ ಬಳಿ ನನಗೂ ಕೂಡ ಲಕ್ಷ್ಮಿ ದೇವಿ ಅಂತಹ ಪತ್ನಿ ಬೇಕು ಎಂದು ಕೋರುತ್ತಾನೆ . ಅದಕ್ಕೆ ಅಂಗೀಕರಿಸಿದ ಬ್ರಹ್ಮದೇವನು ಸಿದ್ದಿ ಲಕ್ಷ್ಮಿ ಮತ್ತು ಬುದ್ಧಿ ಲಕ್ಷ್ಮಿ ಎಂಬ ಸ್ತ್ರೀಯರನ್ನು ಸೃಷ್ಟಿಸಿ , ಗಣಪತಿಗೆ ಕೊಡುತ್ತಾರೆ. ಅಂದಿನಿಂದ ಗಣಪತಿ ಲಕ್ಷ್ಮಿ ಗಣಪತಿಯಾಗಿ ಪ್ರಸಿದ್ಧಿ ಹೊಂದುತ್ತಾನೆ.
ಈಗ ಲಕ್ಷ್ಮಿ ಕಟಾಕ್ಷದ ಬಗ್ಗೆ ತಿಳಿಸಲಾಗಿದೆ . ಈ ಆಧುನಿಕ ಜೀವನ ಶೈಲಿಯಲ್ಲಿಯೂ ಕೂಡ ಲಕ್ಷ್ಮಿ ಕಟಾಕ್ಷವನ್ನು ಪಡೆಯುವ ಮೂರು ಸುಲಭವಾದ ಮಾರ್ಗಗಳನ್ನು ನಮ್ಮ ಹಿರಿಯರು ಹೇಳಿದ್ದಾರೆ . ಮನೆಯ ಮಹಾ ಲಕ್ಷ್ಮಿಯರು ಬೆಳಿಗ್ಗೆ ಎದ್ದ ಕೂಡಲೇ ಈ ಮೂರು ಸಲಹೆಗಳನ್ನು ಪಾಲಿಸಿದರೆ ಖಂಡಿತವಾಗಿ ಲಕ್ಷ್ಮೀ ದೇವಿಯು ಸದಾಕಾಲ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ .

ಮೊದಲನೆಯದು ಮನೆಯ ಮಹಾ ಲಕ್ಷ್ಮಿಯರು ಬೆಳಿಗ್ಗೆ ಎದ್ದ ಕೂಡಲೇ ತಮ್ಮ ದೈನಂದಿನ ಮುಖ್ಯ ಕರ್ಮಗಳನ್ನು ಮುಗಿಸಿ , ಸ್ನಾನ ಮಾಡಿಕೊಂಡು ತಪ್ಪದೆ ಮನೆಯ ಹೊಸ್ತಿಲ ಮುಂದೆ ರಂಗೋಲಿಯನ್ನು ಹಾಕಬೇಕು .ಹಾಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಸಂತೋಷ ಪಡುತ್ತಾಳೆ . ಈ ಹಿಂದೆ ಹಿರಿಯರು ಹೇಳುತ್ತಿದ್ದರು ಮುಂಜಾನೆ ಎದ್ದ ತಕ್ಷಣ ಮಹಿಳೆಯರು ಜಳಕ ಮಾಡಿ ಬಾಗಿಲನ್ನು ಸಗಣಿ ನೀರಿನಿಂದ ಸಾರಿಸಿ ರಂಗೋಲಿ ಹಾಕಬೇಕೆಂದು , ಆದರೆ ಈ ಆಧುನಿಕ ಯುಗದಲ್ಲಿ ಸಾಧ್ಯವಾಗುವುದಿಲ್ಲ . ಆದ್ದರಿಂದ ಕನಿಷ್ಠ ಪಕ್ಷ ಬೆಳಿಗ್ಗೆ ಎದ್ದು ಮುಖ ತೊಳೆದು ಹೊಸ್ತಿಲ ಮುಂದೆ ಶುದ್ಧ ಮಾಡಿ , ರಂಗೋಲಿ ಹಾಕಬೇಕು .

