2024 ಯುಗಾದಿ ಹಬ್ಬದ ದಿನ ಈ ತಪ್ಪುಗಳನ್ನ ಮಾಡಬಾರದು ಮಹಾಪಾಪ ಅಂಟುತ್ತದೆ ವರ್ಷವಿಡೀ ಬಡತನ ಕಾಡುತ್ತದೆ

0

ನಾವು ಈ ಲೇಖನದಲ್ಲಿ 2024 ಯುಗಾದಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬಾರದು . ಈ ಐದೂ ತಪ್ಪು ಮಾಡಿದರೆ ಹೇಗೆ ಮಹಾಪಾಪ ಹಂಟುತ್ತದೆ ಎಂದು ತಿಳಿಯೋಣ . ನಮ್ಮ ಭಾರತ ದೇಶದ ಎಲ್ಲಾ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಹಬ್ಬವು ಕೂಡ ಒಂದು ಆಗಿದೆ . ಯುಗಾದಿ ಎಂದರೆ ನಮ್ಮ ಹಿಂದೂ ಪಂಚಾಂಗದ ಅನುಸಾರವಾಗಿ ಹೊಸ ವರ್ಷದ ಆರಂಭ ಆಗಿದೆ . ನಮ್ಮ ಹಿಂದೂ ಧರ್ಮದಲ್ಲಿ ಹೊಸ ವರ್ಷದ ಮೊದಲ ದಿನವನ್ನು ನಾವು ಯುಗಾದಿ ಹಬ್ಬ ಎಂದು ಆಚರಿಸಲಾಗುತ್ತದೆ . ಇದು ಒಂದು ರೀತಿಯ ಬಣ್ಣ ಬಣ್ಣದ ಹಬ್ಬ ಆಗಿರುತ್ತದೆ .

ಯಾಕೆಂದರೆ ಈ ದಿನ ಎಲ್ಲರೂ ನಿಮ್ಮ ಮುಖ್ಯ ದ್ವಾರದ ಬಾಗಿಲಿಗೆ ಮಾವಿನ ತೋರಣದ ಎಲೆಗಳನ್ನು ಕಟ್ಟುತ್ತಾರೆ . ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕುತ್ತಾರೆ . ಎಲ್ಲರೂ ತಮ್ಮ ಮನೆಯಲ್ಲಿ ಯುಗಾದಿ ಹಬ್ಬವನ್ನು ಸಂತೋಷ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ . ಹಾಗಾಗಿ ಯುಗಾದಿ ಹಬ್ಬದ ದಿನ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಮತ್ತು ಆ ತಪ್ಪುಗಳನ್ನು ಮಾಡುವುದರಿಂದ ಏನೆಲ್ಲಾ ಪರಿಣಾಮಗಳು ಆಗುತ್ತವೆ ಎಂದು ತಿಳಿಯೋಣ . ಹೊಸ ವರ್ಷದ ದಿನ ತಾಯಿ ಲಕ್ಷ್ಮಿ ದೇವಿಯನ್ನು ನಿಮ್ಮ ಮನೆಗೆ ಕರೆ ತರಬೇಕು ಎಂದರೆ ,

1 .ವಿಶೇಷವಾಗಿ ಹಬ್ಬದ ದಿನ ಯಾರಿಗೂ ಸಹ ನಾವು ಅವಮಾನವನ್ನು ಮಾಡಬಾರದು . ಜೊತೆಗೆ ಇನ್ನೊಬ್ಬರೊಡನೆ ಜಗಳ ಕೂಡ ಆಡಬಾರದು . ಮನೆಯಲ್ಲಿ ಇರುವ ಎಲ್ಲಾ ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡಬೇಕು .

