ಸಿಂಹ ರಾಶಿಯವರ 2024ರ ವರ್ಷ ಭವಿಷ್ಯ ಹೇಗಿರುತ್ತದೆ

0

ನಾವು ಈ ಲೇಖನದಲ್ಲಿ ಸಿಂಹ ರಾಶಿಯವರ 2024ರ ವರ್ಷ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯೋಣ. 2024 ರಲ್ಲಿ ಸಿಂಹ ರಾಶಿಯವರಿಗೆ ಬಹುತೇಕ ಶುಭ ಫಲಗಳೇ ಹೆಚ್ಚಾಗಿ ಇವೆ . ಶುಭ ಫಲಗಳು ಎಷ್ಟಿವೆ ಎಂದರೆ , ಶುಭ ಫಲಗಳನ್ನು ತೆಗೆದುಕೊಂಡು ತೆಗೆದುಕೊಂಡು ಅಹಂಕಾರ ಬರುವಂತಹ ಸಾಧ್ಯತೆ ಇರುತ್ತದೆ. ಸೋಲು ಅನ್ನುವುದು ಮರೆತೇ ಹೋಗುತ್ತದೆ .

ಗೆಲುವು ಅನ್ನುವುದು ಸಿಂಹ ರಾಶಿಯವರಿಗೆ 2024ರಲ್ಲಿ ಇರುತ್ತದೆ . ಎಲ್ಲಾ ರಂಗದಲ್ಲೂ ಈ ರಾಶಿಯವರಿಗೆ ಅನುಕೂಲ ಆಗುತ್ತದೆ . ಆರೋಗ್ಯ ಸುಧಾರಣೆಯಾಗುತ್ತದೆ . ಆರ್ಥಿಕ ವ್ಯವಸ್ಥೆಯಲ್ಲಿ ಕೂಡ ಸುಧಾರಣೆ ಆಗುತ್ತದೆ . ಮಾನಸಿಕ ಸುಖ ಅನ್ನೋದು ಕೂಡ ಬರುತ್ತಾ ಹೋಗುತ್ತದೆ . ನೀವು ಕೈ ಹಿಡಿಯುವ ಕೆಲಸದಲ್ಲಿ ಪೂರ್ಣವಾದ ಸಫಲತೆಯನ್ನು ಕಂಡುಕೊಳ್ಳಬಹುದು .

ಒಳ್ಳೆಯ ಯೋಜನೆಯನ್ನು ಹಾಕಿಕೊಂಡು ಕೆಲಸವನ್ನು ಪ್ರಾರಂಭ ಮಾಡಬಹುದು . ನಿಮಗೆ ಈ ಒಂದು ವರ್ಷದಲ್ಲಿ ಅನುಕೂಲಗಳು ಹೆಚ್ಚಾಗಿ ಆಗುತ್ತವೆ . ನಿಮ್ಮ ಕೀರ್ತಿ ಕೂಡ ಅಭಿವೃದ್ಧಿ ಹೊಂದುತ್ತಾ ಹೋಗುತ್ತದೆ . ನಿಮ್ಮ ವೈರಿಗಳನ್ನು ನಾಶ ಮಾಡಲು ಕೂಡ ಸಾಧ್ಯವಾಗುತ್ತದೆ . ಶತ್ರುಗಳಿಂದ ಬರುವ ಸಮಸ್ಯೆಗಳು ದೂರವಾಗುತ್ತಾ ಹೋಗುತ್ತದೆ. 2023ರಲ್ಲೂ ಕೂಡ ಈ ರಾಶಿಯವರಿಗೆ ಶುಭ ಫಲಗಳು ಇದ್ದವು. 2023ರಲ್ಲಿ ಇದ್ದಂತಹ ಫಲಗಳಿಗಿಂತಲೂ 2024ರಲ್ಲಿ ಒಳ್ಳೆಯ ಫಲಗಳು ಇನ್ನೂ ಹೆಚ್ಚಿಗೆ ಆಗುವ ಸಾಧ್ಯತೆ ಇದೆ .

ಒಳ್ಳೆಯ ಕೆಲಸ ಹುಡುಕುವವರಿಗೆ , ವ್ಯಾಪಾರಸ್ಥರಿಗೆ , ವ್ಯವಹಾರ ಮಾಡುವವರಿಗೆ , ಎಲ್ಲರಿಗೂ ಕೂಡ ಈ ವರ್ಷದಲ್ಲಿ ಅನುಕೂಲವಾಗುತ್ತದೆ ಎಂದು ಹೇಳಬಹುದು . ಈ ವರ್ಷದಲ್ಲಿ ಅದೃಷ್ಟ ಎನ್ನುವುದು ನಿಮ್ಮ ಜೊತೆಗೆ ಇರುತ್ತದೆ . ಒಳ್ಳೆಯ ಮಿತ್ರರು ಮತ್ತು ಅವರಿಂದ ಸಹಾಯ ಸಹಕಾರಗಳು ಸಿಗುತ್ತಾ ಹೋಗುತ್ತದೆ . ಈ ವರ್ಷದಲ್ಲಿ ಬಹಳ ಹುಮ್ಮಸ್ಸಿನಿಂದ ಕೆಲಸ ಕಾರ್ಯಗಳನ್ನು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ . ಸಿಂಹ ರಾಶಿಯವರಿಗೆ ರವಿ ದಶ ಮತ್ತು ರವಿ ಭುಕ್ತಿ ನಡೆಯುತ್ತಿರುತ್ತದೆ .