ಎರಡನೆಯದು ರಂಗೋಲಿ ಹಾಕಿದ ಮೇಲೆ ಅಡುಗೆ ಮನೆಗೆ ಹೋಗಿ ಕಾಫಿ ಟೀ ಮಾಡುತ್ತಾರೆ . ಹಾಗೆ ಮಾಡುವ ಮೊದಲು ಆ ಓಲೆಯನ್ನು ಶುಭ್ರ ಮಾಡಿಕೊಂಡು , ಓಲೆ ಹಚ್ಚಿದಾಗ ಅಗ್ನಿ ದೇವನಿಗೆ ನಮಸ್ಕರಿಸಿ , ಕೆಲಸವನ್ನು ಶುರು ಮಾಡಬೇಕು .

ಮೂರನೆಯದು ಈ ಎರಡು ಕೆಲಸಗಳನ್ನು ಮಾಡಿದ ನಂತರ , ಅಥವಾ ಎಲ್ಲಾ ಕೆಲಸಗಳು ಮುಗಿದ ಬಳಿಕ , ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು .ನಿಮಗೆ ಬಿಡುವಿಲ್ಲದ ಕಾರಣದಿಂದ ದೊಡ್ಡ ದೊಡ್ಡ ಪೂಜೆಗಳನ್ನು ಮಾಡುವ ಅಗತ್ಯವಿರುವುದಿಲ್ಲ . ಕನಿಷ್ಠ ಪಕ್ಷ ಸ್ವಲ್ಪ ನೀರನ್ನು ಹಾಕಿದರೆ ಸಾಕು . ನಿಮಗೆ ಎಷ್ಟೇ ಬಿಡುವಿಲ್ಲದೆ ಇದ್ದರೂ ಕೂಡ ನೀವೇ ಸ್ವತಹ ಈ ಮೂರು ಕೆಲಸಗಳನ್ನು ಮಾಡುವುದರಿಂದ , ತಾಯಿ ಲಕ್ಷ್ಮಿ ದೇವಿ ಅನುಗ್ರಹಿಸುತ್ತಾಳೆ . ನಿಮ್ಮ ಕುಟುಂಬವು ಸದಾ ಕಾಲ ಆರೋಗ್ಯ ಮತ್ತು ಐಶ್ವರ್ಯಗಳಿಂದ ಕೂಡಿರುತ್ತದೆ . ಆದರೆ ಮಹಿಳೆಯರು ಈ ಮೂರು ಕೆಲಸಗಳನ್ನು ಕೂಡ ಮನೆ ಕೆಲಸದವರ ಬಳಿ ಮಾಡಿಸುತ್ತಾರೆ . ಏನಾಗುತ್ತದೆ ಎಂಬ ಸಂದೇಹ ಬರಬಹುದು . ಮನೆಯ ಕ್ಷೇಮಾಭಿವೃದ್ಧಿ ಯನ್ನು ಕೋರಿ ಕೊಳ್ಳುವ ಸ್ತ್ರೀಯರು ಮಾತ್ರ ಗೃಹ ಲಕ್ಷ್ಮಿಯರು ಮಾತ್ರ ಈ ಕಾರ್ಯಗಳನ್ನು ಮಾಡಬೇಕು .ಮನೆ ಕೆಲಸದವರು ಮಾಡಿದರೆ ಅದರ ಫಲಿತಾಂಶ ಅವರಿಗೆ ಲಭಿಸುತ್ತದೆ . ಆದ್ದರಿಂದ ನೀವು ಎಷ್ಟೇ ಸಮಯ ಇಲ್ಲದಿದ್ದರೂ ಕೂಡ ಖಂಡಿತವಾಗಿ ಮೂರು ಕೆಲಸವನ್ನು ಮಾಡುವುದರಿಂದ ಲಕ್ಷ್ಮೀದೇವಿ ಐಶ್ವರ್ಯವನ್ನು ಕರುಣಿಸುತ್ತಾಳೆ . ಮತ್ತು ನಿಮ್ಮ ಮನೆಯು ಲಕ್ಷ್ಮಿ ನಿವಾಸ ಆಗುತ್ತದೆ .

Leave A Reply

Your email address will not be published.