2 . ಯುಗಾದಿ ಹಬ್ಬದ ದಿನ ಯಾವುದೇ ಕಾರಣಕ್ಕೂ ಮಾಂಸ ಮತ್ತು ಮಧ್ಯವನ್ನು ಸೇವನೆ ಮಾಡಬಾರದು . ಇಲ್ಲಿ ಮನೆಯಲ್ಲಿ ಮಾತ್ರವಲ್ಲ ಹೊರಗಡೆ ಹೋಗಿಯೂ ಕೂಡ ಯಾವುದೇ ಕಾರಣಕ್ಕೂ ಮಾಂಸ ಮತ್ತು ಮಧ್ಯವನ್ನು ಸೇವನೆ ಮಾಡಬಾರದು .ಒಂದು ವೇಳೆ ಮಾಂಸ ಮತ್ತು ಮಧ್ಯವನ್ನು ಸೇವನೆ ಮಾಡಿ ಮನೆಯ ಒಳಗಡೆ ಪ್ರವೇಶ ಮಾಡಿದರೆ , ಇಲ್ಲಿ ಮನುಷ್ಯನಿಗೆ ದರಿದ್ರತೆಯು ಅಂಟಿಕೊಳ್ಳುತ್ತದೆ . ಇವುಗಳ ಬದಲಿಗೆ ಹಬ್ಬದ ದಿನ ನೀವು ಸಿಹಿ ಪದಾರ್ಥಗಳ ಸೇವನೆಯನ್ನು ಮಾಡಬಹುದು . ಅಂದರೆ , ಹಾಲಿನಿಂದ ತಯಾರಿಸಿದ ಸಿಹಿ ಪದಾರ್ಥಗಳಾಗಲಿ, ಪಾಯಸಗಳಾಗಲಿ, ಇಂತಹ ಊಟಗಳನ್ನು ಮಾಡಬಹುದು .

3 . ಯುಗಾದಿ ಹಬ್ಬದ ದಿನ ಕೊಳಕಾದ ಬಟ್ಟೆಗಳನ್ನು ಅಥವಾ ಹರಿದು ಹೋದ ಬಟ್ಟೆಗಳನ್ನು ನೀವು ಧರಿಸಬಾರದು . ಆದಷ್ಟು ಈ ದಿವಸದಂದು ಹೊಸ ಬಟ್ಟೆಗಳನ್ನು ಧರಿಸುವುದು ಉತ್ತಮವಾಗಿರುತ್ತದೆ . ಇದನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ . ಜೊತೆಗೆ ಯಾವತ್ತಿಗೂ ನಿಮ್ಮ ಮೇಲೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ . ಒಂದು ವೇಳೆ ನಿಮ್ಮಿಂದ ಹೊಸ ಬಟ್ಟೆಗಳನ್ನು ಖರೀದಿ ಮಾಡಲು ಸಾಧ್ಯವಾಗಲಿಲ್ಲ ಎಂದರೆ, ನಿಮ್ಮಲ್ಲಿ ಇರುವ ಬಟ್ಟೆಗಳನ್ನು ಸ್ವಚ್ಛವಾಗಿ ತೊಳೆದು ಧರಿಸುವುದು ಒಳ್ಳೆಯದು . ಈ ದಿನ ನೀವು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ನಿಮ್ಮ ಕೈಲಾದಷ್ಟು ಆಚೆ ಇರುವ ಬಡ ಜನರಿಗೆ , ಧನ ಸಹಾಯ ಮಾಡಿ .ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯ ಕಟಾಕ್ಷ ಇರುತ್ತದೆ . ಮೂಲಕ ಇಡೀ ವರ್ಷ ನೀವು ನೆಮ್ಮದಿ, ಸುಖ , ಶಾಂತಿಯಿಂದ ಇರಬಹುದು .

4 . ಯುಗಾದಿ ಹಬ್ಬದ ದಿನದಲ್ಲಿ ಕೆಲವರು ಪಂಚಾಂಗವನ್ನು ಓದುತ್ತಾರೆ . ಇದನ್ನು ನೀವು ಮನೆಯಲ್ಲಿ ಮಾಡಬಹುದು . ಅಥವಾ ದೇವಾಲಯಕ್ಕೆ ಹೋಗಿ ಮಾಡಬಹುದು . ಇದನ್ನು ಪ್ರತಿಯೊಂದು ದೇವಸ್ಥಾನಗಳಲ್ಲಿ ಜಪ ತಪ ಮಾಡುತ್ತಲೇ ಇರುತ್ತಾರೆ .ಇಡೀ ವರ್ಷ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಅಲ್ಲಿ ನಿಮಗೆ ತಿಳಿಸಿಕೊಡುತ್ತಾರೆ . ನೀವು ಅದನ್ನ ಕೇಳಬೇಕು ಎಂದರೆ ದಕ್ಷಿಣ ದಿಕ್ಕಿನತ್ತ ನಿಮ್ಮ ಮುಖ ಮಾಡಿ ಕುಳಿತುಕೊಂಡು ಕೇಳಬಾರದು . ಆದಷ್ಟು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ಕೇಳಬೇಕು . ಈ ರೀತಿಯಾಗಿ ನೀವು ಕೇಳಿಸಿ ಕೊಂಡರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ .

5 . ಹಲವಾರು ಜನರಿಗೆ ಈ ಸಮಯದಲ್ಲಿ ಋತುಚಕ್ರ ಪ್ರಾರಂಭವಾಗಬಹುದು . ಈ ದಿನದ ತನಕ ಐದು ದಿನಗಳವರೆಗೆ ತಲೆಯ ಸ್ನಾನ ಮಾಡಬೇಕಾಗುತ್ತದೆ . ಆನಂತರ ನೀವು ಮನೆಯ ಒಳಗೆ ಅಥವಾ ಅಡುಗೆ ಮನೆಯ ಪ್ರವೇಶ ಮಾಡಲು ಹೇಳಲಾಗಿದೆ . ಹಾಗಾಗಿ ಯುಗಾದಿ ಹಬ್ಬದ ದಿನ ಅಡುಗೆ ಮನೆಯಲ್ಲಿ ಆಗಲಿ ಅಥವಾ ದೇವರ ಕೋಣೆಯಲ್ಲಿ ಓಡಾಡುವ ಪ್ರಯತ್ನವನ್ನು ಮಾಡಬಾರದು .

6 . ಮನೆಯ ಮುಖ್ಯ ದ್ವಾರವನ್ನು ಯಾವುದೇ ಕಾರಣಕ್ಕೂ ಹಾಗೆಯೇ ಖಾಲಿ ಇರಲು ಬಿಡಬಾರದು . ಯುಗಾದಿ ಹಬ್ಬದ ದಿನ ಮನೆಯ ಮುಖ್ಯ ದ್ವಾರಕ್ಕೆ ಮಾವಿನ ಎಲೆಯ ತೋರಣವನ್ನು ಖಂಡಿತವಾಗಿ ಕಟ್ಟಬೇಕು . ಇದರಿಂದ ಮುಖ್ಯ ದ್ವಾರದ ಶೃಂಗಾರ ಕೂಡ ಆಗುತ್ತದೆ . ಜೊತೆಗೆ ಈ ತೋರಣದಲ್ಲಿ ಬೇವಿನ ಸೊಪ್ಪನ್ನು ಸೇರಿಸಿ ಕಟ್ಟಿದರೆ , ನೋಡಲು ಕೂಡ ಅದು ತುಂಬಾ ಸುಂದರವಾಗಿ ಕಾಣುತ್ತದೆ . ಇದನ್ನು ತುಂಬಾ ಶುಭ ಎಂದು ತಿಳಿಯಲಾಗಿದೆ .
ಇಲ್ಲಿ ಪ್ಲಾಸ್ಟಿಕ್ ಎಲೆಗಳಿಂದ ತಯಾರಾದ ಮಾವಿನ ಎಲೆ ತೋರಣವನ್ನು ಯಾವುದೇ ಕಾರಣಕ್ಕೂ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬಾರದು .

ಶಾಸ್ತ್ರಗಳ ಪ್ರಕಾರ ಇದು ಒಳ್ಳೆಯದಲ್ಲ ಎಂದು ತಿಳಿಯಲಾಗಿದೆ. ಈ ದಿನ ಯಾವುದಾದರು ಗೋ ಮಾತೆಗೆ ನಿಮ್ಮ ಕೈಯಿಂದ ರೊಟ್ಟಿಗಳನ್ನು ತಿನ್ನಿಸಬೇಕು . ಇದರಿಂದ ಗೋಮಾತೆ ಶರೀರದಲ್ಲಿರುವ ಎಲ್ಲಾ 33 ದೇವನು ದೇವತೆಗಳ ಆಶೀರ್ವಾದವು ನಿಮಗೆ ಸಿಗುತ್ತದೆ . ಇಡೀ ವರ್ಷ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ಕೊರತೆ ಆಗುವುದಿಲ್ಲ . ಧನ ಧಾನ್ಯಗಳ ಕೊರತೆ ಕೂಡ ಆಗುವುದಿಲ್ಲ .ಮರೆತರೂ ಕೂಡ ಯುಗಾದಿ ಹಬ್ಬದ ದಿನ ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳವನ್ನು ಆಡಬಾರದು. ಈ ದಿನ ಎಷ್ಟು ನೀವು ನೆಮ್ಮದಿ ಮತ್ತು ಶಾಂತಿಯಿಂದ ಇರುತ್ತೀರೋ , ವರ್ಷವಿಡೀ ಒಳ್ಳೆಯ ಪರಿಣಾಮ ಸಿಗುತ್ತದೆ .

Leave A Reply

Your email address will not be published.