ರವಿ ಭುಕ್ತಿ ಅನ್ನೋದು ಆರು ತಿಂಗಳುಗಳ ಕಾಲ ಇರುತ್ತದೆ . ರವಿ ದಶ ಆರು ವರ್ಷಗಳು ಇರುತ್ತದೆ. ರವಿ ದಶ ಅನ್ನುವುದು ಸಿಂಹ ರಾಶಿಯವರಿಗೆ 2024ರ ಇಸವಿಯಲ್ಲಿ ಬಹಳಷ್ಟು ಅನುಕೂಲ ಮಾಡಿಕೊಡುತ್ತದೆ. ನಿಮಗೆ ಸ್ಥಾನ ಮಾನ ಅನ್ನೋದನ್ನ ಈ ದಶಗಳು ಹೆಚ್ಚಾಗಿ ಒದಗಿಸಿ ಕೊಡುತ್ತವೆ . ಈ ವರ್ಷದಲ್ಲಿ ನಿಮ್ಮ ಹೆಸರು ಹೆಚ್ಚು ಪ್ರಚಾರಕ್ಕೆ ಬರುತ್ತದೆ . ಒಳ್ಳೆಯ ಹೆಸರನ್ನು ಮಾಡಬಹುದು . 2024ರಲ್ಲಿ ನಡೆಯುವ ಘಟನೆಗಳು ನಿಮ್ಮ ನೆನಪಿನಲ್ಲಿ ಇಟ್ಟುಕೊಳ್ಳುವ ಘಟನೆ ಆಗುತ್ತದೆ .

ಆದ್ದರಿಂದ 2024 ಸಿಂಹ ರಾಶಿಗಳಿಗೆ ಬಹಳ ಪ್ರಮುಖವಾದ ವರ್ಷ ಆಗುತ್ತದೆ . ಈ ವರ್ಷದಲ್ಲಿ ಮಾಡುವ ಕೆಲಸವನ್ನು ನೀವು ಜೀವನ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಆಗುತ್ತದೆ . ನೀವು ಆರ್ಥಿಕವಾಗಿ ಸದೃಢವಾಗುತ್ತಾ ಹೋಗಬಹುದು . ಮಾಡಿಕೊಂಡಿರುವ ಸಾಲಗಳು ತೀರುವ ಸಾಧ್ಯತೆ ಇರುತ್ತದೆ . ಸಾಲಗಳನ್ನು ಬೇರೆಯವರಿಗೆ ಕೊಡುವಂತಹ ಸಂದರ್ಭಗಳು ಎದುರಾಗಬಹುದು . ಬೇರೆಯವರಿಗೆ ಸಹಾಯ ಬೇಕಾದಾಗ ಸಹಾಯ ಕೂಡ ಮಾಡುತ್ತಾ ಹೋಗಬೇಕು .

ಈ ಸಹಾಯ ಅನ್ನುವುದು ಮುಂದಿನ ದಿನಗಳಲ್ಲಿ ನಿಮಗೆ ಅನುಕೂಲವಾಗುವಂತೆ ಮಾಡುತ್ತದೆ . ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಈ ವರ್ಷದಲ್ಲಿ ಒಳ್ಳೆಯ ಫಲವನ್ನು ಕೊಡುತ್ತದೆ . ಈ ಕಲಿಕೆ ಅನ್ನೋದು ಮುಂದಿನ ದಿನಗಳಲ್ಲಿ ಬಹಳಷ್ಟು ಅನುಕೂಲವನ್ನು ಮಾಡಿಕೊಡುತ್ತದೆ . ಕೆಲಸಕ್ಕೆ ಬೇಕಾಗುವ ವಿದ್ಯೆ ಅನ್ನುವುದು ಈ ಒಂದು ವರ್ಷದಲ್ಲಿ ನಿಮಗೆ ಅನುಕೂಲವನ್ನು ಮಾಡಿಕೊಡುತ್ತದೆ . ಒಳ್ಳೆಯ ವಿದ್ಯೆಯನ್ನು ಪಡೆಯಬಹುದು ಎಂದು ಹೇಳಬಹುದು .

ಶುಭ ಫಲಗಳು ಹೆಚ್ಚಾಗಿರುವುದರಿಂದ ಕೆಲವು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ . ಹೀಗೆ ಮಾಡುವುದರಿಂದ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ . ಹೆಚ್ಚಾದ ಆತ್ಮವಿಶ್ವಾಸ ಎನ್ನುವುದು ಈ ಒಂದು ವರ್ಷದಲ್ಲಿ ಒಳ್ಳೆಯದಲ್ಲ . ಸಿಂಹ ರಾಶಿ ಅವರಿಗೆ ಬಹಳ ಧೈರ್ಯ ಇರುತ್ತದೆ . ಹಾಗಾಗಿ ಬಹಳ ಹುಮ್ಮಸ್ಸಿನಿಂದ ಕೆಲಸ ಮಾಡಲು ಹೋಗಬೇಡಿ . ತಾಳ್ಮೆಯಿಂದ ಕೆಲಸ ಮಾಡಿ . ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು . ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ .

ವಿವಾಹಕ್ಕೆ ಅಡ್ಡಿ ಇರುವ ಸಮಸ್ಯೆಗಳು ನೆರವೇರುತ್ತವೆ .ಇಂತಹ ವಿಚಾರದಲ್ಲಿ ಒಳ್ಳೆಯ ತೀರ್ಮಾನ ದೊರೆಯುತ್ತದೆ . ಉತ್ತಮ ರಾಶಿಯಲ್ಲಿ ಶನಿ ಇದ್ದಾನೆ , ಅಂದ ತಕ್ಷಣ ಆ ಕೆಲಸ ಹಾಳಾಗುತ್ತದೆ ಎಂದು ದೂರುವುದು ಸರಿಯಲ್ಲ . ಶನಿ ಒಳ್ಳೆಯ ರಾಶಿಯಲ್ಲಿ ಇದ್ದಾನೆ . ಒಳ್ಳೆಯ ಫಲವನ್ನು ಕೊಡುತ್ತಾ ಹೋಗುತ್ತಾನೆ . ಈ ರಾಶಿಯವರಿಗೆ ಜೂನ್ ನಂತರ ಹಣಕಾಸಿನ ವ್ಯವಸ್ಥೆಯಲ್ಲಿ ಬಹಳಷ್ಟು ಲಾಭಗಳು ಆಗುತ್ತದೆ . ಯಾವುದೇ ಹೊಸ ಕೆಲಸ ಆರಂಭ ಮಾಡಬೇಕು ಅಂದುಕೊಂಡರೆ ,

ಜೂನ್ ತಿಂಗಳ ನಂತರ ಮಾಡಿಕೊಳ್ಳಿ .ಅನುಕೂಲ ಜಾಸ್ತಿ ಆಗುತ್ತದೆ .ಅಕ್ಟೋಬರ್ ನಂತರ ತೀರ್ಥ ಯಾತ್ರೆಗೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ . ಸಂತಾನ ವಿಚಾರದಲ್ಲಿ ಯಾವುದೇ ಕುಂದು ಕೊರತೆಗಳು ಇರುವುದಿಲ್ಲ . ಇಲ್ಲಿ ಗುರು ಒಳ್ಳೆಯ ಫಲಗಳನ್ನು ಕೊಡುತ್ತಾನೆ . ಸಂತಾನ ಕಾರಕನು ತುಂಬಾ ಚೆನ್ನಾಗಿ ಇರುವುದರಿಂದ ಸಂತಾನಕ್ಕೆ ಅನುಕೂಲವಾಗುವಂತೆ ಈ ವರ್ಷದಲ್ಲಿ ಇರುತ್ತದೆ . ಮಕ್ಕಳ ಯಾವುದೇ ವಿಚಾರದಲ್ಲಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ , ನಿಮ್ಮ ಮಕ್ಕಳು ಒಳ್ಳೆಯ ರೀತಿಯ ಸಾಧನೆಯನ್ನು ಮಾಡುತ್ತಾರೆ .

ಆರೋಗ್ಯ ಸ್ಥಾನದಲ್ಲಿ ಗುರು ಎಂಬುದು ಬಲಿಷ್ಠನಾಗಿ ಇರುವುದರಿಂದ ಶುಭ ಫಲಗಳನ್ನು ಕೊಡುವಂತಹ ಹಾಗೆ ಒಳ್ಳೆಯ ಸ್ಥಾನದಲ್ಲಿ ಇರುವುದರಿಂದ ಆರೋಗ್ಯ ಸುಧಾರಿಸುತ್ತದೆ . ಈ ವರ್ಷದಲ್ಲಿ ರೋಗದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ . ಸಂತೋಷದಿಂದ ಸಮಯ ಕಳೆಯುವ ಅವಕಾಶಗಳು ಇರುತ್ತವೆ . ಈ ಒಂದು ಸಂದರ್ಭದಲ್ಲಿ ಗುರು ದಶೆ ರವಿ ದಶೆ ಶುಕ್ರದಶೆ ಇದೆಲ್ಲ ಬಹಳಷ್ಟು ಒಳ್ಳೆಯ ಫಲಗಳನ್ನು ಕೊಡುತ್ತಾ ಹೋಗುತ್ತದೆ . ಹೀಗೆ ಸಿಂಹ ರಾಶಿಯವರಿಗೆ 2024ರಲ್ಲಿ ಶುಭಫಲಗಳು ಹೆಚ್ಚಾಗಿದೆ ಎಂದು ಹೇಳಲಾಗಿದೆ .

Leave A Reply

Your email address will not be published.